2020ರಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಕೆಟಿಎಂ 250 ಅಡ್ವೆಂಚರ್

ಯುವಜನತೆಯ ಹಾಟ್ ಫೇವರಿಟ್ ಕೆಟಿಎಂ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಮುಂಬರುವ ಕೆಟಿಎಂ 390 ಅಡ್ವೆಂಚರ್ ಬೈಕ್‍ನಿಂದ ಪ್ರೇರಣೆ ಪಡೆದುಕೊಂಡು, ನೂತನ ಕೆಟಿಎಂ 250 ಸಿಸಿ ಅಡ್ವೆಂಚರ್ ಬೈಕ್ ಉತ್ಪಾದನೆ ಆರಂಭಿಸಿದೆ. ಇದನ್ನು ಕೆಟಿಎಂ 250 ಅಡ್ವೆಂಚರ್ ಎಂದೇ ಕರೆಯಬಹುದು.

2020ರಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಕೆಟಿಎಂ 250 ಅಡ್ವೆಂಚರ್

ಕಡಿಮೆ ಸಾಮರ್ಥ್ಯದ ಅಡ್ವೆಂಚರ್ ಟೂರರ್ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಲು ವಿಶಿಷ್ಟ ತಂತ್ರವನ್ನು ಡ್ಯೂಕ್ ರೂಪಿಸಿದ್ದಾರೆ. ಕೆಟಿಎಂ 390 ಅಡ್ವೆಂಚರ್ ಬೈಕ್ ಬೆಸ್ಟ್ ಅಡ್ವೆಂಚರ್ ಬೈಕ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ, ಈ ವರ್ಷದ ಬಹು‍ನಿರೀಕ್ಷಿತ ಬೈಕ್ ಇದಾಗಿದೆ. ಬೈಕ್ ಬಿಡುಗಡೆಯಾಗಲಿದೆ ಎಂಬ ಊಹಾಪೋಹಗಳು 2018 ರಿಂದಲೂ ಇವೆ, ಇತ್ತೀಚಿನ ವರದಿಯ ಪ್ರಕಾರ 2019ರ ಅಂತ್ಯವಾಗುವ ಮೊದಲು ಬಿಡುಗಡೆಗೊಳಿಸಲಿದೆ.

2020ರಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಕೆಟಿಎಂ 250 ಅಡ್ವೆಂಚರ್

ಕೆಟಿಎಂ ಅಭಿಮಾನಿಗಳು ಬಹುನಿರೀಕ್ಷೆಯಿಂದ ಅಡ್ವೆಂಚರ್ ಬೈಕ್ ಬಿಡುಗಡೆಯಾಗುವುದನ್ನು ಕಾಯುತ್ತಿದ್ದರು, ಇಷ್ಟು ದಿನಗಳು ಕಳೆದರೂ ಅಡ್ವೆಂಚರ್ ಬೈಕ್ ಇನ್ನೂ ಬಿಡುಗಡೆಗೊಂಡಿಲ್ಲ. ಆದರೆ ಇದೀಗ ಕೆಟಿಎಂ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಇದೆ. ಆಟೋಕಾರ್ ಜಾಲತಾಣ ವರದಿಯ ಪ್ರಕಾರ ಕೆಟಿಎಂ 250 ಸಿಸಿ ಅಡ್ವೆಂಚರ್ ಆವೃತ್ತಿಯ ಬೈಕ್ ಉತ್ಪಾದನೆ ಹಂತದಲ್ಲಿ ಇದ್ದು, ಅಸ್ಟ್ರಿಯನ್ ಬೈಕ್ ತಯಾರಕರು ಹೆಚ್ಚಿನ ಗ್ರಾಹಕರನ್ನು ಗುರಿಯಾಗಿಸಿ ಕೊಂಡು ಉತ್ಪಾದನೆ ಮಾಡುತ್ತಿದ್ದಾರೆ. ಇದರ ದರವು ಕೆಟಿಎಂ 390ಗಿಂತಲೂ ಕಡಿಮೆಯಾಗಿದೆ.

2020ರಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಕೆಟಿಎಂ 250 ಅಡ್ವೆಂಚರ್

ಕೆಟಿಎಂ ಡ್ಯೂಕ್ ಈ ಮಾದರಿಯ ತಂತ್ರವನ್ನು ಹಲವು ಬಾರಿ ಅನುಸರಿಸಿದ್ದಾರೆ. ಕೆಟಿಎಂ ಇಂಡಿಯಾ 125 ಡ್ಯೂಕ್, ಡ್ಯೂಕ್ 200 ಮತ್ತು ಡ್ಯೂಕ್ 250 ಆವೃತ್ತಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೆಟಿಎಂ ಡ್ಯೂಕ್ 790 ಬಿಡುಗಡೆಗಾಗಿ ಹಲವಾರು ಕೆ‍ಟಿಎಂ ಅಭಿಮಾನಿಗಳು ಕಾಯುತ್ತ ಇದ್ದಾರೆ.

2020ರಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಕೆಟಿಎಂ 250 ಅಡ್ವೆಂಚರ್

ಡ್ಯೂಕ್ ಯುವಕರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ, ಇದೇ ಡ್ಯೂಕ್ ಸಂಸ್ಥೆಗೆ ದೊಡ್ಡ ವರವಾಗಿದೆ. ಡ್ಯೂಕ್ 390 ಉತ್ತಮವಾಗಿ ಮಾರಾಟವಾಗುತ್ತಿದ್ದು, ಡ್ಯೂಕ್ 125ಗಿಂತಲೂ ಹೆಚ್ಚು ಮಾರಾಟವಾಗುತ್ತಿದೆ.

2020ರಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಕೆಟಿಎಂ 250 ಅಡ್ವೆಂಚರ್

ಡ್ಯೂಕ್ 250 ಬೈಕ್‍‍ನಲ್ಲಿ ಸಿಂಗಲ್ ಸಿಲಿಂಡರ್, 248.88 ಸಿಸಿ ಲಿಕ್ವಿಡ್ ಕೂಲ್ಡ್,30 ಪವರ್ ಮತ್ತು 24 ಎನ್‍ಎಂ ಟಾರ್ಕ್ ಉತ್ಪಾದಿಸುವ ಗುಣ ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

2020ರಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಕೆಟಿಎಂ 250 ಅಡ್ವೆಂಚರ್

ಡ್ಯೂಕ್ 390 ಹೋಲಿಸಿದರೆ ಡ್ಯೂಕ್ 250 ಬೈಕಿನಲ್ಲಿ ಕಡಿಮೆ ಫೀಚರ್ಸ್‍ ಹೊಂದಿದ್ದು, ಎಲ್ಇಡಿ ಹೆಡ್‍ಲ್ಯಾಂಪ್‍ ಅನ್ನು ಬದಲಾಯಿಸುವ ಸಾಧ್ಯತೆಗಳವೆ.ಮೋಟಾರ್ ಸ್ಲಿಪ್ ರೆಗ್ಯುಲೇಷನ್, ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಎ‍‍ಬಿ‍ಎಸ್ ಹಾಗೂ ಅಲಾಯ್ ವ್ಹೀಲ್ ಕಂಟ್ರೋಲ್‍‍ಗಳನ್ನು ಸಹ ನೀಡಬಹುದು.

2020ರಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಕೆಟಿಎಂ 250 ಅಡ್ವೆಂಚರ್

ಕೆಟಿಎಂ ಅಭಿಮಾನಿಗಳಿಗೆ ಡ್ಯೂಕ್ 250 ಅಡ್ವೆಂಚರ್ ಬ್ಯಾಕ್ ಉತ್ಪಾದನೆ ಹಂತದಲ್ಲಿರುವುದು ಸಂತಸದ ಸುದ್ದಿ.ಕೆಟಿಎಂ ಸಂಸ್ಥೆಯು ಭಾರತದಲ್ಲಿ ತನ್ನ ಜನಪ್ರಿಯ ಸೂಪರ್ ಬೈಕ್ ಆವೃತ್ತಿಗಳನ್ನು ಪರಿಚಯಿಸುತ್ತಿದೆ. ಡ್ಯೂಕ್ 250 ರಾಯಲ್ ಎನ್‍ಫೀಲ್ಡ್ ಹಿಮಾಲಯ, ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
Read more on ಕೆಟಿಎಂ ktm
English summary
KTM 250 Adventure Being Developed: India Launch In 2020 - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X