ಟಿವಿಎಸ್ ಅಪಾಚೆ 200 ಬೈಕ್ ಅನ್ನು ಹಿಂದಿಕ್ಕಲು ಬರಲಿದೆ ಹೀರೋ ಎಕ್ಸ್‌ಟ್ರಿಮ್ 200ಆರ್ ಬೈಕ್
ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಯುವ ಸಮುದಾಯವನ್ನು ಸೆಳೆಯುವ ಉದ್ದೇಶಕ್ಕಾಗಿ 200 ಸಿಸಿ ಸಾಮರ್ಥ್ಯದ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.
ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಯುವ ಸಮುದಾಯವನ್ನು ಸೆಳೆಯುವ ಉದ್ದೇಶಕ್ಕಾಗಿ 200 ಸಿಸಿ ಸಾಮರ್ಥ್ಯದ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ಹೀರೋ ಮೋಟೋಕಾರ್ಪ್ ಸಂಸ್ಥೆಯು ತನ್ನ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್ ಅನ್ನು ಇದೇ ವರ್ಷದ ಎರಡನೆಯ ತ್ರೈಮಾಸಿಕ ಅವದಿಯಲ್ಲಿ ಬಿಡುಗಡುಗೊಳಿಸಲಿದೆ ಎನ್ನಲಾಗಿದೆ. ಈಗಾಗಲೆ ಸಂಸ್ಥೆಯು ಹೊಸ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಶುರುಮಾಡಿದ್ದು, ಗ್ರಾಹಕರು ರೂ 1000 ರಿಂದ 5000 ಸಾವಿರದ ವರೆಗು ಬುಕ್ಕಿಂಗ್ ಮೊತ್ತವನ್ನು ನೀಡಬೇಕಿದೆ.

ಎಂಜಿನ್ ಸಾಮರ್ಥ್ಯ
ಹೊಸ ಹೀರೋ ಎಕ್ಸ್‌ಟ್ರಿಮ್ 200ಆರ್ ಬೈಕುಗಳು 200ಸಿಸಿ ಎಂಜಿನ್ ಸಹಾಯದಿಂದ 18.4 ಬಿಹೆಚ್‍ಪಿ ಹಾಗು 17ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು 5 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಬೈಕಿನಲ್ಲಿ ಬಳಸಲಾದ ಎಂಜಿನ್ ಅನ್ನು ಜೈಪೂರ್‍ನಲ್ಲಿನ ಹೀರೋ ಮೋಟೊಕಾರ್ಪ್ ಸಂಸ್ಥೆಯ ಇನ್‍ಹೌಸ್ ರೆಸರ್ಚ್ ಆಂಡ್ ಡೆವೆಲೆಪ್ಮೆಂಟ್ ಡಿವಿಷನ್‍ನಲ್ಲಿ ತಯಾರಿಸಲಾಗಿದೆ.

ಹೀಗಾಗಿ ಹೊಸ ಬೈಕ್‌ಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, 17 ಇಂಚಿನ ಅಲಾಯ್ ಚಕ್ರಗಳು, ದೊಡ್ಡದಾದ ಹೆಡ್‌ಲ್ಯಾಂಪ್, ಮಸ್ಕ್ಯೂಲರ್ ಫ್ಯೂಲ್ ಟ್ಯಾಂಕ್ ಡಿಸೈನ್, ರಿರ್ ಪೆಂಡರ್, ಐದು ವಿವಿಧ ಬಣ್ಣಗಳ ಆಯ್ಕೆಯು ಹೊಸ ಬೈಕಿನ ಪ್ರಮುಖಾಂಶಗಳು.

ಇದರೊಂದಿಗೆ ಡೈಮಂಡ್ ಫ್ರೇಮ್ ಚಾರ್ಸಿ ಡಿಸೈನ್ ಪಡೆದಿರುವ ಎಕ್ಸ್‌ಟ್ರಿಮ್ 200ಆರ್ ಮಾದರಿಗಳು 276ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 220ಎಂಎಂ ರಿರ್ ಡಿಸ್ಕ್ ಬ್ರೇಕ್, ಸಿಂಗಲ್ ಚಾನೆಲ್ ಎಬಿಎಸ್ ಟೆಕ್ನಾಲಜಿ ಜೋಡಣೆಯಿದೆ.

ಟ್ಯುಬ್‍ಲೆಸ್ ಟೈರ್ ಹಾಗು ಅಲಾಯ್ ವೀಲ್‍ಗಳನ್ನು ಹೀರೋ ಎಕ್ಸ್‌ಟ್ರಿಮ್ 200ಆರ್ ಬೈಕುಗಳಲ್ಲಿ ಕಾಣಬಹುದಾಗಿದ್ದು, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಮೋನೋಶಾಕ್ ಅನ್ನು ಪಡೆದುಕೊಂಡಿರಲಿವೆ.

ಇನ್ನು ಬಿಡುಗಡೆಗೊಳ್ಳುವ ಹೀರೋ ಎಕ್ಸ್‌ಟ್ರಿಮ್ 200ಆರ್ ಬೈಕುಗಳ ಬೆಲೆಯ ಕುರಿತಾಗಿ ಮಾಹಿತಿಯನ್ನು ಹೊರಹಾಕಲಿಲ್ಲವಾದರು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 80,000 ರಿಂದ 95,000 ಸಾವಿರದ ವರೆಗು ಇರಬಹುದೆಂದು ಅಂದಾಜಿಸಲಾಗಿದೆ.

ದೇಶಿಯಾ ಮರುಕಟ್ಟೆಯಲ್ಲಿ ಯುವ ಸಮುದಾಯವನ್ನು ಸೆಳೆಯಲು ಹೀರೋ ಮೋಟೋಕಾರ್ಪ್ ಸಂಸ್ಥೆಯು ತಮ್ಮ ಎಕ್ಸ್‌ಟ್ರಿಮ್ 200ಆರ್ ಬೈಕುಗಳನ್ನು ಬಿಡುಗಡೆಗೊಳಿಸುತ್ತಿದ್ದು, ಒಮ್ಮೆ ಈ ಬೈಕ್ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಟಿವಿಎಸ್ ಅಪಾಚೆ 200 ಹಾಗು ಬಜಾಜ್ ಪಲ್ಸರ್ 200ಎನ್ಎಸ್ ಬೈಕುಗಳಿಗೆ ಪೈಪೋಟಿಯನ್ನು ನೀಡಲಿದೆ.
Source : Cartoq

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಬಜಾಜ್ ಪಲ್ಸರ್ ಪ್ರಿಯರಿಗೆ ಸಿಹಿಸುದ್ಧಿ..! ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕುಗಳು
ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರು..
ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..


Click it and Unblock the Notifications