TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಭಾರತದಲ್ಲಿ ಲಿಯೊನ್ಸಿನೊ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆಯ ಸುಳಿವು ನೀಡಿದ ಬೆನೆಲ್ಲಿ
ಇಟಾಲಿಯನ್ ಜನಪ್ರಿಯ ಬೆನೆಲ್ಲಿ ಸಂಸ್ಥೆಯು ಭಾರತದಲ್ಲಿ ಈಗಾಗಲೇ ತನ್ನ ಪ್ರಮುಖ ಬೈಕ್ ಉತ್ಪನ್ನಗಳನ್ನ ಮಾರಾಟ ಮಾಡುತ್ತಿದ್ದು, ಮಾರುಕಟ್ಟೆ ವಿಸ್ತರಣೆಗಾಗಿ ಕಳೆದ ವಾರವಷ್ಟೇ ಮಾಹಾವೀರ್ ಗ್ರೂಪ್‌ನೊಂದಿಗೆ ಕೈಜೋಡಿಸುವ ಮೂಲಕ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.
ಬೆನೆಲ್ಲಿ ಜನಪ್ರಿಯ ಲಿಯೊನ್ಸಿನೊ ಸ್ಕ್ರಾಂಬ್ಲರ್ ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿರುವ ಬೆನೆಲ್ಲಿ ಸಂಸ್ಥೆಯು 2019ರ ಆರಂಭದಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡುವ ಗುರಿಹೊಂದಿದೆಯೆಂತೆ. ಹೀಗಾಗಿ ಹೊಸ ಬೈಕ್ ಮಾದರಿಯು ಐಷಾರಾಮಿ ಜೊತೆಗೆ ಅತ್ಯುತ್ತಮ ಪರ್ಫಾಮೆನ್ಸ್ ಮೂಲಕ ಯುವ ಸಮುದಾಯ ಹಾಟ್ ಫೆವರೀಟ್ ಎನ್ನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ಬೆನೆಲ್ಲಿ ಸಂಸ್ಥೆಯು ಭಾರತದಲ್ಲಿ ಇದೇ ವರ್ಷವೇ ತನ್ನ ಲಿಯೊನ್ಸಿನೊ ಸ್ಕ್ರಾಂಬ್ಲರ್ ಬೈಕ್ ಅನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿತ್ತು. ಆದ್ರೆ ಹಣಕಾಸಿನ ಮುಗ್ಗಟ್ಟು ಹೊಸ ಬೈಕ್ ಬಿಡುಗಡೆಯ ಯೋಜನೆಗೆ ಹಿನ್ನೆಡೆಯಾಗಿತ್ತು.
ಇದೀಗ ಮಾಹಾವೀರ್ ಗ್ರೂಪ್ ಜೊತೆ ಕೈಜೋಡಿಸಿರುವುದು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಉತ್ಪನ್ನಗಳನ್ನ ಪರಿಚಯಿಸಲು ಆರ್ಥಿಕ ಬಲ ಬಂದಿದ್ದು, 2019ರ ಆರಂಭದಲ್ಲೇ ಲಿಯೊನ್ಸಿನೊ ಸ್ಕ್ರಾಂಬ್ಲರ್ ಬೈಕ್ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.
ಲಿಯೊನ್ಸಿನೊ ಸ್ಕ್ರಾಂಬ್ಲರ್ ವಿಶೇಷತೆ ಏನು?
499.6 ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಡ್, ಪ್ಯಾರಾಲೆಲ್ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿರುವ ಲಿಯೊನ್ಸಿನೊ ಸ್ಕ್ರಾಂಬ್ಲರ್ ಬೈಕ್‌ಗಳು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 46-ಬಿಎಚ್‌ಪಿ ಮತ್ತು 45-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.
ಜೊತೆಗೆ 50-ಎಂಎಂ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಹೋಂದಾಣಿಕೆ ಮಾಡಿಕೊಳ್ಳಬಹುದಾದ ಮೊನೊಶಾರ್ಕ್ ಸಸ್ಷೆನ್ ಹೊಂದಿದ್ದು, ಸುರಕ್ಷೆತೆಗಾಗಿ ಡ್ಯುಯಲ್ ಚಾನಲ್ ಎಬಿಎಸ್, 320-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ 260-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯ ಪಡೆದಿದೆ.
ಇದಲ್ಲದೇ ಬೆನೆಲ್ಲಿ ಸಂಸ್ಥೆಯು ಲಿಯೊನ್ಸಿನೊ ಸ್ಕ್ರಾಂಬ್ಲರ್ ಬೈಕ್ ಮಾದರಿಗಳಲ್ಲದೇ ಅಡ್ವೆಂಚರ್ ಬೈಕ್ ಮಾದರಿಗಳಾದ ಟಿಆರ್‌ಎಕ್ಸ್ 502ಎಕ್ಸ್ ಮತ್ತುಇಂಪೀರಿಯಲ್ 400 ಬೈಕ್‌ಗಳನ್ನು ಸಹ ಬಿಡುಗಡೆಗೊಳಿಸುವ ತವಕದಲ್ಲಿದೆ.
ಇದರಲ್ಲಿ ಇಂಪೀರಿಯಲ್ 400 ಮೋಟಾರ್ ಸೈಕಲ್‌ಗಳು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಮಾದರಿಗಳಿಗೆ ತ್ರೀವ ಪೈಪೋಟಿ ನೀಡುವ ಬಗ್ಗೆ ಸುಳಿವು ನೀಡಿದ್ದು, ಕ್ಲಾಸಿಕ್ 350 ಹಾಗೂ ಥಂಡರ್‌ಬರ್ಡ್ 350 ಬೈಕ್‌ಗಳಿಗೆ ಇದು ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ರೆಟ್ರೋ ಸ್ಟೈಲ್ ಪಡೆಯಲಿರುವ ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕ್‍ಗಳು ಮೊದಲ ಬಾರಿಗೆ ಮಿಲಾನ್‍ನಲ್ಲಿ ನಡೆದ 2017ರ ಇಐಸಿಎಮ್ಎ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಲಾಗಿದ್ದು, ಮಾರುಕಟ್ಟೆಗೆ ಇಂಡಿಯನ್ ಮಹಾವೀರ್ ಗ್ರೂಪ್‍ನ ಮಾರ್ಗವಾಗಿ ಎಂಟ್ರಿ ಕೊಡಲಿದೆ.
ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಕ್ಲಾಸಿಕ್ ಬೈಕ್‍ಗಳ ನಿರ್ಮಾಣದಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಈಗಾಗಲೇ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು, ಬೆನೆಲ್ಲಿ ಸಂಸ್ಥೆಯು ಈ ಸೆಗ್ಮೆಂಟ್‍ನಲ್ಲಿ ಕಾಲಿಡಲಿದೆ. ಇದಲ್ಲದೇ ಬಜಾಜ್ ಸಂಸ್ಥೆಯು ಕೂಡಾ ಈ ಸೆಗ್ಮೆಂಟ್‍ನಲ್ಲಿ ಹೊಸ ಬೈಕ್ ಅನ್ನು ಪರಿಚಯಿಸುವ ಯೋಜನೆಯಲಿದ್ದು, ಟ್ರಯಂಫ್ ಸಂಸ್ಥೆಯೊಂದಿಗೆ ಸೇರಿ ಹೊಸ ಬೈಕ್ ಅನ್ನು ತಯಾರಿಸುತ್ತಿರುವುದು ಗ್ರಾಹಕರಿಗೆ ಹಬ್ಬವೇ ಸರಿ.