TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಕಾಂಟಿನೆಂಟಲ್ ಜಿಟಿ ಬೈಕ್ ಮಾರಾಟಕ್ಕೆ ಗುಡ್ ಬೈ ಹೇಳಿದ ರಾಯಲ್ ಎನ್‌ಫೀಲ್ಡ್
ಕ್ಲಾಸಿಕ್ ಬೈಕ್‌ಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯದಲ್ಲೇ ತನ್ನ ಜನಪ್ರಿಯ ಕಾಂಟಿನೆಂಟಲ್ ಜಿಟಿ ಆವೃತ್ತಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಬ್ರೇಕ್ ಹಾಕುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಬೈಕ್ ಮಾದರಿಗಳತ್ತ ಗಮನಹರಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಅಂದ್ರೆನೇ ಹಾಗೆ. ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಆರ್‌ಇ ಸಂಸ್ಥೆಯು ಸದ್ಯದಲ್ಲೇ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸುವ ತವಕದಲ್ಲಿದ್ದು, ಈ ಹಿನ್ನೆಲೆ ತನ್ನ ಹಳೆಯ ಬೈಕ್ ಆವೃತ್ತಿಯಾದ ಕಾಂಟಿನೆಂಟಲ್ ಜಿಟಿ ಬೈಕಿನ ಉತ್ಪಾದನೆ ಮತ್ತು ಮಾರಾಟಕ್ಕೆ ಗುಡ್ ಬೈ ಹೇಳುತ್ತಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಜನವರಿಯಿಂದಲೇ ಕಾಂಟಿನೆಂಟಲ್ ಜಿಟಿ ಬೈಕ್ ಮಾರಾಟವನ್ನು ಸ್ಥಗಿತ ಮಾಡಲಾಗಿದ್ದು, ಇದೀಗ ವಿಶ್ವದ ಪ್ರಮುಖ ರಾಷ್ಟ್ರಗಳ ಮಾರುಕಟ್ಟೆಯಲ್ಲೂ ಕಾಂಟಿನೆಂಟಲ್ ಜಿಟಿ ಬೈಕಿನ ಮಾರಾಟವನ್ನು ಸ್ಥಗಿತ ಮಾಡಲಾಗುತ್ತಿದೆ.
ಮಾಹಿತಿಗಳ ಪ್ರಕಾರ ಕಾಂಟಿನೆಂಟಲ್ ಜಿಟಿ ಮಾದರಿಯ ಮಾರಾಟ ಪ್ರಕ್ರಿಯೆಯನ್ನು ಮುಂಬರುವ ಅಗಸ್ಟ್‌ನಿಂದಲೇ ಸ್ಥಗಿತಗೊಳಿಸಲು ನಿರ್ಧರಿಸಲಾಗಿದ್ದು, ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡುತ್ತಿರುವ ಹೊಸ ಬೈಕ್‌ಗಳ ಇದೀಗ ಎಲ್ಲರ ಚಿತ್ತ ನೆಟ್ಟಿದೆ.
ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಮೊದಲ ರೇಸ್ ಕಫೆ ಮಾದರಿಯಾಗಿದ್ದ ಕಾಂಟಿನೆಂಟಲ್ ಬೈಕ್‌ಗಳು ಇತರೆ ಆರ್‌ಇ ಬೈಕ್‌ಗಳಿಂತಲೂ ತಾಂತ್ರಿಕವಾಗಿ ಬಲಿಷ್ಠ ಮಾದರಿಯಾಗಿತ್ತು. 535ಸಿಸಿ ಫ್ಯೂಲ್ ಇಂಜೆಕ್ಷಡ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 29-ಬಿಎಚ್‌ಪಿ ಮತ್ತು 44-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಪರ್ಫಾಮೆನ್ಸ್ ಮಾದರಿಯಾದ್ದರೂ, ನಿಗದಿತ ಮಟ್ಟದ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು.
ಹೀಗಾಗಿಯೇ ಕಾಂಟಿನೆಂಟಲ್ ಜಿಟಿ ಬೈಕ್ ಮಾರಾಟಕ್ಕೆ ಗುಡ್ ಬೈ ಹೇಳಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪ್ರಸ್ತತ ಗ್ರಾಹಕರ ಆಯ್ಕೆಗೆ ತಕ್ಕಂತೆ ಹೊಸ ಉತ್ಪನ್ನಗಳನ್ನು ಸಿದ್ದಗೊಳಿಸಿದ್ದು, ಪರ್ಫಾಮೆನ್ಸ್ ಪ್ರಿಯರಿಗೆ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಆಕರ್ಷಣೆಗೆ ಕಾರಣವಾಗಿವೆ.
ರೆಡ್ ಆ್ಯಂಡ್ ವೈಟ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಅಭಿವೃದ್ಧಿಯಾಗಿರುವ ಇಂಟರ್‌ಸೆಪ್ಟರ್ 650 ಮತ್ತು ಸ್ಟೋರ್ಟಿ ಬ್ಲ್ಯಾಕ್ ಬಣ್ಣದಲ್ಲಿ ಸಿದ್ದವಾಗಿರುವ ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿವೆ.
ಇದಲ್ಲದೇ 2017ರ ರೈಡರ್ ಮೆನಿಯಾ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದ್ದ ರಾಯಲ್ ಎನ್‌ಫೀಲ್ಡ್ ಹೊಸ ಮೋಟಾರ್ ಸೈಕಲ್‌ಗಳು ಕ್ರೋಮ್ ಬಣ್ಣದ ಯೋಜನೆಗಳನ್ನು ಹೊಂದಿದ್ದು, ರೆಟ್ರೊ ಕ್ಲಾಸಿಕ್ ಯುಗದ ಬೈಕುಗಳನ್ನು ನೆನಪಿಸುತ್ತವೆ.
ಕಳೆದ ಕೆಲದಿನಗಳ ಹಿಂದಷ್ಟೇ ಚೆನ್ನೈ ಹೊರವಲಯದಲ್ಲೂ ಕೂಡಾ ಇಂಟರ್‌ಸೆಪ್ಟರ್ 650 & ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳನ್ನು ಸ್ಪಾಟ್ ಟೆಸ್ಟಿಂಗ್ ನಡೆಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದೇ ತಿಂಗಳು ಅಂತ್ಯಕ್ಕೆ ಇಲ್ಲವೇ ಆಗಸ್ಟ್ ಆರಂಭದಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಇರಾದೆಯಲ್ಲಿದ್ದು, ಆಸಕ್ತ ಗ್ರಾಹಕರಿಂದ ಈಗಾಗಲೇ ಮುಂಗಡ ಪಡೆದು ಬುಕ್ಕಿಂಗ್ ಕೂಡಾ ಪಡೆಯಲಾಗುತ್ತಿದೆ.
ರಾಯಲ್ ಎನ್‌ಫೀಲ್ಡ್ ಅನಾವರಣಗೊಳಿಸಲಿರುವ ಹೊಸ ಬೈಕ್‌ಗಳು 647 ಸಿಸಿ ಪ್ಯಾರಲಲ್ ಏರ್/ ಆಯಿಲ್ ಎಂಜಿನ್ ಆಯ್ಕೆ ಪಡೆಯಲಿವೆ. ಸ್ಟ್ಯಾಂಡರ್ಡ್ ಸ್ಲಿಪ್ಪರ್ ಕ್ಲಚ್‌ನೊಂದಿಗೆ 47 ಬಿಎಚ್‌ಪಿ ಮತ್ತು 52 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು 6-ಸ್ಪೀಡ್ ಗೇರ್‌ಬಾಕ್ಸ್ ಸಂಯೋಜಿತವಾಗಿದೆ.
ಹೀಗಾಗಿ ಹೊಸ ಬೈಕ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದಲ್ಲಿ ಟೆಲಿಸ್ಕೊಫಿಕ್ ಫೋರ್ಕ್ ಅಪ್, ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಜರ್ಸ್, ಎಬಿಎಸ್, ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಒದಗಿಸಲಾಗಿದೆ. ಈ ಮೂಲಕ ಗಂಟೆಗೆ 170ಕಿಮಿ ಟಾಪ್ ಸ್ಪೀಡ್ ಪಡೆದುಕೊಂಡಿವೆ.
ಬೆಲೆ (ಎಕ್ಸ್‌ಶೋರಂ ಪ್ರಕಾರ)
ಬಿಡುಗಡೆಗೂ ಮುನ್ನವೇ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ಎಕ್ಸ್‌ಶೋರಂ ಪ್ರಕಾರ ರೂ.3 ಲಕ್ಷದಿಂದ ರೂ.3.25 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.
ಒಟ್ಟಿನಲ್ಲಿ ಬಿಡುಗಡೆಗೂ ಮುನ್ನವೇ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಅವಳಿ ಮೋಟಾರ್ ಸೈಕಲ್‌ಗಳು ಸಾಕಷ್ಟು ಭರವಸೆ ಹುಟ್ಟುಹಾಕಿದ್ದು, ಭವಿಷ್ಯದಲ್ಲಿ ಹೊಸ ಬೈಕ್‍ಗಳು ಗ್ರಾಹಕರನ್ನು ಯಾವ ರೀತಿ ಸೆಳೆಯುತ್ತವೆ ಎಂಬುವುದನ್ನು ಕಾಯ್ದು ನೋಡಬೇಕಿದೆ.