Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!
ಜಗತ್ತಿನಾದ್ಯಂತ ಅತಿ ಹೆಚ್ಚು ಸುರಕ್ಷತೆಯುಳ್ಳ ಹೊಸ ವಾಹನಗಳ ಅಭಿವೃದ್ಧಿಗಾಗಿ ತರೇವಾರಿ ಸಂಶೋಧನೆಗಳು ನಡೆಯುತ್ತಿದ್ದು, ವಾಹನ ಸವಾರರಿಗೆ ಗರಿಷ್ಠ ಭದ್ರತೆ ಒದಗಿಸುವುದೇ ಇದರ ಮೂಲ ಉದ್ದೇಶವಾಗಿದೆ.

ಈ ನಿಟ್ಟಿನಲ್ಲಿ ವಾಹನಗಳ ಸುರಕ್ಷಾ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಯೊಂದು ಇದೀಗ ಹೊಸ ಮಾದರಿಯ ಬೈಕ್ ಮಾದರಿಯೊಂದು ಸಿದ್ದಪಡಿಸಿದ್ದು, ಈ ಬೈಕ್ ಅನ್ನು ನಿಮಗೆ ಬೇಕಾದ ಹಾಗೆ ರೈಡಿಂಗ್ ಮಾಡಬಹುದಲ್ಲದೇ ಆಗಬಹುದಾದ ಅಪಘಾತಗಳನ್ನು ತಪ್ಪಿಸುವ ವಿಶೇಷ ಗುಣವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ. ಕೆನಡಾದ ವ್ಯಾನ್‍ಕೋರ್‍ನಲ್ಲಿರುವ ಡೆಮೊನ್ ಮೋಟಾರ್‍ಸೈಕಲ್ ಟೆಕ್ನಾಲಜಿ ಕಂಪನಿಯು, ಡೆಮೊನ್ ಎಕ್ಸ್ ಎಂಬ ಹೆಸರಿನ ಮೂಲ ಮಾದರಿಯ ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

ಈ ಬೈಕಿನಲ್ಲಿ ಅಳವಡಿಸಲಾಗಿರುವ ಹೊಸ ಸುಧಾರಿತ ತಂತ್ರಜ್ಞಾನವನ್ನು ಈ ಮೊದಲು ಪ್ರಪಂಚದ ಯಾವುದೇ ಬೈಕುಗಳಲ್ಲಿ ಅಳವಡಿಸಿರಲಿಲ್ಲ. ವೇರಿಯಬಲ್ ರೈಡಿಂಗ್ ಪೊಸಿಷನ್ ಹಾಗೂ ಟ್ರಾಫಿಕ್ ಟ್ರಾಕಿಂಗ್ ಕೊಲ್ಯುಷನ್ ವಾರ್ನಿಂಗ್ ಸಿಸ್ಟಂ ಎಂಬ ಎರಡು ಹೊಸ ತಂತ್ರಜ್ಞಾನಗಳನ್ನು ಅಳವಡಿಸುತ್ತಿದೆ.

ಇವುಗಳಿಂದಾಗಿ ಬೈಕ್ ಸವಾರರು ರಸ್ತೆಗಳಲ್ಲಿ ಬೈಕ್ ಚಲಾಯಿಸುವಾಗ ಹೆಚ್ಚಿನ ಸುರಕ್ಷತೆಯನ್ನು ಪಡೆಯಲಿದ್ದಾರೆ. ಈ ಯೋಜನೆಯ ಜೊತೆಗೆ ಡೆಮೊನ್ ಕಂಪನಿಯು ಎಲೆಕ್ಟ್ರಿಕ್ ಬೈಕುಗಳನ್ನು ಸಹ ಅಭಿವೃದ್ಧಿಪಡಿಸಲಿದೆ. ಕಂಪನಿಯು ಈ ಯೋಜನೆಗಳಿಗಾಗಿ 2.5 ಮಿಲಿಯನ್ ಕೆನಡಿಯನ್ ಡಾಲರ್‍ಗಳನ್ನು ಮೀಸಲಿರಿಸಿದೆ.

ಡೆಮೊನ್ ಕಂಪನಿಯು ಅಭಿವೃದ್ಧಿ ಪಡಿಸಿರುವ ಈ ತಂತ್ರಜ್ಞಾನವನ್ನು ಫ್ಯಾಕ್ಟರಿಗಳಲ್ಲೂ ಸಹ ಬಳಸಬಹುದು. ಈ ತಂತ್ರಜ್ಞಾನವನ್ನು ವಿಶ್ವದಲ್ಲಿರುವ ಬೇರೆ ಬೇರೆ ಬೈಕ್ ತಯಾರಕ ಕಂಪನಿಗಳಿಗೂ ಸಹ ಪೂರೈಸಲಿದೆ. ವೇರಿಯಬಲ್ ರೈಡಿಂಗ್ ಪೊಸಿಷನ್‍ನಿಂದಾಗಿ ಬೈಕ್ ಸವಾರರು ತಮ್ಮ ರೈಡಿಂಗ್ ಭಂಗಿಗಳನ್ನು ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಿಕೊಳ್ಳಬಹುದಾಗಿದೆ. ಸವಾರನು ಸೀಟುಗಳನ್ನು, ಫುಟ್‍ಪೆಗ್‍ಗಳನ್ನು, ಹ್ಯಾಂಡಲ್‍ಬಾರ್‍ಗಳ ಮೇಲಿರುವ ಕ್ಲಿಪ್‍ಗಳನ್ನು ಮೇಲೆ ಕೆಳಗೆ, ಮಾಡಿಕೊಳ್ಳಬಹುದು.

ಹೈವೇಗಳಲ್ಲಿ ಚಲಿಸುವಾಗ ಸವಾರನು ಹ್ಯಾಂಡಲ್‍ಬಾರ್‍ಗಳನ್ನು ತನ್ನತ್ತ ಸೆಳೆಯಬಹುದು ಅಥವಾ ಫುಟ್ ಪೆಗ್‍ಗಳನ್ನು ಕೆಳಗಿಳಿಸಬಹುದು. ಇದರಿಂದಾಗಿ ಆರಾಮದಾಯಕ ರೈಡಿಂಗ್ ಭಂಗಿಗಳನ್ನು ಪಡೆಯಬಹುದು. ಸವಾರನು ತನ್ನ ಅನುಕೂಲಕ್ಕೆ ತಕ್ಕಂತೆ ಫುಟ್‍ಪೆಗ್‍ಗಳನ್ನು ಹಾಗೂ ಸೀಟುಗಳನ್ನು ಎತ್ತರಿಸಬಹುದು.
MOST READ: ಬಿಎಸ್6 ಎಂಜಿನ್‍ನೊಂದಿಗೆ ಬರಲಿವೆ ಪಿಯಾಜಿಯೊ ಸ್ಕೂಟರ್‍ಗಳು

ಇದರಿಂದಾಗಿ ಬೆಟ್ಟ ಗುಡ್ಡಗಳಲ್ಲಿ ಚಲಿಸುವಾಗ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಪಡೆಯಬಹುದು. ಇನ್ನು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಡೆಮೊನ್ ಕಂಪನಿಯು, ಅಡ್ವಾನ್ಸ್ಡ್ ವಾರ್ನಿಂಗ್ ಸಿಸ್ಟಂ ಫಾರ್ ಮೋಟಾರ್‍ಸೈಕಲ್ಸ್ (ಎಡಬ್ಲ್ಯುಎಸ್‍ಎಂ) ಎಂಬ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಈ ಸುರಕ್ಷಾ ವ್ಯವಸ್ಥೆಯಲ್ಲಿ ರಾಡಾರ್, ಕ್ಯಾಮರಾ, ಸೆನ್ಸಾರ್ ಹಾಗೂ ನ್ಯೂಟ್ರಲ್ ನೆಟ್ ಕಂಪ್ಯೂಟರ್ ಆನ್ ಬೋರ್ಡ್ ಹೊಂದಿದ್ದು, ಇವು ಬೈಕ್ ಚಲಿಸುವಾಗ ಸುತ್ತಲಿರುವ 64 ತರಹದ ವಸ್ತುಗಳನ್ನು ಟ್ರಾಕ್ ಮಾಡುತ್ತವೆ.
MOST READ: ನಾಳೆ ಅನಾವರಣಗೊಳ್ಳಲಿದೆ ರಿವೋಲ್ಟ್ ಇ-ಬೈಕ್

ಬೈಕ್ ಚಲಾಯಿಸುವಾಗ ಯಾವುದೇ ಅಪಾಯ ಕಂಡು ಬಂದಲ್ಲಿ, ಬೈಕಿನ ಕಾಕ್‍ಪಿಟ್‍ನಲ್ಲಿರುವ ಅಳವಡಿಸಲಾಗಿರುವ ಎಲ್‍ಇಡಿ ಸ್ಟ್ರಿಪ್‍ಗಳು ತಕ್ಷಣವೇ ಚಾಲಕನಿಗೆ ಮುನ್ಸೂಚನೆ ನೀಡುತ್ತವೆ. ಇದರಿಂದಾಗಿ ಸವಾರನಿಗೆ ಬೈಕಿಗೆ ಎದುರಾಗ ಬಹುದಾದ ಅಪಾಯದ ಬಗ್ಗೆ ಅರಿವು ಮೂಡಲಿದೆ.

ಹ್ಯಾಂಡಲ್‍ಬಾರ್ ಗ್ರಿಪ್‍ಗಳು ಹಾಗೂ ಸೀಟುಗಳಲ್ಲಿರುವ ವೈಬ್ರೇಷನ್ ಯೂನಿಟ್‍ಗಳೂ ಸಹ ಬೈಕ್ ಸವಾರನಿಗೆ ಮುನ್ಸೂಚನೆ ನೀಡುತ್ತವೆ. ಇದರಲ್ಲಿರುವ ಸುರಕ್ಷತಾ ಸಿಸ್ಟಂಗಳನ್ನು 5ಜಿ ಕನೆಕ್ಷನ್‍ಗಳ ಸಹಾಯದಿಂದ ಡೆಮೊನ್‍ಗಳ ಆನ್‍ಬೋರ್ಡ್‍ಗೆ ಜೋಡಿಸಲಾಗಿದೆ.
MOST READ: ಆಕ್ಟಿವಾದೊಳಗೆ ಸೇರಿದ ಹಾವು, ಮುಂದೇನಾಯ್ತು ನೋಡಿ..!

ಡೆಮೊನ್ ಕಂಪನಿಯು ಈಗಾಗಲೇ ಮೂಲ ಮಾದರಿಯನ್ನು ಪರೀಕ್ಷಿಸಿದೆ. ಎಡಬ್ಲ್ಯುಎಸ್‍ಎಂ ಸಿಸ್ಟಂ ಅನ್ನು ಪಶ್ಚಿಮ ವ್ಯಾಕೋವರ್ ಪೊಲೀಸ್ ಇಲಾಖೆಗೂ ಸಹ ಪೂರೈಸಿದೆ.