TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಎಬಿಎಸ್ ಬಿಡುಗಡೆ

ಟಿವಿಎಸ್ ಮೋಟಾರ್ಸ್ ಸಂಸ್ಥೆಯು ಭಾರತೀಯ ಗ್ರಾಹಕರಿಗಾಗಿ ಮಗದೊಂದು ಅಪಾಚಿ ಬೈಕ್ ಆವೃತ್ತಿಯನ್ನು ಹೊರತಂದಿದ್ದು, ಎಬಿಎಸ್ ಟೆಕ್ನಾಲಜಿ ಹೊಂದಿರುವ ಆರ್‌ಟಿಆರ್ 200 4ವಿ ಬೈಕ್ ಮಾದರಿಯನ್ನು ರೂ.1.07 ಲಕ್ಷಕ್ಕೆ(ದೆಹಲಿ ಎಕ್ಸ್ ಶೋರಂ) ಬಿಡುಗಡೆ ಮಾಡಿದೆ.
ಬಿಡುಗಡೆಗೊಂಡಿರುವ ಈ ನವೀನ ಆರ್‌ಟಿಆರ್ 200 4ವಿ ಎಬಿಎಸ್ ಬೈಕ್ ಮಾದರಿಯು ಹೊಸ ನಮೂನೆಯ ತಂತ್ರಜ್ಞಾನ ಹೊಂದಿದ್ದು, ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ರೇಸ್ ಟ್ರ್ಯಾಕ್ ಸಹಕಾರಿಯಾಗಬಲ್ಲ ಹೈ ಫ್ರಿಕ್ಷನ್ ಮತ್ತು ಲೋ ಫ್ರಿಕ್ಷನ್ ಸೌಲಭ್ಯ ಒದಗಿಸಿದೆ.
ಹೀಗಾಗಿ ಹೊಸ ಬೈಕ್ ಮಾದರಿಯ ಮೇಲೆ ಎಬಿಎಸ್ ಸ್ಟಿಕರ್ ಅಂಟಿಸಿರುವ ಟಿವಿಎಸ್ ಸಂಸ್ಥೆಯು ಹೊಸ ಬೈಕಿನಲ್ಲಿ ಮಸ್‌ಕ್ಯೂಲರ್ ಫ್ಯೂಲ್ ಟ್ಯಾಂಕ್, ಟ್ವಿನ್ ಪೋರ್ಟ್ ಎಕ್ಸಾಸ್ಟ್, ಮುಂಭಾಗದ ಚಕ್ರದಲ್ಲಿ 270ಎಂಎಂ ಪೇಟಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 240ಎಂಎಂ ಪೇಟಲ್ ಡಿಸ್ಕ್ ಬ್ರೇಕ್ ನೀಡಿದೆ.
ಎಂಜಿನ್ ಸಾಮರ್ಥ್ಯ
197.75 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಗಳು 20.2-ಬಿಎಚ್‌ಪಿ ಮತ್ತು 18.1-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.
ಈ ಮೂಲಕ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಹೊಸ ಬೈಕ್ ಅಪಾಚೆ ಆರ್‌ಟಿಆರ್ 200 4ವಿ, ಕೇವಲ 3.95 ಸೇಕೆಂಡುಗಳಲ್ಲಿ 60 ಕಿಮಿ ವೇಗದಲ್ಲಿ ಕ್ರಮಿಸುವ ಶಕ್ತಿ ಹೊಂದಿದ್ದು, 128 ಟಾಪ್ ಸ್ಪೀಡ್ ತಲುಪಬಲ್ಲವು.
ಇನ್ನು ಬೈಕಿನ ವಿನ್ಯಾಸಗಳ ಬಗೆಗೆ ಹೇಳುವುದಾರರೇ ಸ್ಪೋರ್ಟಿ ಲುಕ್ ಪಡೆದುಕೊಂಡಿರುವ ಹೊಸ ಬೈಕ್ ಮಾದರಿಯು ಆಧುನಿಕ ಮಾದರಿಯ ಎಲ್ಲಾ ಸುರಕ್ಷಾ ಸೌಲಭ್ಯದೊಂದಿಗೆ ಅತ್ಯುತ್ತಮ ಗ್ರಾಫಿಕ್ಸ್‌ನೊಂದಿಗೆ ಪ್ರಿಮಿಯಂ ಮೋಟಾರ್ ಸೈಕಲ್ ಮಾದರಿಯಾಗಿದೆ ಎನ್ನಬಹುದು.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಈ ಹಿಂದೆ ಎಬಿಎಸ್ ಅಲ್ಲದ ಅಪಾಚೆ ಆರ್‌ಟಿಆರ್ 200 4ವಿ ಪರಿಚಯಿಸಿದ್ದ ಟಿವಿಎಸ್ ಸಂಸ್ಥೆಯು ಗ್ರಾಹಕರ ಬೇಡಿಕೆ ಅನುಗುಣವಾಗಿ ಎಬಿಎಸ್ ಆವೃತ್ತಿಯನ್ನು ಹೊರತಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರಕವಾಗಿ ಹೊಸ ಬೈಕ್ ಆಯ್ಕೆ ಮಾಡಬಹುದಾಗಿದೆ.
Trending DriveSpark YouTube Videos
Subscribe To DriveSpark Kannada YouTube Channel - Click Here