ಆಟೋ ಎಕ್ಸ್‌ಪೋ 2020: ಬಿಎಸ್ 6 ಬೈಕ್‍ಗಳನ್ನು ಅನಾವರಣಗೊಳಿಸಿದ ಸುಜುಕಿ
ಸುಜುಕಿ ಮೋಟಾರ್‍ಸೈಕಲ್ ಕಂಪನಿಯು ತನ್ನ ಸರಣಿಯಲ್ಲಿರುವ ಹಲವು ಬೈಕ್‍ಗಳನ್ನು ಈಗ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಸುಜುಕಿ ಮೋಟಾರ್‍ಸೈಕಲ್ಸ್ ಬರ್ಗ್‍ಮನ್ ಸ್ಟ್ರೀಟ್, ಇಂಟ್ರೂಡರ್, ಜಿಕ್ಸರ್, ಜಿಕ್ಸರ್ ಎಸ್‍ಎಫ್ ಸೇರಿದಂತೆ ತನ್ನ ಬಹುತೇಕ ಎಲ್ಲಾ ವಾಹನಗಳನ್ನು ಈ ಮೇಳದಲ್ಲಿ ಅನಾವರಣಗೊಳಿಸಿದೆ.

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಿಎಸ್ 6 ಎಂಜಿನ್ ಹೊಂದಿರುವ ಆಕ್ಸೆಸ್ 125 ಸ್ಕೂಟರ್ ಅನ್ನು ಸಹ ಪ್ರದರ್ಶಿಸಿತು. ಸುಜುಕಿ ಮೋಟಾರ್‍ಸೈಕಲ್ಸ್ ಈ ಆಟೋ ಎಕ್ಸ್ ಪೋದಲ್ಲಿ ಯಾವ ವಾಹನಗಳನ್ನು ಪ್ರದರ್ಶಿಸಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬಿಎಸ್ 6 ಎಂಜಿನ್ ಹೊಂದಿರುವ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಅನ್ನು ಸುಜುಕಿ ಈ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿತು. ಈ ಮ್ಯಾಕ್ಸಿ ಸ್ಕೂಟರ್ ಅನ್ನು ಫೆಬ್ರವರಿ ಮಧ್ಯಭಾಗದಿಂದ ಮಾರಾಟ ಮಾಡಲಾಗುವುದು. ಸುಜುಕಿ ಕಂಪನಿಯು ಈ ಸ್ಕೂಟರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಈ ಸ್ಕೂಟರ್ ಈಗಿರುವಂತೆ 124 ಸಿಸಿಯ ಎಂಜಿನ್ ಅನ್ನು ಹೊಂದಿರಲಿದೆ. ಆದರೆ ಎಂಜಿನ್ ಅನ್ನು ಬಿಎಸ್ 6 ನಿಯಮಕ್ಕೆ ತಕ್ಕಂತೆ ಅಪ್‍ಡೇಟ್‍ಗೊಳಿಸಲಾಗಿದೆ. ಇಂಟ್ರೂಡರ್ ಬೈಕ್ ಅನ್ನು ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಬಿಡುಗಡೆಯ ನಂತರ ಬಿಡುಗಡೆಗೊಳಿಸಲಾಗುವುದು.

ಈ ಬೈಕ್ ಅನ್ನು ಜಿಕ್ಸರ್ ಬೈಕ್‍ಗಳ ಬಿಡುಗಡೆಯ ಸಮಯದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಮಾರುಕಟ್ಟೆಯಲ್ಲಿರುವ ಇಂಟ್ರೂಡರ್ ಬೈಕ್ 155 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ ಅನ್ನು ಅಪ್‍ಡೇಟ್‍ಗೊಳಿಸಲಾಗುವುದು.

ಈ ಬೈಕಿನ ಪವರ್ ಹಾಗೂ ಟಾರ್ಕ್ ಅಂಕಿ ಅಂಶಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಈ ಅಂಕಿ ಅಂಶಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆಗಳಿವೆ. ಜಿಕ್ಸರ್ ಹಾಗೂ ಜಿಕ್ಸರ್ ಎಸ್‍ಎಫ್ ಬೈಕ್‍ಗಳು ಇಂಟ್ರೂಡರ್ ಬೈಕಿನಂತೆ 155 ಸಿಸಿಯ ಎಂಜಿನ್ ಹೊಂದಿವೆ.

ಈ ಎಂಜಿನ್ 14.1 ಬಿಹೆಚ್‍ಪಿ ಪವರ್ ಹಾಗೂ 14 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 5 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ. ಜಿಕ್ಸರ್ 250 ಹಾಗೂ ಜಿಕ್ಸರ್ ಎಸ್‍ಎಫ್ 250 ಬೈಕ್‍ಗಳಲ್ಲಿ 249 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 26.5 ಬಿಹೆಚ್‍ಪಿ ಪವರ್ ಹಾಗೂ 22 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಸುಜುಕಿ ಮೋಟಾರ್‍ಸೈಕಲ್ಸ್, ಜಿಕ್ಸರ್ ಸೀರಿಸ್‍ನ 155 ಸಿಸಿ ಹಾಗೂ 250 ಸಿಸಿಯ ಬೈಕ್‍ಗಳು ದೇಶಿಯ ಮಾರುಕಟ್ಟೆಯಲ್ಲಿ 2020ರ ಮಾರ್ಚ್ ಮಧ್ಯದಿಂದ ಮಾರಾಟವಾಗಲಿವೆ ಎಂದು ಹೇಳಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಹೊಸ ಬಿಎಸ್ 6 ಮಾಲಿನ್ಯ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಅದಕ್ಕೂ ಮುನ್ನ ಸುಜುಕಿ ಮೋಟಾರ್‍ಸೈಕಲ್ಸ್ ಕಂಪನಿಯು ತನ್ನ ಎಲ್ಲಾ ವಾಹನಗಳನ್ನು ಬಿಎಸ್ 6 ಎಂಜಿನ್‍ನಲ್ಲಿ ಬಿಡುಗಡೆಗೊಳಿಸಲಿದೆ. ಈ ಬಾರಿಯ ಆಟೋ ಎಕ್ಸ್ ಪೋದಲ್ಲಿ ಭಾಗವಹಿಸಿರುವ ಕೆಲವೇ ಆಟೋಮೊಬೈಲ್ ಕಂಪನಿಗಳಲ್ಲಿ ಸುಜುಕಿ ಸಹ ಒಂದು.


Click it and Unblock the Notifications








