Just In
Don't Miss!
- News
ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಯಲ್ ಎನ್‍ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಹೇಗಿದೆ ಗೊತ್ತಾ?
ಆಟೋಮೊಬೈಲ್ ಉದ್ಯಮವು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಆಗಿರಲಿದೆ. ಈಗಾಗಲೇ ಪ್ರಪಂಚಾದ್ಯಂತ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿ ಶುರುವಾಗಿದೆ. ಈಗಾಗಲೇ ಕೆಲವು ವಾಹನ ತಯಾರಕ ಕಂಪನಿಗಳು ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಬಿಡುಗಡೆಗೊಳಿಸಿವೆ.

ಜನಪ್ರಿಯ ವಾಹನ ತಯಾರಕ ಕಂಪನಿಗಳೂ ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ. ದೇಶಿಯ ಮಾರುಕಟ್ಟೆಯಲ್ಲಿ 300 ಸಿಸಿ ಸೆಗ್‍ಮೆಂಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳನ್ನು ಮಾರಾಟ ಮಾಡುವ ರಾಯಲ್ ಎನ್‍ಫೀಲ್ಡ್ ಕಂಪನಿಯು ಸಹ ಎಲೆಕ್ಟ್ರಿಕ್ ಬೈಕ್‍ಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಆದರೆ ಈ ಎಲೆಕ್ಟ್ರಿಕ್ ಬೈಕ್‍ಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಇನ್ನೂ ಹಲವಾರು ವರ್ಷಗಳು ಬೇಕಾಗುತ್ತವೆ. ಭಾರತದ ಸ್ಟಾರ್ಟ್ ಅಪ್ ಕಂಪನಿಯೊಂದು ಸಾಧಾರಣವಾದ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದೆ.

ಲಿಜು ವೈದ್ಯನ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿರುವ ವೀಡಿಯೊದಲ್ಲಿ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಎಲೆಕ್ಟ್ರಿಕ್ ಬೈಕ್ ಅನ್ನು ಕಾಣಬಹುದು. ಈ ವೀಡಿಯೊದಲ್ಲಿ ಸವಾರನು ಕ್ಲಾಸಿಕ್ 350 ಎಲೆಕ್ಟ್ರಿಕ್ ಬೈಕ್ ಅನ್ನು ರಸ್ತೆಗಳಲ್ಲಿ ಚಾಲನೆ ಮಾಡುವುದನ್ನೂ ಸಹ ಕಾಣಬಹುದು.

ಕ್ಲಾಸಿಕ್ 350 ಬೈಕ್ ಅನ್ನು ಹೌಂಡ್ ಎಲೆಕ್ಟ್ರಿಕ್ ಎಂಬ ಸ್ಟಾರ್ಟ್ ಅಪ್ ಕಂಪನಿಯು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದೆ. ಹೌಂಡ್ ಎಲೆಕ್ಟ್ರಿಕ್ ಕಂಪನಿಯು ಪೆಟ್ರೋಲ್ ಬೈಕುಗಳಿಗಾಗಿ ಎಲೆಕ್ಟ್ರಿಕ್ ಮೋಟರ್‍ಗಳನ್ನು ಸಂಶೋಧಿಸಿ ಅಭಿವೃದ್ಧಿಪಡಿಸುತ್ತಿದೆ.

ಈ ಸಂಶೋಧನೆಯ ಭಾಗವಾಗಿ ಕಂಪನಿಯು ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದೆ. ಹೌಂಡ್ ಎಲೆಕ್ಟ್ರಿಕ್ ಕಂಪನಿಯು ಅಭಿವೃದ್ಧಿಪಡಿಸಿರುವ ಬಿಡಿಭಾಗಗಳನ್ನು ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕಿನಲ್ಲಿ ಅಳವಡಿಸಿ ಪರೀಕ್ಷಿಸಲಾಗುತ್ತಿದೆ.

ಭವಿಷ್ಯದಲ್ಲಿಯೂ ಸಹ ಹೌಂಡ್ ಎಲೆಕ್ಟ್ರಿಕ್ ಕಂಪನಿಯು ಪೆಟ್ರೋಲ್ ಎಂಜಿನ್ ಬೈಕ್‍ಗಳಿಗಾಗಿ ಎಲೆಕ್ಟ್ರಿಕ್ ಎಂಜಿನ್‍ಗಳನ್ನು ಅಭಿವೃದ್ಧಿಪಡಿಸಲಿದೆ. ಕಂಪನಿಯು ಎಲೆಕ್ಟ್ರಿಕ್ ಬೈಕ್‍ಗಳನ್ನು ಉತ್ಪಾದಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ.

ಉತ್ಪಾದನಾ ವೆಚ್ಚ ಹಾಗೂ ಎಲೆಕ್ಟ್ರಿಕ್ ಬಿಡಿಭಾಗಗಳು ದುಬಾರಿ ಬೆಲೆಯನ್ನು ಹೊಂದಿರುವ ಕಾರಣಕ್ಕೆ ಪೆಟ್ರೋಲ್ ಎಂಜಿನ್ ಬೈಕ್‍ಗಳಿಗಿಂತ ಎಲೆಕ್ಟ್ರಿಕ್ ಮೋಟರ್ ಹೊಂದಿರುವ ಬೈಕ್‍ಗಳು ಹೆಚ್ಚು ದುಬಾರಿಯಾಗುತ್ತವೆ. ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಲು ಎಷ್ಟು ಖರ್ಚಾಗುತ್ತದೆ ಎಂಬ ಮಾಹಿತಿಯನ್ನು ಹೌಂಡ್ ಎಲೆಕ್ಟ್ರಿಕ್ ಕಂಪನಿಯು ಬಹಿರಂಗಪಡಿಸಿಲ್ಲ.

ಹೌಂಡ್ ಎಲೆಕ್ಟ್ರಿಕ್ ಕಂಪನಿಯು ತಾನು ಅಭಿವೃದ್ಧಿಪಡಿಸುತ್ತಿರುವ ಎಲೆಕ್ಟ್ರಿಕ್ ಕಿಟ್ ರೆಡಿಯಾದ ನಂತರ ಅದನ್ನು ಮಾರಾಟ ಮಾಡಲಿದೆ. ಇದರಿಂದಾಗಿ ಗ್ರಾಹಕರು ಈ ಎಲೆಕ್ಟ್ರಿಕ್ ಕಿಟ್‍ಗಳನ್ನು ಆನ್‍ಲೈನ್ ಮುಖಾಂತರ ಖರೀದಿಸಬಹುದು. ನಂತರ ಹತ್ತಿರದಲ್ಲಿರುವ ಮೆಕಾನಿಕ್ ಮೂಲಕ ಬೈಕ್‍ಗಳಲ್ಲಿ ಅಳವಡಿಸಿಕೊಳ್ಳಬಹುದು.

ಈ ಕಿಟ್ ಅನ್ನು ಅಳವಡಿಸಲು ಬೈಕ್ ಅನ್ನು ಮಾಡಿಫೈ ಮಾಡಬೇಕಿಲ್ಲ. ಬೈಕ್‍ಗಳ ಬಗ್ಗೆ ಚೆನ್ನಾಗಿ ಬಲ್ಲ ಮೆಕಾನಿಕ್ ಈ ಕಿಟ್ ಅನ್ನು ಸುಲಭವಾಗಿ ಅಳವಡಿಸಬಹುದು. ಬ್ಯಾಟರಿಗಳನ್ನು ಕನೆಕ್ಟ್ ಮಾಡಲು ಎಲೆಕ್ಟ್ರಿಷಿಯನ್ ಅಗತ್ಯವಿದೆ.

ಈ ಕಿಟ್ ಇನ್ನೂ ಉತ್ಪಾದನಾ ಹಂತದಲ್ಲಿರುವ ಕಾರಣ ಆರ್‍ಟಿಒದವರು ಇದನ್ನು ಇನ್ನೂ ಪರೀಕ್ಷಿಸಿಲ್ಲ. ಆದ ಕಾರಣ ಕಿಟ್ ಮೇಲೆ ಆರ್‍ಟಿಒ ಪ್ರಮಾಣಪತ್ರವನ್ನು ಅಳವಡಿಸಿಲ್ಲ. ಇಷ್ಟೆಲ್ಲಾ ಮಾಡಿಫೈಗೊಳಿಸಿರುವ ಲಿಜುರವರು, ಭಾರತದಲ್ಲಿ ಈ ರೀತಿ ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸುವುದು ಕಾನೂನುಬಾಹಿರವೆಂದು ಹೇಳುತ್ತಾರೆ.
ಭಾರತದಲ್ಲಿರುವ ಮೋಟಾರು ವಾಹನ ಕಾಯ್ದೆಯಲ್ಲಿ ಒಂದು ಎಂಜಿನ್ ಅನ್ನು ಮತ್ತೊಂದು ಎಂಜಿನ್‍ಗೆ ಬದಲಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ. ಆದರೆ ಯುರೋಪ್ ಹಾಗೂ ಅಮೇರಿಕಾದಲ್ಲಿ ಈ ರೀತಿ ಎಂಜಿನ್ ಅನ್ನು ಬದಲಿಸಿಕೊಳ್ಳಬಹುದು. ಬದಲಿಸಿದ ನಂತರ ಆರ್‍ಸಿ ಬುಕ್‍ನಲ್ಲಿಯೂ ನಮೂದಿಸಿಕೊಳ್ಳಬಹುದು.

ಎಲೆಕ್ಟ್ರಿಕ್ ಬೈಕ್ ಆಗಿ ಬದಲಾಗಿರುವ ಈ ರಾಯಲ್ ಎನ್‍ಫೀಲ್ಡ್ ಬೈಕ್ ಪ್ರತಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಬೈಕಿನಲ್ಲಿ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಎಷ್ಟು ದೂರ ಚಲಿಸುತ್ತದೆ ಎಂಬ ಮಾಹಿತಿ ಲಭ್ಯವಾಗಿಲ್ಲ.