TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಇದೇ ತಿಂಗಳು ಬಿಡುಗಡೆಯಾಗಿರುವ ಬಜಾಜ್ ಡಿಸ್ಕವರ್ 110 ಬೆಲೆ ಮಾಹಿತಿ ಬಹಿರಂಗ
ಮಧ್ಯಮ ವರ್ಗದ ಗ್ರಾಹಕರ ಆಯ್ಕೆಯಲ್ಲಿ ಮೊದಲ ಆದ್ಯತೆ ಪಡೆದಿರುವ ಡಿಸ್ಕವರ್ ಬೈಕ್ ಆವೃತ್ತಿಗಳಲ್ಲಿ ಇದೀಗ ಮತ್ತೊಂದು ಆಯ್ಕೆಯನ್ನು ಪರಿಚಯಿಸಲಾಗುತ್ತಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ಡಿಸ್ಕವರ್ 110 ಎಂಬ ಹೊಸ ಬೈಕ್ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ.
ಬಜಾಜ್ ನಿರ್ಮಾಣದ ಹಲವು ಬೈಕ್ ಆವೃತ್ತಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಿದ್ದು, ಇದೀಗ ಡಿಸ್ಕವರ್ 110 ಹೊಸ ಆಯ್ಕೆಯಾಗಲಿದೆ. ಮೂಲಗಳ ಪ್ರಕಾರ ಇದೇ ತಿಂಗಳು ಕೊನೆಯ ವಾರ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.
ಹೀಗಾಗಿ ಹೊಸ ಬೈಕ್ ಮಾದರಿಯು ಈ ಹಿಂದಿನ ಡಿಸ್ಕವರ್ 100 ಮತ್ತು ಸದ್ಯ ಮಾರುಕಟ್ಟೆಯಲ್ಲಿರುವ ಡಿಸ್ಕವರ್ 125 ಆವೃತ್ತಿಗಿಂತಲೂ ವಿಭಿನ್ನವಾಗಿದ್ದು, ಮೈಲೇಜ್ ಬಗ್ಗೆ ಕಾಳಜಿ ವಹಿಸುವ ಗ್ರಾಹಕರಿಗೆ ಇತ್ತೊಂದು ಉತ್ತಮ ಬೈಕ್ ಆಗಲಿದೆ ಎನ್ನಬಹುದು.
ಯಾಕೆಂದ್ರೆ ಡಿಸ್ಕವರ್ 125 ಮಾದರಿಯಲ್ಲೇ ಡಿಸ್ಕವರ್ 110 ಕೂಡಾ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು, ಮ್ಯಾಟೆ ಬ್ಲ್ಯಾಕ್ ಅಲಾಯ್ ಚಕ್ರಗಳು, ಡಿಜಿಟಲ್ ಅನ್‌ಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸಿಲ್ವರ್ ಸೈಡ್ ಪ್ಯಾನೆಲ್ ಮತ್ತು ಸ್ಪೋಟಿ ಗ್ರಾಫಿಕ್ ಡಿಸೈನ್ ಹೊಂದಿದೆ.
ಇದರ ಜೊತೆಗೆ ಎಲೆಕ್ಟ್ರಿಕ್ ಸ್ಟಾರ್ಟರ್ ಮತ್ತು ಡ್ರಮ್ ಬ್ರೇಕ್ ಸಿಸ್ಟಂ ಪಡೆದುಕೊಂಡಿದ್ದು, 110ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದೆ. ಇದಲ್ಲದೇ 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 8.5-ಬಿಎಚ್‌ಪಿ ಮತ್ತು 9.5-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
ಬೆಲೆ (ಪುಣೆ ಎಕ್ಸ್ ಶೋರಂ ಪ್ರಕಾರ)
ಹೊಸ ವಿನ್ಯಾಸಗಳನ್ನು ಹೊತ್ತು ಮರುಕಟ್ಟೆ ಪ್ರವೇಶ ಪಡೆಯುತ್ತಿರುವ ಡಿಸ್ಕವರ್ 110 ಮಾದರಿಯು ಪುಣೆ ಎಕ್ಸ್‌ಶೋರಂ ಪ್ರಕಾರ ರೂ. 50,500ಕ್ಕೆ ಲಭ್ಯವಿರಲಿದೆ.
Trending On DriveSpark Kannada:
ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿದೆ ಟೊಯೊಟಾ ಹೊಸ ಕಾರು ರಷ್..!!
ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ
ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!
ಹೀಗಾಗಿ ಪ್ರಸ್ತುತ ಬೈಕ್ ಆವೃತ್ತಿಗಳಾದ ಹಿರೋ ಪ್ಯಾಶನ್, ಪ್ಯಾಶನ್ ಎಕ್ಸ್ ಪ್ರೊ ಮತ್ತು ಟಿವಿಎಸ್ ವಿಕ್ಟರ್ 110 ಆವೃತ್ತಿಗಳಿಗೆ ತೀವ್ರ ಸ್ಪರ್ಧೆ ನೀಡಲಿರುವ ಡಿಸ್ಕವರ್ 110 ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 65 ಕಿಮಿ ಮೈಲೇಜ್ ನೀಡಲಿದೆ ಎನ್ನಲಾಗಿದೆ.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಸದ್ಯ ಡಿಸ್ಕವರ್ 100 ಆವೃತ್ತಿಯನ್ನು ಮಾರಾಟದಿಂದ ಕೈ ಬಿಡಲಾಗಿದ್ದು, 110 ಸಿಸಿ ಸಾಮರ್ಥ್ಯದ ಬೈಕ್‌ಗಳಿಗೆ ಹೆಚ್ಚಿನ ಬೇಡಿಕೆ ಹಿನ್ನೆಲೆ ಡಿಸ್ಕವರ್ 110 ಪರಿಚಯಿಸಲಾಗುತ್ತಿದೆ. ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಅಂತ್ಯಂತ ಕಡಿಮೆ ಬೆಲೆಗಳಿಗೆ ಡಿಸ್ಕವರ್ 125 ಬೈಕಿನಲ್ಲಿರುವ ಸೌಲಭ್ಯಗಳನ್ನು 110 ಆವೃತ್ತಿಯಲ್ಲೂ ಒದಗಿಸಲಾಗುತ್ತಿದೆ.
Trending On DriveSpark Kannada:
ಹಾಫ್ ಹೆಲ್ಮೆಟ್ ವಿರುದ್ಧ ಭರ್ಜರಿ ಕಾರ್ಯಚರಣೆ- ಬೈಕ್ ಸವಾರರಿಗೆ ಬಿಗ್ ಶಾಕ್..
ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್ ಚೀತಾ'
Trending DriveSpark YouTube Videos
Subscribe To DriveSpark Kannada YouTube Channel - Click Here