Just In
Don't Miss!
- News
ನನ್ನನ್ನೂ ಅಲ್ಲೇ ಸಾಯಿಸಿ: ಅತ್ಯಾಚಾರ ಆರೋಪಿಯ ಪತ್ನಿ
- Finance
ಭಾರತದಲ್ಲಿ ಸತತ 3ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ
- Sports
ಭಾರತ vs ವೆಸ್ಟ್ ಇಂಡೀಸ್ ಟಿ20: ಟಾಸ್ ಗೆದ್ದ ಭಾರತಕ್ಕೆ ಮೊದಲ ಯಶಸ್ಸು
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಇಂದು ಪ್ರಕಟ
- Technology
ಡಿಲೀಟ್ ಆಗಿರುವ ವಾಟ್ಸ್ ಆಪ್ ಮೆಸೇಜ್ ನ್ನು ರಿಕವರ್ ಮಾಡುವುದು ಹೇಗೆ?
- Movies
Alidu Ulidavaru review: ಥ್ರಿಲ್ಲಿಂಗ್ ಜೊತೆಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಸಿನಿಮಾ
- Lifestyle
ಯಾವ ಸೆಲೆಬ್ರೆಟಿಯೂ ಈ 5 ಬ್ಯೂಟಿ ಸೀಕ್ರೆಟ್ ನಿಮಗೆ ಹೇಳುವುದೇ ಇಲ್ಲ!
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
2020ರ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಸಿಎಫ್‌ಮೊಟೊ 250 ಎಸ್‌ಆರ್
ಎಎಂಡಬ್ಲ್ಯು ಸಿಎಫ್ ಮೊಟೊ 300 ಎನ್‌ಕೆ, 650 ಜಿಟಿ, 650 ಎಂಟಿ ಮತ್ತು 650 ಎನ್‌ಕೆ ಎಂಬ ನಾಲ್ಕು ಬೈಕುಗಳನ್ನು ಇತ್ತೀಚಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಆದರೆ ಇತ್ತೀಚಿನ ಟೈಮ್ಸ್ ಡ್ರೆವ್ ವರದಿಯ ಪ್ರಕಾರ ಕಂಪನಿಯು 250 ಎಸ್‍ಆರ್ ಬೈಕ್ ಅನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದೆ, ಇದು ಲೇಟೆಸ್ಟ್ ಎಡಿಷನ್ ಪೋರ್ಟ್‍ಫೋಲಿಯೊ ಸಾಲಿಗೆ ಸೇರಲಿದೆ.

ಸಿಎಫ್‌ಮೊಟೊ 250 ಎಸ್‌ಆರ್ 2020 ರ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ಇದು ಸಂಪೂರ್ಣ ಫೇರ್ಡ್ ಕ್ವಾರ್ಟರ್-ಲೀಟರ್ ಬೈಕ್ ಆಗಿರುತ್ತದೆ. ಈ ಇತ್ತೀಚಿನ ಸೇರ್ಪಡೆಗೊಂಡ ನೇಕ್‍ಡ್ ಸಿಬ್ಲಿಂಗ್ ಸಿಎಫ್‌ಮೊಟೊ 250 ಎನ್‌ಕೆ ಅನ್ನು ಆಧರಿಸಿರಬಹುದು. ಸಿಎಫ್‌ಮೊಟೊ 250 ಎನ್‌ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ನೇಕೆಡ್ ಬೈಕ್‍ಗಳು ಭಾರತದಲ್ಲಿ ಕಡೆಗಣನೆಯಾಗುತ್ತಿದೆ ಎಂಬ ವದಂತಿಗಳಿವೆ, ಇದರ ನಡುವೆ ಕಂಪನಿಯು 300 ಎನ್‍ಕೆ ಅನ್ನು ಪ್ರಾರಂಭಿಸಿದೆ. ಆದರೆ, ಕ್ವಾರ್ಟರ್-ಲೀಟರ್ ವಿಭಾಗವು ನಮ್ಮ ದೇಶದಾದ್ಯಂತ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿರುವುದರಿಂದ, ಅದಕ್ಕಾಗಿಯೇ ಸಿಎಫ್‌ಮೊಟೊ 250 ಎಸ್‌ಆರ್ ಅನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ.

ಕಂಪನಿಯು ಈ ವರ್ಷದ ಆರಂಭದಲ್ಲಿ 250 ಎಸ್‌ಆರ್ ಅನ್ನು ಅನಾವರಣಗೊಳಿಸಿತು. ಫೋಟೋಗಳಲ್ಲಿ, ಬೈಕ್‍ಗಳು ಅದ್ದೋರಿಯಾಗಿ ಕಾಣುತ್ತದೆ. ಬೈಕ್‍ನ ಮುಂಭಾಗದಲ್ಲಿ, 250 ಎಸ್‌ಆರ್ ಒಂದೇ ಎಲ್‌ಇಡಿ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಗಾಳಿಯ ಒಳಹರಿವು ಮತ್ತು ಸ್ಪೋರ್ಟಿ ಲುಕ್‍ನಲ್ಲಿರುವ ಇಂಧನ ಟ್ಯಾಂಕ್‌ನಿಂದ ಸುತ್ತುವರೆದಿದೆ. ಬೈಕ್‍ನ ಸವಾರನಿಗೆ ಕಾಂಫರ್ಟ್ ನೀಡಲು ಸ್ಪ್ಲಿಟ್ ಸೀಟ್ ಮತ್ತು ಕಡಿಮೆ ಸೆಟ್ ಹ್ಯಾಂಡಲ್ ಬಾರ್ಗಳನ್ನು ಸಹ ಹೊಂದಿದೆ. ಇದಲ್ಲದೆ, ಬೈಕು ಕಾಂಪ್ಯಾಕ್ಟ್ ವೀಲ್ ಬೇಸ್ ಅನ್ನು ಹೊಂದಿದ್ದು, ಅದು ತಿರುವುಗಳು ಹಾಗೂ ಮೂಲೆಗಳಲ್ಲಿ ಸರಾಗವಾಗಿ ಹೋಗಲು ಅನುವು ಮಾಡಿಕೊಡುತ್ತದೆ.

ಸಿಎಫ್‌ಮೊಟೊ 250 ಎಸ್‌ಆರ್‌ನ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಟಿಎಫ್‌ಟಿ ಬಣ್ಣದ ಡಿಸ್‍ಪ್ಲೇ ಒಳಗೊಂಡಿರುತ್ತದೆ, ಅದನ್ನು 300 ಎನ್‌ಕೆ ಯಿಂದ ಎರವಲು ಪಡೆಯಾಲಗಿದೆ. ಈ ಯುನಿಟ್ ಸವಾರನಿಗೆ ವೇಗ, ಟ್ರಿಪ್ ಮೀಟರ್, ಗೇರ್ ಪೊಸಿಷನ್-ಇಂಡಿಕೇಟರ್, ಟ್ಯಾಕೋಮೀಟರ್, ಫ್ಯೋಲ್ ಗೇಜ್, ಸಮಯ ಇತ್ಯಾದಿಗಳ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀಡುತ್ತದೆ.

ವಿಶೇಷ ವೆಂದರೆ ಈ ಬೈಕ್ ಎರಡು ರೈಡಿಂಗ್ ಮೂಡ್‍ಗಳನ್ನು ಹೊಂದಿದ್ದಿ, ಅವುಗಳು ಸ್ಪೋರ್ಟ್ ಮತ್ತು ರೈನ್. ಈ ಯಾವುದೇ ಮೂಡ್‍ಗಳನ್ನು ಆಯ್ಕೆ ಮಾಡುವ ಮೂಲಕ 250 ಎಸ್‌ಆರ್‌ನ ಥ್ರೊಟಲ್ ಪ್ರತಿಕ್ರಿಯೆ ಬದಲಾಗುತ್ತದೆ ಮತ್ತು ಇನ್ಸ್ಟ್ರುಮೆಂಟ್ ಕನ್ಸೋಲ್‌ನ ಗ್ರಾಪೀಕ್ಸ್ ವಿನ್ಯಾಸವೂ ಬದಲಾಗುತ್ತದೆ.

ಎಂಜಿನ್ ಸಾಮರ್ಥ್ಯ
ಸಿಎಫ್‌ಮೊಟೊ 250 ಎಸ್‌ಆರ್ 250 ಎನ್‌ಕೆ ಯಲ್ಲಿ ಕಂಡುಬರುವ ಅದೇ ಎಂಜಿನ್‌ನಿಂದ ಉತ್ಪಾದನ ಗುಣ ಹೊಂದಿದೆ . ಈ ಯೂನಿಟ್ 249.2 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಆಗಿರುತ್ತದೆ (ಇಎಫ್‌ಐ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ), ಇದು 26 ಬಿಹೆಚ್‌ಪಿ ಶಕ್ತಿಯನ್ನು ಮತ್ತು 22 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.

ಬೈಕ್‍ನಲ್ಲಿ ಕೆಲವು ಉನ್ನತ-ಮಟ್ಟದ ತಂತ್ರಜಾನ ಹೊಂದಿರಬಹುದೆಂದು ನಿರೀಕ್ಷಿಸಲಾಗಿದೆ - ಉದಾಹರಣೆಗೆ ಅಪ್‍ಸೈಡ್ ಡೌನ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್. ಎರಡೂ ಕಡೆಯಲ್ಲೂ ಡಿಸ್ಕ್ ಬ್ರೇಕ್ ಮೂಲಕ ಬ್ರೇಕಿಂಗ್ ಸಿಸ್ಟೇಮ್ ಬಲಿಷ್ಠವಾಗಿದೆ. ಬೈಕ್ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸಹ ಹೊಂದಿದೆ.

ಒಮ್ಮೆ ಬಿಡುಗಡೆಯಾದ ನಂತರ, ಸಿಎಫ್‌ಮೊಟೊ 250 ಎಸ್‌ಆರ್ 1.75 ರಿಂದ 2 ಲಕ್ಷ ರೂ.ಗಳ ನಡುವೆ ಬೆಲೆ ನಿಗದಿಪಡಿಸುವ ನಿರೀಕ್ಷೆಯಿದೆ ಮತ್ತು ಸುಜುಕಿ ಜಿಕ್ಸ್‌ಸರ್ ಎಸ್‌ಎಫ್ 250, ಹೋಂಡಾ ಸಿಬಿಆರ್ 250 ಆರ್, ಮತ್ತು ಕೆಟಿಎಂ ಆರ್‌ಸಿ 200ಗೆ ಫೈಪೋಟಿ ನೀಡುತ್ತದೆ.

ಕ್ವಾರ್ಟರ್-ಲೀಟರ್ ವಿಭಾಗವು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿರುವುದರಿಂದ, ಚೀನಾದ ಬೈಕು ತಯಾರಕರು 250 ಎಸ್‌ಆರ್ ಅನ್ನು ತಮ್ಮ ಪೋರ್ಟ್ಫೋಲಿಯೊಗೆ ಸೇರಿಸಲು ಇದು ಅತ್ಯುತ್ತಮ ಸಮಯವಾಗಿದೆ, ಇದು ಪ್ರಾರಂಭಿಸಿದಾಗ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿತು.