Just In
- 17 hrs ago
ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಭರ್ಜರಿ ಸಿದ್ದತೆ- 100 ಹೊಸ ಮಾರಾಟ ಮಳಿಗೆಗಳನ್ನು ತೆರೆಯಲಿದೆ ಟಾಟಾ
- 1 day ago
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- 1 day ago
ಗ್ರಾಹಕರ ಕೈಸೇರಲು ಸಿದ್ದವಾದ ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0
- 1 day ago
ಆಟೋ ಮಾರುಕಟ್ಟೆ ಕುಸಿತದ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ
Don't Miss!
- Sports
ಏಕದಿನ ಸರಣಿ; ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದ ವಿಂಡೀಸ್
- News
ಪೌರತ್ವ ಕಾಯ್ದೆ ಬಗ್ಗೆ ಮಾತಾಡಲ್ಲ, ಸಿದ್ದಾಂತವೇ ಬೇರೆ, ಸರ್ಕಾರವೇ ಬೇರೆ
- Finance
ಶಬರಿಮಲೆ ಅಯ್ಯಪ್ಪ ದೇವಳದಲ್ಲಿ 28 ದಿನದಲ್ಲಿ 104 ಕೋಟಿ ರು. ಸಂಗ್ರಹ
- Movies
ವಂಚನೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ 'ಲವ್ ಗುರು' ನಿರ್ದೇಶಕ
- Technology
ಆನ್ಲೈನ್ ಜಾಹೀರಾತುಗಳಿಂದ ಬೇಸರವಾಗಿದ್ದೀರಾ..? ಇಲ್ಲಿದೆ ಪರಿಹಾರ..!
- Lifestyle
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಭಾರತಕ್ಕೆ ಕಾಲಿಡಲಿದೆ ಎಂಫ್ಲಕ್ಸ್ ಎಲೆಕ್ಟ್ರಿಕ್ ಸ್ಪೋರ್ಟ್ ಬೈಕ್
ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ವಿಭಾಗದಲ್ಲಿ ಮೊದಲ ಬಾರಿಗೆ ಸೂಪರ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗುತ್ತಿರುವ ಎಂಫ್ಲಕ್ಸ್ ಬೈಕಿನ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಬಹುನಿರೀಕ್ಷಿತ ಎಂಫ್ಲಕ್ಸ್ ಬೈಕಿನ ಟೀಸರ್ ವೀಡಿಯೊದಲ್ಲಿ ಇರುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಂಫ್ಲಕ್ಸ್ ಬೆಂಗಳೂರು ಮೂಲದ ಕಂಪನಿಯಾಗಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ಕಂಪನಿ ಇದಾಗಿದೆ. ಇದೀಗ ಎಂಫ್ಲಕ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮೊಟ್ಟ ಮೊದಲ ಬಾರಿಗೆ ಎಂಫ್ಲಕ್ಸ್ ಸೂಪರ್ ಬೈಕ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಆದರೆ ಕಂಪನಿಯು ಅಧಿಕೃತವಾಗಿ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಬೈಕ್ ಅನ್ನು ಮೊದಲ ಬಾರಿ ಕಳೆದ ವರ್ಷ ನಡೆದ ಆಟೋ ಎಕ್ಸ್ ಪೋನಲ್ಲಿ ಪ್ರದರ್ಶಿಸಿದ್ದರು.

ಹೊಸ ಎಂಫ್ಲಕ್ಸ್ ಒನ್ ಸೂಪರ್ ಬೈಕಿನ ಸಾಮಥ್ಯವನ್ನು ಪ್ರದರ್ಶಿಸುವ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಈ ಸೂಪರ್ ಬೈಕಿನ ಸಾಮಥ್ಯದ ವೀಡಿಯೊ ಸೂಪರ್ ಬೈಕ್ ಪ್ರಿಯರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಸೂಪರ್ ಬೈಕ್ ಅಭಿಮಾನಿಗಳು ಈ ರೋಚಕ ಟೀಸರ್ ವೀಡಿಯೊ ನೋಡಿ ಫುಲ್ ಫಿದಾ ಆಗಿದ್ದಾರೆ.

ಎಂಫ್ಲಕ್ಸ್ ಬಿಡುಗಡೆ ಮಾಡಿದ ಟೀಸರ್ ವೀಡಿಯೊದಿಂದ ಪಿರೆಲ್ಲಿ ಟೈರ್ ಅನ್ನು ಜೋಡಿಸಲಾಗಿದೆ ಎಂದು ತಿಳಿಯುತ್ತದೆ. ಈ ಪಿರೆಲ್ಲಿ ಟೈರ್ 17 ಇಂಚಿನ ಡಯಬ್ಲೊ ರೊಸ್ಸು ವನ್ನು ಅಳವಡಿಸಿದ್ದಾರೆ. ಇದರ ಫ್ರಂಟ್ ಟೈರ್ 120/70-ಆರ್17 ಮತ್ತು ಹಿಂಭಾಗದ ಟೈರ್ 180/55-ಆರ್17 ಆಳತೆಯನ್ನು ಹೊಂದಿದೆ.

ಇದರೊಂದಿಗೆ ಎಂಫ್ಲಕ್ಸ್ ಸೂಪರ್ ಬೈಕ್ ವಿವಿಧ ರೀತಿಯ ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಬೈಕಿನಲ್ಲಿ 6.8 ಇಂಚಿನ ಟಿಎಫ್‍ಟಿ ಇನ್ಸ್ಟ್ರುಮೆಂಟ್ ಪ್ಯಾನೆಲ್ ನೊಂದಿಗೆ ಜಿಪಿಎಸ್ ನ್ಯಾವಿಗೇಷನ್, ಬ್ಲೂಟೂತ್, ವೈ-ಫೈ ಮತ್ತು ಮೊಬೈಲ್ ಅಪ್ಲಿಕೇಶನ್‌ನಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. ಮೊಬೈಲ್ ಆ್ಯಪ್ ಬಳಸಿ ರಿಮೋಟ್ ರೀತಿಯಲ್ಲಿ ಕೆಲವು ವೈಶಿಷ್ಟ್ಯಗಳೊಂದಿಗೆ ಜೋಡಿಸಲಾಗಿದೆ.

ಈ ಎಲೆಕ್ಟ್ರಿಕ್ ಸೂಪರ್ ಬೈಕಿನಲ್ಲಿ 60 ಕಿ.ವ್ಯಾ ಎಸಿ ಸಾಮರ್ಥ್ಯದ ಹೊಂದಿದ್ದು, ಇದು 70 ಬಿಎಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಸ್ಯಾಮ್ಸಂಗ್‍ನ 9.7ಲೀಟರ್ ವ್ಯಾಟ್ ಲಿಥೀಯಂ-ಅಯಾನ್ ಬ್ಯಾಟರಿ ಅಳವಡಿಸಿದ್ದಾರೆ. ಈ ಬ್ಯಾಟರಿ ಕೇವಲ 30 ನಿಮಿಷದಲ್ಲಿ ಶೇ.80 ರಷ್ಟು ಜಾರ್ಜ್ ಆಗುತ್ತದೆ.

ಈ ಸೂಪರ್ ಬೈಕ್ ಫುಲ್ ಶೇ.100 ರಷ್ಟು ಚಾರ್ಜ್ ಆದರೆ 200 ಕಿ.ಮೀ ಚಲಿಸಬಹುದು. ಹಾಗೇ ಬೈಕ್ ಪ್ರತಿ ಗಂಟೆಗೆ 200 ಕಿ.ಮೀ ಸ್ಪೀಡ್ ಅನ್ನು ಹೊಂದಿದೆ. ಎಂಫ್ಲಕ್ಸ್ ಬೈಕ್ ಎಂಜಿನ್ ಸಾಮರ್ಥ್ಯ ಮತ್ತು ವೈಶಿಷ್ಟ್ಯಗಳು ಹೊಂದಿದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಸಸ್ಪಂಕ್ಷನ್ ವಿಚಾರದಲ್ಲಿ ಮುಂಭಾಗದಲ್ಲಿ 43 ಎಂಎಂ ಅಗಲದ ಯುಎಸ್‍ಡಿ ಫೋರ್ಕ್ ಅನ್ನು ಹೊಂದಿದೆ. ಇದು ಮಾರುಕಟ್ಟೆಗೆ ಪ್ರವೇಶಿಸುವಾಗ ರೇಸಿಂಗ್ ಬೈಕ್‍ಗಳಲ್ಲಿ ಬಳಸುವ ಓಹ್ಲಿನ್ ಯುಎಸ್‍ಡಿ ಫೊರ್ಕ್ ಅನ್ನು ಅನ್ನು ಹೊಂದಿರಲಿದೆ. ಹಿಭಾಗದಲ್ಲಿ ಗ್ಯಾಸ್ ಜಾರ್ಜ್ಡ್ ಮೊನೊಶಾಕ್ ಹೊಂದಿದೆ. ಇದನ್ನು ಓಹ್ಲಿನ್ 46 ಎಂಎಂ ಆಗಿ ಮೊನೊಟ್ಯೂಬ್ ಗ್ಯಾಸ್ ಶಾಕ್‍ಗೆ ಅಪ್‍ಗ್ರೇಡ್ ಮಾಡಬಹುದು.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಸುರಕ್ಷತಾ ವಿಷಯಕ್ಕೆ ಬಂದರೆ ಮುಂಭಾಗದಲ್ಲಿ ಬ್ರೆಂಬೊ 300 ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್ ಅನ್ನು ಮುಂದಿನ ಟೈರ್‍ಗೆ ಅಳವಡಿಸಲಾಗಿದೆ. ಹಿಂಭಾಗದಲ್ಲಿ ಟೈರ್‍ನಲ್ಲಿ 200 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಡ್ಯುಯಲ್ ಎಬಿಎಸ್ ಬ್ರೇಕಿಂಗ್ ಸಹ ಹೊಂದಿದೆ. ಇದು ಸವಾರನಿಗೆ ಹೆಚ್ಚಿನ ಸುರಕ್ಷತೆ ಹೊದಗಿಸುತ್ತದೆ.
MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಈ ಸೂಪರ್ ಬೈಕ್‍ನ ಟೀಸರ್‍ನ ಮೂಲಕ ಮತಷ್ಟು ನಿರೀಕ್ಷೆ ಹೆಚ್ಚಿಸಿದೆ. ಇದರ ಬೆಲೆ ಸುಮಾರು ರೂ.505 ಲಕ್ಷ ಹೊಂದಿರಬಹುದು ಎಂಬ ನಿರೀಕ್ಷೆ ಇದೆ. ಭಾರತದ ಮೊದಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುವ ಹೆಗ್ಗಳಿಕೆ ಬೆಂಗಳೂರು ಮೂಲದ ಕಂಪನಿಗೆ ಸಲ್ಲುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಧಿಕವಾಗುತ್ತಿರುವುದರಿಂದ ಹಲವರು ಎಲೆಕ್ಟ್ರಿಕ್ ಬೈಕ್ ಕಡೆ ಒಲವು ತೋರಿಸುತ್ತಿದ್ದಾರೆ. ಇದೀಗ ಎಲೆಕ್ಟ್ರಿಕ್ ವಿಭಾಗದಲ್ಲಿ ಸೂಪರ್ ಬೈಕ್ ಬರುವುದರಿಂದ ಎಲೆಕ್ಟ್ರಿಕ್ ಬೈಕ್‍ಗಳ ಆಯ್ಕೆ ಹೆಚ್ಚಿಸಿದೆ.