ಆಟೊ ಎಕ್ಸ್ ಪೋ 2018 : ಬಿಡುಗಡೆಯಾಯ್ತು ಮೊದಲ ಎಲೆಕ್ಟ್ರಿಕ್ ಕ್ರೂಸರ್ ಬೈಕ್

Written By: Rahul

ಅಮೆರಿಕಾ ಮೂಲದ ಮೋಟಾರ್ ಸೈಕಲ್ ತಯಾರಕ ಯುನೈಟೆಡ್ ಮೋಟಾರ್ಸ್ ಸಂಸ್ಥೆಯು ಎಲೆಕ್ಟ್ರಿಕ್ ಕ್ರೂಸರ್ 'ರೆನೆಗೆಡ್ ಥೋರ್' ಬೈಕನ್ನು ಬಿಡುಗಡೆಗೊಳಿಸಿದ್ದು, ಎಕ್ಸ್ ಶೋರಂ ಬೆಲೆಯು 4.9 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಆಟೊ ಎಕ್ಸ್ ಪೋ 2018 : ಬಿಡುಗಡೆಯಾಯ್ತು ಮೊದಲ ಎಲೆಕ್ಟ್ರಿಕ್ ಕ್ರೂಸರ್ ಬೈಕ್

ರೆನೆಗೆಡ್ ಥೋರ್ ಬೈಕ್ ಪ್ರಪಂಚದ ಮೊದಲನೆಯ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಆಗಿದ್ದು, ಈ ಬೈಕ್ ಯುಎಂ ಕ್ರೂಸರ್ ಬೈಕುಗಳ ವಿನ್ಯಾಸವನ್ನು ಹೊಂದಿದೆ. ಹೀಗಾಗಿ ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ಈ ಬೈಕ್ ಜನಪ್ರಿಯತೆ ಸಾಧಿಸಲಿದೆ.

ಆಟೊ ಎಕ್ಸ್ ಪೋ 2018 : ಬಿಡುಗಡೆಯಾಯ್ತು ಮೊದಲ ಎಲೆಕ್ಟ್ರಿಕ್ ಕ್ರೂಸರ್ ಬೈಕ್

ಎಂಜಿನ್ ಸಾಮರ್ಥ್ಯ

ಯುಎಮ್ ರೆನೆಗೆಡ್ ಥೋರ್ ಬೈಕ್ 30 ಕಿಲೋವ್ಯಾಟ್ ಗೆ 70ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಇದರ ಎಲೆಕ್ಟ್ರಿಕ್ ಮೋಟಾರನ್ನು 5-ಸ್ಪೀಡ್ ಗೇರ್ ಬಾಕ್ಸಿಗೆ ಜೋಡಿಸಲಾಗಿದೆ.

ಆಟೊ ಎಕ್ಸ್ ಪೋ 2018 : ಬಿಡುಗಡೆಯಾಯ್ತು ಮೊದಲ ಎಲೆಕ್ಟ್ರಿಕ್ ಕ್ರೂಸರ್ ಬೈಕ್

ಇನ್ನು ಈ ಬೈಕ್ ಪ್ರತಿ ಚಾರ್ಜಿಗೆ 270 ಕಿಲೋ ಮೀಟರ್ ಮೈಲೇಜ್ ನೀಡಲಿದ್ದು, ಕೇವಲ 40 ನಿಮಿಷದಲ್ಲಿ ಶೇಕಡ 80ರಷ್ಟು ಚಾರ್ಜ್ ಆಗಲಿದೆ. ಹಾಗೆಯೇ ಈ ಬೈಕ್ ಗಂಟೆಗೆ 180 ಕಿಲೋಮೀಟರ್ ಟಾಪ್ ಸ್ಪೀಡನ್ನು ಹೊಂದಿದೆ.

ಆಟೊ ಎಕ್ಸ್ ಪೋ 2018 : ಬಿಡುಗಡೆಯಾಯ್ತು ಮೊದಲ ಎಲೆಕ್ಟ್ರಿಕ್ ಕ್ರೂಸರ್ ಬೈಕ್

ರೆನೆಗೆಡ್ ಥೋರ್ ಬೈಕ್ ಹೈಡ್ರಾಲಿಕ್ ಕ್ಲಚ್ ಮತ್ತು ಲಿಕ್ವಿಡ್ ಕೂಲ್ಡ್ ಕಂಟ್ರೋಲರ್ ಅನ್ನು ಹೊಂದಿದ್ದು, ಈ ಬೈಕಿನಲ್ಲಿ ರಿವರ್ಸ್ ಗೇರ್ ಕೂಡ ಇರುವುದು ಗಮನಾರ್ಹ. ಇನ್ನು ಈ ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೂಸರ್ ಬೈಕುಗಳಿಗೆ ಇದು ತೀವ್ರ ಪೈಪೋಟಿಯನ್ನು ನೀಡಲಿದೆ.

ಆಟೊ ಎಕ್ಸ್ ಪೋ 2018 : ಬಿಡುಗಡೆಯಾಯ್ತು ಮೊದಲ ಎಲೆಕ್ಟ್ರಿಕ್ ಕ್ರೂಸರ್ ಬೈಕ್

ಬೈಕ್ ವಿನ್ಯಾಸ

ಆರಾಮದಾಯಕ ರೈಡ್ ಗಾಗಿ ಅಗಲವಾದ ಹ್ಯಾಂಡಲ್ ಬಾರ್ಸ್, ಫ್ಲೋವಿಂಗ್ ಟ್ಯಾಂಕ್, ಲೋ ಸ್ಲಂಗ್ ಸೀಟ್, ಫ್ರಂಟ್ ಸೆಟ್ ಫೂಟ್ ಪೆಗ್ಸ್ ಮಾತ್ತು ಇನ್ನು ಹಲವಾರು ಫೀಚರ್ ಗಳನ್ನು ಹೊಂದಿದೆ.

ಆಟೊ ಎಕ್ಸ್ ಪೋ 2018 : ಬಿಡುಗಡೆಯಾಯ್ತು ಮೊದಲ ಎಲೆಕ್ಟ್ರಿಕ್ ಕ್ರೂಸರ್ ಬೈಕ್

ರೆನೆಗೆಡ್ ಥೋರ್ ಬೈಕ್ ಮುಂಭಾಗದಲ್ಲಿ 280 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 140 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದ್ದು, ಸ್ಟ್ಯಾಂಡರ್ಡ್ ಎಬಿಸ್ ನೀಡಲಾಗಿದೆ. ಜೊತೆಗೆ ಮುಂಭಾಗದಲ್ಲಿ 41ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ಸ್ ಅನ್ನು ಪಡೆದುಕೊಂಡಿದೆ. ಹಾಗೆಯೇ ದಪ್ಪದಾದ ಅಲಾಯ್ ಚಕ್ರಗಳನ್ನು ಹೊಂದಿವೆ.

ಆಟೊ ಎಕ್ಸ್ ಪೋ 2018 : ಬಿಡುಗಡೆಯಾಯ್ತು ಮೊದಲ ಎಲೆಕ್ಟ್ರಿಕ್ ಕ್ರೂಸರ್ ಬೈಕ್

ಅಲ್ಲದೇ ಈ ಹೊಸ ಬೈಕಿನ ಖರೀದಿಗಾಗಿ ಈಗಲೇ ನಿಮ್ಮ ಹತ್ತಿರವಿರುವ ಡೀಲರ್ಸ್‌ಗಳನ್ನು ಸಂಪರ್ಕಿಸಬಹುದಾಗಿದ್ದು, ಈ ಬೈಕ್ ಸಿಬಿಯು ಮಾರ್ಗವಾಗಿ ಮುಂದಿನ ದಿನಗಳಲ್ಲಿ ಭಾರತವನ್ನು ಪ್ರವೇಶಿಸಲಿದೆ.

ಆಟೊ ಎಕ್ಸ್ ಪೋ 2018 : ಬಿಡುಗಡೆಯಾಯ್ತು ಮೊದಲ ಎಲೆಕ್ಟ್ರಿಕ್ ಕ್ರೂಸರ್ ಬೈಕ್

ಇಷ್ಟೇಲ್ಲಾ ವಿಶೇಷತೆ ಮತ್ತು ವೈಶಿಷ್ಟ್ಯತೆಗಳನೊಳ್ಳಗೊಂಡ ಪ್ರಪಂಚದ ಮೊದಲ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಯುಎಂ ರೆನೆಗೆಡ್ ಥೋರ್ ಥ್ರಿಲ್ಲಿಂಗ್ ರೈಡಿಂಗ್ ಅನುಭವಕ್ಕೆ ಹೇಳಿ ಮಾಡಿಸಿದ ಬೈಕ್ ಇದಾಗಿದ್ದು, ಭಾರತದಲ್ಲಿ ಯುವ ಸಮುದಾಯವನ್ನು ಹೇಗೆ ಸೆಳೆಯುಲಿದೆ ಎಂಬುವುದನ್ನು ಕಾಯ್ದು ನೋಡಬೇಕಾಗಿದೆ.

Read more on auto expo 2018 super bike
English summary
UM Motorcycles Renegade Thor Electric Cruiser Launched In India At Rs 4.9 Lakh.
Story first published: Saturday, February 10, 2018, 20:00 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark