ರೂ.17 ಲಕ್ಷಕ್ಕೆ ಬಿಡುಗಡೆಯಾದ ವಿನೂತನ ಟ್ರಯಂಫ್ ಟೈಗರ್ 1200

ಬ್ರಿಟಿಷ್ ಮೂಲದ ಐಷಾರಾಮಿ ಬೈಕ್ ಉತ್ಪಾದನಾ ಟ್ರಯಂಫ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ವಿನೂತನ ಬೈಕ್ ಆವೃತ್ತಿಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ಕಳೆದ ವರ್ಷ ಬಿಡುಗಡೆಗೊಂಡಿದ್ದ ಟೈಗರ್ 1200.

By Praveen Sannamani

ಬ್ರಿಟಿಷ್ ಮೂಲದ ಐಷಾರಾಮಿ ಬೈಕ್ ಉತ್ಪಾದನಾ ಟ್ರಯಂಫ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ವಿನೂತನ ಬೈಕ್ ಆವೃತ್ತಿಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ಕಳೆದ ವರ್ಷ ಬಿಡುಗಡೆಗೊಂಡಿದ್ದ ಟೈಗರ್ 1200 ಬೈಕಿನ 2018ರ ಆವೃತ್ತಿಯನ್ನು ಇದೀಗ ಬಿಡುಗಡೆ ಮಾಡಿದೆ.

ರೂ.17 ಲಕ್ಷಕ್ಕೆ ಬಿಡುಗಡೆಯಾದ ವಿನೂತನ ಟ್ರಯಂಫ್ ಟೈಗರ್ 1200

ಹತ್ತಾರು ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಎಕ್ಸ್‌ಸಿಎಕ್ಸ್ ವೈಶಿಷ್ಟ್ಯತೆಯ ಟೈಗರ್ 1200 ಬೈಕ್‌ ಮಾದರಿಯನ್ನು ಬಿಡುಗಡೆ ಮಾಡಿರುವ ಟ್ರಯಂಫ್ ಸಂಸ್ಥೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಬೈಕಿನ ಬೆಲೆಯನ್ನು ರೂ.17 ಲಕ್ಷಕ್ಕೆ ನಿಗದಿ ಮಾಡಿದ್ದು, ಪ್ರಮುಖ ಮೂರು ಬಣ್ಣಗಳಲ್ಲಿ ಟೈಗರ್ 1200 ಬೈಕ್‌‌ಗಳು ಖರೀದಿಗೆ ಲಭ್ಯವಿವೆ.

ರೂ.17 ಲಕ್ಷಕ್ಕೆ ಬಿಡುಗಡೆಯಾದ ವಿನೂತನ ಟ್ರಯಂಫ್ ಟೈಗರ್ 1200

ಖರೀದಿಗೆ ಲಭ್ಯವಿರುವ ಬಣ್ಣಗಳು

ಜೆಟ್ ಬ್ಲ್ಯಾಕ್, ಕ್ರಿಸ್ಟಲ್ ವೈಟ್ ಮತ್ತು ಮ್ಯಾಟೆ ಖಾಕಿ ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದ್ದು, ಕಳೆದ ಆವೃತ್ತಿಗಿಂತ ಹೆಚ್ಚಿನ ಮಟ್ಟದ ವಿನ್ಯಾಸಗಳನ್ನು ಪಡೆದುಕೊಂಡಿದೆ.

ರೂ.17 ಲಕ್ಷಕ್ಕೆ ಬಿಡುಗಡೆಯಾದ ವಿನೂತನ ಟ್ರಯಂಫ್ ಟೈಗರ್ 1200

ಎಂಜಿನ್ ಸಾಮರ್ಥ್ಯ

ಟೈಗರ್ 1200 ಬೈಕ್‌ಗಳು 1,215ಸಿಸಿ ಇನ್‌ಲೈನ್ ತ್ರಿ ಸಿಲಿಂಡರ್ ಎಂಜಿನ್ ಹೊಂದಿದ್ದು, 141-ಬಿಎಚ್‌ಪಿ ಮತ್ತು 122-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಜೊತೆಗೆ ಬಿ-ಡೀರೆಕ್ಷನ್ ಕ್ವಿಕ್ ಶಿಫ್ಟರ್ ಪ್ರೇರಿತ 6-ಸ್ಪೀಡ್ ಗೇರ್‌ಬಾಕ್ಸ್ ಕೂಡಾ ಜೋಡಿಸಲಾಗಿದೆ.

ರೂ.17 ಲಕ್ಷಕ್ಕೆ ಬಿಡುಗಡೆಯಾದ ವಿನೂತನ ಟ್ರಯಂಫ್ ಟೈಗರ್ 1200

ಇದಲ್ಲದೇ ಹೊಸ ಬೈಕ್‌ಗಳಲ್ಲಿ ಲೈಟರ್ ಫೈ ವೀಲ್ಹ್ ಬಳಕೆ ಮಾಡಲಾಗಿದ್ದು, ಈ ಹಿನ್ನೆಲೆ ಕಳೆದ ಮಾದರಿಯ ಟೈಗರ್ 1200 ಬೈಕ್‌ಗಿಂತ ಹೊಸ ಬೈಕ್‌ಗಳು 5 ಕೆ.ಜಿ ಕಡಿಮೆ ಭಾರ ಹೊಂದಿವೆ. ಹೀಗಾಗಿ ಬೈಕ್ ಸವಾರಿಗೆ ಅನೂಕಲಕರವಾಗಿದ್ದು, ಬೈಕಿನ ಫ್ರೇಮ್, ಎಕ್ಸಾಸ್ಟ್ ಮತ್ತು ಲೈಟರ್ ಎಂಜಿನ್ ಬದಲಾವಣೆ ಸೇರಿದಂತೆ ಸಾಕಷ್ಟು ಹೊಸತನ ಪಡೆದಿದೆ.

ರೂ.17 ಲಕ್ಷಕ್ಕೆ ಬಿಡುಗಡೆಯಾದ ವಿನೂತನ ಟ್ರಯಂಫ್ ಟೈಗರ್ 1200

ಹೊಸ ಬೈಕುಗಳಲ್ಲಿ 5-ಇಂಚಿನ ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಬ್ಲ್ಯಾಕ್‌ಲಿಟ್ ಸ್ವಿಚ್‌ಗೇರ್, ಆಲ್ ಎಲ್ಇಡಿ ಲೈಟ್ಸ್, ಅಡಾಪ್ಟಿವ್ ಕನ್ಸ್‌ರಿಂಗ್ ಲೈಟ್ಸ್, ಕೀ ಲೇಸ್ ಇಗ್ನಿಷನ್ ಮತ್ತು ಸುಧಾರಿತ ಮಾದರಿಯ ಕ್ರೂಸ್ ಕಂಟ್ರೋಲರ್ ಒದಗಿಸಲಾಗಿದೆ.

ರೂ.17 ಲಕ್ಷಕ್ಕೆ ಬಿಡುಗಡೆಯಾದ ವಿನೂತನ ಟ್ರಯಂಫ್ ಟೈಗರ್ 1200

2018ರ ಟೈಗರ್ 1200 ಬೈಕ್‌ಗಳಲ್ಲಿ ಸುರಕ್ಷೆತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಲೆಕ್ಟ್ರಾನಿಕ್ ಪ್ರೇರಿತ ಐಎಂಯು, ಎಬಿಎಸ್, ಟ್ರಾನ್‌ಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟಂಟ್, ರೈಡ್ ಬೈ ವೈರ್ ಥ್ರೋಟಲ್ ಮತ್ತು ಪ್ರದೇಶಗಳಿಗೆ ಅನುಗುಣವಾಗಿ ಬೈಕ್ ರೈಡ್ ಮಾಡಲು ವಿವಿಧ ಮಾದರಿಯ ಆರು ರೈಡಿಂಗ್ ಮೂಡ್‌ಗಳು ಇದರಲ್ಲಿವೆ.

ರೂ.17 ಲಕ್ಷಕ್ಕೆ ಬಿಡುಗಡೆಯಾದ ವಿನೂತನ ಟ್ರಯಂಫ್ ಟೈಗರ್ 1200

ಇತರೆ ಸೌಲಭ್ಯಗಳ ಬಗ್ಗೆ ಹೇಳುವುದಾದರೇ, ಎಲೆಕ್ಟ್ರಾನಿಕ್ ಪ್ರೇರಿತ ವಿಂಡ್‌ಸ್ಕ್ರೀನ್, 12ವಿ ಪವರ್ ಔಟ್‌ಲೆಟ್ಸ್ ಮತ್ತು ಆಯ್ಕೆ ರೂಪದ ಹಿಟ್ಡ್ ಗ್ರಿಪ್ಸ್ ಹ್ಯಾಂಡಲ್‌ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದ್ದು, ಎರಡು ಬದಿ ಚಕ್ರಗಳಿಗೆ ಅಡ್ಜೆಸ್ಟ್ ಮಾಡಬಹುದಾದ ಸಸ್ಷೆಷನ್ ನೀಡಲಾಗಿದೆ.

ರೂ.17 ಲಕ್ಷಕ್ಕೆ ಬಿಡುಗಡೆಯಾದ ವಿನೂತನ ಟ್ರಯಂಫ್ ಟೈಗರ್ 1200

ಬ್ರೇಕಿಂದ್ ಸಿಸ್ಟಂ

ಟೈಗರ್ 1200 ಬೈಕ್‌ಗಳಲ್ಲಿ ಬ್ರೇಕಿಂಗ್ ಸಿಸ್ಟಂ ಸುಧಾರಿತ ತಂತ್ರಜ್ಞಾನ ಪ್ರೇರಿತವಾಗಿದ್ದು, ಮುಂಭಾಗದ ಚಕ್ರದಲ್ಲಿ ಫೌರ್ ಪಿಸ್ಟನ್ ಕ್ಲಿಪರ್‌ನೊಂದಿಗೆ 305ಎಂಎಂ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 282 ಡಿಸ್ಕ್ ಬ್ರೇಕ್‌ನೊಂದಿಗೆ ಟು ಪಿಸ್ಟನ್ ಕ್ಲಿಪರ್ ಬಳಕೆ ಮಾಡಲಾಗಿದೆ.

ರೂ.17 ಲಕ್ಷಕ್ಕೆ ಬಿಡುಗಡೆಯಾದ ವಿನೂತನ ಟ್ರಯಂಫ್ ಟೈಗರ್ 1200

ಇನ್ನು ಟ್ರಯಂಫ್ ಸಂಸ್ಥೆಯು ಈ ಹಿಂದೆ 2018ರ ಟೈಗರ್ 1200 ಬೈಕ್‌ಗಳನ್ನು ಟೈಗರ್ ಎಕ್ಸ್‌ಪ್ಲೋರರ್ ಎಂದು ಮರುನಾಮಕರಣ ಮಾಡಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಆದ್ರೆ ಅಡ್ವೆಂಚರ್ ವಿನ್ಯಾಸದ ಟೈಗರ್ 1200 ಮತ್ತು ಟೈಗರ್ 800 ಬೈಕ್‌ಗಳನ್ನು ಫ್ಯಾಗ್‌ಶಿಫ್ ಮಾದರಿಗಳನ್ನಾಗಿ ಪರಿಚಯಿಸುತ್ತಿದೆ.

ರೂ.17 ಲಕ್ಷಕ್ಕೆ ಬಿಡುಗಡೆಯಾದ ವಿನೂತನ ಟ್ರಯಂಫ್ ಟೈಗರ್ 1200

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹಳೆಯ ಮಾದರಿಗಿಂತ ಹೊಸ ಟೈಗರ್ 1200 ಬೈಕ್‌ಗಳಲ್ಲಿ ಸಾಕಷ್ಟು ಬದಲಾವಣೆ ತಂದಿರುವ ಟ್ರಯಂಫ್ ಸಂಸ್ಥೆಯು ಅಡ್ವೆಂಚರ್ ಪ್ರಿಯರನ್ನು ಸೆಳೆಯುವ ತವಕದಲ್ಲಿದ್ದು, ಮಾರುಕಟ್ಟೆಯಲ್ಲಿರುವ ಡುಕಾಟಿ ಮಲ್ಟಿಸ್ಟ್ರಾಡ್ 1200, ಬಿಎಂಡಬ್ಲ್ಯು ಆರ್ 1200 ಜಿಎಸ್ ಮತ್ತು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಡುಕಾಟಿ ಮಲ್ಟಿಸ್ಟ್ರಾಡ್ 1260 ಬೈಕ್‌ಗಳಿಗೆ ತ್ರೀವ ಪೈಪೋಟಿ ನೀಡಲಿದೆ.

Most Read Articles

Kannada
English summary
2018 Triumph Tiger 1200 launched in India. British motorcycle manufacturer Triumph Motorcycles has launched the new 2018 Tiger 1200 in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X