ಆಟೋ ಎಕ್ಸ್ ಪೋ 2018 : ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶಿಸಿದ ಟಿವಿಎಸ್

Written By: Rahul

ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಟಿವಿಎಸ್ ಸಂಸ್ಥೆಯು ಹೊಸ ಟಿವಿಎಸ್ ಕ್ರಿಯಾನ್ ಎಲೆಕ್ರ್ಟಿಕ್ ಸ್ಕೂಟರ್ ಪರಿಕಲ್ಪನೆಯನ್ನು 2018ರ ಆಟೋ ಎಕ್ಸ್ ಪೋನಲ್ಲಿ ಅನಾವರಗೊಳಿಸಿದೆ.

ಆಟೋ ಎಕ್ಸ್ ಪೋ 2018 : ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶಿಸಿದ ಟಿವಿಎಸ್

ಟಿವಿಎಸ್ ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಡಿಸೈನ್ ಮತ್ತು ಸ್ಟೈಲ್ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಸಿಲ್ವರ್ ಥೀಮ್ಡ್ ಫ್ರೇಮ್ ಅನ್ನು ಬಳಸಲಾಗಿದ್ದು, ಹೊಳುಪಾದ ಕೆಂಪು ಬಣ್ಣದಲ್ಲಿ ನಾಲ್ಕು ಫ್ಲೋಟಿಂಗ್ ಪ್ಯಾನಲ್ಸ್ ಅನ್ನು ಪಡೆದುಕೊಂಡಿದೆ. ಹೀಗಾಗಿ ಹೊಸ ಸ್ಕೂಟರ್‌ಗಳು ಸ್ಪೋರ್ಟ್ಸ್ ಬೈಕ್ ಮಾದರಿಯಲ್ಲೇ ಸೀಟಿನ ಆಕಾರವನ್ನು ಹೊಂದಿದೆ.

ಆಟೋ ಎಕ್ಸ್ ಪೋ 2018 : ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶಿಸಿದ ಟಿವಿಎಸ್

ಟಿವಿಎಸ್ ಕ್ರಿಯಾನ್ ಮುಂದಿನ ತಲೆಮಾರಿನ ಎಲೆಕ್ಟ್ರಿಕ್ ಮೋಟಾರ್ ಆಗಿದ್ದು, ಕೇವಲ 5.1 ಸೇಕೆಂಡುಗಳಲ್ಲಿ 80 ಕಿಮಿ ವೇಗ ಪಡೆಯುವ ಸಾಮಥ್ಯ ಹೊಂದಿವೆ. ಜೊತೆಗೆ ಸ್ಕೂಟರ್‌ನ ಬ್ಯಾಟರಿ 60 ನಿಮಿಷದಲ್ಲಿ ಶೇಕಡ 80ರಷ್ಟು ಚಾರ್ಜ್ ಮಾಡಬಹುದಾಗಿದೆ.

ಆಟೋ ಎಕ್ಸ್ ಪೋ 2018 : ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶಿಸಿದ ಟಿವಿಎಸ್

ಟಿವಿಎಸ್ ಕ್ರಿಯಾನ್ ಮೂರು ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಹೊಂದಿದ್ದು, 12ಕೆವಿ ಶಕ್ತಿ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಅಲ್ಲದೇ ಸುಧಾರಿತ ಮಾದರಿ ಕನೆಕ್ಟಿವಿಟಿಗಳನ್ನು ಹೆಚ್ಚಿಸುವ ಉದ್ದೇಶದಿಂದ ತಂತ್ರಜ್ಞಾನ ದೈತ್ಯ ಇಂಟೆಲ್ ಜೊತೆ ಸೇರಿ ಸ್ಮಾರ್ಟ್ ಸಂಪರ್ಕ ಸಾಧನಗಳನ್ನು ಅಭಿವೃದ್ಧಿಪಡಿಸಲು ಸಹಕರಿಸಿದೆ.

ಆಟೋ ಎಕ್ಸ್ ಪೋ 2018 : ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶಿಸಿದ ಟಿವಿಎಸ್

ಇನ್ನು ಟಿವಿಎಸ್ ಕ್ರಿಯಾನ್ ಸ್ಕೂಟರ್‌ಗಳಲ್ಲಿ ಟಿಎಫ್‌ಟಿ ಸ್ಕ್ರೀನ್ ಅನ್ನು ಹೊಂದಿದ್ದು, ಹೊಸದಾಗಿ ಬಿಡುಗಡೆಯಾದ ಎನ್ ಟಾರ್ಕ್ 125 ಸ್ಕೂಟರ್ ನಂತೆಯೇ ಬಳಕೆದಾರರು ಸ್ಕೂಟರಿನೊಂದಿಗೆ ಸಂವಹನ ನಡೆಸಲು ಸಂಬಂಧಿಸಿದ ತಂತ್ರಜ್ಞಾನಗಳೊಂದಿಗೆ ಬರುತ್ತದೆ.

ಆಟೋ ಎಕ್ಸ್ ಪೋ 2018 : ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶಿಸಿದ ಟಿವಿಎಸ್

ಇದಲ್ಲದೆ ಟಿವಿಎಸ್ ಕ್ರಿಯಾನ್ ಕ್ಲೌಡ್ ಕೆನೆಕ್ಟಿವಿಟಿ ಜೊತೆ 3 ಕಸ್ಟಂ ರೈಡಿಂಗ್ ಮೋಡ್ಸ್ ನೀಡಲಾಗಿದ್ದು, ರೀಜೆನೆರೇಟಿವ್ ಬ್ರೇಕಿಂಗ್, ಪಾರ್ಕ್ ಅಸ್ಸಿಸ್ಟ್, ಸೇಫ್ಟಿ, ಆಂಟಿ ಥೆಫ್ಟ್, ಜಿಪಿಎಸ್ ನ್ಯಾವಿಗೇಷನ್ ಮತ್ತು ಜಿಯೊ ಫೆನ್ಸಿಂಗ್ ಅನ್ನು ಹೊಂದಿರಲಿದೆ. ಬ್ರೇಕಿಂಗ್ ಕರ್ತವ್ಯವನ್ನು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಗಳಲ್ಲಿ ಎಬಿಎಸ್ ಹೊಂದಿದೆ.

ಆಟೋ ಎಕ್ಸ್ ಪೋ 2018 : ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶಿಸಿದ ಟಿವಿಎಸ್

ಈ ಬಗ್ಗೆ ಮಾತನಾಡಿರುವ ಟಿವಿಎಸ್ ಮೋಟಾರ್ ಸಂಸ್ಥೆಯ ಅಧ್ಯಕ್ಷರಾದ ವಿನಯ್ ಹಾರ್ನೆ, ಆಧುನಿಕ ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಉತ್ತಮ ಭವಿಷ್ಯವಿದ್ದು, ಇದೇ ಉದ್ದೇಶದಿಂದ ಸ್ಮಾರ್ಟ್ ಕನೆಕ್ಟೆಡ್ ಗ್ಯಾಜೆಟ್‌ಗಳ ಪ್ರೇರಿತ ಕ್ರಿಯಾನ್ ಆವೃತ್ತಿಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದಿದ್ದಾರೆ.

ಆಟೋ ಎಕ್ಸ್ ಪೋ 2018 : ಕ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶಿಸಿದ ಟಿವಿಎಸ್

ಒಟ್ಟಿನಲ್ಲಿ ಟಿವಿಎಸ್ ಕ್ರಿಯಾನ್ ಎಲೆಕ್ರ್ಟಿಕ್ ಸ್ಕೂಟರ್ ಪರಿಕಲ್ಪನೆಯು ತೀಕ್ಷ್ಣ ಮತ್ತು ವಿನ್ಯಾಸದಿಂದ ಸ್ಪೋರ್ಟಿ ಲುಕ್ ಪಡೆದಿದ್ದು, ಪ್ರಸ್ಥುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಹಿಂದಿಕ್ಕುವ ತವಕದಲ್ಲಿದೆ.

English summary
TVS Creon Electric Scooter Concept Unveiled — Launch Date, Specifications & Images.
Story first published: Thursday, February 8, 2018, 12:41 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark