ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೀರೋ ಡ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್

ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹವನ್ನು ನೀಡುತ್ತಿದ್ದು, ಈಗಾಗಿ ಪ್ರತಿಷ್ಠಿತ ಕಂಪನಿಗಳು ಪೆಟ್ರೋಲ್, ಡೀಸೆಲ್ ವಾಹನಗಳ ಉತ್ಪಾದನೆಯಿಂದ ದೂರ ಸರಿದು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚು ಗಮನಹರಿಸುತ್ತಿದೆ. ದೇಶಿಯ ಮಾರುಕಟ್ಟೆಯಲ್ಲೀಗ ಒಂದರ ಮೇಲೊಂದರಂತೆ ಎಲೆಕ್ಟ್ರಿಕ್ ವಾಹನ ಬಿಡುಗಡೆಯಾಗುತ್ತಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೀರೋ ಡ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್

ಅದರಂತೆ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬ್ರ್ಯಾಂಡ್ ಹೀರೋ ಡ್ಯಾಶ್ ಎಲೆಕ್ಟ್ರಿಕ್ ಆಪ್ಟಿಮಾ ಇಆರ್ ಮತ್ತು ಎನ್‍‍ವೈಎಕ್ಸ್ ಇಆರ್ ಎಂಬ ಎರಡು ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ಎಲೆಕ್ಟ್ರಿಕ್ ಸ್ಕೂಟರ್‍‍ನ ಬೆಲೆ ರೂ.62,000 ಆಗಿದೆ. ಆಪ್ಟಿಮಾ ಇಆರ್ ಮತ್ತು ಎನ್‍ವೈಎಕ್ಸ್ ದೇಶದ ಎಲ್ಲಾ ಹೀರೋ ಎಲೆಕ್ಟ್ರಿಕ್ ಡೀಲರ್‌‍ಗಳ ಬಳಿ ಲಭ್ಯವಿವೆ.

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೀರೋ ಡ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್

ಹೀರೋ ಡ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್ 48 ವಿ 28 ಎ‍ಎಚ್ ಲೀಥಿಯಂ-ಅಯಾನ್ ಬ್ಯಾಟರಿಯನ್ನು ಹೊಂದಿದ್ದು, ಒಂದು ಬಾರಿ ಚಾರ್ಚ್ ಮಾಡಿದರೆ 60 ಕಿ.ಮೀ ಚಲಿಸಬಹುದು. ಸ್ಕೂಟರ್‍‍ನಲ್ಲಿ ಪಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಹೊಂದಿದ್ದು, ನಾಲ್ಕು ಗಂಟೆಗಳಲ್ಲಿ ಶೇ.100 ರಷ್ಟು ಚಾರ್ಜ್ ಆಗುತ್ತದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೀರೋ ಡ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರನ್ನು ಅನ್ನು ಸುಲುಭವಾಗಿ ಬಳಸಬಹುದು, ಉತ್ತಮ ಗುಣ್ಣಮಟ್ಟದ ಉತ್ಪನ್ನವಾಗಿದೆ ಮತ್ತು ಅದರ ನಿರ್ವಹಣೆಗೆ ಅಧಿಕ ಖರ್ಚು ಇಲ್ಲದೇ ಸುಲುಭವಾಗಿ ನಿಯಂತ್ರಿಸಬಹುದು. ಭಾರತೀಯ ವಾಹನ ಸವಾರರಿಗೆ ಅನುಗುಣವಾಗುವಂತೆ ತಯಾರಿಸಿದ್ದು, ಇದರಿಂದ 145 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೀರೋ ಡ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್

ಸ್ಕೂಟರ್ ವೈಶಿಷ್ಟಗಳು ಎಲ್‍ಇಡಿ ಹೆಡ್‍‍ಲ್ಯಾಂಪ್, ಎಲ್‍ಇಡಿ ಡಿ‍ಆರ್‍ಎಲ್ಎಸ್, ಟ್ಯೂಬ್‍ಲೆಸ್ ಟೈರ್, ಆಕರ್ಷಕ ಬಾಡಿ ವಿನ್ಯಾಸ, ರಿಮೋಟ್ ಬೂಟ್ ಓಪನಿಂಗ್, ಯು‍ಎಸ್‍‍ಬಿ ಚಾರ್ಜಿಂಗ್ ಪೋರ್ಟ್, ಡಿಜಿಟಲ್ ಇನ್‍‍ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೀರೋ ಡ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್

ಎಲ್ಲಾ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಹೀರೋ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಒಳಗೊಂಡ ಸ್ಕೂಟರನ್ನು ನೀಡಲು ಬಯಸಿದ್ದೇವೆ. ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ದೀರ್ಘಬಾಳಿಕೆಯಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೇಡಿಕೆಗಳನ್ನು ಈಡೇರಿಸುವಂತೆ ಗ್ರಾಹಕರಿಂದ ಸಾಕಷ್ಟು ಬೇಡಿಕೆಗಳು ಬಂದಿದ್ದವು. ಇದೀಗ ಎನ್‍ವೈಎಕ್ಸ್ ಇಆರ್ ಮತ್ತು ಆಪ್ಟಿಮಾ ಇಆರ್ ಸ್ಕೂಟರ್ ಮೂಲಕ ನಾವು ಗ್ರಾಹಕರ ಬಹುದಿನಗಳ ಬೇಡಿಕೆಯನ್ನು ಪೂರೈಸುತ್ತಿದ್ದೇವೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಗ್ರಾಹಕರು ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೀರೋ ಎಲೆಕ್ಟ್ರಿಕ್ ಇಂಡಿಯಾದ ಸಿಇಒ ಸೋಹಿಂದರ್ ಗಿಲ್ ಹೇಳಿದ್ದಾರೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೀರೋ ಡ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್

ಭಾರತದ್ಯಾಂತ ಹೀರೋ ಸಂಸ್ಥೆಯ ಎಲ್ಲಾ ಡೀಲರ್‍‍ಗಳ ಬಳಿಯು ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿರುತ್ತದೆ. ಪ್ರಸ್ತುತ ಹೀರೋ ಎಲೆಕ್ಟ್ರಿಕ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 615 ಟಚ್‍ಪಾಯಿಂಟ್‍ಗಳನ್ನು ಹೊಂದಿದ್ದು, 2020 ರ ವೇಳೆಗೆ ಇವುಗಳ ಸಂಖ್ಯೆಯನ್ನು 1000 ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಈ ಮೂಲಕ ದೇಶದ ಗ್ರಾಮೀಣ ಪ್ರದೇಶಗಳಲ್ಲಿಯೂ ಸ್ಕೂಟರ್ ಲಭ್ಯವಾಗುವಂತೆ ಮಾಡಲು ಯೋಜನೆ ರೂಪಿಸಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೀರೋ ಡ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್

ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಕಂಪನಿಯು ಇ-ಸ್ಕೂಟರ್ ಉತ್ಪಾದನೆ ಪ್ರಮಾಣವನ್ನು ವಾರ್ಷಿಕ 5 ಲಕ್ಷ ಸ್ಕೂಟರ್ ಉತ್ಪಾದನೆಗೆ ಹೆಚ್ಚಿಸುವ ನಿಟ್ಟಿನಲ್ಲಿ ಮುಂದೆ ದೊಡ್ಡ ಮಟ್ಟದ ಹೂಡಿಕೆ ಮಾಡಲು ಯೋಜನೆ ರೂಪಿಸಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೀರೋ ಡ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್

ಹೀರೋ ಎಲೆಕ್ಟ್ರಿಕ್ ಉತ್ಪನ್ನ ಶ್ರೇಣೆಯಲ್ಲಿನ 'ಇಆರ್ ಶ್ರೇಣೆ' ಆಪ್ಟಿಮಾ ಇಆರ್ ಮತ್ತು ಎನ್‍ವೈ‍ಎಕ್ಸ್ ಇಆರ್ ಸ್ಕೂಟರ್ ಇವಿ ವಿಭಾಗದ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡುತ್ತದೆ. ಹೀರೋ ಸಂಸ್ಥೆಯು ಬೆನ್ಲಿಂಗ್ ಆರಾ ಮತ್ತು ಅಥರ್ 450 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಹಂತದಲಿದ್ದು, ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೀರೋ ಡ್ಯಾಶ್ ಎಲೆಕ್ಟ್ರಿಕ್ ಸ್ಕೂಟರ್

ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಗಳು ಎಫ್ಎಎಂಇ-2 ಪ್ರಯೋಜನೆಗಳನ್ನು ಪಡೆಯಲು ಅರ್ಹತೆ ಹೊಂದಿದ್ದು, ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇ.5 ಜಿಎಸ್‍ಟಿ ದರವನ್ನು ಇಳಿಸಿದೆ. ಕಡಿಮೆ ಜಿಎಸ್‍ಟಿ ದರವನ್ನು ಹೊಂದಿರುವುದರಿಂದ ಗ್ರಾಹಕರು ಹೀರೋ ಎಲೆಕ್ಟ್ರಿಕ್ ವಾಹನಗಳನ್ನು ಕಡಿಮೆ ದರದಲ್ಲಿ ದೊರೆಯಲಿದೆ. ಭಾರತದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ತಯಾರಿಕ ಸಂಸ್ಥೆಯಾಗಿರುವ ಹೀರೋ ಎಲೆಕ್ಟ್ರಿಕ್ ದೇಶಿಯ ಮಾರುಕಟ್ಟೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಪೂರಕವಾದ ಸಂಶೋಧನೆಗೆ ಮತ್ತು ಅಭಿವೃದ್ದಿಗೆ ಹೆಚ್ಚಿನ ಬಂಡವಾಳ ಹೂಡುತ್ತಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ಹೀರೋ ಸಂಸ್ಥೆಯು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.

Most Read Articles

Kannada
English summary
Hero Dash Electric Scooter Launched In India At Rs 62,000: Details & Specs-Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X