Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆನ್‌ಲೈನ್‌ನಲ್ಲಿ ಬೈಕ್ ಮಾರಾಟ: ನಂಬಿ ಟೆಸ್ಟ್ ರೈಡ್‌ಗೆ ಕೊಟ್ರೆ ಪಂಗನಾಮ..!
ಇದು ಸ್ಮಾರ್ಟ್ ಫೋನ್ ಯುಗ. ಎಲ್ಲದಕ್ಕೂ ಆಪ್‌ಗಳ ಮೇಲೆಯೇ ಅವಲಂಬಿತರಾಗಿರುವ ನಾವುಗಳು ವಾಹನ ಖರೀದಿ ಮತ್ತು ಮರುಮಾರಾಟಕ್ಕಾಗಿ ಸುಲಭವಾದ ಹಲವು ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಆದ್ರೆ ಇದರಲ್ಲೂ ಖದೀಮರು ತಮ್ಮ ಕಳ್ಳ ಬುದ್ದಿಯನ್ನು ಪ್ರದರ್ಶಿಸುತ್ತಿದ್ದು, ಆನ್‌ಲೈನ್‌ನಲ್ಲಿ ವಾಹನ ಮಾರಾಟಕ್ಕಿದೆ ಎಂದು ಜಾಹೀರಾತು ನೀಡುವ ಮುನ್ನ ಹತ್ತು ಬಾರಿ ಯೋಚಿಸಿ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.

ಹೌದು, ವಾಹನಗಳು ಮಾರಟ್ಟಕ್ಕಿವೆ ಎಂದು ಆನ್‌ಲೈನ್‌ನಲ್ಲಿ ಜಾಹಿರಾತು ನೀಡುವವರು ಎಚ್ಚರವಹಿಸಬೇಕಿದೆ. ಏಕೆಂದರೆ, ನಿಮ್ಮ ವಾಹನಗಳು ನಿಮ್ಮ ಕಣ್ಣೆದುರೇ ಕಳವು ಮಾಡಿಕೊಂಡು ಹೋಗುವ ಕಳ್ಳರು ನಮ್ಮ ಸುತ್ತಮುತ್ತಲೇ ಇದ್ದು, ನೀವೇನಾದ್ರು ಅಪ್ಪಿ ತಪ್ಪಿ ನಂಬಿ ಅವರ ಕೈಗೆ ವಾಹನಗಳನ್ನು ಕೊಟ್ರೆ ಆ ಶಿವನಿಗೆ ಕೈ ಮುಗಿಯುದೊಂದೆ ಬಾಕಿ ಅಂದ್ರೆ ತಪ್ಪಾಗುವುದಿಲ್ಲ.

ಅದರಲ್ಲೂ ಮೆಟ್ರೋ ಸಿಟಿಗಳಲ್ಲಿ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟಕ್ಕಾಗಿ ಹೆಚ್ಚು ಬಳಕೆಯಾಗುವ 0LX ಮತ್ತು ಕ್ವಿಕರ್‌ಗಳ ಮೂಲಕ ವಾಹನ ಮಾಲೀಕರನ್ನು ಸಂಪರ್ಕಿಸುವ ಖರೀದಿಮರ ತಂಡಗಳು ಬಣ್ಣದ ಮಾತುಗಳನ್ನಾಡಿ ಮೂರು ನಾಮ ಎಳೆದು ಹೋಗುವ ಹಲವಾರು ಪ್ರಕರಣಗಳು ದಿನಂಪ್ರತಿ ನಡೆಯುತ್ತಿವೆ.

ನಿನ್ನೆಯಷ್ಟೇ ಪುಣೆಯಲ್ಲೂ ಇಂತದ್ದೇ ಘಟನೆ ನಡೆದಿದ್ದು, ಸುಮಾರು 1.50 ಲಕ್ಷ ಮೌಲ್ಯದ ಕೆಟಿಎಂ ಡ್ಯೂಕ್ 250 ಬೈಕ್ ಅನ್ನು ಟೆಸ್ಟ್ ರೈಡ್ ಮಾಡುವುದಾಗಿ ಹೇಳಿದ ಖದೀಮ ಬೈಕ್ ಜೊತೆಗೆ ಪರಾರಿಯಾಗಿದ್ದಾನೆ. ಪುಣೆಯಲ್ಲಿಯೇ ಕಳೆದ ಒಂದು ವಾರದಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ಬಹುತೇಕ ಪ್ರಕರಣಗಳು OLX ನಲ್ಲಿ ಜಾಹೀರಾತು ನೋಡಿಯೇ ಮಾಲೀಕರಿಗೆ ಯಾಮಾರಿಸಿದ್ದಾರೆ.

ಪುಣೆನಲ್ಲಿ ಅಷ್ಟೇ ಅಲ್ಲದೇ ಕಳೆದ ತಿಂಗಳು ಬೆಂಗಳೂರಿನಲ್ಲೂ ಕೂಡಾ ಇಂತದ್ದೆ ಪ್ರಕರಣ ನಡೆದಿತ್ತು. ಟೆಕ್ಕಿ ಎಂದು ಹೇಳಿಕೊಂಡ ಬಂದ ವ್ಯಕ್ತಿಯೊಬ್ಬ ಕೆಟಿಎಂ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಟೆಸ್ಟ್ ರೈಡ್ ಹೋಗಿ ಬರುವುದಾಗಿ ಹೇಳಿ ಕದ್ದು ಪರಾಗಿಯಾಗಿದ್ದ.

ಸುಮಾರು 3 ಲಕ್ಷ ಮೌಲ್ಯದ ಕೆಟಿಎಂ 390 ಡ್ಯೂಕ್, 1.8 ಲಕ್ಷ ರೂ. ಮೌಲ್ಯದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಜೊತೆ ಪರಾರಿಯಾಗಿದ್ದ ಖದೀಮನ ವಿರುದ್ಧ ತಿಲಕ್ ನಗರ ಮತ್ತು ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ. ಆದ್ರೆ ಇದುವರೆಗೂ ಆತನ ಪತ್ತೆಯಿಲ್ಲ.

ತನ್ನನ್ನು ಟೆಕ್ಕಿ ಎಂದು ಪರಿಚಯ ಮಾಡಿಕೊಂಡಿದ್ದ ಖದೀಮ ತನಗೆ ತಿಂಗಳಿಗೆ 3.5 ಲಕ್ಷ ಸಂಬಳವಿದೆ ಎಂದು ಬೈಕ್ ತೆಗೆದುಕೊಳ್ಳಲು ಇದ್ದ ಲೋನ್ ಬಗ್ಗೆ ವಿಚಾರಿಸಿದ್ದ. ಬಳಿಕ ಟೆಸ್ಟ್ ರೈಡ್ ಹೋಗಿ ಬರುವುದಾಗಿ ಹೇಳಿ ಬೈಕ್ ತೆಗೆದುಕೊಂಡು ಹೋದವನು ನಾಪತ್ತೆಯಾಗಿದ್ದ.

ಐಪಿಸಿ ಸೆಕ್ಷನ್ 420 ವಂಚನೆ ಪ್ರಕರಣದ ದಾಖಲು ಮಾಡಿಕೊಂಡಿರುವ ಪೊಲೀಸರು ಖದೀಮನಿಗಾಗಿ ಹುಡುಕಾಟ ನಡೆಸಿರುವುದಲ್ಲದೇ ಕದ್ದ ಬೈಕ್‌ಗಳನ್ನು ಆನ್‌ಲೈನ್ ಬೈಕ್ ಮಾರಾಟದ ವೆಬ್‌ಸೈಟ್‌ಗಳಲ್ಲಿ ಮರುಮಾರಾಟಕ್ಕಾಗಿ ಯತ್ನಿಸುತ್ತಿರುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಹೀಗಾಗಿ ಆನ್‌ಲೈನ್ ಬೈಕ್ ಮಾರಾಟ ಮಾಡುವ ಮತ್ತು ಖರೀದಿ ಮಾಡುವ ಸಾಕಷ್ಟು ಎಚ್ಚರಿಕೆ ವಹಿಸಬೇಕಾದ ಅವಶ್ಯಕತೆ ಇದ್ದು, ನೀವು ಸ್ವಲ್ಪವೇ ಯಾಮಾರಿದ್ರು ಕೂಡಾ ಮೋಸದ ಬಲೆಗೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ.
MOST READ: ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್‌ನಲ್ಲಿ ಬೈಕ್ ರೈಡ್ ಮಾಡಿದ ಯುವಕ

ಯಾಕೆಂದ್ರೆ ಕೆಲವರು ಕದ್ದ ತಂದ ವಾಹನಗಳನ್ನು ಆನ್‌ಲೈನ್‌ನಲ್ಲಿ ಕಡಿಮೆ ಬೆಲೆ ಮಾರಾಟ ಮಾಡುವ ಸಾಧ್ಯತೆಗಳಿದ್ದು, ನೀವು ಬೆಲೆ ಕಡಿಮೆ ಇದೆ ಎಂದು ಅಂತಹ ವಾಹನಗಳ ಖರೀದಿಗೆ ಮುಂದಾದರೆ ಅದರ ಹಿಂದಿನ ಅಸಲಿಯತ್ತು ನಿಮಗೆ ಗೊತ್ತಾಗುವುದೇ ಇಲ್ಲ.

ಹೀಗಾಗಿ ಆನ್‌ಲೈನ್ ಮೂಲಕ ವಾಹನಗಳನ್ನು ಮಾರಾಟ ಮಾಡುವಾಗಲೂ ಖದೀಮರ ಬಗ್ಗೆ ಎಚ್ಚರವಹಿಸಬೇಕಲ್ಲದೇ, ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ದೊರೆಯುವ ವಾಹನಗಳ ಖರೀದಿಗೂ ಮುನ್ನ ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳ ಪರಿಶೀಲಿಸಿದ ನಂತರವಷ್ಟೇ ಮುಂದಿನ ವ್ಯವಹಾರ ಕೈಗೊಳ್ಳಿ.
MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಒಂದು ವೇಳೆ ಆನ್‌ಲೈನ್ ಮೂಲಕ ವಾಹನ ಮಾರಾಟ ಮಾಡುವಾಗ ಮತ್ತು ವಾಹನ ಖರೀದಿಸುವಾಗ ಖದೀಮರು ಅವಸರ ಮಾಡುತ್ತಿದ್ದರೆ ಇಲ್ಲವೇ ಉತ್ತಮ ಕಂಡೀಷನ್‌ನಲ್ಲಿ ವಾಹನಗಳನ್ನು ಕಡಿಮೆ ಬೆಲೆ ನೀಡುತ್ತಿದ್ದರೆ ಅದರ ಪೂರ್ವಾಪರ ಆಲೋಚಿಸಿ ಮುಂದಿನ ಹೆಜ್ಜೆಯಿಡಿ. ಇಲ್ಲವಾದ್ರೆ ಪಂಗನಾಮ ತಪ್ಪಿದ್ದಲ್ಲ.