ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಬಿಡುಗಡೆ ಯಾವಾಗ.?

ಸುಜುಕಿ ಇಂಡಿಯಾ ಮೋಟರ್ ಸೈಕಲ್ ವಿಭಾಗವು ವಿನೂತನ ಶೈಲಿಯ ಬರ್ಗಮನ್ ಸ್ಪ್ರೀಟ್ ಸ್ಕೂಟರ್ ಪರಿಚಯಿಸಲು ಮುಂದಾಗಿದೆ.

By Rahul Ts

ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ಕೂಟರ್ ಮಾದರಿಗಳಲ್ಲಿ ಸುಜುಕಿ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಕೂಡಾ ಹೆಚ್ಚಿನ ನೀರಿಕ್ಷೆ ಹುಟ್ಟುಹಾಕಿದ್ದು, ಸುಜುಕಿ ಸಂಸ್ಥೆಯು ತನ್ನ ಹೊಸ 125ಸಿಸಿ ಸ್ಕೂಟರ್‍ಅನ್ನು ಇದೇ ವರ್ಷದ ಏಪ್ರಿಲ್ ತಿಂಗಳ ಮಧ್ಯಂತರದಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಬಿಡುಗಡೆ ಯಾವಾಗ.?

ದೇಶಿಯ ಮಾರುಕಟ್ಟೆಯಲ್ಲಿ ಪ್ರಿಮಿಯಂ ಸ್ಕೂಟರ್ ಮಾದರಿಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದೆ. ಇದೇ ಕಾರಣಕ್ಕೆ ಹೊಸ ಯೋಜನೆ ಒಂದನ್ನು ರೂಪಿಸಿರುವ ಸುಜುಕಿ ಇಂಡಿಯಾ ಮೋಟರ್ ಸೈಕಲ್ ವಿಭಾಗವು ವಿನೂತನ ಶೈಲಿಯ ಬರ್ಗಮನ್ ಸ್ಪ್ರೀಟ್ ಸ್ಕೂಟರ್ ಪರಿಚಯಿಸಲು ಮುಂದಾಗಿದೆ.

ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಬಿಡುಗಡೆ ಯಾವಾಗ.?

ಹತ್ತು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಗೆ ಸಿದ್ದವಾಗಿರುವ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಮಾದರಿಯು ಭಾರತದ ಮೊದಲ ಯೂರೋಪಿಯನ್ ಶೈಲಿಯ ಕಟಿಂಗ್ ಎಡ್ಜ್ - ಮಾಕ್ಸಿ ಸ್ಕೂಟರ್ ಎಂಬ ಖ್ಯಾತಿಯನ್ನು ಪಡೆದಿರಲಿದೆ.

ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಬಿಡುಗಡೆ ಯಾವಾಗ.?

ಹೊಸ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‌ಗಳು ಇಂಟಿಗ್ರೇಟೆಡ್ ಎಲ್ಇಡಿ ಹೆಡ್‍ಲ್ಯಾಂಪ್ಸ್ ನೊಂದಿಗೆ ಅಗಲವಾದ ಫ್ರಂಟ್ ಏಪ್ರಾನ್ ಅನ್ನು ಹೊಂದಿದ್ದು, ಬಾಡಿ ಮೌನ್ಟೆಡ್ ವಿಂಡ್‍ಸ್ಕ್ರೀನ್ ಹ್ಯಾಂಡಲ್‍‍ಬಾರ್ ವಿನ್ಯಾಸವನ್ನು ಪಡೆದಿದೆ. ಹಾಗೆಯೇ ಇದರ ಸೀಟ್ ವಿನ್ಯಾಸವು ಕೂಡ ವಿಶಾಲವಾಗಿದ್ದು ಪಿಲಿಯಾನ್ ಸೀಟ್ ಅನ್ನು ಪಡೆದಿದೆ.

ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಬಿಡುಗಡೆ ಯಾವಾಗ.?

ಇದರ ಟೈಲ್‍ಲೈಟ್ ವಿನ್ಯಾಸದ ಬಗ್ಗೆ ಹೇಳುವುದಾದರೇ, ಸ್ಲೀಕ್ ಡಿಸೈನ್ ಪಡೆದಿರುವ ಸ್ಟೈಲಿಷ್ ಟೈಲ್‍ಲೈಟ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್, ಟೆಲಿ ಸ್ಕೊಪಿಕ್ ಫೋರ್ಕ್, ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್, ಮಲ್ಟಿ ಫಂಕ್ಷನ್ ಕೀ ಸ್ಲಾಟ್, ದೊಡ್ಡದಾದ ರೈಡರ್ ಸೀಟ್, 12ವಿ ಚಾರ್ಜಿಂಗ್ ಪಾಯಿಂಟ್, ಟ್ಯೂಬ್ ಟೈರ್ಸ್ ಅನ್ನು ಅಳವಡಿಸಲಾಗಿದೆ.

ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಬಿಡುಗಡೆ ಯಾವಾಗ.?

ಎಂಜಿನ್ ವೈಶಿಷ್ಟ್ಯತೆ

ಆಕ್ಸೆಸ್ 125 ಸ್ಕೂಟರ್‌ಗೆ ಸಮನಾಗಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು 124.3ಸಿಸಿ ಎಂಜಿನ್ ಮೂಲಕ 8.6 ಬಿಎಚ್‌ಪಿ ಮತ್ತು 10.2 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಗುಣಹೊಂದಿದ್ದು, ಸಿವಿಟಿ ಗೇರ್‌ಬಾಕ್ಸ್ ಹೊಂದಿರಲಿವೆ.

ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಬಿಡುಗಡೆ ಯಾವಾಗ.?

ಇದರ ಜೊತೆಗೆ 12 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿರುವ ಹೊಸ ಸುಜುಕಿ ಸ್ಕೂಟರ್‌ಗಳು, ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ರಚಿಸಲಾಗಿದೆ. ಜೊತೆಗೆ ಡಿಸ್ಕ್ ಬ್ರೇಕ್ ಹಾಗೂ ಎಬಿಎಸ್ ಆಯ್ಕೆ ಕೂಡಾ ದೊರೆಯಲಿದೆ.

ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಬಿಡುಗಡೆ ಯಾವಾಗ.?

ಹೊಸ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಬೆಲೆಯು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ 60 ತಿಂದ 65 ಸಾವಿರದ ವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಬಿಡುಗಡೆಗೊಳ್ಳಲಿರುವ ಈ ಸ್ಕೂಟರ್ ಟಿವಿಎಸ್ ಎನ್‍ಟಾರ್ಕ್ 125, ಹೋಂಡಾ ಗ್ರಾಜಿಯಾ ಮತ್ತು ವೆಸ್ಪಾ ಎಸ್ಎಕ್ಸ್ಎಲ್/ವಿಎಕ್ಸ್ಎಲ್ 125 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

2. ಮಾರಾಟದಲ್ಲಿ ಬುಲೆಟ್ ಹಿಂದಿಕ್ಕಿದ ಕ್ಲಾಸಿಕ್ 350 ಗನ್‌ಮೆಟಲ್ ಗ್ರೇ ವಿಶೇಷತೆ ಏನು?

3. ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 150 ಬೈಕ್ ಬೆಲೆ ಎಷ್ಟು ಗೊತ್ತಾ?

4. ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಹೊಸ ಮಾರ್ಗವೇ ವೆಲ್ವ್ ಟೆಕ್ನಾಲಜಿ ಬಳಕೆ.!

5. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

Most Read Articles

Kannada
Read more on suzuki scooter
English summary
Suzuki Burgman Street Launch Details Revealed — Expected Price, Specs And Features.
Story first published: Wednesday, March 28, 2018, 13:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X