ರಸ್ತೆ ಮಧ್ಯೆದಲ್ಲೇ ಹೊತ್ತಿ ಉರಿದ ಕೆಟಿಎಂ ಡ್ಯೂಕ್ 390 ಬೈಕ್

Written By:

ಲಿಮ್ಕಾ ದಾಖಲೆಗಾಗಿ ದೆಹಲಿಯಿಂದ ಕನ್ಯಾಕುಮಾರಿಯತ್ತ ಹೊರಟಿದ್ದ ಕೆಟಿಎಂ ಡ್ಯೂಕ್ 390 ಬೈಕ್ ಒಂದು ಅಪಘಾತಕ್ಕಿಡಾಗಿದ್ದು, ಅಪಘಾತದ ತೀವ್ರಯಿಂದಾಗಿ ಬೈಕ್ ನಡುರಸ್ತೆಯಲ್ಲೇ ಹೊತ್ತಿ ಉರಿದಿರುವ ಘಟನೆ ಚೆನ್ನೈ ಬಳಿ ನಡೆದಿದೆ.

ರಸ್ತೆ ಮಧ್ಯೆದಲ್ಲೇ ಹೊತ್ತಿ ಉರಿದ ಕೆಟಿಎಂ ಡ್ಯೂಕ್ 390 ಬೈಕ್

ಉತ್ತರಾಖಂಡ್ ಮೂಲದ ಆಕಾ ಸೋನು ಎನ್ನುವವರು ಕಳೆದ ವಾದರ ಹಿಂದಷ್ಟೇ ದೆಹಲಿಯಿಂದ ತಮ್ಮ ಸ್ನೇಹಿತರ ಜೊತೆಗೂಡಿ ಲಿಮ್ಕಾ ದಾಖಲೆಗಾಗಿ ಕೆಟಿಎಂ ಡ್ಯೂಕ್ 390 ಬೈಕಿನಲ್ಲಿ ದೀರ್ಘ ಕಾಲದ ಪ್ರವಾಸ ಆರಂಭಿಸಿದ್ದರು. ಆದ್ರೆ ಲಿಮ್ಕಾ ದಾಖಲೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಈ ದುರಂತ ನಡೆದಿದೆ.

Recommended Video - Watch Now!
[Kannada] Maruti Swift 2018 - Full Specifications, Features, Price, Mileage, Colours - DriveSpark
ರಸ್ತೆ ಮಧ್ಯೆದಲ್ಲೇ ಹೊತ್ತಿ ಉರಿದ ಕೆಟಿಎಂ ಡ್ಯೂಕ್ 390 ಬೈಕ್

ಮೋಟಾರ್ ಸೈಕಲ್ ಮೂಲಕ ಅತಿವೇಗದ ಗೋಲ್ಡನ್ ಕ್ವಾಡ್ರಿಲ್ಯಾಟರಲ್‌ಗಾಗಿ ಪ್ರಯಾಣ ಆರಂಭಿಸಲಾಗಿತ್ತು ಎನ್ನುವ ಮಾಹಿತಿಯಿದ್ದು, ಅಪಘಾತ ಸಂದರ್ಭದಲ್ಲಿ ಬೈಕ್ ಹಿಂದೆ ಇದ್ದ ಪೆಟ್ರೋಲ್ ಕ್ಯಾನ್‌ಗೆ ಬೆಂಕಿ ಹೊತ್ತಿಕೊಂಡಿದೆ.

ರಸ್ತೆ ಮಧ್ಯೆದಲ್ಲೇ ಹೊತ್ತಿ ಉರಿದ ಕೆಟಿಎಂ ಡ್ಯೂಕ್ 390 ಬೈಕ್

ಕನ್ಯಾಕುಮಾರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ನಾಯಿಯೊಂದು ಬೈಕ್ ಅಡ್ಡ ಬಂದಿದೆ. ಈ ವೇಳೆ ಜೋರಾಗಿ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕೀಡ್ ಆಗಿದ್ದು, ಸುಮಾರು 10 ಅಡಿಗಿಂತಲೂ ಹೆಚ್ಚು ದೂರದವರೆಗೆ ರಸ್ತೆಗೆ ತರಚಿಕೊಂಡು ಹೋಗಿದೆ.

ರಸ್ತೆ ಮಧ್ಯೆದಲ್ಲೇ ಹೊತ್ತಿ ಉರಿದ ಕೆಟಿಎಂ ಡ್ಯೂಕ್ 390 ಬೈಕ್

ಈ ವೇಳೆ ಬೈಕ್ ಹಿಂದೆ ಈಡಲಾಗಿದ್ದ ಪೆಟ್ರೋಲ್ ಕ್ಯಾನ್‌ಗೆ ಕೆಲವೇ ಸೇಕೆಂಡುಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅದೃಷ್ಟವಶಾತ್ ಬೈಕ್ ಸವಾರಿ ಮಾಡುತ್ತಿದ್ದ ಆಕಾ ಸೋನು ಪ್ರಾಣಪಾಯದಿಂದ ಪಾರಾಗಿದ್ದಾರೆ.

ರಸ್ತೆ ಮಧ್ಯೆದಲ್ಲೇ ಹೊತ್ತಿ ಉರಿದ ಕೆಟಿಎಂ ಡ್ಯೂಕ್ 390 ಬೈಕ್

ದೂರದ ಪ್ರಯಾಣದ ಉದ್ದೇಶದಿಂದ ಅಗತ್ಯ ಸುರಕ್ಷಾ ಆಕ್ಸೆರಿಸ್‌ಗಳನ್ನು ಧರಿಸಿದ್ದರಿಂದ ಯಾವುದೇ ರೀತಿಯ ಗಾಯಗಳು ಆಗಿಲ್ಲವಾದರೂ, ಒಂದು ಸಣ್ಣ ತಪ್ಪಿನಿಂದಾಗಿ ಕೆಟಿಎಂ ಡ್ಯೂಕ್ 390 ಬೈಕ್ ಬೆಂಕಿಗೆ ಆಹುತಿಯಾಗಿದೆ.

ರಸ್ತೆ ಮಧ್ಯೆದಲ್ಲೇ ಹೊತ್ತಿ ಉರಿದ ಕೆಟಿಎಂ ಡ್ಯೂಕ್ 390 ಬೈಕ್

ಜೊತೆಗೆ ಬೈಕಿನಲ್ಲಿದ್ದ ದುಬಾರಿ ಬೆಲೆಯ ಮೊಬೈಲ್ ಹಾಗೂ ಬೈಕ್ ಹಿಂದೆ ಇರಿಸಲಾಗಿದ್ದ ಕೆಲವು ಆಪ್ ರೋಡಿಂಗ್‌ಗೆ ಸಹಕಾರಿಯಾಗಬಲ್ಲ ಅಗತ್ಯ ಸಾಮಗ್ರಿಗಳು ಸಹ ಸುಟ್ಟು ಕರಕಲಾಗಿವೆ.

ರಸ್ತೆ ಮಧ್ಯೆದಲ್ಲೇ ಹೊತ್ತಿ ಉರಿದ ಕೆಟಿಎಂ ಡ್ಯೂಕ್ 390 ಬೈಕ್

ಈ ವೇಳೆ ಆಕಾ ಸೋನು ಅವರನ್ನು ಸ್ಥಳೀಯರೊಬ್ಬರು ರಕ್ಷಣೆ ಮಾಡಿದ್ದಲ್ಲೇ ಚೆನ್ನೈ‌ಗೆ ತಲುಪಿಸಿದ್ದು, ಆಕಾ ಸೋನುಗೆ ಬೇಕಾದ ಎಲ್ಲಾ ಅಗತ್ಯ ಸೌಲಭ್ಯಗಳು ಒದಗಿಸಿ ಮಾನವಿಯತೆ ಮೆರೆದಿದ್ದಾರೆ.

ರಸ್ತೆ ಮಧ್ಯೆದಲ್ಲೇ ಹೊತ್ತಿ ಉರಿದ ಕೆಟಿಎಂ ಡ್ಯೂಕ್ 390 ಬೈಕ್

ಇನ್ನು ಸೋನು ಜೊತೆಗಿದ್ದ ರೂಪೇಶ್ ಬದುಲಾ ಮತ್ತು ವಿಮಲೆಂದು ಭಟ್ ಕೂಡಾ ಘಟನೆಯಿಂದಾಗಿ ಆಘಾತಕ್ಕೆ ಒಳಗಾಗಿದ್ದು, ತುಲುಪಬೇಕಿದ್ದ ಲಿಮ್ಕಾ ದಾಖಲೆಯ ಪ್ರವಾಸವನ್ನು ಮೊಟುಕುಗೊಳಿಸಿ ದೆಹಲಿಗೆ ವಾಪಸ್ ಆಗಿದ್ದಾರೆ.

ರಸ್ತೆ ಮಧ್ಯೆದಲ್ಲೇ ಹೊತ್ತಿ ಉರಿದ ಕೆಟಿಎಂ ಡ್ಯೂಕ್ 390 ಬೈಕ್

ಸದ್ಯ ಸೋನು, ರೂಪೇಶ್ ಮತ್ತು ವಿಮಲೆಂದು ಭಟ್ ಸುರಕ್ಷಿತವಾಗಿ ತವರಿಗೆ ವಾಪಸ್ ಆಗಿದ್ದು, ನಡೆದ ಘಟನೆ ಬಗ್ಗೆ ರೂಪೇಶ್ ಅಚ್ಚರಿ ವ್ಯಕ್ತಪಡಿಸಿದಲ್ಲದೇ, ಅಪಘಾತದಲ್ಲಿ ನಾನು ಬುದುಕಿ ಬಂದಿದ್ದೇ ಹೆಚ್ಚು ಎಂದಿದ್ದಾರೆ.

Read more on accident auto news
English summary
KTM Duke 390 Rider Meets Accident While Attempting To Become fastest to cover Golden Quadrilateral.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark