ಆಟೋ ಎಕ್ಸ್ ಫೋ 2018: ಅವೆಂಜರ್ ಪ್ರತಿಸ್ಪರ್ಧಿ ಯುಎಂ ಡ್ಯೂಟಿ ಸಿರೀಸ್ ಬೈಕ್‌ಗಳು ಬಿಡುಗಡೆ

Written By: Rahul

ಅಮೆರಿಕಾ ಮೂಲದ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾದ ಯುನೈಟೆಡ್ ಮೋಟಾರ್ಸ್ ದೆಹಲಿಯಲ್ಲಿ ನಡೆಯುತ್ತಿರುವ 2018ರ ಆಟೋ ಎಕ್ಸ್ ಪೋ ನಲ್ಲಿ ತನ್ನ ಹೊಸ ನಮೂನೆಯ ಯುಎಂ ರೆನೆಗೆಡ್ ಡ್ಯೂಟಿ ಎಸ್ ಮತ್ತು ಡ್ಯೂಟಿ ಏಸ್ ಎಂಬ ಎರಡು ಹೊಸ ಮಾದರಿಯ ಬೈಕುಗಳನ್ನು ಬಿಡುಗಡೆಗೊಳಿಸಿದೆ.

ಆಟೋ ಎಕ್ಸ್ ಫೋ 2018: ಅವೆಂಜರ್ ಪ್ರತಿಸ್ಪರ್ಧಿ ಯುಎಂ ಡ್ಯೂಟಿ ಸಿರೀಸ್ ಬೈಕ್‌ಗಳು ಬಿಡುಗಡೆ

ಯುಎಂ ರೆನೆಗೆಡ್ ಡ್ಯೂಟಿ ಸೀರಿಸ್ ಬೈಕ್‌ಗಳು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 1.10 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಬಜಾಜ್ ಅವೆಂಜರ್ ಸೀರಿಸ್, ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಮತ್ತು ಸುಜುಕಿ ಇಂಟ್ರೂಡರ್ ಬೈಕ್ ಗಳೊಂದಿಗೆ ಪ್ರತಿಸ್ಪರ್ಧಿಸಲಿದೆ.

ಆಟೋ ಎಕ್ಸ್ ಫೋ 2018: ಅವೆಂಜರ್ ಪ್ರತಿಸ್ಪರ್ಧಿ ಯುಎಂ ಡ್ಯೂಟಿ ಸಿರೀಸ್ ಬೈಕ್‌ಗಳು ಬಿಡುಗಡೆ

ರೆನೆಗೆಡ್ ಡ್ಯೂಟಿ ಬೈಕ್‌ಗಳು ಡಿಜಿ ಅನಾಲಾಗ್ ಇಂಸ್ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಗೇರ್ ಪೊಸಿಷನ್ ಇಂಡಿಕೇಟರ್ ಗಳನ್ನು ಹೊಂದಿದ್ದು, ಎರಡೂ ಬೈಕುಗಳು ಎಲ್ಇಡಿ ಹೆಡ್ ಲೈಟ್ಸ್ ಮತ್ತು ಟೈಲ್ ಲೈಟ್ ಗಳನ್ನು ಪಡೆದುಕೊಂಡಿವೆ.

ಆಟೋ ಎಕ್ಸ್ ಫೋ 2018: ಅವೆಂಜರ್ ಪ್ರತಿಸ್ಪರ್ಧಿ ಯುಎಂ ಡ್ಯೂಟಿ ಸಿರೀಸ್ ಬೈಕ್‌ಗಳು ಬಿಡುಗಡೆ

ಇನ್ನು ಬೈಕ್ ಮುಂಭಾಗದಲ್ಲಿ 41 ಎಂಎಂ ಕನ್ವೆಂಷನಲ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಡ್ಯುಯಲ್ ಹೈಡ್ರಾಲಿಕ್ ಸ್ಪ್ರಿಂಗ್ ಅಳವಡಿಕೆ ಇದ್ದು, ಆರಾಮದಾಯಕವಾಗಿ ಬೈಕ್ ಸವಾರಿ ಮಾಡಲು ಅಗಲ ಹ್ಯಾಂಡಲ್‌ಗಳನ್ನು ನೀಡಲಾಗಿದೆ.

ಆಟೋ ಎಕ್ಸ್ ಫೋ 2018: ಅವೆಂಜರ್ ಪ್ರತಿಸ್ಪರ್ಧಿ ಯುಎಂ ಡ್ಯೂಟಿ ಸಿರೀಸ್ ಬೈಕ್‌ಗಳು ಬಿಡುಗಡೆ

ಎಂಜಿನ್ ಸಾಮರ್ಥ್ಯ

223 ಸಿಸಿ ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಹೊಂದಿರುವ ರೆನೆಗೆಡ್ ಡ್ಯೂಟಿ ಸೀರಿಸ್ ಬೈಕ್‌ಗಳು, 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿವೆ. ಈ ಮೂಲಕ 16- ಬಿಹೆಚ್ ಪಿ ಮತ್ತು 17-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಆಟೋ ಎಕ್ಸ್ ಫೋ 2018: ಅವೆಂಜರ್ ಪ್ರತಿಸ್ಪರ್ಧಿ ಯುಎಂ ಡ್ಯೂಟಿ ಸಿರೀಸ್ ಬೈಕ್‌ಗಳು ಬಿಡುಗಡೆ

ಜೊತೆಗೆ ರೆನೆಗೆಡ್ ಡ್ಯೂಟಿ ಸೀರಿಸ್ ಬೈಕ್‌ಗಳು 10 ಲೀಟರ್ ಫ್ಯುಯಲ್ ಟ್ಯಾಂಕ್ ಹೊಂದಿದ್ದು, ಪ್ರತಿ ಲೀಟರ್‌ಗೆ 41 ಕಿಮಿ ಮೈಲೇಜ್ ನೀಡುತ್ತವೆ ಎಂದು ಯುಎಂ ಮೋಟಾರ್ ಸಂಸ್ಥೆಯು ಹೇಳಿಕೊಂಡಿದೆ.

ಆಟೋ ಎಕ್ಸ್ ಫೋ 2018: ಅವೆಂಜರ್ ಪ್ರತಿಸ್ಪರ್ಧಿ ಯುಎಂ ಡ್ಯೂಟಿ ಸಿರೀಸ್ ಬೈಕ್‌ಗಳು ಬಿಡುಗಡೆ

ಯುಎಂ ಡ್ಯುಟಿ ಸಿರೀಸ್ ಬೈಕ್‌ಗಳಲ್ಲಿ ಮುಂಭಾಗ ಚಕ್ರಗಳು 120/80 ಆರ್17 ಟೈರ್ ಬಳಕೆ ಮಾಡಲಾಗಿದ್ದು, ಹಿಂಭಾಗದಲ್ಲಿ 130/90 ಆರ್15 ಟೈರ್ ಗಳನ್ನು ಪಡೆದುಕೊಂಡಿದೆ. 1360ಎಂಎಂ ವೀಲ್ ಬೇಸ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಆಟೋ ಎಕ್ಸ್ ಫೋ 2018: ಅವೆಂಜರ್ ಪ್ರತಿಸ್ಪರ್ಧಿ ಯುಎಂ ಡ್ಯೂಟಿ ಸಿರೀಸ್ ಬೈಕ್‌ಗಳು ಬಿಡುಗಡೆ

ಯುಎಂ ರೆನೆಗೆಡ್ ಡ್ಯುಟಿ ಎಸ್ ಮತ್ತು ಡ್ಯುಟಿ ಏಸ್ ವೈಶಿಷ್ಟ್ಯತೆಗಳು ಒಂದೇ ಆಗಿದ್ದು, ಬಣ್ಣಗಳಲ್ಲಿ ಮಾತ್ರ ಬೇರೆ ಬೇರೆಯಾಗಿದ್ದು, ಡ್ಯುಟಿ ಎಸ್ ಬೈಕ್ ಮಿಲಿಟರಿ ಇಂಸ್ಪೈರ್ಡ್ ಬಣ್ಣ ಪಡೆದಿದ್ದರೇ ಡ್ಯುಟಿ ಏಸ್ ಸ್ಫೋರ್ಟಿ ಕಲರ್ ಸ್ಕೀಮ್ ಹೊಂದಿದೆ. ಹೀಗಾಗಿ ಹೊಸ ಬೈಕ್‌ಗಳು ಬಜಾಜ್ ಅವೆಂಜರ್ ಬೈಕಿಗೆ ತೀವ್ರ ಪೈಪೋಟಿ ನೀಡಲಿದೆ.

English summary
UM Renegade Duty S & Duty Ace Launched At Rs 1.10 Lakh - Specs, Features & Images.
Story first published: Friday, February 9, 2018, 12:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark