ವ್ಲಾಡಿಮಿರ್ ಪುಟಿನ್‌ ಭದ್ರತೆಗಾಗಿ ನಿಯೋಜಿಸಲಾಗಿರುವ ಈ ವಿಚಿತ್ರ ಬೈಕಿನ ಸ್ಪೆಷಲ್ ಏನು?

By Praveen Sannamani

ವಿಶ್ವದ ಇತರೆ ರಾಷ್ಟ್ರಗಳ ಪ್ರಧಾನಿಗಳು ಹಾಗೂ ರಾಷ್ಟ್ರಧ್ಯಕ್ಷರಿಗೆ ಇರುವಂತಹ ಭದ್ರತೆಗಿಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಒದಗಿಸಲಾಗುವ ಭದ್ರತೆಯು ತುಸು ಹೆಚ್ಚೆಂದರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಪುಟಿನ್ ಭದ್ರತೆಗಾಗಿ ನಿಯೋಜಿಸಲಾಗುವ ಬೆಂಗಾವಲು ಪಡೆಯ ಬಗ್ಗೆ ತಿಳಿದರೆ ನಿಮಗೆ ಅಚ್ಚರಿ ಆಗದೇ ಇರದು.

ವ್ಲಾಡಿಮಿರ್ ಪುಟಿನ್‌ ಭದ್ರತೆಗಾಗಿ ನಿಯೋಜಿಸಲಾಗಿರುವ ಈ ವಿಚಿತ್ರ ಬೈಕಿನ ಸ್ಪೆಷಲ್ ಏನು?

ಹೌದು, ವಿಶ್ವದ ಬಲಿಷ್ಠ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವ್ಲಾಡಿಮಿರ್ ಪುಟಿನ್ ಅವರು ಇತರೆ ರಾಷ್ಟ್ರ ನಾಯಕರಿಂತಲೂ ಐಷಾರಾಮಿ ಜೀವನ ನಡೆಸುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಅದಲ್ಲದೇ ಪುಟಿನ್ ಭದ್ರತೆಗಾಗಿ ನಿಯೋಜಿಸಲಾಗಿರುವ ಬೆಂಗಾವಲು ಪಡೆಯು ಹಲವು ವಿಶೇಷತೆಗಳಿಂದ ಕೂಡಿದ್ದು, ಕಳೆದ ವಾರವಷ್ಟೇ ಪುಟಿನ್ ಭದ್ರತೆಗಾಗಿ ನಿಯೋಜಿಸಲಾಗಿರುವ ಐಷಾರಾಮಿ ಬೈಕ್ ಒಂದು ಭಾರೀ ಚರ್ಚೆಗೆ ಕಾರಣವಾಗಿದೆ.

ವ್ಲಾಡಿಮಿರ್ ಪುಟಿನ್‌ ಭದ್ರತೆಗಾಗಿ ನಿಯೋಜಿಸಲಾಗಿರುವ ಈ ವಿಚಿತ್ರ ಬೈಕಿನ ಸ್ಪೆಷಲ್ ಏನು?

ವ್ಲಾಡಿಮಿರ್ ಪುಟಿನ್ ಭದ್ರತೆಗಾಗಿ ಈಗಾಗಲೇ ಹಲವು ಭದ್ರತಾ ವೈಶಿಷ್ಟ್ಯತೆಯನ್ನ ಹೊಂದಿರುವ ಐಷಾರಾಮಿ ಲಿಮೊಸಿನ್ ಕಾರುಗಳು, ಎಸ್ಕಾರ್ಟ್ ವಾಹನಗಳು ಸೇರಿದಂತೆ, ಅತ್ಯಾಧುನಿಕ ಸೌಲಭ್ಯವುಳ್ಳ ಪೊಲೀಸ್ ಬೈಕ್‌ಗಳು ಭದ್ರತಾ ಪಡೆಯಲ್ಲಿ ಸ್ಥಾನ ಪಡೆದಿದ್ದು, ಇದೀಗ ಅತ್ಯಾಧುನಿಕ ಸೌಲಭ್ಯವುಳ್ಳ ಕಾರ್ಟೆಝ್ ಎನ್ನುವ ಬೈಕ್ ಅನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ವ್ಲಾಡಿಮಿರ್ ಪುಟಿನ್‌ ಭದ್ರತೆಗಾಗಿ ನಿಯೋಜಿಸಲಾಗಿರುವ ಈ ವಿಚಿತ್ರ ಬೈಕಿನ ಸ್ಪೆಷಲ್ ಏನು?

ಕಾರ್ಟೆಝ್ ಹೆಸರಿನಿಂದ ಕರೆಯಲಾಗುವ ಈ ಬೈಕ್ ವಿಶೇಷವಾಗಿ ಪುಟಿನ್ ಅವರ ಭದ್ರತೆಗಾಗಿಯೇ ಸಿದ್ದಗೊಳಿಸಲಾಗಿದ್ದು, ಜಗತ್ತಿನಲ್ಲಿ ಅತಿ ಹೆಚ್ಚು ಸದ್ದು ಮಾಡಿರುವ ಎಕೆ-47 ಅಸಾಲ್ಟ್ ರೈಫಲ್ ತಯಾಕ ಸಂಸ್ಥೆ ಕಲಾಶ್ನಿಕೋವ್ ಈ ಬೈಕ್ ಅನ್ನು ನಿರ್ಮಾಣ ಮಾಡಿದೆಯೆಂತೆ.

ವ್ಲಾಡಿಮಿರ್ ಪುಟಿನ್‌ ಭದ್ರತೆಗಾಗಿ ನಿಯೋಜಿಸಲಾಗಿರುವ ಈ ವಿಚಿತ್ರ ಬೈಕಿನ ಸ್ಪೆಷಲ್ ಏನು?

ಇದು ಇತರೆ ಸೂಪರ್ ಬೈಕ್‌ಗಳಿಂತಲೂ ನೋಡಲು ವಿಚಿತ್ರವಾಗಿದ್ದು, ಸಂಪೂರ್ಣ ಕಪ್ಪು ಬಣ್ಣದ ವಿನ್ಯಾಸವನ್ನ ಹೊಂದಿರುವ ಈ ಬೈಕಿನಲ್ಲಿ ಭದ್ರತೆ ಬೇಕಾದ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಜೋಡಣೆ ಮಾಡಲಾಗಿದೆ. ಹೀಗಾಗಿಯೇ ಬೈಕಿನ ಹೊರಭಾಗಕ್ಕೆ ರಕ್ಷಾ ಕವಚವನ್ನು ಸೇರಿಸಲಾಗಿದ್ದು, ಬೈಕಿನ ತಾಂತ್ರಿಕ ಬಿಡಿಭಾಗಗಳು ಕಾಣಿಸುವುದೇ ಇಲ್ಲ.

ವ್ಲಾಡಿಮಿರ್ ಪುಟಿನ್‌ ಭದ್ರತೆಗಾಗಿ ನಿಯೋಜಿಸಲಾಗಿರುವ ಈ ವಿಚಿತ್ರ ಬೈಕಿನ ಸ್ಪೆಷಲ್ ಏನು?

ನೋಡಲು ರೆಟ್ರೋ ಲುಕ್ ಹೊಂದಿರುವ ಕಾರ್ಟೆಝ್ ಬೈಕ್‌ಗಳು ಬರೋಬ್ಬರಿ 500 ಕೆ.ಜಿ ತೂಕ ಹೊಂದಿದ್ದು, 1000 ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ 148-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ. ಈ ಮೂಲಕ ಸೊನ್ನೆಯಿಂದ 100 ಕಿ.ಮಿ ವೇಗ ಪಡೆಯಲು ಕೇವಲ 4 ಸೇಕೆಂಡುಗಳು ಸಾಕು.

ವ್ಲಾಡಿಮಿರ್ ಪುಟಿನ್‌ ಭದ್ರತೆಗಾಗಿ ನಿಯೋಜಿಸಲಾಗಿರುವ ಈ ವಿಚಿತ್ರ ಬೈಕಿನ ಸ್ಪೆಷಲ್ ಏನು?

ಹೀಗೆ ಹಲವು ಸುರಕ್ಷಾ ಸೌಲಭ್ಯಗಳನ್ನ ಹೊಂದಿರುವ ಕಾರ್ಟೆಝ್ ಬೈಕ್‌ಗಳು ಪ್ರತಿ ಗಂಟೆಗೆ ಗರಿಷ್ಠವಾಗಿ 113 ಕಿ.ಮಿ ವೇಗ ಹೊಂದಿರುವ ಬೈಕ್ ಮಾದರಿಯಾಗಿದ್ದು, ಬೈಕಿನ ಹೊರ ಕವಚವನ್ನು ಕಲಾಶ್ನಿಕೋವ್ ಸಂಸ್ಥೆಯು ಸಿದ್ದಗೊಳಿಸಿದ್ದರೇ ಎಂಜಿನ್ ಮತ್ತು ಇತರೆ ತಾಂತ್ರಿಕ ಅಂಶಗಳನ್ನು ಜನಪ್ರಿಯ ಸೂಪರ್ ಬೈಕ್‌ಗಳಿಂದ ಆಮದು ಮಾಡಿಕೊಳ್ಳಲಾಗಿದೆ.

ವ್ಲಾಡಿಮಿರ್ ಪುಟಿನ್‌ ಭದ್ರತೆಗಾಗಿ ನಿಯೋಜಿಸಲಾಗಿರುವ ಈ ವಿಚಿತ್ರ ಬೈಕಿನ ಸ್ಪೆಷಲ್ ಏನು?

ರಷ್ಯಾ ಜನಪ್ರಿಯ ಮೋಟಾರ್ ಸೈಕಲ್ ನಿರ್ಮಾಣ ಸಂಸ್ಥೆಯಾದ ಇಮಿಜ್ ಯುರಲ್ ಮತ್ತು ಜರ್ಮನ್ ಬ್ರಾಂಡ್ ಬಿಎಂಡಬ್ಲ್ಯು ಮೋಟೊರಾಡ್ ಸಂಸ್ಥೆಯಿಂದ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆಯಲಾಗಿದ್ದು, ಪುಟಿನ್ ಭದ್ರತೆಗೆ ಬೇಕಾದ ರೀತಿಯಲ್ಲಿ ಇದನ್ನು ಸಿದ್ದ ಮಾಡಲಾಗಿದೆ.

ವ್ಲಾಡಿಮಿರ್ ಪುಟಿನ್‌ ಭದ್ರತೆಗಾಗಿ ನಿಯೋಜಿಸಲಾಗಿರುವ ಈ ವಿಚಿತ್ರ ಬೈಕಿನ ಸ್ಪೆಷಲ್ ಏನು?

ಸದ್ಯ ರಷ್ಯಾ ಅಧ್ಯಕ್ಷರಿಗಾಗಿ ಮಾತ್ರವೇ ಕಾರ್ಟೆಝ್ ಬೈಕ್‌ಗಳನ್ನ ಸಿದ್ದಪಡಿಸಿರುವ ಕಲಾಶ್ನಿಕೋವ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರ ಭದ್ರತೆಗಾಗಿ ವಿವಿಧ ಮಾದರಿ ಎಸ್ಕಾರ್ಟ್ ಬೈಕ್ ನಿರ್ಮಾಣ ಮಾಡುವ ಯೋಜನೆಯಲ್ಲಿದೆ.

ವ್ಲಾಡಿಮಿರ್ ಪುಟಿನ್‌ ಭದ್ರತೆಗಾಗಿ ನಿಯೋಜಿಸಲಾಗಿರುವ ಈ ವಿಚಿತ್ರ ಬೈಕಿನ ಸ್ಪೆಷಲ್ ಏನು?

ಇನ್ನು ಭದ್ರತೆ ವಿಚಾರಕ್ಕಾಗಿ ಬಳಕೆ ಮಾಡಲಾಗುತ್ತಿರುವ ಕಾರ್ಟೆಝ್ ಬೈಕ್‌ಗಳ ಬೆಲೆ ಮತ್ತು ಬೈಕಿನ ಭದ್ರತಾ ವೈಶಿಷ್ಟ್ಯತೆಗಳ ಬಗೆಗಿನ ಮಾಹಿತಿಗಳು ಗೌಪ್ಯವಾಗಿದ್ದು, ಮುಂಬರುವ ದಿನಗಳಲ್ಲಿ ವಿಶ್ವದ ಪ್ರಮುಖ ನಾಯಕರ ಬೆಂಗಾವಲು ಪಡೆಯಲ್ಲಿ ಈ ಬೈಕ್‌ಗಳು ಸ್ಥಾನ ಗಿಟ್ಟಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಲಾಶ್ನಿಕೋವ್ ಸಂಸ್ಥೆಯು ಸಿದ್ದಪಡಿಸಿರುವ ಕಾರ್ಟೆಝ್ ಬೈಕ್ ವಿನ್ಯಾಸಗಳ ಕುರಿತಾದ ವಿಡಿಯೋ ಇಲ್ಲಿದೆ ನೋಡಿ...

ವ್ಲಾಡಿಮಿರ್ ಪುಟಿನ್‌ ಭದ್ರತೆಗಾಗಿ ನಿಯೋಜಿಸಲಾಗಿರುವ ಈ ವಿಚಿತ್ರ ಬೈಕಿನ ಸ್ಪೆಷಲ್ ಏನು?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕೋಟಿ ಕೋಟಿ ಮೌಲ್ಯದ ಐಷಾರಾಮಿ ಕಾರುಗಳು ಕ್ಷಣಮಾತ್ರದಲ್ಲೇ ಪುಡಿ ಪುಡಿ.!

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಬೆಂಗಳೂರು ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಚರಣೆ- ಬೆಚ್ಚಿದ ಆರ್‌ಇ ಮಾಡಿಫೈ ಪ್ರಿಯರು..!

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

Most Read Articles

Kannada
Read more on auto facts off beat
English summary
AK-47 Assault Rifle Manufacturer Kalashnikov Has Made a Bike for Vladimir Putin's Presidential Escort.
Story first published: Tuesday, August 14, 2018, 17:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X