ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಾಗಿ ಬುಕ್ಕಿಂಗ್ ಪ್ರಾರಂಭ..

ನಮ್ಮ ಹಿಂದಿನ ಲೇಖನದಲ್ಲಿ ರಾಯಲ್‍ ಎನ್‍‍ಫೀಲ್ಡ್ ಸಂಸ್ಥೆಯು ತಮ್ಮ ಕ್ಲಾಸಿಕ್ 500 ಮತ್ತು ಹಿಮಾಲಯನ್ ಬೈಕ್‍‍ಗಳಿಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಆಳವಡಿಸಿ ಬಿಡುಗಡೆಗೊಳಿಸುವುದರ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಸಂಸ್ಥೆಯು ಎಬಿಎಸ್ ಪ್

By Rahul Ts

ನಮ್ಮ ಹಿಂದಿನ ಲೇಖನದಲ್ಲಿ ರಾಯಲ್‍ ಎನ್‍‍ಫೀಲ್ಡ್ ಸಂಸ್ಥೆಯು ತಮ್ಮ ಕ್ಲಾಸಿಕ್ 500 ಮತ್ತು ಹಿಮಾಲಯನ್ ಬೈಕ್‍‍ಗಳಿಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಆಳವಡಿಸಿ ಬಿಡುಗಡೆಗೊಳಿಸುವುದರ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಸಂಸ್ಥೆಯು ಎಬಿಎಸ್ ಪ್ರೇರಿತ ಹಿಮಾಲಯನ್ ಬೈಕ್‍‍ಗಳಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಾಗಿ ಬುಕ್ಕಿಂಗ್ ಪ್ರಾರಂಭ..

ಮಾಹಿತಿಗಳ ಪ್ರಕಾರ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ಎಬಿಎಸ್ ಪ್ರೇರಿತ ಹಿಮಾಲಯನ್ ಬೈಕ್‍‍ಗಳನ್ನು ಇನ್ನು 20 ದಿನಗಳಲ್ಲಿ ಬಿಡುಗಡೆಗೊಳಿಸಲಿದ್ದು, ಸಂಸ್ಥೆಯ ಅಧಿಕೃತ ಡೀಲರ್‍‍ಗಳು ಈಗಾಗಲೆ ಈ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಾಗಿ ಬುಕ್ಕಿಂಗ್ ಪ್ರಾರಂಭ..

ಪ್ರಸ್ಥುತ ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಳು ಸಾಧಾರಣ ಹಿಮಾಲಯನ್ ಬೈಕ್‍‍ಗಳಿಗಿಂತಾ ಡೀಲರ್‍‍ಗಳ ಅಧಾರದ ಮೇಲೆ ಸುಮಾರು ರೂ. 12,000 ರಿಂದ 15,000 ಹೆಚ್ಚಿರಬಹುದೆಂದು ಅಂದಜಿಸಲಾಗಿದ್ದು, ಮಾರುಕಟ್ಟೆಯಲ್ಲಿ ಸಾಧಾರಣ ಹಿಮಾಲಯ್ನ್ ಬೈಕ್‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.68 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಾಗಿ ಬುಕ್ಕಿಂಗ್ ಪ್ರಾರಂಭ..

ರಾಯಲ್ ಎನ್‍‍ಫೀಲ್ಡ್ ಅತ್ಯಂತ ಶಕ್ತಿಯುತವಾದ ಹಲವು ಐಕಾನಿಕ್ ಮೋಟಾರ್‍‍‍‍ಸೈಕಲ್‍‍ಗಳನ್ನು ತಯಾರಿಸುತ್ತಿದೆ. ಆದರೆ ಅಡ್ವೆಂಚರ್ ಅನುಕೂಲತೆಗಾಗಿ ಪ್ರತ್ಯೇಕವಾಗಿ ತಯಾರು ಮಾಡಲಾದ ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿದ ಹಿಮಾಲಯನ್ ಬೈಕ್‍‍ಗಾಗಿ ಟೆರ್ಮಿಗ್ನೊನಿ ಸೈಲೆನ್ಸರ್‌ ತಯಾರು ಮಾಡಿದೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಾಗಿ ಬುಕ್ಕಿಂಗ್ ಪ್ರಾರಂಭ..

ಟೆರ್ಮಿಗ್ನೊನಿ ಕಂಪೆನಿಯು ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಾಗಿ ತಯಾರು ಮಾಡಿದ ಸೈಲೆನ್ಸರ್ ಪೂರ್ತಿಯಾಗಿ ಸ್ಟೈನ್ ಲೆಸ್ ಕಬ್ಬಿಣದಿಂದ ತಯಾರು ಮಾಡಲಾಗಿದ್ದು, ಇದರ ಕೊನೆಯಲ್ಲಿ ಕಪ್ಪು ಬಣ್ಣದ ಕ್ಯಾಪ್ ಅನ್ನು ಅಳವಡಿಸಲಾಗಿದೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಾಗಿ ಬುಕ್ಕಿಂಗ್ ಪ್ರಾರಂಭ..

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಳು 411ಸಿಸಿ ಏರ್-ಕೂಲ್ಡ್, ಫ್ಯುಯಲ್ ಎಂಜೆಕ್ಟೆಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 24.5 ಬಿಹೆಚ್‍‍ಪಿ ಮತ್ತು 32ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಾಗಿ ಬುಕ್ಕಿಂಗ್ ಪ್ರಾರಂಭ..

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಳು ಇತ್ತೀಚೆಗಷ್ಟೆ ಬಿಡುಗಡೆಗೊಂಡ ಕ್ಲಾಸಿಕ್ 350 ಬೈಕ್‍‍ನಂತೆಯೆ ಎಬಿಎಸ್ ಯೂನಿಟ್ ಅನ್ನು ಪಡೆದುಕೊಳ್ಳಲಿದ್ದು, ಹಲವಾರು ಅಡ್ವೆಂಚರ್ ಬೈಕ್‍‍ಗಳಲ್ಲಿ ಕಂಡಂತೆಯೆ ಸ್ವಿಚಬಲ್ ಎಬಿಎಸ್ ಫೀಚರ್ ಅನ್ನು ಪಡೆದುಕೊಂಡಿರಲಿದೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಾಗಿ ಬುಕ್ಕಿಂಗ್ ಪ್ರಾರಂಭ..

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ನ ಮುಂಭಾಗದಲ್ಲಿ 41ಎಮ್ಎಮ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 200 ಎಂಎಂ ಟ್ರ್ಯಾವಲ್ ಮೋನೊಶಾಕ್ ಸಸ್ಪೆಂಷನ್ ಅನ್ನು ಪಡೆದುಕೊಂಡಿದ್ದು, ಹಿಂಭಾಗದಲ್ಲಿ 180ಎಂಎಂ ಟ್ರ್ಯಾವಲ್ ಫೋರ್ಸ್ ಅನ್ನು ಅಳವಡಿಸಲಾಗಿದೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಾಗಿ ಬುಕ್ಕಿಂಗ್ ಪ್ರಾರಂಭ..

ಪ್ರಯಾಣಿಕರ ಸುರಕ್ಷತೆಗಾಗಿ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಳಲ್ಲಿ, ಮುಂಭಾಗ ಚಕ್ರಗಳಿಗೆ 300ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಮತ್ತು ಹಿಂಭಾಗದಲ್ಲಿ ಬಾಷ್‍‍ನಿಂದ ಪಡೆದ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಕೂಡಾ ಒದಗಿಸಲಾಗಿದೆ.

Most Read Articles

Kannada
English summary
Royal Enfield Himalayan ABS Bookings Open.
Story first published: Friday, August 31, 2018, 13:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X