ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍‍ಎಸ್ 6 ಕವಾಸಕಿ ನಿಂಜಾ 300

ಜಪಾನ್ ಮೂಲದ ಕವಾಸಕಿ ಕಂಪನಿಯ ನಿಂಜಾ 300 ಬೈಕ್ ಕವಾಸಕಿ ಕಂಪನಿಯ ಇತರ ಬೈಕ್‍‍ಗಳಿಗೆ ಹಾಗೂ ಬೇರೆ ಕಂಪನಿಯ ಬೈಕ್‍‍ಗಳಿಗೆ ಹೋಲಿಸಿದರೆ ತುಂಬಾ ಹಳೆಯದಾಗಿದೆ. ಭಾರತದಲ್ಲಿ ಮಾತ್ರ ಕವಾಸಕಿ ನಿಂಜಾ 300 ಬೈಕ್ ಅನ್ನು ಮಾರಾಟ ಮಾಡಲಾಗುತ್ತಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍‍ಎಸ್ 6 ಕವಾಸಕಿ ನಿಂಜಾ 300

ಕವಾಸಕಿ ಕಂಪನಿಯು ಈ ಬೈಕ್ ಅನ್ನು ಅಪ್‍‍ಡೇಟ್‍‍ಗೊಳಿಸಿದೆ. ಹೊಸ ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಈ ಬೈಕಿನಲ್ಲಿ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಹೊಸ ಬೈಕ್ ಅನ್ನು ಪುಣೆಯಲ್ಲಿ ಸ್ಪಾಟ್ ಟೆಸ್ಟ್ ಮಾಡುವಾಗ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍‍ಎಸ್ 6 ಕವಾಸಕಿ ನಿಂಜಾ 300

ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದ್ದ ಬೈಕ್ ಅನ್ನು ಮರೆಮಾಡಿರಲಿಲ್ಲ ಎಂಬುದು ವಿಶೇಷ. ಈ ಟೆಸ್ಟ್ ಮಾದರಿಯು ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಪುಣೆಯಲ್ಲಿರುವ ಎ‍ಆರ್‍ಎ‍ಐ ಕೇಂದ್ರದ ಬಳಿ. ಈ ಚಿತ್ರಗಳನ್ನು ರಶ್‍‍ಲೇನ್ ಬಿಡುಗಡೆಗೊಳಿಸಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍‍ಎಸ್ 6 ಕವಾಸಕಿ ನಿಂಜಾ 300

ಇದರಿಂದಾಗಿ ಈ ಬೈಕ್ ಬಿ‍ಎಸ್ 6 ಎಂಜಿನ್ ಹೊಂದಿದೆ ಎಂಬುದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. ಭಾರತದಲ್ಲಿ ನಿಂಜಾ 300 ಬೈಕ್‍‍ಗಳನ್ನು ಮಾರಾಟ ಮಾಡಲಾಗುತ್ತಿದ್ದರೆ, ಬೇರೆ ದೇಶಗಳಲ್ಲಿ ನಿಂಜಾ 400 ಬೈಕ್ ಅನ್ನು ಮಾರಾಟ ಮಾಡಲಾಗುತ್ತಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍‍ಎಸ್ 6 ಕವಾಸಕಿ ನಿಂಜಾ 300

ಭಾರತದಲ್ಲಿ ನಿಂಜಾ 300 ಬೈಕ್‍‍ಗಳಿಗಿರುವ ಬೇಡಿಕೆ ಹಾಗೂ ನಿಂಜಾ 400 ಬೈಕ್‍‍ಗಳು ಹೆಚ್ಚು ಬೆಲೆಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಕವಾಸಕಿ ಇಂಡಿಯಾ ನಿಂಜಾ 300 ಬೈಕ್‍‍ಗಳ ಮಾರಾಟವನ್ನು ಮುಂದುವರೆಸಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍‍ಎಸ್ 6 ಕವಾಸಕಿ ನಿಂಜಾ 300

ಬಿ‍ಎಸ್ 4 ಎಂಜಿನ್ ಹೊಂದಿರುವ ಕವಾಸಕಿ ನಿಂಜಾ 300 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.3 ಲಕ್ಷಗಳಾಗಿದೆ. ಆರಂಭದಲ್ಲಿ ಈ ಬೈಕ್ ಅನ್ನು ಬಿಡುಗಡೆಗೊಳಿಸಿದಾಗ ಈ ಬೈಕಿನ ಬೆಲೆಯು ರೂ.3.60 ಲಕ್ಷಗಳಾಗಿತ್ತು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍‍ಎಸ್ 6 ಕವಾಸಕಿ ನಿಂಜಾ 300

ಭಾರತದಲ್ಲಿ ಈ ಬೈಕಿನ ಉತ್ಪಾದನೆಯನ್ನು ಶುರು ಮಾಡಿದ ನಂತರ ಬೆಲೆಯಲ್ಲಿ ಇಳಿಕೆಯಾಗಿದೆ. ಬಿ‍ಎಸ್ 6 ಎಂಜಿನ್ ಹೊಂದಿದ ನಂತರ ಈ ಬೈಕಿನ ಬೆಲೆಯು ರೂ.10,000 - ರೂ.15,000ದಷ್ಟು ಹೆಚ್ಚಾಗಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍‍ಎಸ್ 6 ಕವಾಸಕಿ ನಿಂಜಾ 300

ಮಾರುಕಟ್ಟೆಯಲ್ಲಿರುವ ಕವಾಸಕಿ ನಿಂಜಾ 300 ಬೈಕಿನಲ್ಲಿ 296 ಸಿಸಿಯ ಲಿಕ್ವಿಡ್ ಕೂಲ್ ಟ್ವಿನ್ ಸಿಲಿಂಡರ್ ಬಿ‍ಎಸ್ 4 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 38 ಬಿ‍‍ಹೆಚ್‍‍ಪಿ ಪವರ್ ಹಾಗೂ 27 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍‍ಎಸ್ 6 ಕವಾಸಕಿ ನಿಂಜಾ 300

ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ನಿಂಜಾ 400 ಬೈಕಿನಲ್ಲಿ ಅಳವಡಿಸಲಾಗಿರುವ 399 ಸಿಸಿಯ ಪ್ಯಾರಲೆಲ್ ಟ್ವಿನ್ ಸಿಲಿಂಡರ್ ಎಂಜಿನ್, 47.5 ಬಿ‍‍ಹೆಚ್‍‍ಪಿ ಪವರ್ ಹಾಗೂ 38 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಬಿ‍‍ಎಸ್ 6 ಕವಾಸಕಿ ನಿಂಜಾ 300

ಈ ಎರಡೂ ಎಂಜಿನ್‍‍ಗಳಲ್ಲಿ 6 ಸ್ಪೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ನಿಂಜಾ 300 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಯಮಹಾ ವೈ‍‍ಝಡ್‍ಎಫ್ ಆರ್ 3 ಬೈಕಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Kawasaki Ninja 300 BS6 bike spied. Read in Kannada.
Story first published: Wednesday, January 22, 2020, 17:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X