ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮ್ಯಾಟೆ ಎಡಿಷನ್ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಸ್ಕೂಟರ್ ಆವೃತ್ತಿಯಾದ ಸ್ಕೂಟಿ ಪೆಪ್ ಪ್ಲಸ್‌ನಲ್ಲಿ ಹೊಸದಾಗಿ ಮ್ಯಾಟೆ ಎಡಿಷನ್ ಬಿಡುಗಡೆ ಮಾಡಲಾಗಿದ್ದು, ಹೊಸ ಸ್ಕೂಟರ್ ಬೆಲೆಯನ್ನು ಕರ್ನಾಟಕ ಎಕ್ಸ್‌ಶೋರೂಂ ಪ್ರಕಾರ ರೂ.44,332ಕ್ಕೆ ದರ ನಿಗದಿಪಡಿಸಲಾಗಿದೆ.

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮ್ಯಾಟೆ ಎಡಿಷನ್ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿರುವ ಟಿವಿಎಸ್ ಸ್ಕೂಟಿ ಮಾದರಿಯು ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳೊಂದಿಗೆ ಇಂದಿಗೂ ಬೇಡಿಕೆಯ ಸ್ಕೂಟರ್ ಮಾದರಿಯಾಗಿ ಜನಪ್ರಿಯತೆಯನ್ನು ಹೊಂದಿದ್ದು, ಇದೇ ಮೊದಲ ಬಾರಿಗೆ ಸ್ಕೂಟಿ ಪೆಪ್ ಪ್ಲಸ್ ಮಾದರಿಯಲ್ಲಿ ಮ್ಯಾಟೆ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಮ್ಯಾಟೆ ಆವೃತ್ತಿಯು ಈ ಹಿಂದಿಗಿಂತಲೂ ಅತ್ಯಾರ್ಷಕ ಬಣ್ಣದಲ್ಲಿ ಖರೀದಿಗೆ ಲಭ್ಯವಿದ್ದು, ಸ್ಕೂಟರ್ ಆಯ್ಕೆಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮ್ಯಾಟೆ ಎಡಿಷನ್ ಬಿಡುಗಡೆ

ಮ್ಯಾಟೆ ಆವೃತ್ತಿಯಲ್ಲಿ ಕೊರಲ್ ಮ್ಯಾಟೆ ಮತ್ತು ಅಕ್ವಾ ಮ್ಯಾಟೆ ಎನ್ನುವ ಎರಡು ಬಣ್ಣಗಳು ಖರೀದಿಗೆ ಲಭ್ಯವಿದ್ದು, ಈ ಹಿಂದಿಗಿಂತಲೂ ಮ್ಯಾಟೆ ಆವೃತ್ತಿಯು ಹೆಚ್ಚಿನ ಮಟ್ಟದ ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮ್ಯಾಟೆ ಎಡಿಷನ್ ಬಿಡುಗಡೆ

ಮ್ಯಾಟೆ ಬಣ್ಣಗಳ ಹೊರತಾಗಿ ಸ್ಕೂಟಿ ಪೆಪ್ ಪ್ಲಸ್‌ನಲ್ಲಿ 3ಡಿ ವಿನ್ಯಾಸದ ಲೊಗೊ, ಗ್ರಾಫಿಕ್ಸ್ ಡಿಸೈನ್ ಮತ್ತು ಹೊಸದಾಗಿ ವಿನ್ಯಾಸ ಮಾಡಲಾದ ಆಸನ ವಿನ್ಯಾಸವು ಈ ಬಾರಿ ಮತ್ತಷ್ಟು ಮಹಿಳಾ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮ್ಯಾಟೆ ಎಡಿಷನ್ ಬಿಡುಗಡೆ

ಕಳೆದ 25 ವರ್ಷಗಳಿಂದ ಹಲವಾರು ಗುರುತರ ಬದಲಾವಣೆಯೊಂದಿಗೆ ಮಹಿಳೆಯರನ್ನು ಆಕರ್ಷಿಸುತ್ತಿರುವ ಸ್ಕೂಟಿ ಮಾದರಿಯು ಇಂದಿಗೂ ಕೂಡಾ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಹಲವಾರು ಪ್ರತಿಸ್ಪರ್ಧಿ ಸ್ಕೂಟರ್ ಮಾದರಿಗಳು ಮಾರುಕಟ್ಟೆಗೆ ಬಂದಹೋದರೂ ಸಹ ತನ್ನ ಬೇಡಿಕೆಯಲ್ಲಿ ಮಾತ್ರ ಸ್ಥಿರತೆ ಕಾಯ್ದುಕೊಂಡಿದೆ. ಆಕರ್ಷಕ ಬೆಲೆ ಮತ್ತು ಮಹಿಳಾ ಸ್ಕೂಟರ್ ಸವಾರರಿಗೆ ಅನುಕೂಲಕವಾದ ಹಲವಾರು ಸೌಲಭ್ಯಗಳು ಈ ಸ್ಕೂಟರ್‌ನಲ್ಲಿದ್ದು, ಇದೀಗ ಗ್ರಾಹಕರ ಆಕರ್ಷಣೆಗಾಗಿ ಮ್ಯಾಟೆ ಆೃತ್ತಿಯನ್ನು ಮೊದಲ ಬಾರಿಗೆ ಅಭಿವೃದ್ದಿಪಡಿಸಿದೆ.

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮ್ಯಾಟೆ ಎಡಿಷನ್ ಬಿಡುಗಡೆ

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮ್ಯಾಟೆ ಎಡಿಷನ್ ಮಾದರಿಯು 87.8 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ 'ಇಕೋಟ್ರಸ್ಟ್' ಎಂಜಿನ್ ಹೊಂದಿದ್ದು, 4.9-ಬಿಎಚ್‌ಪಿ ಮತ್ತು 5.8-ಎನ್ಎಂ ಟಾರ್ಕ್ ಮೂಲಕ ಅತಿ ಕಡಿಮೆ ಪರ್ಫಾಮೆನ್ಸ್ ಸ್ಕೂಟರ್ ಮಾದರಿ ಇದಾಗಿದೆ.

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮ್ಯಾಟೆ ಎಡಿಷನ್ ಬಿಡುಗಡೆ

ಸ್ಕೂಟಿ ಪೆಪ್ ಪ್ಲಸ್ ಮ್ಯಾಟೆ ಎಡಿಷನ್‌ನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಿಸಲಾಗಿದ್ದು, ಟೆಲಿಸ್ಕೋಪಿಕ್ ಫ್ರಂಟ್ ಸಸ್ಷೆನ್, ಬೆಸ್ಟ್ ಇನ್ ಕ್ಲಾಸ್ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದ್ದು, ಹೊಸ ಸ್ಕೂಟರ್‌ನಲ್ಲಿ ಸೀಟ್‌ ಸೌಲಭ್ಯದ ಎತ್ತರವನ್ನು ಇಳಿಕೆ ಮಾಡಿ ಗ್ರೌಂಡ್ ಕ್ಲಿಯೆರೆನ್ಸ್ ಹೆಚ್ಚಿಸಲಾಗಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮ್ಯಾಟೆ ಎಡಿಷನ್ ಬಿಡುಗಡೆ

ಇದಲ್ಲದೇ ಹೊಸ ಸ್ಕೂಟರ್‌ನಲ್ಲಿ ಮೊಬೈಲ್ ಚಾರ್ಜರ್ ಸಾಕೆಟ್, ಸೈಡ್ ಸ್ಟ್ಯಾಂಡ್ ಅಲಾರಾಂ ಮತ್ತು ಸೀಟ್ ಸ್ಟೊರೇಜ್ ಹುಕ್ ಸೌಲಭ್ಯವನ್ನು ನೀಡಲಾಗಿದ್ದು, ಡಿಆರ್‌ಎಲ್ಎಸ್, ಓಪನ್ ಗ್ಲೋ ಬಾಕ್ಸ್ ಮತ್ತು ಟಿವಿಎಸ್ ಸಂಸ್ಥೆಯ Eazy ಸ್ಟ್ಯಾಂಡ್ ಟೆಕ್ನಾಲಜಿ ಸೌಲಭ್ಯವನ್ನು ಹೊಸ ಮ್ಯಾಟೆ ಎಡಿಷನ್‌ನಲ್ಲಿ ಜೋಡಿಸಲಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮ್ಯಾಟೆ ಎಡಿಷನ್ ಬಿಡುಗಡೆ

ಇನ್ನು ಟಿವಿಎಸ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಸ್ಕೂಟಿ ಪೆಪ್ ಪ್ಲಸ್ ಆವೃತ್ತಿಯನ್ನು ಮತ್ತಷ್ಟು ಬದಲಾವಣೆಗೊಳಿಸುವತ್ತ ಗಮನಹರಿಸಿದ್ದು, 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಹೊಸ ಎಂಜಿನ್ ಸಿದ್ದಪಡಿಸುತ್ತಿದೆ.

Most Read Articles

Kannada
English summary
TVS Scooty Pep+ Matte Edition Launched In India: Priced At Rs 44,332.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X