ಹೊಸ ಬೈಕ್‍‍‍ಗಳ ಬಿಡುಗಡೆ ಬಗ್ಗೆ ಸುಳಿವು ನೀಡಿದ ಹಾರ್ಲೆ ಡೇವಿಡ್‍‍ಸನ್..

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಹಾರ್ಲೆ ಡೇವಿಡ್‍‍ಸನ್ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಮಾರಾಟದ ಶ್ರೇಣಿಯನ್ನು ಉತ್ತಮಗೊಳಿಸಲು 250ಸಿಸಿ ಎಂದ 500ಸಿಸಿ ಒಳಗಿನ ಬೈಕ್‍‍ಗಳನ್ನು ಬಿಡುಗಡೆಗೊಳಿಸಿವ ಬಗ್ಗೆ ಹೇಳಿಕೊಂಡಿದೆ.

By Rahul Ts

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಹಾರ್ಲೆ ಡೇವಿಡ್‍‍ಸನ್ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಮಾರಾಟದ ಶ್ರೇಣಿಯನ್ನು ಉತ್ತಮಗೊಳಿಸಲು 250ಸಿಸಿ ಎಂದ 500ಸಿಸಿ ಒಳಗಿನ ಬೈಕ್‍‍ಗಳನ್ನು ಬಿಡುಗಡೆಗೊಳಿಸಿವ ಬಗ್ಗೆ ಹೇಳಿಕೊಂಡಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ಏಶಿಯಾದ ಹಲವಾರು ಮಾರುಕಟ್ಟೆಗಳಲ್ಲಿ ಈ ಬೈಕ್‍‍ಗಳನ್ನು ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಹೊಸ ಬೈಕ್‍‍‍ಗಳ ಬಿಡುಗಡೆ ಬಗ್ಗೆ ಸುಳಿವು ನೀಡಿದ ಹಾರ್ಲೆ ಡೇವಿಡ್‍‍ಸನ್..

ಹಾರ್ಲೆ ಡೇವಿಡ್‍ಸನ್ ಸಂಸ್ಥೆಯು 250ಸಿಸಿ ಇಂದ 500ಸಿಸಿ ಒಳಗಿನ ಬೈಕ್‍‍ಗಳನ್ನು ಬಜಾಜ್ ಮತ್ತು ಕೆಟಿಎಮ್ ಹಾಗು ಟಿವಿಎಸ್ ಮತ್ತು ಬಿಎಮ್‍‍ಡಬ್ಲ್ಯೂ ಮೋಟರ್ರಾಡ್‍‍ನಂತೆಯೆ ಏಶಿಯಾ ಆಧಾರಿತ ಕಂಪೆನಿಯೊಂದರ ಜೊತೆ ಸಹಭಾಗಿತ್ವದಲ್ಲಿ ತಯಾರು ಮಾಡಲಿದೆ.

ಹೊಸ ಬೈಕ್‍‍‍ಗಳ ಬಿಡುಗಡೆ ಬಗ್ಗೆ ಸುಳಿವು ನೀಡಿದ ಹಾರ್ಲೆ ಡೇವಿಡ್‍‍ಸನ್..

'ಇದಲ್ಲದೆ ಸಂಸ್ಥೆಯು ಇದೇ ಆಗಸ್ಟ್ ತಿಂಗಳಿನಲ್ಲಿ ಲೈವ್‍‍ವೈರ್ ಎಲೆಕ್ಟ್ರಿಕ್ ಮೋಟರ್‍‍ಸೈಕಲ್‍‍ನ ಉತ್ಪಾದನಾ ಮಾದರಿಯನ್ನು ಪರಿಚಯಿಸಲಿದೆ'. ಎಂದು ಹಾರ್ಲೆ ಡೇವಿಡ್‍‍ಸನ್ ಸಂಸ್ಥೆಯಾ ಅಧ್ಯಕ್ಷರಾದ ಮೇಟ್ ಲೆವಾಟಿಕ್ ಹೇಳಿಕೊಂಡಿದ್ದಾರೆ.

ಹೊಸ ಬೈಕ್‍‍‍ಗಳ ಬಿಡುಗಡೆ ಬಗ್ಗೆ ಸುಳಿವು ನೀಡಿದ ಹಾರ್ಲೆ ಡೇವಿಡ್‍‍ಸನ್..

ವಿಸ್ತರಣಾ ಪ್ರಕ್ರಿಯೆಯು ಬ್ರಾಂಡ್‍‍‍ಗೆ ಸಂಪತ್ತನ್ನು ವೆಚ್ಚವಾಗುವುದರಿಂದ ಕಂಪನಿಯು ಈ ಕೆಲಸಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸುತ್ತದೆ. ನಿಖರವಾಗಿ ಹೇಳಬೇಕೆಂದರೆ, ಮುಂದಿನ ನಾಲ್ಕು ವರ್ಷಗಳಲ್ಲಿ $825 ಮಿಲಿಯನ್ ಅಂದರೇ 5,660 ಕೋಟಿ ರೂ. ಹೂಡಿಕೆ ಮಾಡಲಿದೆ.

ಹೊಸ ಬೈಕ್‍‍‍ಗಳ ಬಿಡುಗಡೆ ಬಗ್ಗೆ ಸುಳಿವು ನೀಡಿದ ಹಾರ್ಲೆ ಡೇವಿಡ್‍‍ಸನ್..

ಇದಲ್ಲದೆ ಸಂಸ್ಥೆಯು 2027ರೊಳಗೆ ಸುಮಾರು 100 ಮೋಟರ್‍‍‍ಸೈಕಲ್‍‍ಗಳನ್ನು ಪರಿಚಯಿಸಲಿದ್ದು, ಅವುಗಳಲ್ಲಿ ಪ್ಯಾನ್ ಅಮೇರಿಕಾ 1250, 1250ಸಿಸಿ ಕಸ್ಟಮ್ ಮತ್ತು 975ಸಿಸಿ ಸ್ಟ್ರೀಟ್‍‍ಫೈಟರ್ ಬೈಕ್‍‍ಗಳನ್ನು 2020ರಲ್ಲಿ ಬಿಡುಗಡೆಗೊಳಿಸಲಿದೆ.

ಹೊಸ ಬೈಕ್‍‍‍ಗಳ ಬಿಡುಗಡೆ ಬಗ್ಗೆ ಸುಳಿವು ನೀಡಿದ ಹಾರ್ಲೆ ಡೇವಿಡ್‍‍ಸನ್..

ಹಾರ್ಲೆ ಡೇವಿಡ್‍‍ಸನ್ ಸಂಸ್ಥೆಯು 250ಸಿಸಿ ಇಂದ 500ಸಿಸಿ ಮೋಟರ್‍‍ಸೈಕಲ್‍‍ಗಳನ್ನು ಏಶಿಯಾದ ಮಾರುಕಟ್ಟೆಯಲ್ಲಿ ಪರಿಚಯಿಸಲು ಮುಂದಾಗಿದ್ದು, ವಿಶೇಷವಾಗಿ ಭಾರತೀಯ ಮಾತುಕಟ್ಟೆಗಳನ್ನು ಟಾರ್ಗೆಟ್ ಮಾಡಿಕೊಂಡಿವೆ ಎನ್ನಲಾಗಿದೆ.

ಹೊಸ ಬೈಕ್‍‍‍ಗಳ ಬಿಡುಗಡೆ ಬಗ್ಗೆ ಸುಳಿವು ನೀಡಿದ ಹಾರ್ಲೆ ಡೇವಿಡ್‍‍ಸನ್..

ಕೇವಲ ಮಾರುಕಟ್ಟೆಯಲ್ಲಿ ಕದಿಮೆ ಸಾಮರ್ಥ್ಯದ ಬೈಕ್‍‍ಗಳನ್ನು ಪರಿಚಯಿಸುವುದಲ್ಲದೆ, ಹಾರ್ಲೆ ಡೇವಿಡ್‍‍ಸನ್ ಸಂಸ್ಥೆಯು ತಮ್ಮ ಅಧಿಕೃತ ವೆಬ್‍‍ಸೈಟ್ www.harley-davidson.com ಅನ್ನು ಕೂಡಾ ಅಭಿವೃದ್ಧಿಗೊಳಿಸುವ ಯೋಜನೆಯಲ್ಲಿದೆ.

ಹೊಸ ಬೈಕ್‍‍‍ಗಳ ಬಿಡುಗಡೆ ಬಗ್ಗೆ ಸುಳಿವು ನೀಡಿದ ಹಾರ್ಲೆ ಡೇವಿಡ್‍‍ಸನ್..

ಅಲ್ಲದೆ, ಹಾರ್ಲೆ ಪ್ರಮುಖ ಜಾಗತಿಕ ಇ-ವಾಣಿಜ್ಯ ಬ್ರಾಂಡ್‍‍ಗಳೊಂದಿಗೆ ಕಾರ್ಯತಂತ್ರದ ಮೈತ್ರಿಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ. ಆದ್ದರಿಂದ ಬಹುಶಃ ಭವಿಷ್ಯದ ದಿನಗಳಲ್ಲಿ, ಅಮೆಜಾನ್ ಅಥವಾ ಫ್ಲಿಪ್‍‍ಕಾರ್ಟ್ ಎಂಬ ಆನ್‍‍ಲೈನ್ ಸ್ಟೋರ್‍‍ಗಳಾ ಮೂಲಕ ಹಾರ್ಲೆ ಡೇವಿಡ್‍‍ಸನ್ ಬೈಕ್‍‍ಗಳನ್ನು ನೀವು ಖರೀದಿಸಬಹುದು.

ಹೊಸ ಬೈಕ್‍‍‍ಗಳ ಬಿಡುಗಡೆ ಬಗ್ಗೆ ಸುಳಿವು ನೀಡಿದ ಹಾರ್ಲೆ ಡೇವಿಡ್‍‍ಸನ್..

ಹಾರ್ಲೆ-ಡೇವಿಡ್ಸನ್ ಯೋಜನೆ ಕಂಪನಿಯು ಕಳೆದ ವರ್ಷಕ್ಕೆ ಹೋಲಿಸಿದರೆ 2022 ರಲ್ಲಿ ಗಮನಾರ್ಹ ಪ್ರಮಾಣದಲ್ಲಿ ಒಂದು ಬಿಲಿಯನ್ ಡಾಲರ್ ಹೆಚ್ಚುವರಿ ಆದಾಯವನ್ನು ಸೃಷ್ಟಿಸಲು ನಿರೀಕ್ಷಿಸುತ್ತಿದೆ. ಇದೀಗ, ಹೊಸ 250cc - 500cc ಮೋಟರ್ಸೈಕಲ್ಗಳ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲವಾದಲ್ಲಿ ಮುಂದಿನ ದಿನಗಳ ವರೆಗು ಕಾಯ್ದು ನೋಡಬೇಕಿದೆ.

Most Read Articles

Kannada
Read more on harley davidson
English summary
Harley-Davidson To Introduce 250cc – 500cc Motorcycles For Asia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X