ಮುಂದಿನ ವರ್ಷ ಭಾರತಕ್ಕೆ ಬರಲಿದೆ ಸುಜುಕಿ ಎಸ್‍ವಿ 650

ಬಹುನಿರೀಕ್ಷಿತ ಸುಜುಕಿ ಎಸ್‍‍ವಿ 650 ಬೈಕ್ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ, ವರದಿಗಳ ಪ್ರಕಾರ ನೇಕೆಡ್ ಸ್ಟ್ರೀಟ್ ಫೈಟರ್ ಸುಜುಕಿ 650 ಮುಂದಿನ ವರ್ಷ ದೇಶಿಯ ಮಾರುಕಟ್ಟೆ ಪ್ರವೇಶಿಸಲಿದೆ. ಸುಜುಕಿ ಎಸ್‍‍ವಿ 650 ಮಿಡ್-ವೈಟ್ ನೇಕೆಡ್ ಬೈಕ್ ಆಗಿದ್ದು, ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.

ಮುಂದಿನ ವರ್ಷ ಭಾರತಕ್ಕೆ ಬರಲಿದೆ ಸುಜುಕಿ ಎಸ್‍ವಿ 650

ಸುಜುಕಿ ಎಸ್‍‍ವಿ 650 ಬೈಕ್ ಎರಡು ದಶಕಗಳ ಹಿಂದೆ 1999 ರಲ್ಲಿ ಮೊದಲ ಬಾರಿಗೆ ಅಮೇರಿಕ ಮಾರುಕಟ್ಟೆಗೆ ಪ್ರವೇಶಿಸಿತು. ದುಬಾರಿ ವೆಚ್ಚವಾದರೂ ಅದ್ಬುತ ಡೈನಾಮಿಕ್ಸ್ ಮತ್ತು ಉತ್ತಮ ಎಂಜಿನ್‍‍ನೊಂದಿಗೆ ಇದು ಅಮೆರಿಕ ಮರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಯಶಸ್ಸನ್ನು ಗಳಿಸಿತು.

ಮುಂದಿನ ವರ್ಷ ಭಾರತಕ್ಕೆ ಬರಲಿದೆ ಸುಜುಕಿ ಎಸ್‍ವಿ 650

ಹೆಚ್ಚು ಯಶಸ್ಸನ್ನು ಗಳಿಸಿದ ಬಳಿಕ ಸುಜುಕಿ ಹೊಸ ಆವೃತ್ತಿಯನ್ನು 2009ರಲ್ಲಿ ಎಸ್‍‍ವಿ 650 ಗ್ಲಾಡಿಯಸ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದ್ದರು. ಕೆಲವು ವರ್ಷಗಳ ನಂತರ ಅಂದರೆ 2016 ರಲ್ಲಿ ಗ್ಲಾಡಿಯಸ್ ಹೆಸರನ್ನು ಕೈಬಿಟ್ಟು ಸುಜುಕಿ ಎಸ್‍‍ವಿ 650 ಮಾನಿಕರ್ ಎಂಬ ಹಳೆ ಹೆಸರಿನ ಮೊರೆ ಹೋದರು. 2018 ರಲ್ಲಿ ಮತ್ತೆ ಅಪ್‍‍ಡೇಟ್ ಮಾಡಿ ಬಿಡುಗಡೆಗೊಳಿಸಿದ್ದರು, 2020 ರಲ್ಲಿ ಮತ್ತೆ ಅಪ್‍‍ಡೇಟ್ ಮಾಡಿ ಬಿಡುಗಡೆ ಮಾಡಲಿದೆ.

ಮುಂದಿನ ವರ್ಷ ಭಾರತಕ್ಕೆ ಬರಲಿದೆ ಸುಜುಕಿ ಎಸ್‍ವಿ 650

2020 ರಲ್ಲಿ ಸುಜುಕಿ ಎಸ್‍‍ವಿ 6500 ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ರೆಟ್ರೋ ಸ್ಟೈಲ್ ಅನ್ನು ಇಷ್ಟಪಡುವವರಿಗೆ ಪ್ರಸ್ತುತ 600-800 ಸಿಸಿ ಸೆಗ್‍‍ಮೆಂಟ್‍‍ನಲ್ಲಿ ಆಕರ್ಷಕ ಲುಕ್ ಹೊಂದಿರುವುದರಿಂದ ಇದು ಕೂಡ ಉತ್ತಮ ಆಯ್ಕೆಯಲ್ಲಿ ಒಂದಾಗಿದೆ. ಈ ಬೈಕ್‍‍ನ ಫೀಚರ್‍‍‍ಗಳು ಸಮಾನ್ಯವಾದ ಸ್ಟೈಲ್ ಅನ್ನು ಹೊಂದಿದ್ದು, ರೆಟ್ರೋ ವೈಬ್ ನೀಡಿದೆ.

ಮುಂದಿನ ವರ್ಷ ಭಾರತಕ್ಕೆ ಬರಲಿದೆ ಸುಜುಕಿ ಎಸ್‍ವಿ 650

ಈ ಬೈಕ್‍‍ನಲ್ಲಿ ಸರ್ಕ್ಯುಲರ್ ಹೆಡ್‍‍ಲ್ಯಾಂಪ್ ಅಳವಡಿಸಿದ್ದು, ಅದರ ಮೇಲೆ ಸಣ್ಣ ವಿಂಡ್‍‍ಸ್ಕ್ರೀನ್ ಅನ್ನು ಹೊಂದಿದೆ. ಎಂಜಿನ್ ಕೆಳಭಾಗದಲ್ಲಿ ಸರಳವಾದ ಕೌಲ್ ಅನ್ನು ಹೊಂದಿದ್ದು, ಹಿಂಭಾಗದಲ್ಲಿ ಎಂದಿನಂತೆ ಸರಳವಾದ ಸ್ಟೈಲ್‍‍ನಿಂದ ಮುಂದುವರೆದಿದೆ.

ಮುಂದಿನ ವರ್ಷ ಭಾರತಕ್ಕೆ ಬರಲಿದೆ ಸುಜುಕಿ ಎಸ್‍ವಿ 650

ಸುಜುಕಿ ಎಸ್‍‍ವಿ 650 ಲಿಕ್ವಿಡ್ ಕೂಲ್ಡ್ 645 ಸಿಸ್ಸಿ, 90 ಡಿಗ್ರಿ ವಿ ಟ್ವಿನ್ ಎಂಜಿನ್ ಹೊಂದಿದ್ದು, ಅದೇ ಎಂಜಿನ್ ಅನ್ನು ಸುಜುಕಿ ವಿ ಸ್ಟ್ರೋಮ್ 650 ಎಕ್ಸ್‌ಟಿ ಅಡ್ವೆಂಚರ್ ಟೂರರ್ ಬೈಕ್ ಹೊಂದಿದೆ ಮತ್ತು ಆ ಬೈಕ್ ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಮುಂದಿನ ವರ್ಷ ಭಾರತಕ್ಕೆ ಬರಲಿದೆ ಸುಜುಕಿ ಎಸ್‍ವಿ 650

ಈ ಬೈಕ್ 8,500 ಆರ್‍‍ಪಿಎಂ ನಲ್ಲಿ 75 ಬಿಎಚ್‍‍ಪಿ ಪವರ್ ಉತ್ಪಾದಿಸುವ ಗುಣ ಹೊಂದಿದ್ದು, 8,100 ಆರ್‍‍ಪಿಎಂನಲ್ಲಿ 64 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ. 2020 ರ ಸುಜುಕಿ ಎಸ್‍‍ವಿ 650 ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಎಂಜಿನ್ ಹೊಂದಿರಲಿದ್ದು ಹಾಗೂ ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡುವ ಬೈಕ್‍‍ನಲ್ಲಿ ಮಾತ್ರ ಈ ಎಂಜಿನ್ ಹೊಂದಿರಲಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಮುಂದಿನ ವರ್ಷ ಭಾರತಕ್ಕೆ ಬರಲಿದೆ ಸುಜುಕಿ ಎಸ್‍ವಿ 650

ಸುರಕ್ಷತೆಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿ ಬೈಕ್‍ನಲ್ಲಿ ಫ್ರಂಟ್ ಡ್ಯುಯಲ್ ಡಿಸ್ಕ್ ಬ್ರೇಕ್ ಮತ್ತು ರೇರ್ ಸಿಂಗಲ್ ಡಿಸ್ಕ್ ಬ್ರೇಕ್ ಹೊಂದಿದೆ. ಎ‍‍ಬಿಎಸ್ ಸ್ಟಾಂಡರ್ಡ್ ಆಗಿರುವುದನ್ನೇ ನೀಡಿದರು ಆದರೆ ಬೈಕ್ ಟ್ರಾಕ್ಷನ್ ಕಂಟ್ರೋಲ್ ಹೊಂದಿಲ್ಲ. ಅದರ ಬದಲಾಗಿ ಸುಜುಕಿ ಎಸ್‍‍ವಿ 650 ಬೈಕಿನಲ್ಲಿ ಕಡಿಮೆ ಪ್ರಮಾಣದ ಆರ್‍‍ಪಿಎಂ ಅಸಿಸ್ಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ ಟಿಲಿಸ್ಕೂಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿವೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಮುಂದಿನ ವರ್ಷ ಭಾರತಕ್ಕೆ ಬರಲಿದೆ ಸುಜುಕಿ ಎಸ್‍ವಿ 650

ಸಿಕೆಡಿ ವ್ಯವಹಾರಕ್ಕೆ ಬಂದಾಗ ಸುಜುಕಿ ಇಂಡಿಯಾ ಉತ್ತಮವಾಗಿ ವ್ಯವಹಾರವಾಗುತ್ತಿದೆ. ಸುಜುಕಿ ಹಯಾಬುಸಾ, ವಿ-ಸ್ಟಾರ್ಮ್ 650 ಎಕ್ಸ್‌ಟಿ, ಜಿಎಸ್ಎಕ್ಸ್-ಎಸ್750 ಎಲ್ಲವನ್ನೂ ಸಂಪೂರ್ಣವಾಗಿ ನಾಕ್-ಡೌನ್ ಕಿಟ್‍‍ಗಳಾಗಿ ಆಮದು ಮಾಡಿಕೊಂಡು ಭಾರತದಲ್ಲಿ ಜೋಡಿಸಲಾಗುತ್ತದೆ. ಸುಜುಕಿ ಎಸ್‍‍ವಿ 650 ಬೈಕ್ ಅನ್ನು ಆಮದು ಮಾಡಿಕೊಳ್ಳಲಾಗುವುದು, ಇದ್ದರಿಂದ ಯಶಸ್ವಿಯಾಗುವ ನಿರೀಕ್ಷೆಗಳಿವೆ. ಈ ಬೈಕ್, ರಾಯಲ್ ಎನ್‍‍ಫೀಲ್ಡ್ ಇಂಟರ್‍‍‍ಸೆಪ್ಟರ್ 650 ಮತ್ತು ಕವಾಸಕಿ ನಿಂಜಾ 650 ಬೈಕುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Suzuki SV650 Naked Streetfighter India Launch Expected Next Year: To Rival The Upcoming KTM 790 Duke - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X