ನಾಪತ್ತೆಯಾಗಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಯ್ತು..!!

Written By:

ಬೇರೆಯವರು ಹೇಳುವ ಬುದ್ದಿಮಾತುಗಳು ಕೆಲವರಿಗೆ ಬೇಗ ಅರ್ಥವಾಗುವುದಿಲ್ಲ. ಅದು ಅವರ ಅನುಭವಕ್ಕೆ ಬಂದಾಗಲೇ ಗೊತ್ತಾಗುತ್ತೆ. ಯಾಕೆಂದ್ರೆ ಕಾರ್ ಪಾರ್ಕಿಂಗ್ ಮಾಡುವಾಗ ಬಹುತೇಕ ಕಾರು ಮಾಲೀಕರು ಮುನ್ನಚ್ಚರಿಕೆ ವಹಿಸುವುದು ತುಂಬಾ ವಿರಳ. ಇದೇ ಕಾರಣಕ್ಕೆ ಸಣ್ಣಪುಟ್ಟ ತಪ್ಪುಗಳೇ ದುರಂತಗಳ ಮೂಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ನಾಪತ್ತೆಯಾಗಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಯ್ತು..!!

ಅಂದಹಾಗೆ, ಸ್ವಿಮ್ಮಿಂಗ್ ಪೂಲ್‌ನಲ್ಲಿರುವ ಈ ಬ್ಲೂ ಬಣ್ಣದ ಈ ಕಾರನ್ನು ಒಮ್ಮೆ ಸರಿಯಾಗಿ ನೋಡಿಕೊಳ್ಳಿ. ಏಕೆ ಹೀಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದಿದೆ ಅನ್ನೋದಕ್ಕೆ ಒಂದು ದೊಡ್ಡ ಕಥೆಯೇ ಇದೆ. ಮಹಿಳೆಯೊಬ್ಬಳು ಕಾರು ಚಾಲನೆಯ ಭರದಲ್ಲಿ ಈ ರೀತಿ ರದ್ದಾಂತ ಮಾಡಿದ್ದಾಳೆ ಎಂದ್ರೆ ನೀವು ನಂಬಲೇಬೇಕು.

ನಾಪತ್ತೆಯಾಗಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಯ್ತು..!!

ಹೌದು..ಇದು ಆಗಿರುವುದು ಅಮೆರಿಕ ಫ್ಲೋರಿಡಾದಲ್ಲಿ ಆದ್ರು ಕಾರು ಚಾಲನೆ ಮಾಡುತ್ತಿದ್ದ ಮಹಿಳೆ ಮಾಡಿದ ಒಂದು ಸಣ್ಣ ತಪ್ಪು ಕಾರನ್ನು ಸ್ವಿಮ್ಮಿಂಗ್ ಪೂಲ್‌ಗೆ ಜಿಗಿಯುವಂತೆ ಮಾಡಿದೆ. ಅಸಲಿಗೆ ಅಪಾರ್ಟ್ಮೆಂಟ್ ಒಂದರ ಮುಂದೆ ನಿಂತಿದ್ದ ಈ ಕಾರು ಇದ್ದಕ್ಕಿಂತಕ್ಕೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿಕೊಂಡಿದೆ.

ನಾಪತ್ತೆಯಾಗಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಯ್ತು..!!

ಅಷ್ಟಕ್ಕೂ ಅಪಾರ್ಟ್ಮೆಂಟ್ ಮುಂದೆ ನಿಂತಿದ್ದ ಕಾರು ಸುಮ್ಮಸುಮ್ಮನೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳಗಲು ಅದು ಹೇಗೆ ಸಾಧ್ಯ ಅಂತಾ ನೀವು ಪ್ರಶ್ನೆ ಮಾಡಬಹುದು. ಅದಕ್ಕೂ ಕಾರಣವಿದೆ, ಸ್ವಿಮ್ಮಿಂಗ್ ಪೂಲ್‌ ಪಕ್ಕದಲ್ಲೇ ಪಾರ್ಕ್ ಮಾಡಲಾಗಿದ್ದ ಈ ಕಾರಿಗೆ ಹ್ಯಾಂಡಲ್ ಬ್ರೇಕ್ ಹಾಕಿರಲಿಲ್ವಂತೆ.

ನಾಪತ್ತೆಯಾಗಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಯ್ತು..!!

ಹೀಗಾಗಿ ಇಳಿಜಾರಿನಲ್ಲಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ ನತ್ತ ನುಗ್ಗಿದ್ದು, ಕಾರಿನಲ್ಲಿ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಈ ವೇಳೆ ಕಾರ್ ಪಾರ್ಕ್ ಮಾಡಿದ್ದ ಹೋಗಿದ್ದ ಮಹಿಳೆ ಮಾತ್ರ ಇರಲಿಲ್ಲ ಅನ್ನೋದೆ ಇಂಟ್ರಸ್ಟಿಂಗ್ ವಿಚಾರ.

ನಾಪತ್ತೆಯಾಗಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಯ್ತು..!!

ಯಾಕೆಂದ್ರೆ, ಈ ಘಟನೆಗೂ ಮುನ್ನ ಕುಟುಂಬ ಸಮೇತರಾಗಿ ಹೊರಹೋಗುತ್ತಿದ್ದಾಗ ಕಾರು ಚಾಲನೆ ಮಾಡುತ್ತಿದ್ದ ಮಹಿಳೆಯು ಯಾವುದೋ ಕಾರಣಕ್ಕಾಗಿ ಮನೆಗೆ ವಾಪಸ್ ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಸರಿ ಅಂತಾ ಅಪಾರ್ಟ್ಮೆಂಟ್‌ನ ಮುಂಭಾಗದಲ್ಲೇ ಪಾರ್ಕ್ ಮಾಡಿದ್ದಾಳೆ.

ನಾಪತ್ತೆಯಾಗಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಯ್ತು..!!

ಐದೇ ನಿಮಿಷದಲ್ಲಿ ವಾಪಸ್ ಬರುವುದಾಗಿ ಗಂಡ ಮತ್ತು ಮಗಳಿಗೆ ಹೇಳಿ ಹೋದ ಮಹಿಳೆಗೆ ವಾಪಸ್ ಬರುವಷ್ಟರಲ್ಲಿ ಶಾಕ್ ಕಾದಿತ್ತು. ಇದಕ್ಕೆ ಕಾರಣ, ಕಾರ್ ಪಾರ್ಕ್ ಮಾಡಿ ಹೋದ 2 ನಿಮಿಷದಲ್ಲಿ ಹಿಂದಕ್ಕೆ ಚಲಿಸಿದ ಕಾರು ಸೀದಾ ಸ್ವಿಮ್ಮಿಂಗ್ ಪೂಲ್‌‌ನಲ್ಲಿ ಬಿದ್ದಿದೆ.

ನಾಪತ್ತೆಯಾಗಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಯ್ತು..!!

ಈ ವೇಳೆ ಹಿಂಬದಿಯ ಸೀಟಿನಲ್ಲಿದ್ದ ಅಪ್ಪ-ಮಗಳು ಮೊಬೈಲ್‌ನಲ್ಲಿ ಮಗ್ನರಾಗಿದ್ದರಿಂದ ಘಟನೆಯು ಅರಿವಿಗೆ ಬರುವಷ್ಟರಲ್ಲಿ ಕಾರು ನೀರಿಗೆ ಇಳಿದಿತ್ತು. ಆದ್ರೆ ನೀರಿನ ಆಳ ಕಡಿಮೆ ಇದ್ದ ಕಾರಣ ಯಾವುದೇ ರೀತಿ ಅನಾಹುತ ನಡೆದಿಲ್ಲ ಎಂದು ತಿಳಿದುಬಂದಿದೆ.

ನಾಪತ್ತೆಯಾಗಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಯ್ತು..!!

ಹೀಗಾಗಿ ಕಾರ್ ಪಾರ್ಕಿಂಗ್ ಮಾಡುವಾಗ ಮುಂಜಾಗ್ರತೆ ವಹಿಸಿಬೇಕಿರುವುದು ಪ್ರಮುಖ ವಿಚಾರ ಅಂದ್ರೆ ತಪ್ಪಾಗುವುದಿಲ್ಲ. ಹ್ಯಾಂಡಲ್ ಬ್ರೇಕ್ ಹಾಕಿ ಪಾರ್ಕಿಂಗ್ ಮಾಡುವುದು ಸಣ್ಣ ವಿಚಾರವಾದ್ರೂ ಕೆಲವೊಮ್ಮೆ ಜೀವಹಾನಿಗೆ ಎಡೆಮಾಡಿಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಾಪತ್ತೆಯಾಗಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಯ್ತು..!!

ಇಂತಹ ಘಟನೆಗಳು ಕೇವಲ ವಿದೇಶಿಗಳಷ್ಟೇ ಅಲ್ಲ ನಮ್ಮಲ್ಲೂ ದಿನಂಪ್ರತಿ ನಡೆಯುತ್ತವೆ. ಮೊನ್ನೆ ಕೂಡಾ ಕೇರಳದಲ್ಲಿ ಮಾರುತಿ ಸುಜುಕಿ ವ್ಯಾಗನ್ ಆರ್ ಪಾರ್ಕ್ ಮಾಡಿದ್ದ ಕಾರು ಮಾಲೀಕನೊಬ್ಬ ಹ್ಯಾಂಡಲ್ ಬ್ರೇಕ್ ಮಾಡುವುದನ್ನು ಮರೆತು ದೊಡ್ಡ ದುರಂತವೊಂದಕ್ಕೆ ಕಾರಣವಾಗುತ್ತಿದ್ದ.

ಆದ್ರೆ ಘಟನೆಯ ತೀವ್ರತೆಯನ್ನು ಅರಿತ ಸಾರ್ವಜನಿಕರೇ ದೊಡ್ಡ ಅನಾಹುತವೊಂದನ್ನು ತಡೆಯುವಲ್ಲಿ ಕಾರಣರಾಗಿದ್ದರು. ಈ ಘಟನೆಯು ಸಿಟಿಟಿವಿ ಸೆರೆಯಾಗಿದ್ದಲ್ಲದೇ ಕಾರು ಮಾಲೀಕನ ಬೇಜವಾಬ್ದಾರಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.

Read more on off beat
English summary
Woman Forgets To Put Car In Park. It Rolls Into Pool With Family Inside.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark