ಭಾರತದಲ್ಲಿ ರೂ.20.53 ಲಕ್ಷಕ್ಕೆ ಬಿಡುಗಡೆಗೊಂಡ ಡುಕಾಟಿ ಪ್ಯಾನಿಗಾಲೆ V4

By: Rahul TS

ಭಾರತದಲ್ಲಿ ಡುಕಾಟಿ ಪ್ಯಾನಿಗಾಲೆ V4 ಬೈಕ್ ಬಿಡುಗಡೆಗೊಂಡಿದ್ದು, ಇದರ ಬೆಲೆ ಎಕ್ಸ್ ಶೋ ರೂಂನಲ್ಲಿ 20.53 ಲಕ್ಷ ಎನ್ನಲಾಗಿದೆ. ಹೊಸದಾಗಿ ಬಿಡುಗಡೆಯಾದ ಡುಕಾಟಿ ಪಾನಿಗಲೆ V4 ಬೈಕ್ ಭಾರತದಲ್ಲಿ ಕೇವಲ 20 ಘಟಕಗಳಲ್ಲಿ ಮಾತ್ರ ದೊರೆಯಲಿದ್ದು, ಈ ಬೈಕನ್ನು ಖರೀದಿಸುವ ಮೊದಲ ಇಬ್ಬರು ಗ್ರಾಹಕರು ಮಲೇಷಿಯಾದಲ್ಲಿ ನಡೆಯಲಿರುವ ಸೆಪಾಂಘ್ ಸರ್ಕ್ಯೂಟ್‌ನಲ್ಲಿ ರೈಡಿಂಗ್ ಎಕ್ಸ್ಪೀರಿಯೆನ್ಸ್ ಪಡೆಯಲಿದ್ದಾರೆ.

ಭಾರತದಲ್ಲಿ ರೂ.20.53 ಲಕ್ಷಕ್ಕೆ ಬಿಡುಗಡೆಗೊಂಡ ಡುಕಾಟಿ ಪ್ಯಾನಿಗಾಲೆ V4

ಡುಕಾಟಿ ಪ್ಯಾನಿಗಾಲೆ V4 ಭಾರತದಲ್ಲಿ ರೂ.20.53 ಲಕ್ಷಕ್ಕೆ ಲಭ್ಯವಾಗಿದ್ದು, ಡುಕಾಟಿ ಪ್ಯಾನಿಗಾಲೆ V4 ಹೊಸ ಡೆಸ್ಮೋಸೆಸ್ಡಿಡಿ ಸ್ಟ್ರಾಡೇಲ್ 1,103 ಸಿಸಿ, 90 ಡಿಗ್ರಿ ವಿ 4 ಇಂಜಿನ್ ಹೊಂದಿದೆ. ಈ ಮೂಲಕ 211 ಬಿಎಚ್‌ಪಿ @ 13,000 ಆರ್‌ಪಿಎಂ ಮತ್ತು 124 ಎನ್ಎಂ ಟಾರ್ಕ್ @ 10,000 ಆರ್‌ಪಿಎಂ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ ಈ ಬೈಕಿನಲ್ಲಿ ಆರು ವೇಗದ ಗೇರ್ ಬಾಕ್ಸ್ ಅನ್ನು ಪಡೆದುಕೊಂಡಿದೆ.

ಭಾರತದಲ್ಲಿ ರೂ.20.53 ಲಕ್ಷಕ್ಕೆ ಬಿಡುಗಡೆಗೊಂಡ ಡುಕಾಟಿ ಪ್ಯಾನಿಗಾಲೆ V4

ತೂಕದ ವಿಷಯದಲ್ಲಿ ಡುಕಾಟಿ ಪ್ಯಾನಿಗಾಲೆ v4 ಬೈಕ್ 198 ಕೆಜಿ ತೂಕ ಹಾಗೂ ಡುಕಾಟಿ ಪ್ಯಾನಿಗಾಲೆ ವಿ4ಎಸ್ ಮಾದರಿಯು 195 ಕೆಜಿ ತೂಕ ಪಡೆದುಕೊಂಡಿದೆ.

ಭಾರತದಲ್ಲಿ ರೂ.20.53 ಲಕ್ಷಕ್ಕೆ ಬಿಡುಗಡೆಗೊಂಡ ಡುಕಾಟಿ ಪ್ಯಾನಿಗಾಲೆ V4

ಹೊಸ ಡುಕಾಟಿ ಪ್ಯಾನಿಗಾಲೆ V4 ಅಲ್ಯೂಮಿನಿಯಂ ಮಿಶ್ರಲೋಹದ ಫ್ರಂಟ್ ಫ್ರೇಮ್ ಕೂಡಾ ಹೊಂದಿದ್ದು, ಸಂಪೂರ್ಣವಾಗಿ ಹೊಂದಿಕೊಳ್ಳುವ 43mm ಶೋಯಾ ಬಿಪಿ 4 ಫೋರ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್-ಸೈಡ್ ಅಲ್ಯೂಮಿನಿಯಂ ಸ್ವಿಂಗ್ ಆರ್ಮ್‌ನೊಂದಿಗೆ ಸ್ಯಾಚ್ಸ್ ಮೋನೋಶಾಕ್ ಅನ್ನು ಹೊಂದಿದೆ.

ಭಾರತದಲ್ಲಿ ರೂ.20.53 ಲಕ್ಷಕ್ಕೆ ಬಿಡುಗಡೆಗೊಂಡ ಡುಕಾಟಿ ಪ್ಯಾನಿಗಾಲೆ V4

ಮತ್ತೊಂದೆಡೆ ಡುಕಾಟಿ ಪ್ಯಾನಿಗಾಲೆ V4S ಮಾದರಿಗಳು ಎಲೆಕ್ಟ್ರಾನಿಕ್ ಕಂಪ್ರೆಷನ್ ಮತ್ತು ಮರುಕಳಿಸುವ ಹೊಂದಾಣಿಕೆಯೊಂದಿಗೆ 43ಎಂಎಂ ಓಹ್ಲಿನ್ಸ್ NIX30 ಪೂರ್ಣ ಹೊಂದಾಣಿಕೆ ಫೋರ್ಕ್ ಅನ್ನು ಪಡೆದಿದ್ದು, ಪಾನಿಗಲೆ V4S ಮುಂಭಾಗದ ಫೋರ್ಕ್ಸ್‌ನಂತೆ ಎಲೆಕ್ಟ್ರಾನಿಕ್ ಡ್ಯಾಂಪಿಂಗ್ ನಿಯಂತ್ರಣ ಅಳವಡಿಕೆಯಿದೆ.

ಭಾರತದಲ್ಲಿ ರೂ.20.53 ಲಕ್ಷಕ್ಕೆ ಬಿಡುಗಡೆಗೊಂಡ ಡುಕಾಟಿ ಪ್ಯಾನಿಗಾಲೆ V4

ಹೊಸ ಡುಕಾಟಿ ಪ್ಯಾನಿಗಾಲೆ ವಿ4 ಅನ್ನು ನಿಲುಗಡೆಗೆ ತರಲು, ಇಟಾಲಿಯನ್ ಮಾರ್ಕ್ ಎರಡು 330 ಮಿಮೀ ಸೆಮಿ-ಫ್ಲೋಟಿಂಗ್ ಡಿಸ್ಕ್‌ಗಳನ್ನು ಹೊಂದಿದ್ದು, ಮುಂಭಾಗದಲ್ಲಿ ಬ್ರೆಮ್ಬೋ ಮೊನೊಬ್ಲಾಕ್ ನಾಲ್ಕು-ಫಿಸ್ಟನ್ ಕ್ಯಾಲಿಪರ್ಗಳು ಮತ್ತು ಹಿಂಭಾಗದಲ್ಲಿ ಎರಡು-ಪಿಸ್ಟನ್ ಕ್ಯಾಲಿಪರ್ಗಳೊಂದಿಗೆ 245 ಎಂಎಂ ಡಿಸ್ಕ್ ಅನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದ ಬ್ರೇಕ್‌ರ್ ಬಾಷ್ನ ಕಾರ್ನರಿಂಗ್ ಎಬಿಎಸ್ ಸೆಟಪ್ ಇಡಲಾಗಿದೆ.

ಭಾರತದಲ್ಲಿ ರೂ.20.53 ಲಕ್ಷಕ್ಕೆ ಬಿಡುಗಡೆಗೊಂಡ ಡುಕಾಟಿ ಪ್ಯಾನಿಗಾಲೆ V4

ತಿರುವುಗಳಲ್ಲಿ ಹಿಡಿತವನ್ನು ಒದಗಿಸುವುದಕ್ಕಾಗಿ ಪೇರೆಲಿ ಡಯಾಬ್ಲೊ ಸುಪರ್ಕೋರ್ಸಾ ಎಸ್ಪಿ 200/60 ಟೈರ್‌ಗಳು ಇದ್ದು, 17 ಇಂಚಿನ 5 ಸ್ಪೋಕ್ ಮಿಶ್ರಲೋಹವನ್ನು ಚಕ್ರಗಳಲ್ಲಿ ಅಳವಡಿಸಲ್ಪಟ್ಟಿರುತ್ತವೆ.

ಭಾರತದಲ್ಲಿ ರೂ.20.53 ಲಕ್ಷಕ್ಕೆ ಬಿಡುಗಡೆಗೊಂಡ ಡುಕಾಟಿ ಪ್ಯಾನಿಗಾಲೆ V4

ಡುಕಾಟಿ ಪ್ಯಾನಿಗಾಲೆ ವಿ 4 ವಿನ್ಯಾಸಗಳು ಮತ್ತು ವೈಶಿಷ್ಟ್ಯತೆಗಳು

ಹೊಸ ಡುಕಾಟಿ ಪ್ಯಾನಿಗಾಲೆ v4 ಮುಂಭಾಗದಲ್ಲಿ ಎಲ್ಇಡಿ ಹಗಲಿನ ರನ್ನಿಂಗ್ ದೀಪಗಳೊಂದಿಗೆ ಅವಳಿ ಕೋನೀಯ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಇದರ ಫ್ರಂಟ್ ಫ್ರೇಮ್ ಎಲ್ಲರಿಗೂ ಕಾಣಿಸುವಂತಾಗಿದ್ದು ಹಾಗು ಇದು ಬದಿಗಳಲ್ಲಿ ಎರಡು ಪದರದ ರೇಡಿಯೇಟರ್‌ಗಳು ಗಾಳಿಯನ್ನು ಹೊರತೆಗೆಯಲು ಸಹಾಯ ಮಾಡುತ್ತದೆ.

ಭಾರತದಲ್ಲಿ ರೂ.20.53 ಲಕ್ಷಕ್ಕೆ ಬಿಡುಗಡೆಗೊಂಡ ಡುಕಾಟಿ ಪ್ಯಾನಿಗಾಲೆ V4

ಡುಕಾಟಿಯ ಟ್ರೇಡ್ ಮಾರ್ಕ್ ಬಲಿಷ್ಟವಾದ ಡೈಮಂಡ್ ಮಾದರಿಯ ಇಂಧನದ ಟ್ಯಾಂಕ್ ಒನ್ ಪೀಸ್ ಟೈಲ್ ಭಾಗವನ್ನು ವಾಯುಬಲ ವೈಜ್ಞಾನಿಕ ಸ್ಪಾಯ್ಲರ್ ಸ್ಫೂರ್ತಿ ನೀಡಲಾಗಿದೆ ಮತ್ತು ಪೂರ್ಣ ಪ್ರಮಾಣದ ಎಲ್ಇಡಿ ಟೈಲ್ ಲೈಟ್ ಅನ್ನು ಎರಡು ಆರ್ಚ್-ತರಹದ ವಿಭಾಗಗಳಾಗಿ ವಿಂಗಡಿಸಲಾಗಿದೆ.

ಭಾರತದಲ್ಲಿ ರೂ.20.53 ಲಕ್ಷಕ್ಕೆ ಬಿಡುಗಡೆಗೊಂಡ ಡುಕಾಟಿ ಪ್ಯಾನಿಗಾಲೆ V4

ಡುಕಾಟಿ ಪ್ಯಾನಿಗಾಲೆ v4 ಸಂಪೂರ್ಣವಾಗಿ ಡಿಜಿಟಲ್ ಟಿಎಫ್‌ಟಿಪಿ ಪ್ರದರ್ಶನವನ್ನು ಒಳಗೊಂಡ ತಂತ್ರಜ್ಞಾನ ಹೊಂದಿದ್ದು, ಇದು ಸೂಪರ್ ಬೈಕ್ ರೈಡರ್ ಗಳಿಗೆ ಅವರಿಗೆ ಅಗತ್ಯ ಮಾಹಿತಿ ನೀಡುತ್ತದೆ.

ಭಾರತದಲ್ಲಿ ರೂ.20.53 ಲಕ್ಷಕ್ಕೆ ಬಿಡುಗಡೆಗೊಂಡ ಡುಕಾಟಿ ಪ್ಯಾನಿಗಾಲೆ V4

ಡುಕಾಟಿ ಪ್ಯಾನಿಗಾಲೆ v4 ಬೈಕಿನ ಇತರ ಲಕ್ಷಣಗಳು ಕಾರ್ನರಿಂಗ್ ಬಾಷ್ ಇವಿಓ, ಡುಕಾಟಿ ಟ್ರಾಕ್ಷನ್ ಕಂಟ್ರೋಲ್ ಇವಿಓ, ಡುಕಾಟಿ ಸ್ಲೈಡ್ ಕಂಟ್ರೋಲ್ (ಡಿಎಸ್ಸಿ), ಡುಕಾಟಿಯ ವೀಲಿ ಕಂಟ್ರೋಲ್ ಇವಿಓ, ಡುಕಾಟಿ ಪವರ್ ಲಾಂಚ್, ಡುಕಾಟಿ ಕ್ವಿಕ್ ಶಿಫ್ಟ್ ಅಪ್ / ಡೌನ್ ಇವಿಓ ಮತ್ತು ಎಲೆಕ್ಟ್ರಾನಿಕ್ ಪ್ಯಾಕೇಜ್ ಎಲೆಕ್ಟ್ರಾನಿಕ್ ಪ್ಯಾಕೇಜ್ ಅನ್ನು ನಿಯಂತ್ರಿಸುವ 6-ಅಕ್ಷ ಜಡತ್ವ ಮಾಪನ ಘಟಕವನ್ನು ಹಾಗು ಎಂಜಿನ್ ಬ್ರೇಕ್ ಕಂಟ್ರೋಲ್ ಇವಿಓ ಒಳಗೊಂಡಿದೆ.

ಭಾರತದಲ್ಲಿ ರೂ.20.53 ಲಕ್ಷಕ್ಕೆ ಬಿಡುಗಡೆಗೊಂಡ ಡುಕಾಟಿ ಪ್ಯಾನಿಗಾಲೆ V4

2018 ರ ಅವಧಿಗೆ ಭಾರತದಲ್ಲಿ ಕೇವಲ 20 ಘಟಕಗಳನ್ನು ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಡುಕಾಟಿ ಪಾನಿಗಲೆ v4 ತನ್ನ ಭಾರಿ ಬೆಲೆಯ ಹೊರತಾಗಿಯೂ ದೇಶದ ಅತಿ ಹೆಚ್ಚು ಬೇಡಿಕೆಯಿರುವ ಸೂಪರ್ ಬೈಕುಗಳಲ್ಲಿ ಒಂದಾಗಿದೆ ಎಂದು ನಿರೀಕ್ಷಿಸಲಾಗಿದೆ.

English summary
Ducati Panigale V4 Launched in India - Prices Start At Rs 20.53 Lakh.
Story first published: Tuesday, January 30, 2018, 13:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark