ಪರ್ಫಾಮೆನ್ಸ್ ಪ್ರಿಯರಿಗಾಗಿ ಎಪ್ರಿಲಿಯಾ ಸ್ಟ್ರೋಮ್ 125 ಬಿಡುಗಡೆ

ಎಪ್ರಿಲಿಯಾ ಸಂಸ್ಥೆಯು ತನ್ನ ಬಹುನೀರಿಕ್ಷಿತ 125ಸಿಸಿ ಸಾಮರ್ಥ್ಯದ ಸ್ಟ್ರೋಮ್ 125 ಆಟೋಮ್ಯಾಟಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಸ್ಕೂಟರ್ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ಸುಳಿವು ನೀಡಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಎಪ್ರಿಲಿಯಾ ಸ್ಟ್ರೋಮ್ 125 ಬಿಡುಗಡೆ

ಎಪ್ರಿಲಿಯಾ ಸಂಸ್ಥೆಯು ಸದ್ಯ 125ಸಿಸಿ ವಿಭಾಗದಲ್ಲಿ ಎಸ್ಆರ್ 125 ಸ್ಕೂಟರ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಕಳೆದ 2018ರ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನ ಮಾಡಲಾಗಿದ್ದ ಸ್ಟ್ರೋಮ್ 125 ಸ್ಕೂಟರ್ ಅನ್ನು ಇದೀಗ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸ್ಕೂಟರ್ ರೂ. 65,000 ಬೆಲೆ ಪಡೆದುಕೊಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ 125ಸಿಸಿ ಸ್ಕೂಟರ್ ಮಾದರಿಗಳಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಎಪ್ರಿಲಿಯಾ ಸ್ಟ್ರೋಮ್ 125 ಬಿಡುಗಡೆ

ಸ್ಟ್ರೋಮ್ 125 ಸ್ಕೂಟರ್‌ ಮಾದರಿಯು ಬಹುತೇಕ ಎಸ್ಆರ್ 125 ಮಾದರಿಯಲ್ಲೇ ಅಭಿವೃದ್ಧಿಗೊಂಡಿದ್ದು, ಬೆಲೆ ತಗ್ಗಿಸುವ ಉದ್ದೇಶದಿಂದ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಕಡಿತಗೊಳಿಸಿದ್ದರೂ ಸಹ ಉತ್ತಮ ಆಕರ್ಷಣೆ ಪಡೆದುಕೊಂಡಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಎಪ್ರಿಲಿಯಾ ಸ್ಟ್ರೋಮ್ 125 ಬಿಡುಗಡೆ

ಹೊಸ ಸ್ಕೂಟರ್‌ನಲ್ಲಿ 12-ಇಂಚಿನ ಚಕ್ರಗಳನ್ನು ಬಳಸಲಾಗಿದ್ದು, ಸ್ಪೋರ್ಟಿ ಮಾದರಿಯ ಆಫ್-ರೋಡ್ ಟೈರ್‌ಗಳು ಹೊಸ ಸ್ಕೂಟರ್ ಗಮನಸೆಳೆಯುತ್ತವೆ. ಹಾಗೆಯೇ ಆಟೋ ಮೇಳದಲ್ಲಿ ಪ್ರದರ್ಶನ ಮಾಡಲಾಗಿದ್ದ ಆವೃತ್ತಿಯಲ್ಲಿ ಬಹುತೇಕ ಸೌಲಭ್ಯಗಳು ಮಾರಾಟ ಆವೃತ್ತಿಯಲ್ಲೂ ಬಳಕೆ ಮಾಡಲಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಎಪ್ರಿಲಿಯಾ ಸ್ಟ್ರೋಮ್ 125 ಬಿಡುಗಡೆ

ಎಂಜಿನ್ ಸಾಮರ್ಥ್ಯ

ಸ್ಟ್ರೋಮ್ 125 ಸ್ಕೂಟರ್ ಮಾದರಿಯ 124.9 ಸಿಸಿ ಏರ್ ಕೂಲ್ಡ್, ತ್ರಿ ವೆಲ್ವೆ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9.6-ಬಿಎಚ್‌ಪಿ ಮತ್ತು 9.9-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ 125ಸಿಸಿ ಬೈಕ್‌ಗಳಲ್ಲೇ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಮಾದರಿಯಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಎಪ್ರಿಲಿಯಾ ಸ್ಟ್ರೋಮ್ 125 ಬಿಡುಗಡೆ

ಲಭ್ಯವಿರುವ ಬಣ್ಣಗಳು

ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಟ್ರೋಮ್ 125 ಸ್ಕೂಟರ್‌ ಮಾದರಿಯು ರೆಡ್, ಯೆಲ್ಲೊ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಆಕರ್ಷಕ ಗ್ರಾಫಿರ್ಕ್ಸ್ ಡಿಸೈನ್‌ಗಳು ಸ್ಕೂಟರ್ ಬಲಿಷ್ಠತೆ ಮೆರಗು ತಂದಿದೆ ಎನ್ನಬಹುದು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಎಪ್ರಿಲಿಯಾ ಸ್ಟ್ರೋಮ್ 125 ಬಿಡುಗಡೆ

ಇನ್ನು ಸೀಟ್ ಅಂಡರ್ ಸ್ಟೋರೇಜ್ ಕೂಡಾ ಎಸ್ಆರ್ 125 ಮಾದರಿಯಲ್ಲಿದ್ದು, 2019ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಹೊಸ ಬ್ರೇಕಿಂಗ್ ನಿಯಮಗಳಿಗೆ ಅನುಗುಣವಾಗಿ ಸ್ಟ್ರೋಮ್ 125 ಸ್ಕೂಟರ್‌ನಲ್ಲಿ ಮುಂಭಾಗದ ಚಕ್ರವು ಸಿಬಿಎಸ್(ಕಾಂಬಿ ಬ್ರೇಕಿಂಗ್ ಸಿಸ್ಟಂ) ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಪಡೆದಿದೆ.

MOST READ: ಆಕರ್ಷಕ ಬೆಲೆಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತು ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಪರ್ಫಾಮೆನ್ಸ್ ಪ್ರಿಯರಿಗಾಗಿ ಎಪ್ರಿಲಿಯಾ ಸ್ಟ್ರೋಮ್ 125 ಬಿಡುಗಡೆ

ಈ ಮೂಲಕ ಹೊಸ ಸ್ಟ್ರೋಮ್ 125 ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಟಿವಿಎಸ್ ಎನ್‌ಟಾರ್ಕ್ 125, ಸುಜುಕಿ ಆಕ್ಸೆಸ್ 125, ಮ್ಯಾಸ್ಟ್ರೋ ಎಡ್ಜ್ 125 ಮತ್ತು ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳಿಗೆ ತ್ರೀವ ಪೈಪೋಟಿ ನೀಡುವ ನೀರಿಕ್ಷೆಯಿದ್ದು, ಪ್ರೀಮಿಯಂ ಸೌಲಭ್ಯಗಳಿಂದಾಗಿ ಗ್ರಾಹಕರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.

Most Read Articles

Kannada
English summary
Aprilia Storm 125 Launched — Priced At Rs 65000 Ex-Showroom. Read in Kannada.
Story first published: Thursday, May 30, 2019, 14:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X