ಸ್ಥಗಿತಗೊಂಡ ಕವಾಸಕಿ ಝಡ್250 ಉತ್ಪಾದನೆ

ಜಪಾನಿನ ಮೋಟಾರ್‌ಸೈಕಲ್ ತಯಾರಕ ಕಂಪನಿ ಕವಾಸಕಿ, ನಿಂಜಾ250 ಮತ್ತು ನಿಂಜಾ300 ನೇಕೆಡ್ ಬೈಕುಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಪರ್ಯಾಯ ಆಯ್ಕೆಯನ್ನು ನೀಡುವ ಸಲುವಾಗಿ, ದೇಶಿಯ ಮಾರುಕಟ್ಟೆಯಲ್ಲಿ ಕವಾಸಕಿ ಝಡ್250 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಈ ಬೈಕ್ ಮೂಲಕ 250ಸಿಸಿ ಸೆಗ್‍‍ಮೆಂಟಿನಲ್ಲಿ ಪ್ರಾಬಲ್ಯ ಸಾಧಿಸುವ ಉದ್ದೇಶವನ್ನು ಹೊಂದಿತ್ತು.

ಸ್ಥಗಿತಗೊಂಡ ಕವಾಸಕಿ ಝಡ್250 ಉತ್ಪಾದನೆ

ನಿಂಜಾದ ಎರಡು ಬೈಕುಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿದ್ದರೂ, ಗ್ರಾಹಕರನ್ನು ಆಕರ್ಷಿಸಲು ವಿಫಲವಾಯಿತು. ಈ ಬೈಕ್ ಎಂದಿಗೂ ಗ್ರಾಹಕರನ್ನು ತನ್ನತ್ತ ಸೆಳೆಯಲಿಲ್ಲ. ಎಸ್‍ಐ‍ಎ‍ಎಂ ಮಾರಾಟದ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಕವಾಸಕಿ 2017-18ರ ಆರ್ಥಿಕ ವರ್ಷದಲ್ಲಿ ಕೇವಲ 38 ಝಡ್250 ಬೈಕುಗಳನ್ನು ಮಾರಾಟ ಮಾಡಿ, ಕಳಪೆ ದಾಖಲೆ ಮಾಡಿತ್ತು. 2018-19ರ ಸಾಲಿನಲ್ಲಿ ಕೇವಲ 2 ಬೈಕುಗಳ ಮಾರಾಟವಾಗಿದೆ. ಇದರಿಂದಾಗಿ ಗ್ರಾಹಕರಿಗೆ ಈ ಬೈಕುಗಳ ಮೇಲೆ ಯಾವುದೇ ಆಸಕ್ತಿಯಿಲ್ಲದಿರುವುದು ಕಂಡು ಬರುತ್ತದೆ.

ಸ್ಥಗಿತಗೊಂಡ ಕವಾಸಕಿ ಝಡ್250 ಉತ್ಪಾದನೆ

2019-20ನೇ ಸಾಲಿನಲ್ಲಿ ಒಂದೇ ಒಂದು ಬೈಕ್ ಸಹ ಮಾರಾಟವಾಗಿಲ್ಲ. ಕಳಪೆ ಮಾರಾಟದ ಸುಳಿವನ್ನು ಅರಿತ ಕಂಪನಿಯು ತನ್ನ ವೆಬ್‌ಸೈಟ್‌ನಿಂದ ಕ್ವಾರ್ಟರ್ ಲೀಟರ್ ಬೈಕುಗಳ ಪಟ್ಟಿಯಿಂದ ಝಡ್ 250 ಬೈಕ್ ಅನ್ನು ತೆಗೆದುಹಾಕಿದೆ.

ಸ್ಥಗಿತಗೊಂಡ ಕವಾಸಕಿ ಝಡ್250 ಉತ್ಪಾದನೆ

ದೇಶಿಯವಾಗಿ ನಿರ್ಮಿಸಲಾದ ನಿಂಜಾ300 ಬೈಕ್ ಅನ್ನು (ರೂ. 2.98 ಲಕ್ಷ - ಎಕ್ಸ್‌ಶೋರೂಂ ದರ) ಬಿಡುಗಡೆ ಮಾಡಿದ ನಂತರ ಝಡ್250ಯ ಯಾವುದೇ ಬೈಕು ಮಾರಾಟವಾಗಲಿಲ್ಲ. ಕವಾಸಕಿ ಕಂಪನಿಯು ಝಡ್300 ಹಾಗೂ ಝಡ್400 ಸರಣಿಯ ಬೈಕುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತದೆ.

ಸ್ಥಗಿತಗೊಂಡ ಕವಾಸಕಿ ಝಡ್250 ಉತ್ಪಾದನೆ

ಕಂಪನಿಯು ಇದೇ ಸಾಮರ್ಥ್ಯವನ್ನು ಹೊಂದಿರುವ ಸಿಂಗಲ್ ಸಿಲಿಂಡರ್ ಆವೃತ್ತಿಯ ಬೈಕುಗಳನ್ನು ಎಸ್‍ಎಲ್ ಸರಣಿಯ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಕಂಪನಿಯು, ದೇಶಿಯ ಮಾರುಕಟ್ಟೆಯಲ್ಲಿ ಈ ಬೈಕುಗಳ ಪೈಕಿ ಒಂದು ಬೈಕ್ ಅಥವಾ ಎಲ್ಲಾ ಬೈಕುಗಳನ್ನು ಬಿಡುಗಡೆಗೊಳಿಸುವ ಉದ್ದೇಶವನ್ನು ಹೊಂದಿದೆ. ಆದರೆ ಇದು ಕಂಪನಿಯು ಎಷ್ಟು ಆಕ್ರಮಣಕಾರಿಯಾಗಿದೆ ಹಾಗೂ ಎಷ್ಟು ಸಂಖ್ಯೆಯ ಬೈಕುಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿದೆ ಎಂಬುದರ ಮೇಲೆ ಅವಲಂಬಿತವಾಗಿದೆ.

MOST READ: ವಾಹನ ಮಾಲೀಕರಿಂದ ಪ್ರತಿಭಟನೆ- ಮಕ್ಕಳನ್ನು ಶಾಲೆಗಳಿಗೆ ತಲುಪಿಸಿದ ಪೊಲೀಸರು

ಸ್ಥಗಿತಗೊಂಡ ಕವಾಸಕಿ ಝಡ್250 ಉತ್ಪಾದನೆ

ಕವಾಸಕಿ ಝಡ್250 ಬೈಕಿನಲ್ಲಿ 249ಸಿಸಿಯ ಪ್ಯಾರಲಲ್ ಟ್ವಿನ್ ಲಿಕ್ವಿಡ್ ಕೂಲ್ಡ್ ಡಿ‍ಒ‍‍ಹೆಚ್‍‍ಸಿ ಎಂಜಿನ್ ಅಳವಡಿಸಲಾಗಿದ್ದು, 32 ಬಿ‍‍ಹೆಚ್‍‍ಪಿ ಪವರ್ ಅನ್ನು 11,000 ಆರ್‍‍ಪಿ‍ಎಂನಲ್ಲಿ ಉತ್ಪಾದಿಸಿದರೆ, 21 ಎನ್‍ಎಂ ಟಾರ್ಕ್ ಅನ್ನು 10,000 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ.

MOST READ: ಸಾಲಕ್ಕಾಗಿ ಮೊದಲ ಬಾರಿಗೆ ಜಾಹೀರಾತು ನೀಡಿದ ಬಿ‍ಎಂ‍‍ಟಿ‍ಸಿ..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಯಾವುದೇ ಕಂಪನಿಯ ಬೈಕುಗಳು ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗದಿದ್ದರೆ ಆ ಬೈಕುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದು ಒಳಿತು. ಕವಾಸಕಿ ಕಂಪನಿಯು, ಝಡ್250 ಬೈಕಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಒಳ್ಳೆಯ ಕೆಲಸವನ್ನೆ ಮಾಡಿದೆ. 2018ರಲ್ಲಿ ಕೇವಲ 38 ಬೈಕುಗಳ ಮಾರಾಟವಾಗಿದ್ದಲೇ ಈ ಬೈಕುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕಾಗಿತ್ತು. 38 ಬೈಕುಗಳನ್ನು ಒಂದು ವರ್ಷದಲ್ಲಿ ಮಾರಾಟ ಮಾಡುವುದು ನಿಜಕ್ಕೂ ಕಳಪೆ ಸಾಧನೆಯಾಗಿದೆ. ಅದಾದ ನಂತರವೂ ಈ ಬೈಕುಗಳನ್ನು ಇನ್ನೊಂದು ವರ್ಷ ಮಾರಾಟ ಮಾಡಿದ್ದು, ಸರಿಯಾದ ಕ್ರಮವಲ್ಲ.

MOST READ: ಈ ಕಾರಿನಲ್ಲಿ ಬಿಸಿ ನೀರಿನ ಸ್ನಾನ ಮಾಡಬಹುದಂತೆ..!

ಕವಾಸಕಿ ಕಂಪನಿಯು ಯಾವುದೇ ಅಧಿಕೃತವಾದ ಹೇಳಿಕೆಯನ್ನು ನೀಡದಿದ್ದರೂ ಯಮಹಾ ಹಾಗೂ ಹೋಂಡಾ ಕಂಪನಿಗಳಂತೆ ಪ್ರಿಮೀಯಂ ಬೈಕುಗಳ ಉತ್ಪಾದನೆಗೆ ಆದ್ಯತೆ ನೀಡುವ ಸಾಧ್ಯತೆಗಳಿವೆ. ಸದ್ಯಕ್ಕೆ ಪ್ರಿಮೀಯಂ ಬೈಕುಗಳಲ್ಲಿ ಸಬ್ 500 ಸಿಸಿ ಸೆಗ್‍‍ಮೆಂಟ್ ಹೆಚ್ಚು ಸದ್ದು ಮಾಡುತ್ತಿದ್ದು, ಕೆ‍‍ಟಿ‍ಎಂ ಕಂಪನಿಯು ಈ ಸೆಗ್‍ಮೆಂಟಿನಲ್ಲಿ ಮುಂಚೂಣಿಯಲ್ಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬೈಕುಗಳ ದರವೂ ಪ್ರಮುಖ ಪಾತ್ರ ವಹಿಸಲಿದೆ.

Most Read Articles

Kannada
English summary
Kawasaki Z250 Discontinued — Officially Removed From Company Website - Read in kannada
Story first published: Friday, June 21, 2019, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X