ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್..

Written By: Rahul TS

ವಾಹನ ಉದ್ಯಮದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ವಾಹನ ತಯಾರಕ ಸಂಸ್ಥೆಗಳು ಸಹ ಮಾರುಕಟ್ಟೆಯಲ್ಲಿ ತಮ್ಮ ವಿವಿಧ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಬಿಡುಗಡೆಗೊಳಿಸುತ್ತಿವೆ. ಈ ನಿಟ್ಟಿನಲ್ಲಿ ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ಸಂಸ್ಥೆ ಕೂಡಾ ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನು ಪರಿಚಯಿಸಲು ಸಜ್ಜಾಗುತ್ತಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್..

ಮಹಿಂದ್ರಾ ಆ್ಯಂಡ್ ಮಹಿಂದ್ರಾ ಸಂಸ್ಥೆಯಿಂದ ತಯಾರಿಸಲ್ಪಟ್ಟ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ರಸ್ಥೆಯಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಈ ಸ್ಕೂಟರ್ ಈಗಾಗಲ್ ಅಮೇರಿಕಾದ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್..

ಹೊಸ ಮಹಿಂದ್ರಾ ಜೆನ್‍ಜಿ ವಿನೂತನವಾಗಿ ಅಲ್ಯೂಮಿನಿಯಂ ಮೋನೊಕೌಕ್ ಫ್ರೇಮ್ ಅನ್ನು ಪಡೆದಿದ್ದು ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಸರಣಿಯಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅಲ್ಲದೇ ಈ ಎಲೆಕ್ಟ್ರಿಕ್ ಸ್ಕೂಟರ್ ಜಿಪಿಎಸ್ ಟ್ರ್ಯಾಕಿಂಗ್, ಕಲರ್ ಸ್ಕ್ರೀನ್ ಮತ್ತು ರೈಡಿಂಗ್ ಮೋಡ್‍‍ಗಳಂತಹ ಸ್ಮಾರ್ಟ್ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್..

ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್ ಅಗಲವಾದ ಫ್ರಂಟ್ ವೀಲ್, ಎತ್ತರವಿರುವ ಹ್ಯಾಂಡಲ್‍‍ಬಾರ್ ಹಾಗು ಅಗಲವಾದ ಸೀಟ್‍ಗಳನ್ನು ಪಡೆದಿರಲಿದೆ. ಇದಲ್ಲದೇ ಎರಡು ಬದಿಗಳಲ್ಲೂ ಡಿಸ್ಕ್ ಬ್ರೇಕ್‍‍ಗಳನ್ನು ಪಡೆದಿದ್ದು, ಚಾಲಕರು ಆರಾಮಾಗಿ ಚಾಲನೆ ಮಾಡಬಹುದಂತೆ ಸಜ್ಜುಗೊಂಡಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್..

ಪುಣೆ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಅಮೆರಿಕಾದ ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೃದುವಾದ ಫ್ಯಾಬ್ರಿಕ್‍‍ನೊಂದಿಗೆ ಹಾರ್ಡ್ ಕೇಸ್ ಅನ್ನು ಪಡೆದಿದೆ. ವಿವಿಧ ಕಸ್ಟಮೈಸ್ ಆಯ್ಕೆಗಳನ್ನು ಸಹ ಪಡೆದುಕೊಂಡಿವೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್..

ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್ 2 ಕಿಲೋವ್ಯಾಟ್ಸ್ ಲಿಥಿಯಂ ಐಯಾನ್ ಬ್ಯಾಟರಿ ಹಾಗೂ 48 ವೋಲ್ಟ್ ಎಲೆಕ್ಟ್ರಿಕ್ ಸಿಸ್ಟಂ ಸಹಾಯದಿಂದ 2ಬಿಹೆಚ್‍ಪಿ ಹಾಗು 100ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್..

ಇನ್ನು ಪ್ರತಿ ಚಾರ್ಜ್‍‍ಗೆ 50 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದ್ದು, ರೈಡ‍‍ರ್‍‍ನ ತೂಕ, ಸ್ಪೀಡ್ ಹಾಗೂ ಪ್ರದೇಶದ ಆಧಾರದ ಮೇಲೆ ಮೈಲೇಜ್ ಅನ್ನು ನೀಡಲಿದೆ. ಯುಎಸ್ಎ ಮಾರುಕಟ್ಟೆಯಲ್ಲಿರುವ ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್ ಪ್ರತಿ ಚಾರ್ಜ್‍ಗೆ 48 ಕಿಲೋ ಮೀಟರ್ ಮಾತ್ರ ಚಲಾಯಿಸಬಲ್ಲ ಸಾಮರ್ಥ್ಯವನ್ನು ಪಡೆದಿವೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್..

ಭಾರತದಲ್ಲಿ ಬಿಡುಗಡೆಯಾಗಿರುವ ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಡೆಲಿವರಿಯಂತಹ ವಾಣಿಜ್ಯ ಕೆಲಸಗಳಿಗಾಗಿ ಬಹು ಉಪಯುಕ್ತವಾಗಿದ್ದು, ದೇಶಿಯ ಗ್ರಾಹಕರಿಗೆ ಅನುಕೂಲವಾಗುವಂತೆ ತಯಾರಿಸಲ್ಪಟ್ತಿದೆ. ಯುಎಸ್ಎ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಮಾದರಿಗಿಂತ ಹೆಚ್ಚು ಸ್ಪೀಡ್ ಅನ್ನು ಪಡೆದುಕೊಳ್ಳುಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ಈಗಾಗಲೇ ಮಾರುಕಟ್ಟೆಯಲ್ಲಿ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಇದೀಗ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಸರಣಿಯಲ್ಲಿ ಸದ್ದು ಮಾಡಲು ತಯಾರಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಇನೋವಾ ಮತ್ತು ಲಾರಿ ನಡುವೆ ಭೀಕರ ಅಪಘಾತ- 7 ಮಂದಿ ದುರ್ಮರಣ

2. ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ ಓಲಾ..!!

3. ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

4. ನಾಪತ್ತೆಯಾಗಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಯ್ತು..!!

5. ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ...

English summary
Mahindra GenZe Electric Scooter Spotted Testing In India.
Story first published: Monday, April 9, 2018, 15:12 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more