ಬಜಾಜ್ ಪಲ್ಸರ್ 125 ಬೈಕಿನ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಜನಪ್ರಿಯ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾದ ಬಜಾಜ್ ಆಟೋ ತನ್ನ ಪಲ್ಸರ್ 125 ಬೈಕಿನ ಮೇಲೆ ಇಯರ್ ಎಂಡ್ ಆಫರ್ ಅನ್ನು ಘೋಷಿಸಿದೆ. ಎಂಟ್ರಿ ಲೆವೆಲ್ ಬಜಾಜ್ ಪಲ್ಸರ್ 125 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ.

ಬಜಾಜ್ ಪಲ್ಸರ್ 125 ಬೈಕಿನ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಹೊಸ ಬಜಾಜ್ ಪಲ್ಸರ್ 125 ಬೈಕನ್ನು ಖರೀದಿಸುವವರು ರೂ.2,000 ಗಳವರೆಗೆ ಇಯರ್ ಎಂಡ್ ಅಫರ್ ಅನ್ನು ಪಡೆಯಬಹುದು. ಗ್ರಾಹಕರು ಕೇವಲ ರೂ.12,725 ಗಳಿಗೆ ಕಡಿಮೆ ಡೌನ್ ಪೇಮೆಂಟ್ ಪಾವತಿಸುವ ಮೂಲಕ ಬಜಾಜ್ ಪಲ್ಸರ್ 125 ಬೈಕನ್ನು ತಮ್ಮ ಮನೆಗೆ ಕೊಂಡೊಯ್ಯಬಹುದಾಗಿದೆ. ಬಜಾಜ್ ಪಲ್ಸರ್ 125 ಬೈಕಿನ ಮೇಲಿನ ಆಫರ್ ಈ ತಿಂಗಳ 15ರ ವರೆಗೆ ಮಾತ್ರ ಲಭ್ಯವಿರುತ್ತದೆ.

ಬಜಾಜ್ ಪಲ್ಸರ್ 125 ಬೈಕಿನ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಬಜಾಜ್ ಪಲ್ಸರ್ 125 ಬೈಕಿನ ಸ್ಪ್ಲಿಟ್ ಸೀಟ್ ಡ್ರಮ್ ವೆರಿಯೆಂಟ್, ಸಿಂಗಲ್ ಸೀಟ್ ಡ್ರಮ್ ವೆರಿಯೆಂಟ್ ಗಳ ಮೇಲೆ ರೂ.2,000 ಗಳವರೆಗೆ ಆಫರ್ ನೀಡಿದ್ದರೆ, ಡಿಸ್ಕ್ ವೆರಿಯೆಂಟ್ ಮೇಲೆ ರೂ.1,500 ಗಳವರೆಗೆ ಆಫರ್ ಅನ್ನು ನೀಡಿದ್ದಾರೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಜಾಜ್ ಪಲ್ಸರ್ 125 ಬೈಕಿನ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಮಾದರಿಯ ಟಾಪ್-ಸ್ಪೆಕ್ ವೆರಿಯೆಂಟ್ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಅನ್ನು ಒಳಗೊಂಡಿದೆ. ಎರಡೂ ರೂಪಾಂತರಗಳು ಬ್ರೇಕಿಂಗ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಬಜಾಜ್ ಪಲ್ಸರ್ 125 ಬೈಕಿನ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಡಿಸ್ಕ್ ಬ್ರೇಕ್ ಕಳೆದುಕೊಂಡ ಪರಿಣಾಮವಾಗಿ, ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್‌ನ ಮೂಲ ಮಾದರಿಯು ಟಾಪ್-ಸ್ಪೆಕ್ ರೂಪಾಂತರಕ್ಕಿಂತ ಬೆಲೆಯು ಸುಮಾರು ರೂ.7,000 ಕಡಿಮೆಯಾಗಿದೆ. ಬ್ಲ್ಯಾಕ್ ರೆಡ್ ಮತ್ತು ಬ್ಲ್ಯಾಕ್ ಸಿಲ್ವರ್ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಜಾಜ್ ಪಲ್ಸರ್ 125 ಬೈಕಿನ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಬಜಾಜ್ ಪಲ್ಸರ್ 125 ಸುಮಾರು 15 ವರ್ಷಗಳ ಹಿಂದೆ ಬಿಡುಗಡೆಯಾದಾಗ ಹೆಡ್‌ಲೈಟ್ ಕೌಲ್‌ನೊಂದಿಗೆ ಬೈಕಿನ ಮೂಲ ವಿನ್ಯಾಸವನ್ನು ಹೊಂದಿರುವ ಬ್ರ್ಯಾಂಡ್‌ನ ಸರಣಿಯಲ್ಲಿರುವ ಕೆಲವೇ ಕೆಲವು ಬೈಕುಗಳಲ್ಲಿ ಒಂದಾಗಿದೆ. ಇದು ಮಾರುಕಟ್ಟೆಯಲ್ಲಿ ಖರೀದಿದಾರರಿಗೆ ಇಷ್ಟವಾಗುವ ವಿನ್ಯಾಸವಾಗಿರುವುದರಿಂದ ಇದನ್ನು ಮುಂದುವರೆಸಲಾಗಿದೆ.

ಬಜಾಜ್ ಪಲ್ಸರ್ 125 ಬೈಕಿನ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಪಲ್ಸರ್ 125 ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಕ್ಷನ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಗ್ಯಾಸ್-ಶಾಕ್ ಅಬ್ಸಾರ್ಬರ್ ಯುನಿಟ್ ಅನ್ನು ಹೊಂದಿದೆ. ಈ ಬೈಕಿನ ಎರಡೂ ತುದಿಗಳಲ್ಲಿ ಟ್ಯೂಬ್ಲೆಸ್ ಟಯರ್ ಗಳೊಂದಿಗೆ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಜಾಜ್ ಪಲ್ಸರ್ 125 ಬೈಕಿನ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಪಲ್ಸರ್ 125 ಬೈಕಿನಲ್ಲಿ ಎರಡು ಪೈಲಟ್ ಲ್ಯಾಂಪ್ ಗಳೊಂದಿಗೆ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 11.5-ಲೀಟರ್ ಫ್ಯೂಯಲ್ ಟ್ಯಾಂಕ್, ಎಂಜಿನ್ ಕೌಲ್ ಮತ್ತು ಬ್ಲ್ಯಾಕ್ ಔಟ್ ಎಕ್ಸಾಸ್ಟ್ ಅನ್ನು ಹೊಂದಿದೆ. ಇದರೊಂದಿಗೆ ಸ್ಪ್ಲೀಟ್ ಗ್ರ್ಯಾಬ್ ರೈಲ್ ಮತ್ತು ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಬೈಕ್ ಎಂಜಿನ್ ಕೌಲ್, ಅಲಾಯ್ ವ್ಹೀಲ್ಸ್ ಬ್ಯಾಡ್ಜಿಂಗ್ ಮತ್ತು ಗ್ರ್ಯಾಬ್ ರೈಲ್ ಮೇಲೆ ಮೇಲೆ ಬಹಳ ಸೂಕ್ಷ್ಮವಾದ ಗ್ರಾಫಿಕ್ಸ್ ಒಳಗೊಂಡಿದೆ.

ಬಜಾಜ್ ಪಲ್ಸರ್ 125 ಬೈಕಿನ ಮೇಲೆ ಭರ್ಜರಿ ಇಯರ್ ಎಂಡ್ ಆಫರ್

ಈ ಬೈಕಿನಲ್ಲಿ 124 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 11 ಬಿಹೆಚ್‍ಪಿ ಪವರ್ ಮತ್ತು 10.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

Most Read Articles

Kannada
English summary
Bajaj Pulsar 125 Available At Attractive Aear-end Offers. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X