ಡೋಮಿನಾರ್ 400 ಬೈಕ್ ಬೆಲೆಯನ್ನು ಹೆಚ್ಚಿಸಿದ ಬಜಾಜ್..

Written By: Rahul TS

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಮೋಟಾರ್ಸ್ ತನ್ನ ಜನಪ್ರಿಯ ಡೋಮಿನಾರ್ 400 ಬೈಕಿನ ಎಬಿಎಸ್ ಮತ್ತು ಎಬಿಎಸ್ ರಹಿತ ಬೈಕ್ ಆವೃತ್ತಿಗಳ ಬೆಲೆ ಹೆಚ್ಚಿಸಿದ್ದು, ಪ್ರತಿ ಬೈಕ್ ಮಾದರಿ ಮೇಲೂ ರೂ. 2 ಸಾವಿರ ಬೆಲೆ ಏರಿಕೆ ಮಾಡಿದೆ.

ಡೋಮಿನಾರ್ 400 ಬೈಕ್ ಬೆಲೆಯನ್ನು ಹೆಚ್ಚಿಸಿದ ಬಜಾಜ್..

ಹೌದು.. ದೆಹಲಿಯ ಎಕ್ಸ್ ಶೋರಂ ಪ್ರಕಾರ ಎಬಿಎಸ್ ರಹಿತ ಡೋಮಿನಾರ್ 400 ಬೈಕ್‌ಗಳು ಈ ಮೊದಲು ರೂ. 1,42,109 ಮತ್ತು ಎಬಿಎಸ್ ಡೋಮಿನಾರ್ 400 ಬೈಕುಗಳು ರೂ. 1,56,270ಕ್ಕೆ ಲಭ್ಯವಿದ್ದವು. ಆದರೇ ಬೆಲೆ ಏರಿಕೆಯ ನಂತರ ಎಬಿಎಸ್ ರಹಿತ ಬೈಕ್‌ಗಳು ರೂ. 1,44,113ಕ್ಕೆ ಹಾಗೂ ಎಬಿಎಸ್ ಡೋಮಿನಾರ್ 400 ಬೈಕ್‌ಗಳು ರೂ. 1,58,275 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಡೋಮಿನಾರ್ 400 ಬೈಕ್ ಬೆಲೆಯನ್ನು ಹೆಚ್ಚಿಸಿದ ಬಜಾಜ್..

ಭಾರತದ ಮಾರುಕಟ್ಟೆಯಲ್ಲಿ 2018ರ ಮಾದರಿಯ ಡೋಮಿನಾರ್ 400 ಬೈಕ್‌ಗಳು ಬಿಡುಗಡೆಗೊಂಡು ಎರಡು ತಿಂಗಳುಗಳ ನಂತರ ಬೈಕಿನ ಬೆಲೆ ಹೆಚ್ಚಿಸಲಾಗಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಈ ಬೈಕುಗಳ ಮಾರಾಟವು ಕಡಿಮೆ ಇದೆ. ಈಗ ಬೆಲೆ ಹೆಚ್ಚಿಸುವುದರಿಂದಾಗಿ ಮರುಕಟ್ಟೆಯಲ್ಲಿ ಯಾವುದೇ ಬದಲಾವಣೆಗಳನ್ನು ಕಾಣಲಾರವು.

ಡೋಮಿನಾರ್ 400 ಬೈಕ್ ಬೆಲೆಯನ್ನು ಹೆಚ್ಚಿಸಿದ ಬಜಾಜ್..

ಆದರೇ, 2018ರ ಮಾದರಿಯ ಡೋಮಿನಾರ್ 400 ಬೈಕುಗಳು ಬಿಡುಗಡೆಗೊಂಡಾಗ 2017ರ ಡೋಮಿನಾರ್ 400 ಬೈಕುಗಳ ಬೆಲೆಯನ್ನೇ ಆಧರಿಸಿದ್ದರು ಯಾವುದೇ ತಾಂತ್ರಿಕವಾಗಿ ಬದಲಾವಣೆಗಳನ್ನು ಪಡೆಯಲಿಲ್ಲ. ಹೀಗಾಗಿಯೇ 2018ರ ಆವೃತ್ತಿಯಲ್ಲಿ ಗುರುತರ ಬದಲಾವಣೆಗಳನ್ನು ಪಡೆದಿದ್ದು, ಹೊಸ ವಿನ್ಯಾಸಗಳು ಮತ್ತು ಗೋಲ್ಡ್ ಫಿನಿಶ್ಡ್ ಅಲಾಯ್ ವೀಲ್‍‍ಗಳನ್ನು ಬೈಕಿಗೆ ಹೊಸ ಲುಕ್ ನೀಡಿವೆ.

ಡೋಮಿನಾರ್ 400 ಬೈಕ್ ಬೆಲೆಯನ್ನು ಹೆಚ್ಚಿಸಿದ ಬಜಾಜ್..

2018 ರ ಹೊಸ ಡೋಮಿನಾರ್ 400 ಬೈಕುಗಳು ರಾಕ್ ಮೇತ್ ಬ್ಲಾಕ್, ಗ್ಲಾಶಿಯರ್ ಬ್ಲೂ ಮತ್ತು ಕಾನ್ಯಾನ್ ರೆಡ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಬೈಕ್ ಆವೃತ್ತಿಗಳನ್ನು ಆಯ್ಕೆ ಮಾಡಬಹುದು.

ಡೋಮಿನಾರ್ 400 ಬೈಕ್ ಬೆಲೆಯನ್ನು ಹೆಚ್ಚಿಸಿದ ಬಜಾಜ್..

ಹೊಸ ಡಾಮಿನಾರ್ 400 ಬೈಕುಗಳು 373.3ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದಿದೆ. ಇನ್ನು ಈ ಎಂಜಿನ್ 35-ಬಿಹೆಚ್‍ಪಿ ಮತ್ತು 35-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದೆ.

ಡೋಮಿನಾರ್ 400 ಬೈಕ್ ಬೆಲೆಯನ್ನು ಹೆಚ್ಚಿಸಿದ ಬಜಾಜ್..

ಒಟ್ಟಿನಲ್ಲಿ ಬಜಾಜ್ ಸಂಸ್ಥೆಯು ಡೋಮಿನಾರ್ 400 ಬಿಡುಗಡೆಗೊಂಡ ಎರಡು ತಿಂಗಳುಗಳಲ್ಲೇ ಬೈಕುಗಳ ಬೆಲೆ ಏರಿಕೆ ಮಾಡಿದ್ದು, ಮುಂಬರುವ ದಿನಗಳಲ್ಲಿ ತಮ್ಮ ಹೊಸ ಸ್ಕ್ರ್ಯಾಂಬ್ಲರ್ ಮತ್ತು ಸ್ಪೋರ್ಟ್ಸ್ ಕ್ರೂಸರ್‍‍ಗಳ ಕ್ಲಾಸಿಕ್ ಆವೃತ್ತಿಗಳನ್ನು ಕೂಡ ಬಿಡುಗಡೆ ಮಾಡಲಿದೆ.

ಡೋಮಿನಾರ್ 400 ಬೈಕ್ ಬೆಲೆಯನ್ನು ಹೆಚ್ಚಿಸಿದ ಬಜಾಜ್..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಹಾಥಿ ಮತ್ ಪಾಲೊ ಜಾಹೀರಾತಿನಲ್ಲಿ ಆರ್‌ಇ ಬೈಕ್‌ಗಳಿಗೆ ಮತ್ತೊಂದು ಟಾಂಗ್..

2. ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

3. ಬೇಸಿಗೆಯಲ್ಲಿ ನಿಮ್ಮ ವಾಹನಗಳ ರಕ್ಷಣೆ ಹೇಗೆ? ಇಲ್ಲಿದೆ ಸರಳ ಉಪಾಯ...

4. ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾದ ಹೊಸ ಮಾರುತಿ ಸುಜುಕಿ ಸ್ವಿಫ್ಟ್..!!

5. ಹೊಸ ಕಾರುಗಳ ಉತ್ಪಾದನೆಗಾಗಿ ಒಂದಾದ ಟೊಯೊಟಾ ಮತ್ತು ಸುಜುಕಿ ಮೋಟಾರ್ಸ್

Read more on bajaj
English summary
2018 Bajaj Dominar 400 Prices Increased By Rs 2,000.
Story first published: Saturday, March 31, 2018, 14:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark