ಟಿವಿಎಸ್ ವಿಗೊ ಸ್ಕೂಟರ್‍‍‍ಗಳ ಬೆಲೆಗಳಲ್ಲಿ ಭಾರೀ ಕಡಿತ..

Written By: Rahul TS

ಭಾರತದ ಮೂರನೇ ಪ್ರಸಿದ್ದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಟಿವಿಎಸ್ ತನ್ನ ವಿಗೋ ಸ್ಕೂಟರ್‍‍ಗಳ ಮೇಲಿನ ಬೆಲೆಯಲ್ಲಿ ಕಡಿತ ಮಾಡಿದ್ದು, ಇನ್ನಿತರೆ ಸಂಸ್ಥೆಗಳು ತಮ್ಮ ಸ್ಕೂಟರ್‍‍ಗಳ ಮೇಲಿನ ಬೆಲೆ ಏರಿಕೆ ಮಾಡುತ್ತಿದ್ದರೆ ಟಿವಿಎಸ್ ಮಾತ್ರ ವಿಗೊ ಸ್ಕೂಟರ್‍‍ಗಳ ಮೇಲೆ 2 ಸಾವಿರ ರೂಪಾಯಿ ಬೆಲೆ ಕಡಿತ ಮಾಡಿದೆ.

ಟಿವಿಎಸ್ ವಿಗೊ ಸ್ಕೂಟರ್‍‍‍ಗಳ ಬೆಲೆಗಳಲ್ಲಿ ಭಾರೀ ಕಡಿತ..

ಬೆಲೆ ಕಡಿತದ ಮುನ್ನ ಟಿವಿಎಸ್ ವಿಗೊ ಸ್ಕೂಟರ್‍‍ಗಳ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 52,165ಕ್ಕೆ ಮಾರಾಟಗೊಳ್ಳುತ್ತಿತ್ತು. ಆದ್ರೆ ಗ್ರಾಹಕರ ಸೆಳೆಯುವ ಉದ್ದೇಶದಿಂದ ವಿಗೊ ಸ್ಕೂಟರ್‌ಗಳ ಬೆಲೆಯನ್ನು ರೂ 50,165ಕ್ಕೆ ಇಳಿಕೆ ಮಾಡಲಾಗಿದ್ದು, ವಿಗೊ ಡಿಸ್ಕ್ ಆವೃತ್ತಿಯಲ್ಲಿ ಯಾವುದೇ ಬೆಲೆ ಕಡಿತ ಮಾಡಿಲ್ಲ.

ಟಿವಿಎಸ್ ವಿಗೊ ಸ್ಕೂಟರ್‍‍‍ಗಳ ಬೆಲೆಗಳಲ್ಲಿ ಭಾರೀ ಕಡಿತ..

ಟಿವಿಎಸ್ ವಿಗೊ ಸ್ಕೂಟರ್‍‍ಗಳ ಬೆಲೆ ಇಳಿಕೆಗೆ ಕಾರಣ ಎನೆಂದರೇ, 2017ರ ಫೆಬ್ರುವರಿಯಲ್ಲಿ ಮಾರಾಟವಾಗ ವಿಗೊ ಸ್ಕೂಟರ್‌ಗಳ ಸಂಖ್ಯೆಗೆ ಹೋಲಿಕೆ ಮಾಡಿದರೇ 2018ರ ಫೆಬ್ರವರಿ ತಿಂಗಳಿನಲ್ಲಿ ಕಡಿಮೆ ಪ್ರಮಾಣದ ಸ್ಕೂಟರ್‍‍ಗಳು ಮಾರಾಟಗೊಂಡಿವೆ. ಈ ಹಿನ್ನೆಲೆ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಬೆಲೆ ಕಡಿಮೆ ಮಾಡಲಾಗಿದೆ.

ಟಿವಿಎಸ್ ವಿಗೊ ಸ್ಕೂಟರ್‍‍‍ಗಳ ಬೆಲೆಗಳಲ್ಲಿ ಭಾರೀ ಕಡಿತ..

ಏಂಜಿನ್ ಸಾಮರ್ಥ್ಯ

ಟಿವಿಎಸ್ ವಿಗೊ ಸ್ಕೂಟರ್‌ಗಳು 109.7ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 8 ಬಿಹೆಚ್‍ಪಿ ಹಾಗೂ 8.4ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಸ್ಕೂಟರಿನ ಸಸ್ಪೆಷೆನ್ ಅನ್ನು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಹಾಗು ಮೊನೊ ಶಾಕ್ ರಿಯರ್‌‍ನಿಂದ ನಿಯಂತ್ರಿಸುತ್ತೆ.

ಟಿವಿಎಸ್ ವಿಗೊ ಸ್ಕೂಟರ್‍‍‍ಗಳ ಬೆಲೆಗಳಲ್ಲಿ ಭಾರೀ ಕಡಿತ..

ಇದಲ್ಲದೇ ಟಿವಿಎಸ್ ವಿಗೊ ಸ್ಕೂಟರ್‍‍ಗಳು ಸಂಪೂರ್ಣ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಎಲ್ಇಡಿ ಟೈಲ್ ಲೈಟ್ಸ್, ಮೊಬೈಲ್ ಚಾರ್ಜಿಂಗ್ ಪೋರ್ಟ್‍ನೊಂದಿಗೆ 16 ಲೀಟರ್ ಬೂಟ್ ಕ್ಯಾಪಾಸಿಟಿ, 12 ಇಂಚಿನ ಪೂರ್ಣ ಅಲಾಯ್ ವೀಲ್‍‍ಗಳು, ಇಗ್ನಿಷನ್ ಕೀ ಗ್ಲೋ ಹಾಗೂ ಹೊರಭಾಗದಲ್ಲಿ ಫ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿವೆ.

ಟಿವಿಎಸ್ ವಿಗೊ ಸ್ಕೂಟರ್‍‍‍ಗಳ ಬೆಲೆಗಳಲ್ಲಿ ಭಾರೀ ಕಡಿತ..

ಮೇಲೆ ಹೇಳಿರುವ ಹಾಗೆಯೇ ಮಾರುಕಟ್ಟೆಯಲ್ಲಿ ಬೇರೆ ದ್ವಿಚಕ್ರ ವಾಹನಗಳ ಸಂಸ್ಥೆಯು ತಮ್ಮ 110ಸಿಸಿ ಸರಣಿಯ ಸ್ಕೂಟರ್‍‍‍ಗಳ ಮೇಲೆ ಬೆಲೆ ಏರಿಕೆ ಮಾಡುತ್ತಿದ್ದು, ಟಿವಿಎಸ್ ಸಂಸ್ಥೆಯು ಮಾತ್ರ ತಮ್ಮ ವಿಗೊ ಸ್ಕೂಟರಿನ ಮಾರಾಟವನ್ನು ಹೆಚ್ಚಿಸಲು ಸ್ಕೂಟರಿನ ಬೆಲೆಯಲ್ಲಿ ರೂ 2 ಸಾವಿರ ಕಡಿಮೆ ಮಾಡಿದೆ.

ಟಿವಿಎಸ್ ವಿಗೊ ಸ್ಕೂಟರ್‍‍‍ಗಳ ಬೆಲೆಗಳಲ್ಲಿ ಭಾರೀ ಕಡಿತ..

ಬಹಳ ವರ್ಷಗಳಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡುತಿದ್ದ ಟಿವಿಎಸ್ ವಿಗೊ ಸ್ಕೂಟರ್‍‍ಗಳು ಇತ್ತೀಚೆಗೆ ಕಡಿಮೆ ಪ್ರಮಾಣದಲ್ಲಿ ಬೇಡಿಕೆ ಪಡೆಯುತ್ತಿದ್ದು, ಇದೀಗ ಬೆಲೆ ಕಡಿತದ ನಂತರ ಎಷ್ಟರ ಮಟ್ಟಿಗೆ ಮಾರಾಟಗೊಳ್ಳುತ್ತವೆ ಎಂಬುವುದನ್ನು ಕಾಯ್ದು ನೋಡಬೇಕಾಗಿದೆ.

ಟಿವಿಎಸ್ ವಿಗೊ ಸ್ಕೂಟರ್‍‍‍ಗಳ ಬೆಲೆಗಳಲ್ಲಿ ಭಾರೀ ಕಡಿತ..

ಇನ್ನು ಎಂಜಿನ್ ಸಾಮರ್ಥ್ಯ, ಮೈಲೇಜ್ ಮತ್ತು ಸ್ಕೂಟರ್ ವಿನ್ಯಾಸಗಳ ರೇಟಿಂಗ್‌ನಲ್ಲಿ ಹೋಂಡಾ ಆಕ್ಟಿವಾ ಐ, ಸುಜುಕಿ ಲೆಟ್ಸ್ ಹಾಗೂ ಯಮಹಾ ರೇ ಝೆಡ್ ಸ್ಕೂಟರ್‍‍ಗಳಿಗೆ ತ್ರೀವ ಪೈಪೋಟಿ ನೀಡುವ ಎಲ್ಲಾ ಗುಣಲಕ್ಷಣಗಳು ಈ ಸ್ಕೂಟರ್‌ನಲ್ಲಿವೆ.

Read more on tvs price
English summary
TVS Wego Prices Reduced — Company Hopes To Revive Sales Of the Wego.
Story first published: Monday, April 9, 2018, 10:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark