ಆಟೋ ಎಕ್ಸ್‌ಪೋ 2018- ಮತ್ತೆರಡು ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಯಮಹಾ

ಯಮಹಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಎರಡು ವಿನೂತನ ಬೈಕ್ ಮಾದರಿಗಳನ್ನು ಪರಿಚಯಿಸಲಿದ್ದು, ಫೆಬ್ರುವರಿಯಲ್ಲಿ ನಡೆಯಲಿರುವ 2018ರ ಆಟೋ ಎಕ್ಸ್‌ಪೋದಲ್ಲಿ ಹೊಸ ಬೈಕ್‌ಗಳನ್ನು ಪ್ರದರ್ಶನ ಮಾಡಲಿದೆ.

By Praveen

Recommended Video

Bangalore Traffic Police Rides With Illegal Number Plate - DriveSpark

ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಅಗ್ರಸ್ಥಾನ ಹೊಂದಿರುವ ಯಮಹಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಎರಡು ವಿನೂತನ ಬೈಕ್ ಮಾದರಿಗಳನ್ನು ಪರಿಚಯಿಸಲಿದ್ದು, ಫೆಬ್ರುವರಿಯಲ್ಲಿ ನಡೆಯಲಿರುವ 2018ರ ಆಟೋ ಎಕ್ಸ್‌ಪೋದಲ್ಲಿ ಹೊಸ ಬೈಕ್‌ಗಳನ್ನು ಪ್ರದರ್ಶನ ಮಾಡಲಿದೆ.

ಮತ್ತೆರಡು ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಯಮಹಾ

ವರದಿಗಳ ಪ್ರಕಾರ ಯಮಹಾ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವೈಝಡ್‌ಎಫ್-ಆರ್15 ವರ್ಷನ್3.0 ಮತ್ತು 125 ಸಿಸಿ ಎಂಜಿನ್ ಸಾಮರ್ಥ್ಯದ ಮತ್ತೊಂದು ಹೊಸ ಸ್ಕೂಟರ್ ಮಾದರಿಯನ್ನು ಪರಿಚಯಿಸುತ್ತಿದ್ದು, ಆಟೋ ಮೇಳದಲ್ಲಿ ಹೊಸ ಉತ್ಪನ್ನಗಳ ಬಗೆಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

ಮತ್ತೆರಡು ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಯಮಹಾ

ಯಮಹಾ ಸಂಸ್ಥೆಯು ಪರಿಚಯಿಸಲಿರುವ 125 ಸಿಸಿ ಸ್ಕೂಟರ್ ಮಾದರಿಯು ಸದ್ಯ ವಿಯೆಟ್ನಾಂ ದೇಶದಲ್ಲಿ ಮಾರಾಟಗೊಳ್ಳುತ್ತಿರುವ ನೋಜಾ ಗ್ರಾಂಡೆ ಪ್ರೇರಣೆಯೊಂದಿಗೆ ಅಭಿವೃದ್ಧಿ ಮಾಡಲಾಗಿದ್ದು, 8.2-ಬಿಎಚ್‌ಪಿ ಮತ್ತು 9.7ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿವೆ.

ಮತ್ತೆರಡು ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಯಮಹಾ

ಹೀಗಾಗಿ ಬರಲಿರುವ ಯಮಹಾ ಹೊಸ ಸ್ಕೂಟರ್ ಮಾದರಿಯು ನಗರ ಪ್ರದೇಶದ ಗ್ರಾಹಕರಿಗೆ ಸೂಕ್ತ ಆಯ್ಕೆಯಾಗಿದ್ದು, ಹಗುರದಾಯಕ ಎಂಜಿನ್ ಮತ್ತು ಸುಧಾರಿತ ತಂತ್ರಜ್ಞಾನ ಹಿನ್ನೆಲೆ ಮೈಲೇಜ್ ಪ್ರಮಾಣ ಕೂಡಾ ಹೆಚ್ಚಿರಲಿದೆ.

ಮತ್ತೆರಡು ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಯಮಹಾ

ಜೊತೆಗೆ ಪ್ರಸ್ತುತ ಸ್ಕೂಟರ್ ಮಾದರಿಗಳಿಂತಲೂ ಕಡಿಮೆ ಬೆಲೆಯನ್ನು ಹೊಂದಿರುವ ಬಗ್ಗೆ ಸುಳಿವು ಸಿಕ್ಕಿದ್ದು, ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರ ಮಾರ್ಚ್ ಅಥವಾ ಏಪ್ರಿಲ್ ಅಂತ್ಯಕ್ಕೆ ಗ್ರಾಹಕರ ಕೈ ಸೇರಲಿವೆ.

Trending On DriveSpark Kannada:

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

2017ರಲ್ಲಿ ಸಾಮಾಜಿಕ ಜಾಣತಾಣಗಳಲ್ಲಿ ಅತಿಹೆಚ್ಚು ಸದ್ದು ಮಾಡಿದ ಟಾಪ್ 10 ಬೈಕ್‌ಗಳು....

ಮತ್ತೆರಡು ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಯಮಹಾ

ಇನ್ನು ಯಮಹಾ ಬಹುನೀರಿಕ್ಷಿತ ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊತ್ತು ಬಿಡುಗಡೆಗೊಳ್ಳುತ್ತಿರುವ ವೈಝಡ್ಎಫ್ ಆರ್ 15 ವರ್ಷನ್ 3.0 ಬೈಕ್ ಕೂಡಾ ಭಾರೀ ನೀರಿಕ್ಷೆ ಹುಟ್ಟು ಹಾಕಿದ್ದು, ಸದ್ಯ ಡೀಲರ್ ಯಾರ್ಡ್‌ಗಳಿಗೆ ಲಗ್ಗೆಯಿಟ್ಟಿವೆ.

ಮತ್ತೆರಡು ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಯಮಹಾ

ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡು ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಯಮಹಾ ವೈಝಡ್ಎಫ್ ಆರ್ 15 ವಿ3 ಬೈಕ್ ಸದ್ಯ ಭಾರತದಲ್ಲೂ ಬಿಡುಗಡೆಯಾಗುತ್ತಿದ್ದು, ಹಲವು ವಿಶೇಷತೆಗಳಿಂದಾಗಿ ಸೂಪರ್ ಬೈಕ್ ಪ್ರಿಯರ ಗಮನಸೆಳೆಯುತ್ತಿದೆ.

ಮತ್ತೆರಡು ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಯಮಹಾ

ಹೀಗಾಗಿ ಅಂತರ್‌ರಾಷ್ಟ್ರೀಯ ಮಟ್ಟದ ಗುಣವಿಶೇಷಗಳನ್ನು ಹೊಂದಿರುವ ವೈಝಡ್ಎಫ್ ಆರ್ 15 ವಿ3 ಮಾದರಿಯು ಈ ಹಿಂದಿನ ವಿ2 ಮಾದರಿಯಲ್ಲೇ ಮುಂಭಾಗದ ವಿನ್ಯಾಸವನ್ನು ಪಡೆದುಕೊಂಡಿದೆ. ಜೊತೆಗೆ ಎಬಿಎಸ್, ಎಂಆರ್‌ಎಫ್ ಟೈರ್ ಸೇರಿದಂತೆ ಹಲವು ಸುಧಾರಿತ ಸುರಕ್ಷಾ ವಿಧಾನಗಳನ್ನು ಪಡೆದುಕೊಂಡಿದೆ.

ಮತ್ತೆರಡು ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಯಮಹಾ

ಎಂಜಿನ್ ಸಾಮರ್ಥ್ಯ

155ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೊತೆ ಫ್ಯೂಲ್ ಇಂಜೆಕ್ಷನ್ ಹೊಂದಿರುವ ವೈಝಡ್ಎಫ್ ಆರ್ 15 ವಿ3 ಮಾದರಿಯು 19.7-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಮತ್ತೆರಡು ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಯಮಹಾ

6-ಸ್ಪೀಡ್ ಗೇರ್‌ಬಾಕ್ಸ್ ಸೇರಿದಂತೆ ಎಲ್ಇಡಿ ಹೆಡ್‌ಲ್ಯಾಂಪ್, ಸ್ಲಿಪರ್ ಕ್ಲಚ್ ಹೊಂದಿರುವ ವೈಝಡ್ಎಫ್ ಆರ್ 15 ವಿ3 ಬೈಕ್ ಆವೃತ್ತಿಯು ಸದ್ಯ ಮಾರುಕಟ್ಟೆಯಲ್ಲಿರುವ ಸುಜುಕಿ ಜಿಕ್ಸರ್ ಎಸ್ಎಫ್, ಹೋಂಡಾ ಹಾರ್ನೆಟ್, ಬಜಾಜ್ ಪಲ್ಸರ್ ಬೈಕ್‌ಗಳಿಗೆ ತೀವ್ರ ಸ್ಪರ್ಧೆ ಒಡ್ಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮತ್ತೆರಡು ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಯಮಹಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಈಗಾಗಲೇ ಹಲವು ಬೈಕ್ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಮುಂಚೂಣಿ ಸಾಧಿಸಿರುವ ಯಮಹಾ ಸಂಸ್ಥೆಯು ಕಳೆದ ಕೆಲ ವರ್ಷಗಳಿಂದ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಬಿಡುಗಡೆಯಾಗಲಿರುವ 2 ಪ್ರಮುಖ ಬೈಕ್‌ಗಳು ಆಟೋ ಮಾರುಕಟ್ಟೆ ಹೊಸ ದಾಖಲೆ ಸೃಷ್ಠಿಸುವ ತವಕದಲ್ಲಿವೆ ಎನ್ನಬಹುದು.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್...

ಲಾಜಿಸ್ಟಿಕ್‌ ಕಂಪನಿ ನಂಬಿದ ರಾಯಲ್ ಎನ್‌ಫೀಲ್ಡ್ ಮಾಲೀಕರಿಗೆ ಕಾದಿತ್ತು ಶಾಕ್..!!

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Tuesday, January 16, 2018, 13:24 [IST]
English summary
Auto Expo 2018: Yamaha To Reveal YZF-R15 V3.0 And New 125cc Scooter.
Read more on yamaha auto expo 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+