ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡ ಕೆಟಿ‍ಎಂ 790 ಬೈಕ್

ಕೆಟಿಎಂ 790 ಅಡ್ವೆಂಚರ್ ಬೈಕ್ ಅನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಐಡಿಆರ್ 35,00,00,000 ಅಥವಾ 35 ಕೋಟಿ ಇಂಡೋನೇಷ್ಯಾ ರುಪಯ್ಯ, ಭಾರತೀಯ ಮೌಲ್ಯದ ಪ್ರಕಾರ ರೂ.17.15 ಲಕ್ಷಗಳಂತೆ ಬಿಡುಗಡೆಗೊಳಿಸಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಗೈಕಿಂಡೋ ಇಂಡೋನೇಷ್ಯಾ ಅಂತರ್‍‍ರಾಷ್ಟ್ರೀಯ ಆಟೋ ಪ್ರದರ್ಶನದಲ್ಲಿ ಈ ಬೈಕ್ ಅನ್ನು ಬಿಡುಗಡೆಗೊಳಿಸಲಾಯಿತು.

ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡ ಕೆಟಿ‍ಎಂ 790 ಬೈಕ್

ಕೆಟಿಎಂ, ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿರುವ ಬೈಕಿನಲ್ಲಿ ಯುರೋಪಿಯನ್ ಬೈಕಿನಲ್ಲಿರುವ ಸ್ಪೆಸಿಫಿಕೇಷನ್‍‍ಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಕೆಟಿಎಂ 790 ಅಡ್ವೆಂಚರ್ ಬೈಕ್ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಬಹುನಿರೀಕ್ಷಿತ ಬೈಕ್‍‍ಗಳಲ್ಲಿ ಒಂದಾಗಿದೆ. ಕೆಟಿಎಂ ಕಂಪನಿಯು ವಿವಿಧ ಸೆಗ್‍‍ಮೆಂಟ್‍‍ಗಳಲ್ಲಿ ಅದ್ಭುತವೆನಿಸುವಂತಹ ಬೈಕುಗಳನ್ನು ತಯಾರಿಸುತ್ತಾ ಬಂದಿದೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡ ಕೆಟಿ‍ಎಂ 790 ಬೈಕ್

ಸೂಪರ್‌ಸ್ಪೋರ್ಟ್ ಸೆಗ್‍‍ಮೆಂಟಿನಲ್ಲಿ ಆರ್‌ಸಿ 8, ಆರ್‌ಸಿ 390, ಆರ್‌ಸಿ 200 ಹಾಗೂ ಆರ್‌ಸಿ 125 ಬೈಕುಗಳನ್ನು ಬಿಡುಗಡೆಗೊಳಿಸಿದೆ. ನೇಕೆಡ್ ಬೈಕ್ ಅಥವಾ ಸ್ಟ್ರೀಟ್‌ಫೈಟರ್ ಸೆಗ್‍‍ಮೆಂಟಿನಲ್ಲಿ ಕೆಟಿಎಂ ಡ್ಯೂಕ್ ಸರಣಿಯ ಬೈಕುಗಳನ್ನು ಹೊಂದಿದೆ. ಸಾಹಸವನ್ನು ಬಯಸುವವರಿಗೆ ಅಡ್ವೆಂಚರ್ ಸರಣಿಯ ಬೈಕುಗಳನ್ನು ಬಿಡುಗಡೆಗೊಳಿಸಿದೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡ ಕೆಟಿ‍ಎಂ 790 ಬೈಕ್

ಕೆಟಿಎಂನ ರಸ್ತೆ ಆಧಾರಿತ ಬೈಕುಗಳು ಮೋಟಾರ್ ಸ್ಪೋರ್ಟ್‍‍ನ ತಮ್ಮ ಪ್ರತಿಸ್ಪರ್ಧಿಗಳಿಂದ ಸ್ಫೂರ್ತಿ ಪಡೆದು ತಯಾರಾಗಿವೆ. ಕೆಟಿಎಂ ಅಭಿವೃದ್ಧಿ ಪಡಿಸಿರುವ ಬಹುಪಾಲು ಬೈಕುಗಳು ಮೋಟಾರ್ ಸ್ಪೋರ್ಟ್‍‍ಗಳಿಂದ ಬಂದಿದ್ದು, ಕೆಟಿಎಂ ಇದರಲ್ಲಿ ಯಶಸ್ಸನ್ನು ಸಾಧಿಸಿದೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡ ಕೆಟಿ‍ಎಂ 790 ಬೈಕ್

ಕೆಟಿಎಂ ಇದುವರೆಗೆ ಮೋಟಾರ್ ಸ್ಪೋರ್ಟ್ ಸೆಗ್‍‍ಮೆಂಟಿನಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ಡಕಾರ್ ರ್‍ಯಾಲಿ, ಮೆರ್ಜೌಗಾ ರ್‍ಯಾಲಿ, ಬಾಜಾ ಅರಾಗೊನ್ ಮುಂತಾದ ರ್‍ಯಾಲಿಗಳನ್ನು ಗೆದ್ದಿರುವ ಕೆಟಿಎಂನ ಸೂಪರ್‌ಕ್ರಾಸ್ ಹಾಗೂ ರ್‍ಯಾಲಿ ಬೈಕ್‌ಗಳಿಂದ, ಅಡ್ವೆಂಚರ್ ಸರಣಿಯ ಬೈಕುಗಳು ಸ್ಫೂರ್ತಿ ಪಡೆದಿವೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡ ಕೆಟಿ‍ಎಂ 790 ಬೈಕ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಈ ರಸ್ತೆ ಆಧಾರಿತ ಬೈಕುಗಳು ಯಾವುದೇ ರೀತಿಯ ರಸ್ತೆಗಳಲ್ಲೂ ಸಂಚರಿಸುತ್ತವೆ. ಕೆಟಿಎಂ 790 ಅಡ್ವೆಂಚರ್ ಬೈಕ್ ತನ್ನ ಮೋಟಾರ್ ಸ್ಪೋರ್ಟ್ ಗುಣಗಳಿಂದಾಗಿ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆ ಹೊಂದಿದೆ. ಆದ ಕಾರಣ ಈ ಬೈಕ್ ಅನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡ ಕೆಟಿ‍ಎಂ 790 ಬೈಕ್

ಭಾರತದಲ್ಲಿ, ಈ ಬೈಕ್ ಅನ್ನು ಹಲವು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಆದರೆ ಇದುವರೆಗೆ ಬಿಡುಗಡೆಯ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಕೆಟಿಎಂ 790 ಅಡ್ವೆಂಚರ್ ಬೈಕ್ ಅನ್ನು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು. ಬಹುಶಃ ಹಬ್ಬದ ವೇಳೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡ ಕೆಟಿ‍ಎಂ 790 ಬೈಕ್

ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು ಇಂಡೋನೇಷ್ಯಾದಲ್ಲಿ ಬಿಡುಗಡೆಯಾದ ಮಾದರಿಯನ್ನು ಹೋಲುತ್ತದೆ. ಈ ಬೈಕ್ ಲಿಕ್ವಿಡ್ ಕೂಲ್ಡ್, 799 ಸಿಸಿ, ಪ್ಯಾರಾಲೆಲ್ ಟ್ವಿನ್ ಎಂಜಿನ್ ಹೊಂದಿದ್ದು, ಗರಿಷ್ಠ 95 ಬಿಹೆಚ್‌ಪಿ ಪವರ್ ಹಾಗೂ 88 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡ ಕೆಟಿ‍ಎಂ 790 ಬೈಕ್

6-ಸ್ಪೀಡ್ ಗೇರ್ ಬಾಕ್ಸ್ ಹಿಂದಿನ ವ್ಹೀಲ್ ಚಲಿಸುವಂತೆ ಮಾಡುತ್ತದೆ. ಕೆಟಿಎಂ 790 ಅಡ್ವೆಂಚರ್ ಸ್ಪೋರ್ಟ್ಸ್ ವಿಶಿಷ್ಟವಾದ ಎಡಿವಿ ಸ್ಟೈಲಿಂಗ್ ಹೊಂದಿದೆ. ಈ ಬೈಕಿನಲ್ಲಿ ದೀರ್ಘ ಪ್ರಯಾಣದ ಸಸ್ಪೆಂಷನ್, ಸ್ಪೋಕ್ಡ್ ವ್ಹೀಲ್‍‍ಗಳು, ಡ್ಯುಯಲ್ ಪರ್ಪಸ್ ಟಯರ್‍‍ಗಳು, ಎಂಜಿನ್ ಬ್ಯಾಷ್ ಪ್ಲೇಟ್‍‍ಗಳಿವೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡ ಕೆಟಿ‍ಎಂ 790 ಬೈಕ್

ಇನ್ಸ್ ಟ್ರೂಮೆಂಟೇಶನ್ ಕೆಲಸಗಳನ್ನು ಟಿಎಫ್‍‍ಟಿ ಡಿಸ್‍‍ಪ್ಲೇ ನಿರ್ವಹಿಸುತ್ತದೆ. ಈ ಬೈಕಿನ ಸುತ್ತಲೂ ಎಲ್ಇಡಿ ಲೈಟಿಂಗ್‍ ಅಳವಡಿಸಲಾಗಿದೆ. ಈ ಬೈಕ್ ರೈಡಿಂಗ್ ಮೋಡ್ ಹಾಗೂ ಸ್ವಿಚಬಲ್ ಎಬಿಎಸ್ ಹೊಂದಿದೆ. ಕೆಟಿಎಂ ಸೀಮಿತ ಆವೃತ್ತಿಯ 790 ಅಡ್ವೆಂಚರ್ ಆರ್ ರ್‍ಯಾಲಿ ಬೈಕುಗಳನ್ನೂ ಸಹ ತಯಾರಿಸುತ್ತಿದೆ.

ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡ ಕೆಟಿ‍ಎಂ 790 ಬೈಕ್

ಇವುಗಳಲ್ಲಿ 500 ಘಟಕಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಈ ಮಾದರಿಯ ಬೈಕುಗಳನ್ನು ಬಿಡುಗಡೆಗೊಳಿಸಿಲ್ಲ. ಭಾರತದಲ್ಲಿ ಈ ಮಾದರಿಯ ಬೈಕುಗಳನ್ನು ಬಿಡುಗಡೆಗೊಳಿಸಲಾಗುತ್ತದೆಯೇ ಇಲ್ಲವೇ ಎಂಬುದು ಖಚಿತವಾಗಿಲ್ಲ.

ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡ ಕೆಟಿ‍ಎಂ 790 ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಇಂಡೋನೇಷ್ಯಾದಲ್ಲಿ ಕೆಟಿಎಂ 790 ಅಡ್ವೆಂಚರ್ ಬೈಕಿನ ಬೆಲೆ ದುಬಾರಿಯಾಗಿದೆ. ಈ ಬೈಕ್ ಅನ್ನು ಸ್ಥಳಿಯವಾಗಿ ತಯಾರಿಸುತ್ತಿರುವ ಕಾರಣ ಭಾರತದಲ್ಲಿ ಈ ಬೈಕಿನ ಬೆಲೆ ಅಷ್ಟೇನೂ ದುಬಾರಿಯಾಗಿಲ್ಲ. ಭಾರತದಲ್ಲಿ ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ಸುಮಾರು ರೂ.8 ಲಕ್ಷಗಳಾಗಿರಲಿದೆ. ಕೆಟಿಎಂ 790 ಅಡ್ವೆಂಚರ್ ಈ ಸೆಗ್‍‍ಮೆಂಟಿನಲ್ಲಿಯೇ ಅತ್ಯುತ್ತಮವಾದ ಫೀಚರ್‍‍‍‍ಗಳನ್ನು ಹೊಂದಿರಲಿದೆ. ಈ ಸೆಗ್‍‍ಮೆಂಟಿನಲ್ಲಿ ಕಡಿಮೆ ವೆಚ್ಚವನ್ನು ನಿರೀಕ್ಷಿಸುತ್ತದೆ. ಇದರಿಂದಾಗಿ ಬೈಕ್ ಯಶಸ್ವಿಯಾಗುವ ಸಾಧ್ಯತೆಗಳಿವೆ. ಭಾರತದಲ್ಲಿ ಈ ಬೈಕಿನ ಬಿಡುಗಡೆಯನ್ನು ಕಾತರದಿಂದ ನಿರೀಕ್ಷಿಸಲಾಗುತ್ತಿದೆ.

Most Read Articles

Kannada
Read more on ಕೆಟಿಎಂ ktm
English summary
KTM Launches 790 Adventure In Indonesia While Indians Still Wait For The Elusive ADV - Read in kannada
Story first published: Tuesday, July 30, 2019, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X