ಆಟೊ ಎಕ್ಸ್ ಪೋ 2018: ಹೊಸ ಫೀಚರ್ ಹೊಂದಿರುವ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

Written By: Rahul

ಜಪಾನ್ ಮೂಲದ ಹೊಂಡಾ ಸಂಸ್ಥೆಯು ತನ್ನ ಹೊಸ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರದರ್ಶನಗೊಳಿಸಿದ್ದು, ಇದು ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿರುವ ಪಿಸಿಎಕ್ಸ್ 150 ಸ್ಕೂಟರ್‌ನ ಮುಂದುವರಿದ ಎಲೆಕ್ಟ್ರಿಕ್ ಆವೃತ್ತಿಯಾಗಿದೆ.

ಆಟೊ ಎಕ್ಸ್ ಪೋ 2018: ಹೊಸ ಫೀಚರ್ ಹೊಂದಿರುವ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಹೊಂಡಾ ಪಿಸಿಎಕ್ಸ್ ಸ್ಕೂಟರ್‌ನ್ನು ಈ ಮೊದಲು 2016ರಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲೂ ಪ್ರದರ್ಶನಗೊಳಿಸಲಾಗಿತ್ತು. ಈಗಲೂ ಕೂಡ ಅದೇ ಬೈಕಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಆಟೋ ಎಕ್ಸ್ ಪೋ 2018ರಲ್ಲೂ ಪ್ರದರ್ಶನಗೊಳಿಸಲಾಗಿದೆ. ಜೊತೆಗೆ ಈ ಸ್ಕೂಟರ್ 2017ರಲ್ಲಿ ಟೊಕಿಯೋ ಮೋಟಾರ್ ಶೋನಲ್ಲೂ ಕೂಡ ಪ್ರದರ್ಶನಗೊಂಡಿತ್ತು.

ಆಟೊ ಎಕ್ಸ್ ಪೋ 2018: ಹೊಸ ಫೀಚರ್ ಹೊಂದಿರುವ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಇನ್ನು ಈ ಸ್ಕೂಟರ್ 0.98 ಕಿಲೋವ್ಯಾಟ್ ಎಲೆಕ್ಟ್ರಿಕ್ ರಿಮೂವಬಲ್ ಲಿಥಿಯಂ-ಇಯಾನ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, ಬ್ಯಾಟರಿಯನ್ನು ತೆಗೆದು ಅಥವಾ ಸ್ಕೂಟರನಲ್ಲೇ ಇರಿಸಿ ಚಾರ್ಜ್ ಮಾಡಬಹುದಾಗಿದೆ.

ಆಟೊ ಎಕ್ಸ್ ಪೋ 2018: ಹೊಸ ಫೀಚರ್ ಹೊಂದಿರುವ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ತೆಗೆಯಬಹುದಾದ ಬ್ಯಾಟರಿ ಪ್ಯಾಕ್ ಸುದೀರ್ಘ ಕಾಲದ ಚಾರ್ಜಿಂಗ್ ಗುಣಮಟ್ಟ ಹೊಂದಿದ್ದು, ಅತಿ ಕಡಿಮೆ ಸಮಯದಲ್ಲಿ ಚಾರ್ಜಿಂಗ್ ಪೂರ್ಣಗೊಳ್ಳುತ್ತದೆ. ಇದರ ಹೊರತು ಹೊಸ ಸ್ಕೂಟರ್ ಬಗೆಗೆ ಹೊಂಡಾ ಸಂಸ್ಥೆಯು ಬೇರೆ ಯಾವುದೇ ತಾಂತ್ರಿಕ ವಿವರಗಳನ್ನು ಬಿಡುಗಡೆಗೊಳಿಸಿಲ್ಲ.

ಆಟೊ ಎಕ್ಸ್ ಪೋ 2018: ಹೊಸ ಫೀಚರ್ ಹೊಂದಿರುವ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಈ ಸ್ಕೂಟರಿನ ಪರಿಕಲ್ಪನೆಯು ಅಲಾಯ್ ಚಕ್ರಗಳು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಅಗಲವಾದ ವಿಂಡ್-ಸ್ಕ್ರೀನ್ ಅನ್ನು ಹೊಂದಿದ್ದು, ಸಸ್ಪೆಷನ್ ಕಾರ್ಯವನ್ನು ನಿರ್ಮಿಸಲು ಟೆಲಿಸ್ಕೋಪಿಚ್ ಫೋರ್ಕ್ ಗಳನ್ನು ಹಾಗೂ ಡ್ಯುಯಲ್ ಶಾಕ್ ಅಬ್ಸಾರ್ಬರ್ ಪಡೆದಿದೆ.

ಆಟೊ ಎಕ್ಸ್ ಪೋ 2018: ಹೊಸ ಫೀಚರ್ ಹೊಂದಿರುವ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಇನ್ನು ಹೊಂಡಾ ಪಿಸಿಎಕ್ಸ್ ಎಲೆಕ್ಟ್ರಿಕ್ ಪರಿಕಲ್ಪನೆಯು ಎಪ್ರಾನ್-ಮೌಂಟೆಡ್ ಡ್ಯುಯಲ್ ಹೆಡ್ ಲೈಟ್ ಸೆಟಪ್, ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಸ್ಪೋರ್ಟಿ ಸೆಟಪ್ ಸೀಟ್ ಹೊಂದಿರಲಿದ್ದು, ಇದೇ ವರ್ಷ ಹಲವು ಏಷಿಯನ್ ಮಾರುಕಟ್ಟೆಯಲ್ಲಿ ಈ ಸ್ಕೂಟರನ್ನು ಬಿಡುಗಡೆಗೊಳಿಸಲಾಗುತ್ತಿದೆ.

ಆಟೊ ಎಕ್ಸ್ ಪೋ 2018: ಹೊಸ ಫೀಚರ್ ಹೊಂದಿರುವ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಹೊಂಡಾ ಪಿಸಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚರ ಮಟ್ಟಿಗೆ ಮಾರಾಟಗೊಂಡ ಪಿಸಿಎಕ್ಸ್ 150 ಸ್ಕೂಟರಿನ ಪರಿಕಲ್ಪನೆಯಾಗಿದ್ದು, ಮುಂದಿನ ತಲೆಮಾರಿನ ವಿನ್ಯಾಸವನ್ನು ಹಾಗು ಆಸಕ್ತಿಕರವಾದ ಎಲೆಕ್ಟ್ರಿಕ್ ಪರಿಕಲ್ಪನೆಯನ್ನು ಹೊಂದಿದೆ.

English summary
Honda PCX Electric Concept Showcased - Specifications, Features & Images.
Story first published: Sunday, February 11, 2018, 15:49 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark