Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯಮಹಾ ಆರ್15 ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಎಪ್ರಿಲಿಯಾ ಆರ್‌ಎಸ್ 150
ಇಟಾಲಿ ಮೂಲದ ಮೋಟಾರ್‌ಸೈಕಲ್ ಉತ್ಪಾದನಾ ಸಂಸ್ಥೆಯಾದ ಪಿಯಾಜಿಯೊ ತನ್ನ ಸಹ ಬ್ರಾಂಡ್ ಎಪ್ರಿಲಿಯಾ ಬೈಕ್ ಮಾರಾಟದಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ 150ಸಿಸಿ ಎಂಜಿನ್ ಬೈಕ್ ಮಾದರಿಗಳನ್ನು ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ.

2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳಿಸಲಾಗಿದ್ದ ಆರ್‌ಎಸ್ 150 ಇಲ್ಲವೇ ಟ್ಯುನೋ 150 ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಯಾವುದಾದರೂ ಒಂದು 150 ಸಿಸಿ ಪರ್ಫಾಮೆನ್ಸ್ ಬೈಕ್ ಮಾದರಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ.

ಆರ್‌ಎಸ್ 150 ಮತ್ತು ಟ್ಯುನೋ 150 ಬೈಕ್‌ಗಳಲ್ಲಿ ಯಾವುದು ಬಿಡುಗಡೆಯಾಗಲಿದೆ ಎನ್ನುವುದು ನಿಖರವಾಗಿ ಗೊತ್ತಿಲ್ಲವಾದರೂ ಎರಡು ಬೈಕ್‌ಗಳು ಸಹ ಸ್ಟ್ರೀಟ್ ಫೈಟರ್ ಮತ್ತು ಪರ್ಫಾಮೆನ್ಸ್ ಆವೃತ್ತಿಯಾಗಿರುವುದರಿಂದ ಹೊಸ ಬೈಕ್ ನೇರವಾಗಿ ಯಮಹಾ ಆರ್15 ಮತ್ತು ಸುಜುಕಿ ಜಿಕ್ಸರ್ ಬೈಕ್‌ಗಳಿಗೆ ಪೈಪೋಟಿ ನೀಡಲಿವೆ.

ಲೀಟರ್ ಕ್ಲಾಸ್ ಸೂಪರ್ ಬೈಕ್ ಆವೃತ್ತಿಗಳಾದ ಆರ್‌ಎಸ್ ವಿ4 ಮತ್ತು ಟ್ಯೂನೊ ವಿ4 ಬೈಕ್‌ಗಳಿಂದ ಸ್ಪೂರ್ತಿ ಪಡೆದಿರುವ ಆರ್‌ಎಸ್ 150 ಮತ್ತು ಟ್ಯುನೋ 150 ಬೈಕ್‌ಗಳು ಪ್ರೀಮಿಯಂ ಸೌಲಭ್ಯಗಳೊಂದಿಗೆ ಪರ್ಫಾಮೆನ್ಸ್ ವಿಭಾಗದಲ್ಲಿ ಸದ್ದು ಮಾಡಲಿವೆ.

ಅಂತರ್‌ರಾಷ್ಟ್ರಿಯ ಮಾರುಕಟ್ಟೆಯಲ್ಲಿ ಆರ್‌ಎಸ್ 150 ಮತ್ತು ಟ್ಯುನೋ 150 ಬೈಕುಗಳು 125 ಸಿಸಿ ಎಂಜಿನ್ ಮಾದರಿಗಳಲ್ಲೂ ಕೂಡಾ ಖರೀದಿಗೆ ಲಭ್ಯವಿದ್ದು, ಇದೇ ಬೈಕ್‌ಗಳು ಇದೀಗ ಮಹತ್ವದ ಬದಲಾವಣೆಯೊಂದಿಗೆ 150 ಸಿಸಿ ಬೈಕ್ ಮಾದರಿಗಳಾಗಿ ಬಿಡುಗಡೆಗೊಳ್ಳುತ್ತಿವೆ. 150 ಸಿಸಿ ವಿಭಾಗದ ಬೈಕ್ ಮಾರಾಟದಲ್ಲಿ ಈ ಬೈಕ್‌ಗಳು ಮಹತ್ವದ ಬದಲಾವಣೆ ಕಾರಣವಾಗಲಿದ್ದು, ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಹೊಸ ಬೈಕಿನಲ್ಲಿ 40ಎಂಎಂ ಅಪ್ ಸೈಡ್ ಡೌನ್ ಫೋರ್ಕ್ಸ್ ಮತ್ತು ಹೊಂದಾಣಿಕೆ ಮಾಡಬಹುದಾದ ರಿಯರ್ ಮೊನೊ-ಶಾರ್ಕ್ ಅಳವಡಿಸಲಾಗಿದ್ದು, ಮುಂಬದಿಯ ಚಕ್ರದಲ್ಲಿ 300-ಎಂಎಂ ಡಿಸ್ಕ್ ಬ್ರೇಕ್, ಹಿಂಬದಿಯ ಚಕ್ರದಲ್ಲಿ 218-ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಹಾಗೆಯೇ ಬೈಕ್ ಸವಾರರ ಸುರಕ್ಷತೆಗಾಗಿ ಹೊಸ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್, ಆಯ್ಕೆ ರೂಪದಲ್ಲಿ ಕ್ವಿಕ್ ಶಿಫ್ಟರ್ ಸೌಲಭ್ಯ ನೀಡಿದ್ದಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, ಎಪ್ರಿಲಿಯಾ ಸಿಗ್ನೆಚರ್ ಟ್ರಿಪ್ಪಲ್ ಹೆಡ್‌ಲ್ಯಾಂಪ್ ಡಿಸೈನ್ ಮತ್ತು ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವು ಹೊಸ ಬೈಕಿಗೆ ಮೆರಗು ತಂದಿದೆ.

ಎಂಜಿನ್ ಸಾಮರ್ಥ್ಯ
ಎಪ್ರಿಲಿಯಾ ಆರ್‌ಎಸ್ 150 ಮತ್ತು ಟ್ಯೂನೊ 150 ಬೈಕ್ ಗಳು ಒಂದೇ ರೀತಿಯಾದ ಎಂಜಿನ್ ಅನ್ನು ಹೊಂದಿದ್ದು, 149-ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಮೂಲಕ 17.7-ಬಿಹೆಚ್‌ಪಿ ಮತ್ತು 14-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.
MOST READ: ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಹೊಸ ಬೈಕ್‌ಗಳು 6-ಸ್ಪೀಡ್ ಗೇರ್‌ಬಾಕ್ಸ್ ಪ್ರೇರಣೆಯೊಂದಿಗೆ ಯಮಹಾ ಆರ್15, ಜಿಕ್ಸರ್ ಎಸ್ಎಫ್ 155 ಮತ್ತು ಕೆಟಿಎಂ ಆರ್‌ಸಿ 200 ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ಹೊಸ ಬೈಕ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.50 ಲಕ್ಷದಿಂದ ರೂ.1.60 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.