ಪಲ್ಸರ್ 150 ಬೈಕ್ ಮಾರಾಟದಲ್ಲಿ ಶೇ.33ರಷ್ಟು ಕುಸಿತ ಅನುಭವಿಸಿದ ಬಜಾಜ್

ಬಜಾಜ್ ಸಂಸ್ಥೆಯ ಜನಪ್ರಿಯ ಪಲ್ಸರ್ 150 ಬೈಕ್ ಮಾರಾಟದಲ್ಲಿ ಸತತ ಕುಸಿತ ಕಾಣುತ್ತಿದ್ದು, ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಲಾಗಿದ್ದ ಪಲ್ಸರ್ 125 ಬೈಕ್ ಬಿಡುಗಡೆಯೇ ಪಲ್ಸರ್ 150 ಬೈಕ್ ಮಾರಾಟದಲ್ಲಿ ಹಿನ್ನಡೆಗೆ ಪ್ರಮುಖ ಎನ್ನಲಾಗುತ್ತಿದೆ.

ಪಲ್ಸರ್ 150 ಬೈಕ್ ಮಾರಾಟದಲ್ಲಿ ಶೇ.33ರಷ್ಟು ಕುಸಿತ ಅನುಭವಿಸಿದ ಬಜಾಜ್

2018ರ ಅಕ್ಟೋಬರ್ ಅವಧಿಯಲ್ಲಿ 63,957 ಯುನಿಟ್ ಮಾರಾಟ ಮಾಡಿದ್ದ ಬಜಾಜ್ ಸಂಸ್ಥೆಯು ಈ ಬಾರಿ ಅಕ್ಟೋಬರ್ ಅವಧಿಯಲ್ಲಿ ಕೇವಲ 44,002 ಯುನಿಟ್ ಮಾರಾಟ ಮಾಡಿದ್ದು, ಶೇ.33ರಷ್ಟು ಕುಸಿತ ಕಂಡಿದೆ. ಬಜಾಜ್ ಬೈಕ್ ಮಾರಾಟದಲ್ಲಿ ಬೆಸ್ಟ್ ಸೆಲ್ಲಿಂಗ್ ಬೈಕ್ ಮಾದರಿಯಾಗಿರುವ ಪಲ್ಸರ್ 150 ಮಾದರಿಯು ಪ್ಲಾಟಿನಾ ಮತ್ತು ಸಿಟಿ 100 ನಂತರ ಮೂರನೇ ಅತಿ ಹೆಚ್ಚು ಬೇಡಿಕೆ ಹೊಂದಿರುವ ಬೈಕ್ ಮಾದರಿಯಾಗಿದ್ದು, ಪಲ್ಸರ್ 125 ಬಿಡುಗಡೆಯ ನಂತರ ಇದೀಗ ವರ್ಷದಿಂದ ವರ್ಷಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದೆ.

ಪಲ್ಸರ್ 150 ಬೈಕ್ ಮಾರಾಟದಲ್ಲಿ ಶೇ.33ರಷ್ಟು ಕುಸಿತ ಅನುಭವಿಸಿದ ಬಜಾಜ್

ನಿಯೊನ್, ಸ್ಟ್ಯಾಂಡರ್ಡ್ ಮತ್ತು ಟ್ವಿನ್ ಡಿಸ್ಕ್ ಮಾದರಿಗಳಲ್ಲಿ ಮಾರಾಟವಾಗುತ್ತಿರುವ ಪಲ್ಸರ್ 150 ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.75,200 ಬೆಲೆ ಹೊಂದಿದ್ದು, ಟ್ವಿನ್ ಡಿಸ್ಕ್ ಮಾದರಿಯು ರೂ.89,837 ಬೆಲೆ ಹೊಂದಿದೆ.

ಪಲ್ಸರ್ 150 ಬೈಕ್ ಮಾರಾಟದಲ್ಲಿ ಶೇ.33ರಷ್ಟು ಕುಸಿತ ಅನುಭವಿಸಿದ ಬಜಾಜ್

ಆದರೆ ಪಲ್ಸರ್ 150 ಸ್ಥಾನವನ್ನು ನಿಧಾನವಾಗಿ ಪಲ್ಸರ್ 125 ಆವರಿಸಿಕೊಳ್ಳುತ್ತಿದ್ದು, 2019ರ ಅಕ್ಟೋಬರ್ ಅವಧಿಯಲ್ಲಿ 33,042 ಯುನಿಟ್ ಮಾರಾಟ ಮೂಲಕ ಪಲ್ಸರ್ 150 ಹಿಂದಿಕ್ಕುವ ತವಕದಲ್ಲಿದೆ. ಈ ಹಿನ್ನಲೆಯಲ್ಲಿ ಪಲ್ಸರ್ 125 ಬೈಕ್ ಮಾರಾಟದಲ್ಲಿ ಕೆಲವು ಬದಲಾವಣೆಗಾಗಿ ಬಜಾಜ್ ಮುಂದಾಗಿದೆ.

ಪಲ್ಸರ್ 150 ಬೈಕ್ ಮಾರಾಟದಲ್ಲಿ ಶೇ.33ರಷ್ಟು ಕುಸಿತ ಅನುಭವಿಸಿದ ಬಜಾಜ್

ಬಜಾಜ್ ಸಹ ತನ್ನ ಜನಪ್ರಿಯ ಪಲ್ಸರ್ ಬೈಕ್ ಸರಣಿ ಮಾರಾಟದಲ್ಲಿ ಕೆಲವು ಮಹತ್ವದ ಬದಲಾವಣೆಗೆ ಮುಂದಾಗಿದ್ದು, 125 ಪಲ್ಸರ್ ಡ್ರಮ್ ಬೈಕ್ ಆವೃತ್ತಿಯನ್ನು ಸ್ಥಗಿತಗೊಳಿಸಿದೆ. ಶೇ.95 ಗ್ರಾಹಕರು ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿರುವ ಬೈಕ್ ಮಾದರಿಗಳ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಗ್ರಾಹಕರಿಂದಲೇ ಬೇಡಿಕೆ ಇಲ್ಲದ ಹಿನ್ನಲೆಯಲ್ಲಿ ಡಿಸ್ಕ್ ಬ್ರೇಕ್ ಮಾದರಿಯನ್ನು ಹೊರತುಪಡಿಸಿ ಡ್ರಮ್ ಬ್ರೇಕ್ ಆವೃತ್ತಿಯನ್ನು ಸ್ಥಗಿತಗೊಳಿಸಿದೆ.

ಪಲ್ಸರ್ 150 ಬೈಕ್ ಮಾರಾಟದಲ್ಲಿ ಶೇ.33ರಷ್ಟು ಕುಸಿತ ಅನುಭವಿಸಿದ ಬಜಾಜ್

ಪಲ್ಸರ್ 125 ನಿಯೋ ಆವೃತ್ತಿಯಲ್ಲಿ ಸದ್ಯ ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಆವೃತ್ತಿಗಳು ಮಾರಾಟ ಲಭ್ಯವಿದ್ದು, ಡ್ರಮ್ ಬ್ರೇಕ್ ಆವೃತ್ತಿಗಿಂತ ಡಿಸ್ಕ್ ಬ್ರೇಕ್ ಆವೃತ್ತಿಯು ಕೇವಲ ರೂ.3 ಸಾವಿರ ಮಾತ್ರವೇ ಹೆಚ್ಚುವರಿ ಬೆಲೆ ಹೊಂದಿದೆ.

ಪಲ್ಸರ್ 150 ಬೈಕ್ ಮಾರಾಟದಲ್ಲಿ ಶೇ.33ರಷ್ಟು ಕುಸಿತ ಅನುಭವಿಸಿದ ಬಜಾಜ್

ಈ ಹಿನ್ನಲೆಯಲ್ಲಿ ಶೇ.95 ಗ್ರಾಹಕರು ಡಿಸ್ಕ್ ಬ್ರೇಕ್ ಆವೃತ್ತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಶೀಘ್ರದಲ್ಲೇ ಡ್ರಮ್ ಬ್ರೇಕ್ ಆವೃತ್ತಿಯನ್ನು ಸ್ಥಗಿತಗೊಳಿಸುವ ಸೂಚನೆ ನೀಡಿದೆ. ಇದರಿಂದ ಡ್ರಮ್ ಬ್ರೇಕ್ ಉತ್ಪಾದನೆಯನ್ನು ಈಗಾಗಲೇ ಬಂದ್ ಮಾಡಲಾಗಿದೆ.

ಪಲ್ಸರ್ 150 ಬೈಕ್ ಮಾರಾಟದಲ್ಲಿ ಶೇ.33ರಷ್ಟು ಕುಸಿತ ಅನುಭವಿಸಿದ ಬಜಾಜ್

ಪ್ರಸ್ತುತ ಮಾರುಕಟ್ಟೆಯಲ್ಲಿ ಬಹುತೇಕ ಬೈಕ್ ಉತ್ಪಾದನಾ ಸಂಸ್ಥೆಗಳು 110ಸಿಸಿ ಮೇಲ್ಪಟ್ಟ ವಾಹನಗಳಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಗಳನ್ನು ನೀಡಲಾಗುತ್ತಿದ್ದು, 125ಸಿಸಿ ಬೈಕ್‌ ಮತ್ತು ಸ್ಕೂಟರ್ ಕಡ್ಡಾಯವಾಗಿ ಡಿಸ್ಕ್‌ ಬ್ರೇಕ್ ಮತ್ತು ಎಬಿಎಸ್ ಸೌಲಭ್ಯವನ್ನು ಪಡೆದುಕೊಳ್ಳುತ್ತಿವೆ. ಹೀಗಿರುವಾಗ ಡ್ರಮ್ ಬ್ರೇಕ್ ಆವೃತ್ತಿಯನ್ನು ಸ್ಥಗತಗೊಳಿಸಲು ನಿರ್ಧರಿಸಿರುವ ಬಜಾಜ್ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ ಡಿಸ್ಕ್ ಬ್ರೇಕ್ ತಂತ್ರಜ್ಞಾನ ಪ್ರೇರಿತ ಬೈಕ್ ಮಾದರಿಯ ಮಾರಾಟದ ಮೇಲೆಯೇ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ.

ಪಲ್ಸರ್ 150 ಬೈಕ್ ಮಾರಾಟದಲ್ಲಿ ಶೇ.33ರಷ್ಟು ಕುಸಿತ ಅನುಭವಿಸಿದ ಬಜಾಜ್

ಪಲ್ಸರ್ 125 ನಿಯೋ ಬೈಕ್ ಮಾದರಿಯು ಆನ್ ರೋಡ್ ಪ್ರಕಾರ ರೂ.70,939(ಡ್ರಮ್ ಬ್ರೇಕ್ ಮಾದರಿ) ಮತ್ತು ರೂ.73,706 (ಡಿಸ್ಕ್ ಬ್ರೇಕ್ ಮಾದರಿ) ಬೆಲೆ ಹೊಂದಿದ್ದು, 124.4-ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ನೊಂದಿಗೆ 12-ಬಿಎಚ್‌ಪಿ ಮತ್ತು 11-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಪಲ್ಸರ್ 150 ಬೈಕ್ ಮಾರಾಟದಲ್ಲಿ ಶೇ.33ರಷ್ಟು ಕುಸಿತ ಅನುಭವಿಸಿದ ಬಜಾಜ್

ಹೊಸ ಬೈಕಿನಲ್ಲಿ 5-ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 62ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲದು. ಜೊತೆಗೆ 125 ಸಿಸಿ ಬೈಕ್ ವಿಭಾಗದಲ್ಲೇ ಉತ್ತಮ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿರುವ ಪಲ್ಸರ್ 125 ಬೈಕ್ ಮಾದರಿಯು ಯುವ ಸಮುದಾಯ ನೆಚ್ಚಿನ ಆಯ್ಕೆಯಾಗಿದೆ.

ಪಲ್ಸರ್ 150 ಬೈಕ್ ಮಾರಾಟದಲ್ಲಿ ಶೇ.33ರಷ್ಟು ಕುಸಿತ ಅನುಭವಿಸಿದ ಬಜಾಜ್

ಇನ್ನು ದೇಶಾದ್ಯಂತ 2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಜಾರಿಗೆ ಬರುತ್ತಿದ್ದು, ಬಜಾಜ್ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರ ಸುಧಾರಿತ ತಂತ್ರಜ್ಞಾನದೊಂದಿಗೆ ಬಿಎಸ್-6 ಬೈಕ್ ಮಾರಾಟಕ್ಕೆ ಸಿದ್ದವಾಗುತ್ತಿವೆ.

Most Read Articles

Kannada
English summary
Bajaj Pulsar 150 Sales Registers A 33% Decline. Read in Kannada.
Story first published: Friday, November 29, 2019, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X