ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150

ಪುಣೆ ಮೂಲದ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಹೊಸ ಬಜಾಜ್ ಪಲ್ಸರ್ 150 ಬೈಕ್ ಅನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.94,956ಗಳಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150

ಈ ಬೈಕ್ ಅನ್ನು ಪಲ್ಸರ್ 150 ಹಾಗೂ ಪಲ್ಸರ್ 150 ಟ್ವಿನ್ ಡಿಸ್ಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಬಜಾಜ್ ಆಟೋ ಮೋಟಾರ್‍‍ಸೈಕಲ್ಸ್ ವಿಭಾಗದ ಅಧ್ಯಕ್ಷರಾದ ಸಾರಂಗ್ ಕಾನಡೆರವರು ಈ ಬಗ್ಗೆ ಮಾತನಾಡಿದ್ದಾರೆ. ಈ ಬೈಕಿನ ಬಿಡುಗಡೆಯೊಂದಿಗೆ ನಮ್ಮ ಸರಣಿಯಲ್ಲಿರುವ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍‍ಗ್ರೇಡ್ ಮಾಡುವುದು ಮುಂದುವರೆದಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಗಿರುವ ಪಲ್ಸರ್ 150, ತನ್ನ ಅದ್ಭುತ ಪರ್ಫಾಮೆನ್ಸ್ ಅನ್ನು ಮುಂದುವರೆಸಲಿದೆ ಎಂದು ಹೇಳಿದರು. ಹೊಸ ಬಜಾಜ್ ಪಲ್ಸರ್ 150 ಬೈಕ್ ಹೊಸ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಹೊಂದಿದೆ. ಇದನ್ನು ಬಜಾಜ್ ಕಂಪನಿಯೇ ಅಭಿವೃದ್ಧಿಪಡಿಸಿದೆ. ಈ ಹೊಸ ಟೆಕ್ನಾಲಜಿ ತಡೆರಹಿತೆ ಪವರ್ ಡೆಲಿವರಿ ಹಾಗೂ ಹೆಚ್ಚಿನ ಪ್ರಮಾಣದ ಫ್ಯೂಯಲ್ ಎಫಿಶಿಯನ್ಸಿ ನೀಡಲಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150

ಈ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಸುಲಭವಾಗಿ ಮೆಂಟೆನ್ ಮಾಡಬಹುದೆಂದು ಬಜಾಜ್ ಕಂಪನಿಯು ಹೇಳಿದೆ. ಕಾರ್ಬೊರೇಟರ್‍‍ಗಳಿಂದ ಎಫ್‍ಐ ಸಿಸ್ಟಂಗೆ ಸುಲಭವಾಗಿ ಬದಲಿಸಬಹುದೆಂದು ಹೇಳಲಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150

ಹೊಸ ಪಲ್ಸರ್ 150 ಬೈಕಿನಲ್ಲಿ 149.5 ಸಿಸಿಯ ಸಿಂಗಲ್ ಸಿಲಿಂಡರ್‍‍ನ ಬಿ‍ಎಸ್ 6 ಫೋರ್ ಸ್ಟ್ರೋಕ್, ಎಸ್‍ಒ‍‍ಹೆಚ್‍‍ಸಿ ಡಿ‍‍ಟಿ‍ಎಸ್ -ಐ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 13 ಬಿ‍‍ಹೆಚ್‍‍ಪಿ ಪವರ್ ಹಾಗೂ 13.25 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಗೇರ್‍‍‍ಬಾಕ್ಸ್ ಜೋಡಿಸಲಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150

ಸಸ್ಪೆಂಷನ್‍‍ಗಾಗಿ ಈ ಬೈಕಿನ ಮುಂಭಾಗದಲ್ಲಿ 31 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಟ್ವಿನ್ ಗ್ಯಾಸ್ ಫಿಲ್ಡ್ ಶಾಕ್ ಅಬ್ಸರ್ವರ್‍‍ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 260 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 130 ಎಂಎಂ ಡಿಸ್ಕ್ ಬ್ರೇಕ್‍‍ಗಳನ್ನು ನೀಡಲಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150

ಹೊಸ ಬೈಕಿನಲ್ಲಿ 15 ಲೀಟರಿನ ದೊಡ್ಡ ಗಾತ್ರದ ಫ್ಯೂಯಲ್ ಟ್ಯಾಂಕ್ ನೀಡಲಾಗಿದೆ. ಮುಂಭಾಗದಲ್ಲಿ 80/100 - ಆರ್ 17 ಟ್ಯೂಬ್‍ಲೆಸ್ ಟಯರ್ ಹಾಗೂ ಹಿಂಭಾಗದಲ್ಲಿ 100/90 - ಆರ್ 17 ಟ್ಯೂಬ್‍‍ಲೆಸ್ ಟಯರ್‍‍ಗಳನ್ನು ನೀಡಲಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150

ಹೊಸ ಬಜಾಜ್ ಪಲ್ಸರ್ 150 ಹಾಗೂ 150 ಟ್ವಿನ್ ಡಿಸ್ಕ್ ಮಾದರಿಯ ಬೈಕ್‍‍ಗಳನ್ನು ಬ್ಲಾಕ್ ಕ್ರೋಮ್ ಹಾಗೂ ಬ್ಲಾಕ್ ರೆಡ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ಕ್ರಮವಾಗಿ ರೂ.94,956 ಹಾಗೂ ರೂ.98,835ಗಳಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಆಟೋ ಕಂಪನಿಯು ಎನ್‍ಎಸ್ 200 ಹಾಗೂ ಪಲ್ಸರ್ 150 ಡಿ‍‍ಟಿ‍ಎಸ್ ಐ ಬೈಕ್‍‍ಗಳಲ್ಲಿ ಬಿ‍ಎಸ್ 6 ಎಂಜಿನ್‍‍ಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಿದೆ. ಬಜಾಜ್ ಕಂಪನಿಯು ಶೀಘ್ರದಲ್ಲಿಯೇ ತನ್ನ ಸರಣಿಯ ಇನ್ನಷ್ಟು ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

Most Read Articles

Kannada
Read more on ಬಜಾಜ್ bajaj
English summary
Bajaj Pulsar 150 BS6 model launched in India. Read in Kannada.
Story first published: Wednesday, February 12, 2020, 15:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X