ಆಕ್ಟಿವಾ 4ಜಿ v/s ಆಕ್ಟಿವಾ 5ಜಿ... ಯಾವುದು ಉತ್ತಮ?

ಇದೇ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್ ಪೋ ಮೇಳದಲ್ಲಿ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ಸ್ ವಿಭಾಗವು ತನ್ನ ಹೊಸ ಆಕ್ಟಿವಾ 5ಜಿ ಸ್ಕೂಟರನ್ನು ಅನಾರಣಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದೆ.

By Rahul Ts

ಇದೇ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್ ಪೋ ಮೇಳದಲ್ಲಿ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ಸ್ ವಿಭಾಗವು ತನ್ನ ಹೊಸ ಆಕ್ಟಿವಾ 5ಜಿ ಸ್ಕೂಟರನ್ನು ಅನಾರಣಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದೆ. ಈ ಹಿನ್ನೆಲೆ ಆಕ್ಟಿವಾ 5ಜಿ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಆಕ್ಟಿವಾ 4ಜಿಗಿಂತ ಹೇಗೆ ಭಿನ್ನವಾಗಿದೆ ಎನ್ನುವ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಆಕ್ಟಿವಾ 4ಜಿ v/s ಆಕ್ಟಿವಾ 5ಜಿ... ಯಾವುದು ಉತ್ತಮ?

ಟಿವಿಎಸ್ ಜೂಪಿಟರ್ ಮತ್ತು ಹೀರೋ ಡ್ಯುಯೆಟ್ 125, ಮ್ಯಾಸ್ಟ್ರೋ ಎಡ್ಜ್ 125 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿರುವ ಆಕ್ಟಿವಾ 5ಜಿ ಇದೆ ವರ್ಷದ ಮಾರ್ಚ್ ಅಥವಾ ಎಪ್ರಿಲ್ ಅಂತ್ಯಕ್ಕೆ ಬಿಡುಗಡೆಗೊಳ್ಳಲಿದ್ದು, ಆಕ್ಟಿವಾ 4ಜಿ ಸ್ಕೂಟರ್‌ಗಿಂತ ವಿಶೇಷ ವಿನ್ಯಾಸಗಳು ಮತ್ತು ಸೌಲಭ್ಯಗಳ ಹೊತ್ತು ಬರುತ್ತಿದೆ.

ಆಕ್ಟಿವಾ 4ಜಿ v/s ಆಕ್ಟಿವಾ 5ಜಿ... ಯಾವುದು ಉತ್ತಮ?

ಹೋಂಡಾ ಆಕ್ಟಿವಾ 5ಜಿ ಹಾಗೂ ಆಕ್ಟಿವಾ 4ಜಿ ಸ್ಕೂಟರ್ ಹೋಲಿಕೆನ್ನೆ ಪಡೆದಿದ್ದರು, ಹೊಸ ಬಣ್ಣ ಮತ್ತು ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಳ್ಳಲಿದೆ. ಒಟ್ಟಾರೆ ಸ್ಕೂಟರ್ ವಿನ್ಯಾಸಗಳು ಒಂದೇ ಆಗಿದ್ದರು ಸ್ಕೂಟರ್‌ನಲ್ಲಿ ನೀಡಲಾಗಿರುವ ತಾಂತ್ರಿಕ ಅಂಶಗಳು ಭಿನ್ನವಾಗಿದ್ದು, ಆಕ್ಟಿವಾ 5ಜಿ ಆಯ್ಕೆ ಯಾಕೆ ಉತ್ತಮ ಎನ್ನುವ ಉತ್ತರ ಇಲ್ಲಿದೆ ನೋಡಿ..

ಆಕ್ಟಿವಾ 4ಜಿ v/s ಆಕ್ಟಿವಾ 5ಜಿ... ಯಾವುದು ಉತ್ತಮ?

ಡಿಸೈನ್

ಹೋಂಡಾ ಆಕ್ಟಿವಾ 5ಜಿ ಸ್ಕೂಟರಿನ ವಿನ್ಯಾಸವು ಆಕ್ಟಿವಾ 4ಜಿ ಆವೃತ್ತಿಯನ್ನೇ ಹೋಲಲಿದ್ದು, ಹೊಸ ಎಲ್ಇಡಿ ಮತ್ತು ಎಲ್ಇಡಿ ಡೇ ರನ್ನಿಂಗ್ ಲೈಟ್ ನೊಂದಿಗೆ ಕ್ರೋಮ್ ಗಾರ್ನಿಶ್ ಅನ್ನು ಹೊಂದಿದೆ. ಆಕ್ಟಿವಾ 5ಜಿ ಮುಂಭಾಗದ ತುದಿಗಳಲ್ಲಿ ಮಾತ್ರ ಬದಲಾವಣೆಗಳನ್ನು ಮಾಡಲಾಗಿದ್ದು, ಹಿಂಭಾಗವನ್ನು ಆಕ್ಟಿವಾ 4ಜಿ ಸ್ಕೂಟರಿನ ಡಿಸೈನ್ ಅನ್ನೇ ಮುಂದುವರಿಸಲಾಗಿದೆ.

ಆಕ್ಟಿವಾ 4ಜಿ v/s ಆಕ್ಟಿವಾ 5ಜಿ... ಯಾವುದು ಉತ್ತಮ?

ಜೊತೆಗೆ ಹೋಂಡಾ ಸಂಸ್ಥೆಯು ಆಕ್ಟಿವಾ 5ಜಿ ಸ್ಕೂಟರಿಗೆ ಹೊಸ ರೂಪವನ್ನು ನೀಡಲಿಲ್ಲವಾದರೂ ತಾಂತ್ರಿಕತೆಯಲ್ಲಿ ಆಧುನಿಕತೆಯನ್ನು ಪಡೆದಿದೆ ಎನ್ನಬಹುದು.

ಡಿಸೈನ್ ರೇಟಿಂಗ್

ಹೋಂಡಾ ಆಕ್ಟಿವಾ 5ಜಿ - 8/10

ಹೋಂಡಾ ಆಕ್ಟಿವಾ 4ಜಿ - 7.5/10

ಆಕ್ಟಿವಾ 4ಜಿ v/s ಆಕ್ಟಿವಾ 5ಜಿ... ಯಾವುದು ಉತ್ತಮ?

ವೈಶಿಷ್ಟ್ಯತೆಗಳು

ಹೊಸ ಎಲ್ಇಡಿ ಹೆಡ್‍ಲೈಟ್‍ಗಳನ್ನು ಹೊರತುಪಡಿಸಿ ಆಕ್ಟಿವಾ 5ಜಿ ಸ್ಕೂಟರಿನಲ್ಲಿ ಅನುಕೂಲಕರ 4 ಇನ್ 1 ಲಾಕ್ ಸಿಸ್ಟಂ ಹೊಂದಿದ್ದು, ಇದರಲ್ಲಿ ಸೀಟ್-ರಿಲೀಸ್ ಬಟನ್, ಇಗ್ನೀಷನ್ ಮತ್ತು ಇನ್ನಿತರೆ ಅನುಕೂಲತೆಗಳನ್ನು ಪಡೆದಿದೆ. ಇನ್ನು ಆಕ್ಟಿವಾ 4ಜಿ ಸ್ಕೂಟರ್‍‍ನಲ್ಲಿ ಇರುವ ಹಾಗೆಯೇ 5ಜಿ ಸ್ಕೂಟರ್‌ನಲ್ಲೂ ಕೂಡಾ ಚಾರ್ಜಿಂಗ್ ಸಾಕೆಟ್ ಅನ್ನು ಇರಿಸಲಾಗಿದೆ.

ಆಕ್ಟಿವಾ 4ಜಿ v/s ಆಕ್ಟಿವಾ 5ಜಿ... ಯಾವುದು ಉತ್ತಮ?

ಇನ್ನು ಈ ಸ್ಕೂಟರಿನಲ್ಲಿ ಇನ್ಸ್ಟ್ರೂಮೆಂಟ್ ಕಂಸೋಲ್ ಅನ್ನು ಪುನರಾವರ್ತಿಸಿದ್ದು, ಸೆಮಿ-ಡಿಜಿಟಲ್ ಆಯ್ಕೆಯನ್ನು ಪಡೆದಿದೆ. ಇನ್ನು ಇದರಲ್ಲಿ ಚಾಲಕರು ಸರ್ವಿಸ್ ಇಂಟರ್‍‍ವಲ್ ಮತ್ತು ಇಕೊ ಸ್ಪೀಡ್ ಇಂಡಿಕೇಟರ್ ಹೊಸದಾಗಿ ಕಾಣಬಹುದಾಗಿದೆ.

ಆಕ್ಟಿವಾ 4ಜಿ v/s ಆಕ್ಟಿವಾ 5ಜಿ... ಯಾವುದು ಉತ್ತಮ?

ಹಾಗೆಯೇ ಡಾಜೆಲ್ ಎಲ್ಲೊ ಮೆಟಾಲಿಕ್ ಮತ್ತು ಪರ್ಲ್ ಸ್ಪಾರ್ಟರ್ನ್ ಎಂಬ ಎರಡು ಬಣ್ಣಗಳಲ್ಲಿ ಈ ಸ್ಕೂಟರ್ ಲಭ್ಯವಿರಲಿದ್ದು, ವೈಶಿಷ್ಟ್ಯತೆಗಳ ವಿಚಾರದಲ್ಲಿ ಅಕ್ಟಿವಾ 5ಜಿ ಆಕ್ಟಿವಾ 4ಜಿ ಸ್ಕೂಟರ್‍‍ಗಿಂತ ಹೆಚ್ಚು ಆಧುನಿಕತೆಯನ್ನು ಪಡೆದಿದೆ.

ವೈಶಿಷ್ಟ್ಯತೆಗಳ ರೇಟಿಂಗ್

ಹೋಂಡಾ ಆಕ್ಟಿವಾ 5ಜಿ - 8/10

ಹೋಂಡಾ ಆಕ್ಟಿವಾ 4ಜಿ - 7/10

ಆಕ್ಟಿವಾ 4ಜಿ v/s ಆಕ್ಟಿವಾ 5ಜಿ... ಯಾವುದು ಉತ್ತಮ?

ಸುರಕ್ಷಾ ಸಾಧನಗಳು

ಆಕ್ಟಿವಾ 4ಜಿ ಸ್ಕೂಟರಿನಂತೆಯೇ 5ಜಿ ಕೂಡ ಕಾಂಬಿ ಬ್ರೇಕ್ ಸಿಸ್ಟಂ ಅನ್ನು ಹೊಂದಿದ್ದು, ರಿರ್ ವ್ಯೂ ಮಿರರ್, ಹಾಲೊಗನ್ ಟೈಲ್‍ಲೈಟ್‍ನೊಂದಿಗೆ ಟರ್ನ್ ಇಂಡಿಕೇಟರ್ಸ್ ಅನ್ನು ಹೊಂದಿದೆ.

ಸುರಕ್ಷಾ ರೇಟಿಂಗ್

ಹೋಂಡಾ ಆಕ್ಟಿವಾ 5ಜಿ - 7.5/10

ಹೋಂಡಾ ಆಕ್ಟಿವಾ 4ಜಿ - 7.5/10

ಆಕ್ಟಿವಾ 4ಜಿ v/s ಆಕ್ಟಿವಾ 5ಜಿ... ಯಾವುದು ಉತ್ತಮ?

ಎಂಜಿನ್, ಗೇರ್‍‍ಬಾಕ್ಸ್ ಮತ್ತು ಮೈಲೇಜ್

ಹೊಸ ಆಕ್ಟಿವಾ 5ಜಿ ಸ್ಕೂಟರ್, ಆಕ್ಟಿವಾ 4ಜಿ ಸ್ಕೂಟರಿನ ಎಂಜಿನನ್ನು ಹೊಂದಿದ್ದು, 8 ಬಿಹೆಚ್‍ಪಿ ಮತ್ತು 9 ಎನ್ಎಂ ಟಾರ್ಕನ್ನು ಉತ್ಪಾದಿಸುವಂತ ಸಾಮರ್ಥ್ಯವುಳ್ಳ 110 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಅಲ್ಲದೆ ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದ್ದು, ಪ್ರತಿ ಲೀಟರ್‌ಗೆ 60 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ.

ಹೋಂಡಾ ಆಕ್ಟಿವಾ 5ಜಿ - 8/10

ಹೋಂಡಾ ಆಕ್ಟಿವಾ 4ಜಿ - 8/10

ಆಕ್ಟಿವಾ 4ಜಿ v/s ಆಕ್ಟಿವಾ 5ಜಿ... ಯಾವುದು ಉತ್ತಮ?

ಬೆಲೆ(ಅಂದಾಜು)

ಆಕ್ಟಿವಾ 4ಜಿ ಸ್ಕೂಟರ್‌ಗಳು ಸದ್ಯ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್ ಶೋರಂ ಪ್ರಕಾರ ರೂ.50,730 ಬೆಲೆಗೆ ಮಾರಾಟವಾಗುತ್ತಿದ್ದು, ಬರಲಿರುವ ಹೊಸ ಆಕ್ಟಿವಾ 5ಜಿ ಸ್ಕೂಟರ್ ಆಕ್ಟಿವಾ 4ಜಿ ಗಿಂತಾ 2ರಿಂದ 4ಸಾವಿರ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ.

ಆಕ್ಟಿವಾ 4ಜಿ v/s ಆಕ್ಟಿವಾ 5ಜಿ... ಯಾವುದು ಉತ್ತಮ?

ಹೋಂಡಾ ಆಕ್ಟಿವಾ 4ಜಿ ಸ್ಕೂಟರ್ ಜೊತೆಗೆ ಹೋಲಿಸಿದರೆ ಹೊಸ ಆಕ್ಟಿವಾ 5ಜಿ ಸ್ಕೂಟರ್ ವಿನೂತನ ವಿನ್ಯಾಸ ಮತ್ತು ಆಧುನಿಕ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಹೊರಗಿನ ಫ್ಯುಯಲ್ ಟ್ಯಾಂಕ್, ಡಿಸ್ಕ್ ಬ್ರೇಕ್ ಮತ್ತು ಅಲಾಯ್ ವೀಲ್‍ಗಳನ್ನು ಕಳೆದುಕೊಂಡಿದೆ ಎನ್ನಬಹುದು.

Most Read Articles

Kannada
Read more on honda activa
English summary
Honda Activa 5G Vs. 4G Comparison: Design, Specifications, Features & Mileage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X