2019ರಲ್ಲಿ ಇಂಡಿಯನ್ ಸ್ಕೌಟ್ ಎಫ್‍ಟಿಆರ್ 1200 ಬೈಕ್ ಬಿಡುಗಡೆ ನಿಶ್ಚಿತ..
ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಹಾರ್ಲೆ ಡೇವಿಡ್‍ಸನ್‍ಗೆ ಪೈಪೋಟಿ ನೀಡುತ್ತಿರುವ ಇಂಡಿಯನ್ ಮೋಟಾರ್‍ಸೈಕಲ್ ಕಂಪೆನಿ ಹೊಸದೊಂದು ರೇಸ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.
ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಹಾರ್ಲೆ ಡೇವಿಡ್‍ಸನ್‍ಗೆ ಪೈಪೋಟಿ ನೀಡುತ್ತಿರುವ ಇಂಡಿಯನ್ ಮೋಟಾರ್‍ಸೈಕಲ್ ಕಂಪೆನಿ ಹೊಸದೊಂದು ರೇಸ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ, ಶೀಘ್ರದಲ್ಲೆ ಬೈಕಿನ ಉತ್ಪಾದನೆಯನ್ನು ಪ್ರಾರಂಭಿಸಲಿದ್ದು ಮುಂದಿನ ವರ್ಷ ಇಂಡಿಯನ್ ಸ್ಕೌಟ್ ಎಫ್‍ಟಿಆರ್ 1200 ಬೈಕ್ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ವಿದೇಶದ ಮಾರುಕಟ್ಟೆಯಲ್ಲಿ ಎಫ್‍ಟಿಆರ್ 1200 ಬೈಕ್ ಫ್ಲಾಟ್ ಟ್ರ್ಯಾಕ್ ರೇಸಿಂಗ್ ಟೋರ್ನಮೆಂಟ್‍ನಲ್ಲಿ ಪ್ರಶಸ್ತಿಯನ್ನು ಗೆದಿದ್ದು, ಅದೇ ಪ್ಲಾಟ್‍ಫಾರ್ಮ್‍ನಲ್ಲಿ ಎಫ್‍ಟಿಆರ್ 1200 ಇದೀಗ ಮರುಕಟ್ಟೆಗೆ ಕಾಲಿಡಲು ಸಜ್ಜುಗೊಳ್ಳುತ್ತಿದೆ.

2017 ಇಐಸಿಎಮ್‍ಎ ಮೇಳದಲ್ಲಿ ಎಫ್‍ಟಿಆರ್ 1200 ಕಸ್ಟಮ್ ಬೈಕ್ ಅನ್ನು ಅನಾವರಣಗೊಳಿಸಲಾಗಿದ್ದು, ಗ್ರಾಹಕರ ಪ್ರತಿಕ್ರಿಯೆಯನ್ನು ಕೇಳಿದ ನಂತರ ಎಫ್‍ಟಿಆರ್ ಬೈಕಿನ ಉತ್ಪಾದನೆಯನ್ನು ಪ್ರಾರಂಭಿಸುತ್ತೇವೆ ಎಂದು ಇಂಡಿಯನ್ ಮೋಟಾರ್‍ಸೈಕಲ್ ಸಂಸ್ಥೆಯ ಅಧ್ಯಕ್ಷರಾದ ಸ್ಟೀವ್ ಮೆನ್ನೆಟೊ ಹೇಳಿದ್ದರು.

ಇದೀಗ "ರೈಡರ್‍ಗಳು ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದು, ಮತ್ತು ಗ್ರಾಹಕರ ಪ್ರತಿಕ್ರಿಯೆ ಅಗಾಧವಾಗಿದೆ. ನಾವು ಎಫ್‍ಟಿಆರ್ 1200 ಉತ್ಪಾದಿಸಲು ಶೀಘ್ರದಲ್ಲೆ ಶುರುಮಾಡಲಿದ್ದೇವೆ ಎಂದು ಸ್ಟೀವ್ ಮೆನ್ನೆಟೊ ಹೇಳಿಕೊಂಡಿದ್ದು, ಮುಂದಿನ ವರ್ಷ ಮಾರಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದ್ದೇವೆ ಎಂದಿದ್ದಾರೆ.

ಎಫ್‍ಟಿಆರ್ 1200 ರ ಸಂಪೂರ್ಣ ವಿವರಣೆಯನ್ನು ಇನ್ನೂ ಸಂಸ್ಥೆಯು ಬಿಡುಗಡೆಗೊಳಿಸಲಿಲ್ಲವಾದರೂ, ಇದು ಒಂದು ಫ್ಲಾಟ್ ಟ್ರ್ಯಾಕರ್ ಶೈಲಿಯನ್ನು ರಚಿಸುತ್ತದೆ ಮತ್ತು ಈ ಬೈಕ್ ಟ್ರೆಲೀಸ್ ಫ್ರೇಮ್ ಹಾಗು ಮತ್ತು ಹೊಸ ವಿ-ಟ್ವಿನ್ ಎಂಜಿನ್ ಅನ್ನು ಪಡೆಯಲಿದೆ ಎನ್ನಲಾಗಿದೆ.

1200ಸಿಸಿ ಸಾಮರ್ಥ್ಯವನ್ನು ಹೊತ್ತು ಬರಲಿರುವ ಈ ಬೈಕ್ ರೇಸ್‍ನಲ್ಲಿ ಬಳಸಲಾದ ಎಫ್‍ಡಿಆರ್ ಬೈಕ್‍ಗಿಂತ ವಿಭಿನ್ನವಾಗಿರಲಿದೆ. ಮತ್ತು ಎಫ್‍ಟಿಆರ್ 1200 ಅನ್ನು ಎಫ್‍ಟಿಆರ್ 1200 ಕಸ್ಟಮ್ ಬೈಕ್ ಅನ್ನು ಹೋಲುತ್ತದೆ ಮತ್ತು ಈ ಬೈಕ್‍ನಿಂದ ಅಮೆರಿಕನ್ ಮೋಟಾರ್‍ಸೈಕಲ್‍ನ ಮಾರಾಟವನ್ನು ಅಧಿಕಗೊಳಿಸುವುದೇ ಸಂಸ್ಥೆಯ ಮೂಲ ಉದ್ದೇಶವಾಗಿದೆ.

ಬೈಕ್‍ನ ಇನ್ನಿತರೆ ಮಾಹಿತಿಗಳನ್ನು ಇಂಡಿಯನ್ ಮೋಟಾರ್‍ಸೈಕಲ್ ಸಂಸ್ಥೆಯು ಹೊರ ಹಾಕಲಿಲ್ಲವಾದರೂ, ಬೈಕಿನ ಉತ್ಪಾದನೆಯನ್ನು ಮಾತ್ರ ಪ್ರಾರಂಭಿಸುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ಬೈಕಿನ ಬಗ್ಗೆ ಹೆಚ್ಚು ವಿವರಗಳಿಗಾಗಿ ಕಾಯ್ದು ನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...
ಇನ್ಮುಂದೆ ಈ ಆ್ಯಪ್ ಇದ್ರೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯೂ ನಿಲ್ಲಬೇಕಿಲ್ಲ...
ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?
ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..
ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍ಗಳನ್ನಾಗಿ ಪರಿವರ್ತಿಸಿದ ರೈತರು..!!


Click it and Unblock the Notifications