ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಮತ್ತೆರಡು ಹೊಸ ಬೈಕ್‍ಗಳು

ಕ್ಲಾಸಿಕ್ ಶೈಲಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ರಾಯಲ್ ಎನ್‍ಫೀಲ್ಡ್ ಮಾರುಕಟ್ಟೆಯಲ್ಲಿ ತಮ್ಮ ಟ್ರಯಲ್ಸ್ 350 ಮತ್ತು 500 ಮೋಟಾರ್‍‍ಬೈಕ್‍ಗಳನ್ನು ಬಿಡುಗಡೆ ಮಾಡಲಾಗಿದ್ದು, ಟ್ರಯಲ್ಸ್ 350 ಎಕ್ಸ್ ಶೋರುಂ ಪ್ರಕಾರ ರೂ. 1.62 ಲಕ್ಷ ಮತ್ತು ಟ್ರೈಯಲ್ಸ್ 500 ರೂ. 2.07 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಲೆಕ್ಕ ಹಾಕಿದರೆ ಈ ಬೈಕ್‍ಗಳು ಬುಲೆಟ್ ಬೈಕ್‍ಗಳಿಗಿಂತಲೂ ಸುಮಾರು ರೂ.20,000 ಹೆಚ್ಚು ಎನ್ನಬಹುದು.

ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಮತ್ತೆರಡು ಹೊಸ ಬೈಕ್‍ಗಳು

ಬಿಡುಗಡೆಯಾದ ರಾಯಲ್ ಎನ್‍ಫೀಲ್ಡ್ ಟ್ರಯಲ್ಸ್ 350 ಮತ್ತು 500 ಬೈಕ್‍ಗಳು 1950ರ ದಶಕದ ವಿನ್ಯಾಸವನ್ನು ಹೊಂದಿರಲಿದ್ದು, ಇಂದಿನ ತಲೆಮಾರಿನ ಪವರ್‍‍‍‍ಟ್ರೈನ್ ಅನ್ನು ಪಡೆದುಕೊಂಡಿದೆ. ಆಫ್ ರೋಡ್ ಸ್ಕ್ರ್ಯಾಂಬ್ಲರ್ ಬೈಕ್‍ಗಳೆಂದೆ ಹೆಸರುವಾಸಿಯಾಗಿರುವ ಈ ಬೈಕ್‍ಗಳು ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿದ 650 ಟ್ವಿನ್ ಬೈಕ್‍ಗಳಿಂದಲೂ ಸಹ ಕೊಂಚ ವಿನ್ಯಾಸವನ್ನು ಆಧರಿಸಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಮತ್ತೆರಡು ಹೊಸ ಬೈಕ್‍ಗಳು

ಬುಕ್ಕಿಂಗ್ ಕೂಡಾ ಶುರು

ಇಷ್ಟೆ ಅಲ್ಲದೇ ಹೊಸ ಆರ್‍ಇ ಟ್ರಯಲ್ಸ್ 350 ಮತ್ತು 500 ಬೈಕ್‍ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯು ಸಹ ಶುರುವಾಗಿದ್ದು, ಈ ಬೈಕ್ ಖರೀದಿಸುವ ಆಲೋಚನೆ ಇದ್ದರೆ ಸಮೀಪದಲ್ಲಿನ ರಾಯಲ್ ಎನ್‍ಫೀಲ್ದ್ ಡೀಲರ್‍‍ನ ಬಳಿ ರೂ. 10,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಮತ್ತೆರಡು ಹೊಸ ಬೈಕ್‍ಗಳು

ಬೈಕುಗಳ ವಿನ್ಯಾಸ

ಆಫ್ ರೋಡಿಂಗ್‍ಗಾಗಿ ತಯಾರು ಮಾಡಲಾದ ಈ ಬೈಕ್‍ಗಳನ್ನು ನಗರ ಪ್ರದೇಶದಲ್ಲಿ ಕೂಡಾ ಬಳಸಬಹುದಾಗಿದ್ದು, ಇದರಲ್ಲಿ ಎತ್ತರದ ಹ್ಯಾಂಡಲ್‍‍ಬಾರ್, ಹೆಡ್‍ಲೈಟ್‍ನಲ್ಲಿ ಹಾಲೊಜೆನ್ ಬಲ್ಬ್, ಕ್ರೋಮ್ ಪ್ಯಾನೆಲ್‍ಗಳು, ಟ್ಯಾಂಕ್ ಮತ್ತು ಫೋರ್ಕ್ ಜೈಂಟರ್‍‍ಗಳ ಮೇಲೆ ರಾಯಲ್ ಎನ್‍ಫೀಲ್ಡ್ 3ಡಿ ಬ್ಯಾಡ್ಜಿಂಗ್, 18 ಇಂಚಿನ ಅಲಯ್ ವ್ಹೀಲ್ಸ್ ಅನ್ನು ಒದಗಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಮತ್ತೆರಡು ಹೊಸ ಬೈಕ್‍ಗಳು

ಎಂಜಿನ್ ಸಾಮರ್ಥ್ಯ

ಬುಲೆಟ್ 350 ಮತ್ತು 500 ಬೈಕ್‍ಗಳಲ್ಲಿ ನೀಡಲಾದ ಎಂಜಿನ್ ಅನ್ನೆ ಟ್ರಯಲ್ಸ್ 350 ಹಾಗು 500 ಬೈಕ್‍ಗಳಲ್ಲಿ ನೀಡಲಾಗಿದ್ದು, ಟ್ರಯಲ್ಸ್ 350 ಬೈಕ್ 346ಸಿಸಿ 19.8 ಬಿಹೆಚ್‍ಪಿ ಮತ್ತು 28 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಇನ್ನು ಟ್ರಯಲ್ಸ್ 500 ಬೈಕ್ 499ಸಿಸಿ ಎಂಜಿನ್ ಸಹಾಯದಿಂದ 27.5 ಬಿಹೆಚ್‍ಪಿ ಮತ್ತು 40.9ಎನ್ಎಂ ಟಾರ್ಕ್ ಅನು ಉತ್ಪಾದಿಸುವ ಗುಣವನ್ನು ಹೊಂದಿದೆ. ಹಾಗೆಯೆ ಎಂಜಿನ್‍ಗಳಾನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಮತ್ತೆರಡು ಹೊಸ ಬೈಕ್‍ಗಳು

ರಾಯಲ್ ಎನ್‍ಫೀಲ್ದ್ ಟ್ರಯಲ್ಸ್ 350 ಮತ್ತು 650 ಬೈಕ್‍ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ 280ಎಂಎಂ ಟ್ವಿನ್ ಪಿಸ್ಟನ್ ಕ್ಯಾಲಿಪರ್ ಮತ್ತು ಹಿಂಭಾಗದಲ್ಲಿ 240ಎಂಎಂ ಸಿಂಗಲ್ ಪಿಸ್ಟನ್ ಮತ್ತು ಫೋಟಿಂಗ್ ಕ್ಯಲಿಪರ್ ಆಧಾರಿತ ಡಿಸ್ಕ್ ಬ್ರೇಕ್ ಅನ್ನು ಒದಗಿಸಲಾಗಿದ್ದು, ಈ ಬೈಕ್‍ಗಳಲಿ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಮತ್ತೆರಡು ಹೊಸ ಬೈಕ್‍ಗಳು

ರಾಯಲ್ ಎನ್‍ಫೀಲ್ಡ್ ಟ್ರಯಲ್ಸ್ 350 ಬೈಕ್‍ಗಳು 1380ಎಂಏಂ ವ್ಹೀಲ್ ಬೇಸ್, 135ಎಂಎಂ ಗೌಂಡ್ ಕ್ಲಿಯರೆನ್ಸ್, 2080ಎಂಎಂ ಉದ್ದ, 805ಎಂಎಂ ಅಗಲ, 1123ಎಂಎಂ ಎತ್ತರ ಸೇರಿದಂತೆ 192 ಕಿಲೋಗ್ರಾಂನ ತೂಕ ಹಾಗು 13.5 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಮತ್ತೆರಡು ಹೊಸ ಬೈಕ್‍ಗಳು

ಇನ್ನು ಮತ್ತೊಂದು ಕಡೆ ರಾಯಲ್ ಎನ್‍ಫೀಲ್ಡ್ ಟ್ರಯಲ್ಸ್ 500 ಬೈಕ್ 1390ಎಂಎಂ ವೀಲ್ ಬೇಸ್, 135ಎಂಎಂ ಗ್ರೌಂಡ್ ಕ್ಲಿಯರೆನ್ಸ್, 2080ಎಂಎಂ ಉದ್ದ, 805ಎಂಎಂ ಅಗಲ, 1123ಎಂಎಂ ಎತ್ತರ ಸೇರಿದಂತೆ 187 ಕಿಲೋಗ್ರಂ ತೂಕ ಹಾಗು 13.5 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಮತ್ತೆರಡು ಹೊಸ ಬೈಕ್‍ಗಳು

ರಾಯಲ್ ಎನ್‍ಫೀಲ್ದ್ ಟ್ರಯಲ್ಸ್ 350 ಮತ್ತು 500 ಬೈಕ್‍ಗಳಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸಾರ್ಬರ್ ಅನ್ನು ನೀಡಲಾಗಿದೆ. ರಾಯಲ್ ಎನ್‍ಫೀಲ್ಡ್ ಟ್ರಯಲ್ಸ್ 350 ಮತ್ತು 500 ಬೈಕ್‍ಗಳಿ ಆಫ್ ರೋಡಿಂಗ್ ಬೈಕ್‍ಗಳಲ್ಲಿ ಜನಪ್ರೀಯತೆಯನ್ನು ಪಡೆದುಕೊಳ್ಳಲಿದೆಯೆ ಎಂದು ಕಾಯ್ದು ನೋಡಬೇಕಿದೆ.

Most Read Articles

Kannada
English summary
Royal Enfield Bullet Trials Works Replica 350 and 500 Launched In India; Prices Start At ₹ 1.62 Lakh. Read In Kannada
Story first published: Wednesday, March 27, 2019, 10:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X