ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

ಭಾರತದಲ್ಲಿ150 ಸಿಸಿ ಬೈಕುಗಳ ಜನಪ್ರಿಯತೆಯು ಹೆಚ್ಚುತ್ತಿದೆ. ಈ ಸೆಗ್‍‍ಮೆಂಟಿನಲ್ಲಿ ಹಲವು ಸ್ಟೈಲಿಶ್ ಹಾಗೂ ಪರ್ಫಾಮೆನ್ಸ್ ಆಧಾರಿತ ಬೈಕುಗಳು ಬಿಡುಗಡೆಯಾಗುತ್ತಿವೆ. 150 ಸಿಸಿ ಸೆಗ್‍‍ಮೆಂಟಿನ ಬೈಕುಗಳ ಜನಪ್ರಿಯತೆಯನ್ನು ಅರಿತಿರುವ ಬಹುತೇಕ ದ್ವಿಚಕ್ರ ವಾಹನ ಕಂಪನಿಗಳು 150 ಸಿಸಿ, 155 ಸಿಸಿ ಹಾಗೂ 160 ಸಿಸಿಗಳಲ್ಲಿ ಬೈಕುಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

150ಸಿಸಿ ಬೈಕುಗಳು ಆಕರ್ಷಕ ಲುಕ್ ಹೊಂದಿರುವುದರ ಜೊತೆಗೆ, ಉತ್ತಮವಾದ ಪರ್ಫಾಮೆನ್ಸ್ ಹಾಗೂ ಇಂಧನ ಕ್ಷಮತೆಯನ್ನು ಸಹ ಹೊಂದಿರುತ್ತವೆ. ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ 7 ಜನಪ್ರಿಯ 150 ಸಿಸಿ ಬೈಕುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

1. ಯಮಹಾ ವೈ‍‍ಝಡ್‍ಎಫ್ - ಆರ್15 ವಿ3.0

ಈಗ ಭಾರತದಲ್ಲಿ ಮಾರಾಟವಾಗುತ್ತಿರುವ ಯಮಹಾ ವೈಝಡ್‍ಎಫ್-ಆರ್ 15 ವಿ3.0 ಬೈಕ್, ಭಾರತದಲ್ಲಿರುವ ಅತ್ಯಂತ ಜನಪ್ರಿಯ 150 ಸಿಸಿಯ ಬೈಕ್ ಆಗಿದೆ. ಮೂರನೇ ತಲೆಮಾರಿನ ಆರ್15 ಬೈಕ್ ಹಲವು ಬದಲಾವಣೆಗಳನ್ನು ಹೊಂದಿದೆ. 150 ಸಿಸಿ ಸೆಗ್‍‍ಮೆಂಟಿನಲ್ಲಿರುವ ಸ್ಪೋರ್ಟಿಯೆಸ್ಟ್ ಬೈಕ್ ಆಗಿದೆ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

ಹೊಸ ಆರ್15 ವಿ3.0 ಯಲ್ಲಿ ವೈಝಡ್‍ಎಫ್-ಆರ್1 ಬೈಕಿನಲ್ಲಿರುವಂತಹ ಫ್ರಂಟ್ ಎಂಡ್, ಟ್ವಿನ್ ಎಲ್ಇಡಿ ಹೆಡ್‌ಲ್ಯಾಂಪ್‌, ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಶಾರ್ಪ್ ಲುಕ್ ಹೊಂದಿರುವ ಫ್ಯೂಯಲ್ ಟ್ಯಾಂಕ್ ಹಾಗೂ ನಯವಾಗಿರುವ ಹಿಂಭಾಗವನ್ನು ಹೊಂದಿದೆ. ಆರ್15 ವಿ3.0 155 ಸಿಸಿಯ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ ಎಂಜಿನ್ ಹೊಂದಿದೆ. ಈ ಎಂಜಿನ್ 10,000 ಆರ್‍‍ಪಿ‍ಎಂನಲ್ಲಿ 19 ಬಿ‍‍ಹೆಚ್‍‍ಪಿ ಪವರ್ ಹಾಗೂ 8,500 ಆರ್‍‍ಪಿ‍ಎಂನಲ್ಲಿ 15.1 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

ಈ ಬೈಕ್ ಯಮಹಾದ ವಿವಿಎ ಟೆಕ್ನಾಲಜಿ ಹಾಗೂ ಸ್ಲಿಪ್ಪರ್ ಕ್ಲಚ್ ಜೊತೆಗೆ 6 ಸ್ಪೀಡಿನ ಗೇರ್ ಬಾಕ್ಸ್ ಹೊಂದಿದೆ. ಆರ್15 ವಿ3.0 ಬೈಕ್ ಬಜಾಜ್ ಪಲ್ಸರ್ ಆರ್‍ಎಸ್200 ಹಾಗೂ ಇತ್ತೀಚೆಗೆ ಬಿಡುಗಡೆಯಾದ ಸುಜುಕಿ ಜಿಕ್ಸರ್ ಎಸ್ಎಫ್ 150 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಯಮಹಾ ಆರ್15 ವಿ3.0 ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.1,42,780ಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

2. ಸುಜುಕಿ ಜಿಕ್ಸರ್ ಎಸ್‌ಎಫ್ 150

ಸುಜುಕಿ ಇತ್ತೀಚೆಗೆ ಭಾರತದಲ್ಲಿ ಜಿಕ್ಸರ್ ಎಸ್‌ಎಫ್ 150 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ತಲೆಮಾರಿನ ಬೈಕ್ ಮೊದಲಿದ್ದ ಬೈಕಿಗಿಂತ ಹೆಚ್ಚಿನ ಸ್ಪೋರ್ಟಿ ಮೇಕ್ ಓವರ್ ಹೊಂದಿದೆ. ಈ ಬೈಕ್ ಕ್ಲಿಪ್ ಆನ್ ಹ್ಯಾಂಡಲ್‌ಬಾರ್, ಪೂರ್ಣ ಪ್ರಮಾಣದ ಎಲ್‍‍ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಪೋರ್ಟಿ ಸ್ಪ್ಲಿಟ್ ಸೀಟ್, ಎಲ್ಇಡಿ ಹೆಡ್‌ಲ್ಯಾಂಪ್ ಹಾಗೂ ಟೇಲ್‌ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ. ಎಸ್‌ಎಫ್ 150 ಬೈಕ್ 155 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್, ಬಿಎಸ್6 ರೆಡಿ ಎಂಜಿನ್ ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

5 ಸ್ಪೀಡಿನ ಗೇರ್‌ಬಾಕ್ಸ್‌ ಹೊಂದಿರುವ ಎಂಜಿನ್ ಸುಮಾರು 13.9 ಬಿ‍‍ಹೆಚ್‍‍ಪಿ ಪವರ್ ಹಾಗೂ 14 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಬ್ರೇಕಿಂಗ್ ಕಾರ್ಯಗಳಿಗಾಗಿ ಬೈಕಿನ ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಸವಾರರ ಸುರಕ್ಷತೆಗಾಗಿ ಸಿಂಗಲ್ ಚಾನಲ್ ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಸುಜುಕಿ ಜಿಕ್ಸರ್ ಎಸ್‌ಎಫ್ 150 ಬೈಕ್, ಯಮಹಾ ಆರ್15 ವಿ3.0 ಹಾಗೂ ಹೀರೋ ಎಕ್ಸ್ ಟ್ರೀಮ್ 200 ಎಸ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಜಿಕ್ಸರ್ ಎಸ್‌ಎಫ್ 150 ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.1,09,870ಗಳಾಗಿದೆ.

MOST READ: ಪೆಟ್ರೋಲ್ ಬಂಕ್‍‍ನಿಂದ ಹೊರಡುವ ಮುನ್ನ ಎಚ್ಚರ..!

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

3. ಸುಜುಕಿ ಜಿಕ್ಸರ್ 150

ಸುಜುಕಿ ಇತ್ತೀಚೆಗೆ ಭಾರತದಲ್ಲಿ ಮೂರನೇ ತಲೆಮಾರಿನ ಜಿಕ್ಸರ್ 150 ಅನ್ನು ಪರಿಚಯಿಸಿತು. ಈ ಬೈಕ್ ಹೊಸ ಫ್ಯೂಯಲ್ ಇಂಜೆಕ್ಟೆಡ್ ಬಿಎಸ್ 6 ಆಧಾರಿತ ಎಂಜಿನ್‌ ಹೊಂದಿದೆ. ಕಾಸ್ಮೆಟಿಕ್ ಅಪ್‌ಡೇಟ್‌ಗಳ ಬಗ್ಗೆ ಹೇಳುವುದಾದರೆ, ಜಿಕ್ಸರ್ 150 ಬೈಕ್ ಮುಂಭಾಗದಲ್ಲಿ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್ ಹೊಂದಿದೆ. ಇದರ ಜೊತೆಗೆ ಮಸ್ಕ್ಯುಲರ್ ಫ್ಯೂಯಲ್ ಟ್ಯಾಂಕ್, ಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಸ್ಲೀಕ್ ಆದ ಟೇಲ್ ಸೆಕ್ಷನ್ ಹೊಂದಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

ಜಿಕ್ಸರ್ 150 ಹೊಸ ಸ್ಪ್ಲಿಟ್ ಸೀಟ್ ಸೆಟಪ್ ಹಾಗೂ ಹಿಂಭಾಗದಲ್ಲಿ ಟಯರ್ ಹಗ್ಗರ್ ಹೊಂದಿದೆ. ಜಿಕ್ಸರ್ 150 ಬೈಕಿನಲ್ಲಿ 155 ಸಿಸಿ, ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್, ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 13.9 ಬಿ‍‍ಹೆಚ್‍‍ಪಿ ಪವರ್ ಹಾಗೂ 6,000 ಆರ್‌ಪಿಎಂನಲ್ಲಿ 14 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

ಜಿಕ್ಸರ್ 150 ಬೈಕ್, ಹೋಂಡಾ ಸಿಬಿ ಹಾರ್ನೆಟ್ 160ಆರ್, ಬಜಾಜ್ ಪಲ್ಸರ್ ಎನ್ಎಸ್ 160, ಯಮಹಾ ಎಫ್‌ಜೆಡ್ ಎಫ್‌ಐ 3.0 ಹಾಗೂ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕುಗಳಿಗೆ ಪೈಪೋಟಿ ನೀಡುತ್ತದೆ. 2019ರ ಹೊಸ ಸುಜುಕಿ ಜಿಕ್ಸರ್ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1,00,212ಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

4. ಯಮಹಾ ಎಫ್‌ಝಡ್ ವಿ 3.0 ಎಫ್‍ಐ

ಯಮಹಾ, ಜನವರಿಯಲ್ಲಿ ಎಫ್‌‍‍ಝಡ್ ವಿ3.0 ಎಫ್‍ಐ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಬೈಕ್ ಹೆಚ್ಚಿನ ಪ್ರಮಾಣದ ಮೆಕಾನಿಕಲ್ ಬದಲಾವಣೆಗಳನ್ನು ಹೊಂದಿದೆ. ಹೊಸ ತಲೆಮಾರಿನ ಎಫ್‌‍‍ಝಡ್ ಬೈಕ್, ಎಫ್‌ಝಡ್ 25 ಬೈಕಿನಲ್ಲಿರುವಂತಹ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರ ಜೊತೆಗೆ ಹೊಸ ಎಲ್‍‍ಇಡಿ ಹೆಡ್‌ಲ್ಯಾಂಪ್, ಟೇಲ್‍‍ಲ್ಯಾಂಪ್ ಹಾಗೂ ಸವಾರರ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್ ನೀಡಲಾಗುವುದು.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

ಈ ಬೈಕ್ 149 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್ ಎಂಜಿನ್ ಹೊಂದಿದೆ. 5 ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಹೊಂದಿರುವ ಈ ಎಂಜಿನ್ 8,000 ಆರ್‌ಪಿಎಂನಲ್ಲಿ 13 ಬಿ‍‍ಹೆಚ್‍‍ಪಿ ಪವರ್ ಹಾಗೂ 6,000 ಆರ್‌ಪಿಎಂನಲ್ಲಿ 12.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್, ಸುಜುಕಿ ಜಿಕ್ಸರ್ 150 ಬೈಕಿಗೆ ಪೈಪೋಟಿ ನೀಡುತ್ತದೆ. ಯಮಹಾ ಎಫ್‌ಝಡ್ ವಿ 3.0 ಎಫ್‌ಐ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.98,180ಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

5. ಬಜಾಜ್ ಪಲ್ಸರ್ ಎನ್ಎಸ್ 160

ಬಜಾಜ್ ಕಂಪನಿಯು, ಸುಮಾರು 2 ವರ್ಷಗಳ ಹಿಂದೆ ಭಾರತದಲ್ಲಿ ಎನ್ಎಸ್ 160 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇದು ಈ ಸೆಗ್‍‍ಮೆಂಟಿನಲ್ಲಿರುವ ಅತ್ಯಂತ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ. ಈ ಬೈಕ್, ತನ್ನ ಸ್ಟೈಲಿಂಗ್ ಸ್ಫೂರ್ತಿಯನ್ನು ಎನ್ಎಸ್ 200 ಬೈಕಿನಿಂದ ಪಡೆದಿದೆ. ಈ ಬೈಕಿನಲ್ಲಿ 160.3 ಸಿಸಿ, ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್, ಆಯಿಲ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

5 ಸ್ಪೀಡ್ ಗೇರ್‌ಬಾಕ್ಸ್‌ ಹೊಂದಿರುವ ಈ ಎಂಜಿನ್ 8,500 ಆರ್‌ಪಿಎಂನಲ್ಲಿ 15.3 ಬಿಹೆಚ್‌ಪಿ ಪವರ್ ಹಾಗೂ 6,500 ಆರ್‌ಪಿಎಂನಲ್ಲಿ 14.6 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಪಲ್ಸರ್ ಎನ್ಎಸ್ 160 ಬೈಕ್, ಹೋಂಡಾ ಸಿಬಿ ಹಾರ್ನೆಟ್ 160 ಆರ್ ಹಾಗೂ ಟಿವಿಎಸ್ ಅಪಾಚೆ ಆರ್‍‍ಟಿ‍ಆರ್ 160 4 ವಿ ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಬಜಾಜ್ ಪಲ್ಸರ್ ಎನ್ಎಸ್ 160 ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.93,094ಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

6. ಟಿವಿಎಸ್ ಅಪಾಚೆ ಆರ್‍‍ಟಿಆರ್ 160 4ವಿ

ಟಿವಿಎಸ್ ಮೋಟಾರ್ಸ್, ಕಳೆದ ವರ್ಷ ಹೊಸ ತಲೆಮಾರಿನ ಅಪಾಚೆ ಆರ್‌ಟಿಆರ್ 160 4 ವಿ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಬೈಕ್ ಹೊಸ ಸ್ಟೈಲಿಂಗ್, ಹೊಸ ಫೀಚರ್ಸ್ ಹಾಗೂ ಸಿಲಿಂಡರ್‌ನಲ್ಲಿ ನಾಲ್ಕು ವಾಲ್ವ್ ಹೊಂದಿರುವ ಸಂಪೂರ್ಣವಾಗಿ ಹೊಸ ಎಂಜಿನ್ ಅನ್ನು ಹೊಂದಿದೆ. ಅಪಾಚೆ ಆರ್‌ಟಿಆರ್ 160 ಬೈಕಿನಲ್ಲಿ 159.7 ಸಿಸಿ, ಸಿಂಗಲ್ ಸಿಲಿಂಡರ್, ಆಯಿಲ್-ಕೂಲ್ಡ್, 4 ಸ್ಟ್ರೋಕಿನ ಎಂಜಿನ್ ಅಳವಡಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

5 ಸ್ಪೀಡ್ ಗೇರ್‌ಬಾಕ್ಸ್‌ ಹೊಂದಿರುವ ಈ ಎಂಜಿನ್ 8,000 ಆರ್‌ಪಿಎಂನಲ್ಲಿ 16.28 ಬಿಹೆಚ್‌ಪಿ ಪವರ್ ಹಾಗೂ 6,500 ಆರ್‌ಪಿಎಂನಲ್ಲಿ 14.8 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್, ಹೋಂಡಾ ಸಿಬಿ ಹಾರ್ನೆಟ್ 160 ಆರ್ ಹಾಗೂ ಬಜಾಜ್ ಪಲ್ಸರ್ ಎನ್ಎಸ್ 160 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಟಿವಿಎಸ್ ಅಪಾಚೆ ಆರ್‍‍ಟಿ‍ಆರ್ 160 4ವಿ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.93,851ಗಳಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

7. ಹೋಂಡಾ ಸಿಬಿ ಹಾರ್ನೆಟ್ 160

ಸಿಬಿ ಹಾರ್ನೆಟ್ 160 ಈ ಸೆಗ್‍‍ಮೆಂಟಿನಲ್ಲಿರುವ ಅತ್ಯುತ್ತಮವಾಗಿ ಕಾಣುವ ಬೈಕುಗಳಲ್ಲಿ ಒಂದಾಗಿದೆ. ಹೋಂಡಾ ಕಳೆದ ವರ್ಷ ದೇಶದಲ್ಲಿ ಸಿಬಿ ಹಾರ್ನೆಟ್ 160 ಆರ್ ಬೈಕ್ ಅನ್ನು ಅಪ್‍‍ಡೇಟ್‍‍ಗೊಳಿಸಿ ಬಿಡುಗಡೆಗೊಳಿಸಿತ್ತು. ಈ ಬೈಕ್ ಸಹ ಹಾರ್ನೆಟ್ 160 ಆರ್ ಬೈಕಿನಲ್ಲಿದಂತಹ ಸಿಲೂಯೆಟ್ ಹೊಂದಿದೆ. ಈ ಬೈಕಿನಲ್ಲಿ ಹ್ಯಾಲೊಜೆನ್ ಹೆಡ್ ಲ್ಯಾಂಪ್ ಹೊಂದಿರುವ ಸೇರಿದಂತೆ ಹಲವಾರು ಅಪ್‍‍ಡೇಟೆಡ್ ಫೀಚರ್‍‍ಗಳನ್ನು ಅಳವಡಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

ಈ ಬೈಕ್ ಹೊಸ ಬಾಡಿ ಗ್ರಾಫಿಕ್ಸ್ ಜೊತೆಗೆ, ಫ್ಯೂಯಲ್ ಟ್ಯಾಂಕ್ ಮೇಲೆ ಮರುವಿನ್ಯಾಸಗೊಳಿಸಲಾದ ಹಾರ್ನೆಟ್ ಬ್ಯಾಡ್ಜ್ ಅನ್ನು ಹೊಂದಿದೆ. ಈ ಬೈಕಿನಲ್ಲಿರುವ ಟೇಲ್ ಸೆಕ್ಷನ್ ಅನ್ನು ಎಕ್ಸ್ ಶೇಪಿನ ಎಲ್ಇಡಿ ಟೇಲ್‍‍ಲ್ಯಾಂಪ್‍‍ನಿಂದ ಹೈಲೈಟ್ ಮಾಡಲಾಗಿದೆ. ಸಿಬಿ ಹಾರ್ನೆಟ್ 160 ಆರ್ ಬೈಕ್, 162.7 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ 150 ಸಿಸಿ ಬೈಕುಗಳಿವು

5 ಸ್ಪೀಡ್ ಗೇರ್‌ಬಾಕ್ಸ್‌ ಹೊಂದಿರುವ ಈ ಎಂಜಿನ್ 8,500 ಆರ್‌ಪಿಎಂನಲ್ಲಿ 14.9 ಬಿಹೆಚ್‌ಪಿ ಪವರ್ ಹಾಗೂ 6,500 ಆರ್‌ಪಿಎಂನಲ್ಲಿ 14.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್, ಟಿವಿಎಸ್ ಅಪಾಚೆ ಆರ್‍‍ಟಿ‍ಆರ್ 160 4ವಿ ಹಾಗೂ ಬಜಾಜ್ ಪಲ್ಸರ್ ಎನ್ಎಸ್ 160 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಸಿಬಿ ಹಾರ್ನೆಟ್ 160 ಆರ್ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.92,578ಗಳಾಗಿದೆ.

Most Read Articles

Kannada
English summary
Top Seven 150cc Motorcycles To Buy In India In 2019 - Read in kannada
Story first published: Friday, September 6, 2019, 16:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X