ನಿಂಜಾ ಝೆಡ್ಎಕ್ಸ್-10ಆರ್ ಬೈಕಿನ ಬೆಲೆಯಲ್ಲಿ ದಾಖಲೆ ಸೃಷ್ಠಿಸಲಿದೆ ಕವಾಸಕಿ...

Written By:

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ನಿಂಜಾ ಝೆಡ್ಎಕ್ಸ್-10ಆರ್ ಬೈಕಿನ ಮಾರಾಟದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಲು ಮುಂದಾಗಿರುವ ಕವಾಸಕಿ ಸಂಸ್ಥೆಯು ಸ್ಥಳೀಯವಾಗಿ ಹೊಸ ಬೈಕ್‌ಗಳನ್ನು ಅಭಿವೃದ್ಧಿ ಪಡಿಸುವ ಸುಳಿವು ನೀಡಿದೆ.

ನಿಂಜಾ ಝೆಡ್ಎಕ್ಸ್-10ಆರ್ ಬೈಕಿನ ಬೆಲೆಯಲ್ಲಿ ದಾಖಲೆ ಸೃಷ್ಠಿಸಲಿದೆ ಕವಾಸಕಿ...

ಎಸ್‌ಕೆಡಿ(ಸೆಮಿ ನಾಕ್ ಡೌನ್) ಆಧಾರದ ಮೇಲೆ ಹೊಸ ಬೈಕ್‌ಗಳ ಅಭಿವೃದ್ಧಿ ಮತ್ತು ಮಾರಾಟ ಪ್ರಕ್ರಿಯೆ ಆರಂಭಗೊಂಡಲ್ಲಿ ಬೈಕ್ ಬೆಲೆಗಳು ಪರಿಣಾಮಕಾರಿಯಾಗಿ ತಗ್ಗಲಿದ್ದು, ನಿಂಜಾ 1000 ಮಾದರಿಯಲ್ಲೇ ನಿಂಜಾ ಝೆಡ್ಎಕ್ಸ್-10ಆರ್ ಬೆಲೆ ಕೂಡಾ ಭಾರೀ ಇಳಿಕೆಯಾಗುವ ಸಾಧ್ಯತೆಗಳಿವೆ.

ನಿಂಜಾ ಝೆಡ್ಎಕ್ಸ್-10ಆರ್ ಬೈಕಿನ ಬೆಲೆಯಲ್ಲಿ ದಾಖಲೆ ಸೃಷ್ಠಿಸಲಿದೆ ಕವಾಸಕಿ...

ಎಸ್‌ಕೆಡಿ ಆಧಾರ ಮೇಲೆ ಸೂಪರ್ ಬೈಕ್‌ಗಳನ್ನು ನಿರ್ಮಾಣ ಮಾಡಿದಲ್ಲಿ ಬೈಕಿನ ಎಂಜಿನ್ ಹಾಗೂ ಕೆಲವು ಪ್ರಮುಖ ಬಿಡಿಭಾಗಗಳನ್ನು ಹೊರತುಪಡಿಸಿ ಬಹುತೇಕ ಬಿಡಿಭಾಗಗಳನ್ನು ಸ್ಥಳೀಯವಾಗಿಯೇ ಉತ್ಪಾದನೆ ಮಾಡಲಾಗುತ್ತದೆ.

ನಿಂಜಾ ಝೆಡ್ಎಕ್ಸ್-10ಆರ್ ಬೈಕಿನ ಬೆಲೆಯಲ್ಲಿ ದಾಖಲೆ ಸೃಷ್ಠಿಸಲಿದೆ ಕವಾಸಕಿ...

ಇದರಿಂದ ವಿದೇಶಿ ಮಾರುಕಟ್ಟೆಗಳಿಂದ ಸೂಪರ್ ಬೈಕ್‌ಗಳನ್ನು ಆಮದು ಮಾಡಿಕೊಳ್ಳುವ ಬದಲು ಸ್ಥಳೀಯವಾಗಿ ಅಭಿವೃದ್ಧಿಯಾಗಲಿದ್ದು, ಎಂಜಿನ್ ಹೊರತುಪಡಿಸಿ ಉಳಿದ ಬಿಡಿಭಾಗಗಳ ಮೇಲಿನ ಆಮದು ಸುಂಕಗಳಿಂದ ಮುಕ್ತವಾಗುವ ಅವಕಾಶವಿದೆ.

ನಿಂಜಾ ಝೆಡ್ಎಕ್ಸ್-10ಆರ್ ಬೈಕಿನ ಬೆಲೆಯಲ್ಲಿ ದಾಖಲೆ ಸೃಷ್ಠಿಸಲಿದೆ ಕವಾಸಕಿ...

ಹೀಗಾಗಿ ಸೂಪರ್ ಬೈಕ್‌ಗಳ ಬೆಲೆಗಳು ಪರಿಣಾಮಕಾರಿ ಇಳಿಕೆಯಾಗಲಿದ್ದು, ಒಂದು ವೇಳೆ ಎಸ್‌ಕೆಡಿ ಆಧಾರದ ಮೇಲೆ ನಿಂಜಾ ಝೆಡ್ಎಕ್ಸ್-10ಆರ್ ಬೈಕ್‌ಗಳ ಅಭಿವೃದ್ಧಿಗೊಂಡಲ್ಲಿ ಮೂಲಬೆಲೆಗಿಂತ ರೂ.4 ಲಕ್ಷ ಇಳಿಕೆಯಾಗಬಹುದೆಂದು ನೀರಿಕ್ಷೆ ಮಾಡಲಾಗಿದೆ.

ನಿಂಜಾ ಝೆಡ್ಎಕ್ಸ್-10ಆರ್ ಬೈಕಿನ ಬೆಲೆಯಲ್ಲಿ ದಾಖಲೆ ಸೃಷ್ಠಿಸಲಿದೆ ಕವಾಸಕಿ...

ಸದ್ಯ ಸಿಬಿಯ ಮೂಲಕ ಆಮದು ಮಾಡಿಕೊಳ್ಳಲಾಗುತ್ತಿರುವ ನಿಂಜಾ ಝೆಡ್ಎಕ್ಸ್-10ಆರ್ ಬೈಕ್ ಎಕ್ಸ್‌ಶೋರಂ ಪ್ರಕಾರ ರೂ.18.08 ಲಕ್ಷ ಬೆಲೆ ಹೊಂದಿದ್ದು, ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದಲ್ಲಿ ಬೈಕಿನ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ. 14.50ಲಕ್ಷಕ್ಕೆ ಲಭ್ಯವಾಗಲಿವೆ.

ನಿಂಜಾ ಝೆಡ್ಎಕ್ಸ್-10ಆರ್ ಬೈಕಿನ ಬೆಲೆಯಲ್ಲಿ ದಾಖಲೆ ಸೃಷ್ಠಿಸಲಿದೆ ಕವಾಸಕಿ...

ಇದರೊಂದಿಗೆ 18.86 ಲಕ್ಷ ಮೌಲ್ಯ ಹೋಂಡಾ ಸಿಬಿಆರ್1000ಆರ್‌ಆರ್ ಎಸ್‌ಪಿ ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿರುವ ನಿಂಜಾ ಝೆಡ್ಎಕ್ಸ್-10ಆರ್ ಬೈಕ್‌ಗಳು 4 ಲಕ್ಷ ಕಡಿಮೆ ಬೆಲೆ ಹೊಂದಿದ್ದರು ಸಿಬಿಆರ್1000ಆರ್‌ಆರ್ ಎಸ್‌ಪಿಗೆ ಸಮನಾಗಿ ಎಂಜಿನ್ ಮತ್ತು ತಾಂತ್ರಿಕ ಅಂಶಗಳನ್ನು ಹೊಂದಿರಲಿದೆ.

ನಿಂಜಾ ಝೆಡ್ಎಕ್ಸ್-10ಆರ್ ಬೈಕಿನ ಬೆಲೆಯಲ್ಲಿ ದಾಖಲೆ ಸೃಷ್ಠಿಸಲಿದೆ ಕವಾಸಕಿ...

ಎಂಜಿನ್ ಸಾಮರ್ಥ್ಯ

998ಸಿಸಿ ಫೌರ್ ಸಿಲಿಂಡರ್ ಹೊಂದಿರುವ ನಿಂಜಾ ಝೆಡ್ಎಕ್ಸ್-10ಆರ್ ಬೈಕ್‌ಗಳು 200ಬಿಎಚ್‌ಪಿಯೊಂದಿಗೆ 113.5ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಪಡೆದಿದೆ. ಇದರೊಂದಿಗೆ 300ಕಿಮಿ ಟಾಪ್ ಸ್ಪೀಡ್ ಹೊಂದಿವೆ.

ನಿಂಜಾ ಝೆಡ್ಎಕ್ಸ್-10ಆರ್ ಬೈಕಿನ ಬೆಲೆಯಲ್ಲಿ ದಾಖಲೆ ಸೃಷ್ಠಿಸಲಿದೆ ಕವಾಸಕಿ...

ಇದರಿಂದಾಗಿಯೇ ವರ್ಲ್ಡ್ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಬಾರಿ ಬೆಸ್ಟ್ ಪರ್ಫಾಮೆನ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಜಗತ್ತಿನಲ್ಲಿ ಅತಿವೇಗ ಹೊಂದಿರುವ ಕೆಲವೇ ಬೈಕ್‌ಗಳಲ್ಲಿ ಇದು ಕೂಡಾ ಒಂದಾಗಿದೆ ಎನ್ನಬಹುದು.

ನಿಂಜಾ ಝೆಡ್ಎಕ್ಸ್-10ಆರ್ ಬೈಕಿನ ಬೆಲೆಯಲ್ಲಿ ದಾಖಲೆ ಸೃಷ್ಠಿಸಲಿದೆ ಕವಾಸಕಿ...

ಇದೇ ಉದ್ದೇಶದಿಂದ ಗ್ರಾಹಕರನ್ನು ಸೆಳೆಯಲು ಹೊಸ ತಂತ್ರ ರೂಪಿಸಿರುವ ಕವಾಸಕಿ ಸಂಸ್ಥೆಯು, ಸ್ಥಳೀಯವಾಗಿ ಬೈಕ್ ಉತ್ಪಾದನೆ ಮಾಡಿ ಬೆಲೆಗಳನ್ನು ಇಳಿಕೆ ಮಾಡುವುದರ ಮೂಲಕ ಸೂಪರ್ ಬೈಕ್ ಮಾರಾಟದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಲು ಸಜ್ಜಾಗಿದೆ. ಇನ್ನು ಸ್ಥಳೀಯವಾಗಿ ಉತ್ಪಾದನೆಯಾಗಿರುವ ನಿಂಜಾ ಝೆಡ್ಎಕ್ಸ್-10ಆರ್ ಬೈಕ್‌ಗಳು ಮುಂದಿನ ಜೂನ್-ಜುಲೈ ಅಂತ್ಯಕ್ಕೆ ಮಾರಾಟಕ್ಕೆ ಲಭ್ಯವಾಗಲಿವೆಯಂತೆ.

Source: Autocarindia

Read more on kawasaki super bikes
English summary
Kawasaki To Assemble Ninja ZX-10R In India, Big Price Cut Expected.
Story first published: Friday, April 27, 2018, 11:50 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark