ಮಾರಾಟದಲ್ಲಿ ಬುಲೆಟ್ ಹಿಂದಿಕ್ಕಿದ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ವಿಶೇಷತೆ ಏನು?

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದುವರೆಗೆ ಹಲವಾರು ಬೈಕ್ ಆವೃತ್ತಿಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಸದ್ಯದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆಯುತ್ತಿರುವ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ಆವೃತ್ತಿಯು ಹೊಸ ಸಂಚಲನ ಸೃಷ್ಠಿಸಿದೆ.

By Praveen Sannamani

ಕ್ಲಾಸಿಕ್ ಬೈಕ್ ಪ್ರಿಯರ ಆಯ್ಕೆಯಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದುವರೆಗೆ ಹಲವಾರು ಬೈಕ್ ಆವೃತ್ತಿಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಸದ್ಯದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆಯುತ್ತಿರುವ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ಆವೃತ್ತಿಯು ಹೊಸ ಸಂಚಲನ ಸೃಷ್ಠಿಸಿದೆ.

ಮಾರಾಟದಲ್ಲಿ ಬುಲೆಟ್ ಹಿಂದಿಕ್ಕಿದ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ವಿಶೇಷತೆ ಏನು?

ಹೌದು, ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾಗಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ಬೈಕ್‌ಗಳು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬರುತ್ತಿದ್ದು, ಆರ್‌ಇ ಬೈಕ್‌ಗಳಲ್ಲೇ ಸದ್ಯಕ್ಕೆ ಅತಿಹೆಚ್ಚು ಮಾರಾಟವಾಗುತ್ತಿರುವ ಬ್ರಾಂಡ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮಾರಾಟದಲ್ಲಿ ಬುಲೆಟ್ ಹಿಂದಿಕ್ಕಿದ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ವಿಶೇಷತೆ ಏನು?

ಬೆಂಗಳೂರಿನಲ್ಲಿ ಆನ್ ರೋಡ್ ಬೆಲೆಗಳ ಪ್ರಕಾರ ರೂ. 1,66 ಲಕ್ಷಕ್ಕೆ ಲಭ್ಯವಿರುವ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ಬೈಕ್‌ಗಳು ಯುವ ಸಮುದಾಯದ ನೆಚ್ಚಿನ ಆಯ್ಕೆಯಾಗುತ್ತಿದ್ದು, ಬೈಕ್‌ನಲ್ಲಿ ಬಳಸಲಾಗಿದ ಪೇಂಟಿಂಗ್‌ ಸ್ಕೀಮ್‌ಗಳು ಭಾರೀ ಆಕರ್ಷಣೆಗೆ ಕಾರಣವಾಗಿವೆ.

ಮಾರಾಟದಲ್ಲಿ ಬುಲೆಟ್ ಹಿಂದಿಕ್ಕಿದ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ವಿಶೇಷತೆ ಏನು?

ಜೊತೆಗೆ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ಬೈಕ್‌ಗಳಲ್ಲಿ ಹೊಸ ಸ್ವಿಂಗ್ ಆರ್ಮ್ ಬಳಕೆ ಮಾಡಿರುವುದು ಸಹ ಬೈಕಿನ ಖದರ್ ಹೆಚ್ಚಿಸಲು ಸಹಕಾರಿಯಾಗಿದ್ದು, ಮಾರ್ಡನ್ ಲುಕ್‌ಗಳು ಬೈಕಿನ ಆಯ್ಕೆ ಸಹಕಾರಿಯಾಗಿವೆ ಎನ್ನಬುಹುದು.

ಮಾರಾಟದಲ್ಲಿ ಬುಲೆಟ್ ಹಿಂದಿಕ್ಕಿದ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ವಿಶೇಷತೆ ಏನು?

ಇದಲ್ಲದೇ ಬೈಕಿನಲ್ಲಿ ಒದಗಿಸಲಾಗಿರುವ ರಿಯರ್ ಡಿಸ್ಕ್ ಬ್ರೇಕ್ ಸಹ ಹೆಚ್ಚಿನ ಸುರಕ್ಷೆತೆಗೆ ಖಾತ್ರಿ ಪಡಿಸಿದ್ದು, ಟ್ಯಾನ್ ಸೀಟ್, ಎರಡು ಬದಿಗಳಲ್ಲಿ ಡಿಸ್ಕ್ ಬ್ರೇಕ್ ಮತ್ತು ಆಯ್ಕೆ ರೂಪದಲ್ಲಿ ಎಬಿಎಸ್ ಅಳವಡಿಕೆ ಮಾಡಿಕೊಳ್ಳಬಹುದಾದ ಸೌಲಭ್ಯಗಳನ್ನು ಹೊಸ ಬೈಕಿನಲ್ಲಿ ಅಳವಡಿಸಲಾಗಿದೆ.

ಮಾರಾಟದಲ್ಲಿ ಬುಲೆಟ್ ಹಿಂದಿಕ್ಕಿದ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ವಿಶೇಷತೆ ಏನು?

ಎಂಜಿನ್ ಸಾಮರ್ಥ್ಯ

346 ಸಿಸಿ ಎಂಜಿನ್ ಹೊಂದಿರುವ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ಬೈಕ್‌ಗಳು 19.8ಬಿಎಚ್‌ಪಿ ಮತ್ತು 28ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಇದರೊಂದಿಗೆ 130ಕಿಮಿ ಟಾಪ್ ಸ್ಪೀಡ್‌ನೊಂದಿಗೆ ಕೇವಲ ಐದು ಸೇಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮೀ ವೇಗ ಕೂಡಾ ಪಡೆಯಬಲ್ಲವು.

ಮಾರಾಟದಲ್ಲಿ ಬುಲೆಟ್ ಹಿಂದಿಕ್ಕಿದ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ವಿಶೇಷತೆ ಏನು?

ಇನ್ನು 5-ಸ್ಪೀಡ್ ಗೇರ್‌ಬಾಕ್ಸ್ ಸಹ ಇರಲಿದ್ದು, ಇಂಧನ ಕಾರ್ಯಕ್ಷಮತೆ ಕೂಡಾ ಉತ್ತಮವಾಗಿದೆ. ಪ್ರತಿ ಲೀಟರ್‌ ಪೆಟ್ರೋಲ್‌ಗೆ 37ಕಿಮಿ ಮೈಲೇಜ್ ಹೊಂದಿದ್ದು, 13.5 ಲೀಟರ್ ಇಂಧನ ಟ್ಯಾಂಕ್ ಪಡೆದುಕೊಂಡಿದೆ.

ಮಾರಾಟದಲ್ಲಿ ಬುಲೆಟ್ ಹಿಂದಿಕ್ಕಿದ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ವಿಶೇಷತೆ ಏನು?

ಇನ್ನೊಂದು ಪ್ರಮಖ ವಿಚಾರ ಅಂದ್ರೆ, ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ಬೈಕ್‌ಗಳನ್ನು ಖರೀದಿಸಲು ಸಾವಿರಾರು ಗ್ರಾಹಕರು ಈಗಾಗಲೇ ಬುಕ್ಕಿಂಗ್ ಕೂಡಾ ಮಾಡಿದ್ದು, ಹೊಸ ಬೈಕ್ ಖರೀದಿಗೆ ಬುಕ್ಕಿಂಗ್ ನಂತರ ಕನಿಷ್ಠ 75 ದಿನಗಳ ಕಾಲ ಕಾಯಲೇಬೇಕಾದ ಅನಿವಾರ್ಯತೆ ಇದೆ.

ಮಾರಾಟದಲ್ಲಿ ಬುಲೆಟ್ ಹಿಂದಿಕ್ಕಿದ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ವಿಶೇಷತೆ ಏನು?

ಒಟ್ಟಿನಲ್ಲಿ ಬೈಕಿನ ಗುಣವಿಶೇಷಗಳು ಗ್ರಾಹಕರನ್ನು ಮೋಡಿ ಮಾಡುತ್ತಿದ್ದು, ಬುಲೆಟ್ ಬೈಕ್‌ಗಳನ್ನೇ ಹಿಂದಿಕ್ಕುವ ಮೂಲಕ ಕೇವಲ 5 ತಿಂಗಳ ಅವಧಿಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ನಂ.1 ಕ್ಲಾಸಿಕ್ ಬೈಕ್ ಮಾದರಿಯಾಗಿ ಜನಪ್ರಿಯತೆ ಗಳಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

02. ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

03. ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000 ಸಿಸಿ ಬೈಕ್ ಇದು...

04. ಭಾರತದಲ್ಲಿ 7 ಸೀಟರ್ ವ್ಯಾಗನ್ ಆರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!!

05. ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ? ಇದು ನಿಜಾನಾ?

More from DriveSpark

Article Published On: Wednesday, March 28, 2018, 10:52 [IST]
English summary
Royal Enfield Classic 350 Gunmetal Grey: Things To Know About The Highest Selling Bullet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+