Just In
Don't Miss!
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದುಬಾರಿ ಬೆಲೆಯ ಎಪ್ರಿಲಿಯಾ ಎಸ್ಎಕ್ಸ್ಆರ್ 160 ಮ್ಯಾಕ್ಸಿ ಸ್ಕೂಟರ್ ಭಾರತದಲ್ಲಿ ಬಿಡುಗಡೆ
ಪಿಯಾಜಿಯೊ ಕಂಪನಿಯು ತನ್ನ ಅಂಗಸಂಸ್ಥೆಯಾದ ಎಪ್ರಿಲಿಯಾ ನಿರ್ಮಾಣದ ಹೊಸ ಎಸ್ಎಕ್ಸ್ಆರ್ 160 ಮ್ಯಾಕ್ಸಿ ಸ್ಕೂಟರ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಪ್ರೀಮಿಯಂ ಸೌಲಭ್ಯಗಳೊಂದಿಗೆ ದುಬಾರಿ ಬೆಲೆ ಪಡೆದುಕೊಂಡಿದೆ.

ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಈಗಾಗಲೇ ಜನಪ್ರಿಯ ಸ್ಕೂಟರ್ ಮಾದರಿಯಾಗಿರುವ ಎಸ್ಎಕ್ಸ್ಆರ್ 160 ಮ್ಯಾಕ್ಸಿ ಸ್ಕೂಟರ್ ಆವೃತ್ತಿಯು ಇದೇ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಸ್ಕೂಟರ್ ಮಾದರಿಯ ಬೆಲೆಯನ್ನು ಪುಣೆ ಎಕ್ಸ್‌ಶೋರೂಂ ಪ್ರಕಾರ ರೂ.1.26 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಸಾಮಾನ್ಯ ಮಾದರಿಯ ಸ್ಕೂಟರ್ ಮಾದರಿಗಳಿಂತಲೂ ವಿಭಿನ್ನ ವಿನ್ಯಾಸ ಮತ್ತು ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ ಹೊಸ ಸ್ಕೂಟರ್ ಮಾದರಿಯು ಬೆಲೆಯಲ್ಲೂ ತುಸು ದುಬಾರಿ ಎನ್ನಿಸಲಿದೆ.

ಫೆಬ್ರುವರಿಯಲ್ಲಿ ನಡೆದಿದ್ದ 2020ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿದ್ದ ಎಸ್ಎಕ್ಸ್ಆರ್ 160 ಮ್ಯಾಕ್ಸಿ ಸ್ಕೂಟರ್ ಮಾದರಿಯು ಇದೀಗ ಮಾರುಕಟ್ಟೆ ಪ್ರವೇಶಿಸಿದ್ದು, ಕಳೆದ ಜೂನ್‌ನಲ್ಲಿಯೇ ಬಿಡುಗಡೆಯಾಗಬೇಕಿದ್ದ ಹೊಸ ಸ್ಕೂಟರ್ ಮಾದರಿಯನ್ನು ಕರೋನಾ ವೈರಸ್ ಪರಿಣಾಮ ಇದೀಗ ಬಿಡುಗಡೆ ಮಾಡಲಾಗಿದೆ.

ಎಸ್ಎಕ್ಸ್ಆರ್ 160 ಸ್ಕೂಟರ್ ಮಾದರಿಯಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ದೊಡ್ಡ ಗಾತ್ರದ ವಿನ್ಯಾಸವು ಇತರೆ ಸ್ಕೂಟರ್ ಮಾದರಿಗಳಿಂತಲೂ ಹೆಚ್ಚು ಭಿನ್ನವಾಗಿ ಕಾಣಲು ಪ್ರಮುಖ ಕಾರಣವಾಗಿದೆ.

ಹೊಸ ಸ್ಕೂಟರ್‌ನಲ್ಲಿ ಸ್ಪೀಟ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್ಎಸ್, ಟರ್ನ್ ಇಂಡಿಕೇಟರ್, ಆಕರ್ಷಕವಾದ ವೀಂಡ್ ಸ್ಕ್ರೀನ್, ಆರಾಮದಾಯಕವಾದ ಸಿಂಗಲ್ ಪೀಸ್ ಸೀಟ್, ಎಲ್ಇಡಿ ಟೈಲ್ ಲೈಟ್ಸ್ ಸೌಲಭ್ಯದೊಂದಿಗೆ ಬಲಿಷ್ಠ ವಿನ್ಯಾಸ ಹೊಂದಿದ್ದು, ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸುವ ಒಂದೇ ಸೂರಿನಡಿ ನಿಯಂತ್ರಿಸುವ ಮಲ್ಟಿ ಫಂಕ್ಷನಲ್ ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪಡೆದುಕೊಂಡಿದೆ.

ಮಲ್ಟಿ ಫಂಕ್ಷನಲ್ ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಮೈಲೇಜ್ ಇಂಡಿಕೇಟರ್, ಆರ್‌ಪಿಎಂ ಮೀಟರ್, ಅರೇಜ್ ಮತ್ತು ಟಾಪ್ ಸ್ಪೀಡ್ ಮೀಟರ್, ಫ್ಯೂಲ್ ಇಂಡಿಕೇಟರ್ ಜೊತೆ ಕನೆಕ್ಟೆಡ್ ಫೀಚರ್ಸ್‌ಗಳನ್ನು ಸಹ ಜೋಡಿಸಬಹುದು.

ಎಸ್ಎಕ್ಸ್ಆರ್ 160 ಸ್ಕೂಟರ್ ಮಾದರಿಯಲ್ಲಿ ಕನೆಕ್ಟೆಡ್ ಫೀಚರ್ಸ್‌ಗಳನ್ನು ಹೆಚ್ಚುವರಿ ಮೊತ್ತಕ್ಕೆ ಅಳವಡಿಸಕೊಳ್ಳಬಹುದಾಗಿದ್ದು, ಕನೆಕ್ಟೆಡ್ ಫೀಚರ್ಸ್ ಇದ್ದಲ್ಲಿ ಸ್ಕೂಟರ್ ಮಾಲೀಕರು ಸ್ಮಾರ್ಟ್ ಫೋನ್ ಮೂಲಕವೇ ಸ್ಕೂಟರಿನ ಪ್ರಮುಖ ತಾಂತ್ರಿಕ ಅಂಶಗಳನ್ನು ಅಪ್ಲೀಕೆಷನ್‌ನಲ್ಲೇ ನಿಯಂತ್ರಣ ಮಾಡಬಹುದು.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಎಸ್ಎಕ್ಸ್ಆರ್ 160 ಸ್ಕೂಟರ್ ಮಾದರಿಯು 160ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 10.5-ಬಿಎಚ್‌ಪಿ, 11.6-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಹೊಸ ಸ್ಕೂಟರ್ ಎಪ್ರಿಲಿಯಾ ಕಂಪನಿಯು ಸಿಂಗಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಿದ್ದು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ.

ಹಾಗೆಯೇ ಹೊಸ ಸ್ಕೂಟರಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋಕ್ಸ್ ಮತ್ತು ಹಿಂಭಾದಲ್ಲಿ ಮೊನೊ ಶಾಕ್ ಸಸ್ಪೆಷನ್ ಜೋಡಿಸಲಾಗಿದೆ. ಗ್ರಾಹಕರು ಹೊಸ ಸ್ಕೂಟರ್ ಅನ್ನು ನಾಲ್ಕು ಬಣ್ಣಗಳಲ್ಲಿ ಖರೀದಿ ಮಾಡಬಹುದಾಗಿದ್ದು, ಗ್ಲಾಸಿ ರೆಡ್, ಮ್ಯಾಟೆ ಬ್ಲ್ಯೂ, ಗ್ಲಾಸಿ ವೈಟ್ ಮ್ಯಾಟೆ ಬ್ಲ್ಯಾಕ್ ಬಣ್ಣ ಹೊಂದಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಆಸಕ್ತ ಗ್ರಾಹಕರು ಹೊಸ ಸ್ಕೂಟರ್ ಖರೀದಿಗಾಗಿ ಇಂದಿನಿಂದಲೇ ರೂ.5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಸಲ್ಲಿಕೆ ಮಾಡಬಹುದಾಗಿದ್ದು, ಶೀಘ್ರದಲ್ಲೇ ಗ್ರಾಹಕರಿಗೆ ವಿತರಣೆಯಾಗಲಿದೆ. ಸದ್ಯ ಹೊಸ ಸ್ಕೂಟರ್ ಮಾದರಿಗೆ ಯಾವುದೇ ಪ್ರತಿಸ್ಪರ್ಧಿ ಮಾದರಿಗಳು ಇಲ್ಲವಾದರೂ ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೋಂಡಾ ಫೋರ್ಜಾ ಮ್ಯಾಕ್ಸಿ ಸ್ಕೂಟರ್ ಮಾದರಿಯು ಈ ಸ್ಕೂಟರ್‌ಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.