ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಬೆನೆಲ್ಲಿ ಬಿಎನ್ 125

ಬೆನೆಲ್ಲಿ ಇಂಡಿಯಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿನ ಬೈಕ್ ಮಾರಾಟದಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಇಂಪೀರಿಯಲ್ 400 ಬೈಕ್ ಬಿಡುಗಡೆ ನಂತರ ಇದೀಗ ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಆವೃತ್ತಿಯಾದ ಬಿಎನ್125 ಬಿಡುಗಡೆಗೆ ಸಿದ್ದತೆ ನಡೆಸಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಬೆನೆಲ್ಲಿ ಬಿಎನ್ 125

125 ಸಿಸಿ ಸಾಮಾರ್ಥ್ಯ ಪರ್ಫಾಮೆನ್ಸ್ ಬೈಕ್‌ಗಳಿಗೆ ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು, ಕೆಟಿಎಂ ಸಂಸ್ಥೆಯು ಡ್ಯೂಕ್ 125 ಮತ್ತು ಆರ್‌ಸಿ 125 ಮೂಲಕ ಮಹತ್ವದ ಬದಲಾವಣೆಗೆ ಕಾರಣವಾಗಿವೆ. ಈ ನಿಟ್ಟಿನಲ್ಲಿ ಬೆನೆಲ್ಲಿ ಕೂಡಾ ಯೋಜನೆ ರೂಪಿಸುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಬಿಎನ್125 ಅಭಿವೃದ್ದಿಗೊಳಿಸುವ ಸಂಬಂಧ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಖಚಿತವಾಗಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಬೆನೆಲ್ಲಿ ಬಿಎನ್ 125

2017ರಲ್ಲಿ ಮೊದಲ ಬಾರಿಗೆ ಇಟಾಲಿಯ ಇಎಂಸಿಎ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ ಬಿಎನ್125 ಬೈಕ್ ಮಾದರಿಯು ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಭಾರತದಲ್ಲೂ ಹೊಸ ಬೈಕ್ ಬಿಡುಗಡೆಗೊಳಿಸುವ ಬಗ್ಗೆ ಮಾರುಕಟ್ಟೆ ಅಧ್ಯಯನ ನಡೆಸಲಾಗುತ್ತಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಬೆನೆಲ್ಲಿ ಬಿಎನ್ 125

ಸದ್ಯ ಬೈಕ್ ಮಾರಾಟದಲ್ಲಿ ಹೊಸ ಬದಲಾವಣೆಗಾಗಿ ಹೈದ್ರಾಬಾದ್ ಮೂಲಕ ಮಾಹಾವೀರ್ ಗ್ರೂಪ್ ಜೊತೆ ಕೈಜೋಡಿಸಿರುವ ಬೆನೆಲ್ಲಿ ಸಂಸ್ಥೆಯು ಅಧಿಕ ಸಾಮರ್ಥ್ಯದ ಫರ್ಪಾಮೆನ್ಸ್ ಬೈಕ್ ಮಾದರಿಗಳನ್ನು ಅಷ್ಟೇ ಅಲ್ಲದೇ ಕ್ಲಾಸಿಕ್ ಮತ್ತು ಎಂಟ್ರಿ ಲೆವಲ್ ಪರ್ಫಾಮೆನ್ ಬೈಕ್‌ಗಳನ್ನು ಅಭಿವೃದ್ದಿಗೊಳಿಸುತ್ತಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಬೆನೆಲ್ಲಿ ಬಿಎನ್ 125

ಬಿಎನ್125 ಬೈಕ್ ಮಾದರಿಯು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಲವಾರು ಆಕರ್ಷಕ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 125 ಸಿಸಿ ಏರ್ ಕೂಲ್ಡ್ ಎಂಜಿನ್ ಮೂಲಕ 11.1-ಬಿಎಚ್‌ಪಿ ಮತ್ತು 10-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಬಿಎನ್251 ಬೈಕ್ ಮಾದರಿಯಲ್ಲೇ ಸಿದ್ದಗೊಂಡಿರುವ ಹೊಸ ಬೈಕ್ ಮಾದರಿಯು ಸ್ಪೋರ್ಟಿ ಲುಕ್, ಶಾರ್ಪ್ ಹೆಡ್‌ಲ್ಯಾಂಪ್ ಮತ್ತು ಆಕರ್ಷಕ ಫ್ಯೂಲ್‌ಟ್ಯಾಂಕ್ ವಿನ್ಯಾಸವು ಗಮನಸೆಳೆಯುತ್ತೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಬೆನೆಲ್ಲಿ ಬಿಎನ್ 125

ಜೊತೆಗೆ 125ಸಿಸಿ ಬೈಕ್ ವಿಭಾಗದಲ್ಲೇ ಹೆಚ್ಚಿನ ಮಟ್ಟದ ಫೀಚರ್ಸ್‌ಗಳನ್ನು ಹೊಂದಿರುವ ಬಿಎನ್125 ಬೈಕ್ ಮಾದರಿಯು ಮುಂಭಾಗದಲ್ಲಿ 110-ಎಂಎಂ ಮತ್ತು ಹಿಂಭಾಗದಲ್ಲಿ 130-ಎಂಎಂ ಟೈರ್ ಪಡೆದುಕೊಂಡಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಬೆನೆಲ್ಲಿ ಬಿಎನ್ 125

ಪರ್ಫಾಮೆನ್ಸ್ ಮತ್ತು ಪ್ರೀಮಿಯಂ ಫೀಚರ್ಸ್ ಜೊತೆಗೆ ರೈಡರ್ ಸುರಕ್ಷತೆಗೂ ಹೆಚ್ಚಿನ ಗಮನಹರಿಸಲಾಗಿದ್ದು, ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್, ಸಿಂಗಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವು ಪ್ರೀಮಿಂ ಫೀಚರ್ಸ್‌ಗಳು ಈ ಬೈಕಿನಲ್ಲಿವೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಬೆನೆಲ್ಲಿ ಬಿಎನ್ 125

ಇದು ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಸವಾರರ ಆಯ್ಕೆಯನ್ನು ಹೆಚ್ಚಿಸಲಿದ್ದು, ಮಾಹಿತಿಗಳ ಪ್ರಕಾರ ಕೆಟಿಎಂ ಡ್ಯೂಕ್ 125 ಬೈಕಿಗೆ ನೇರ ಪ್ರತಿಸ್ಪರ್ಧಿಯಾಗಲಿರುವ ಬಿಎನ್125 ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.20 ಲಕ್ಷದಿಂದ ರೂ.1.40 ಲಕ್ಷ ಬೆಲೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಬೆನೆಲ್ಲಿ ಬಿಎನ್ 125

ಇನ್ನು ಬೆನೆಲ್ಲಿ ಸಂಸ್ಥೆಯು ಹೊಸ ಬೈಕ್ ಉತ್ಪಾದನೆ ಹೆಚ್ಚಿಸುವ ಸಂಬಂಧ ತೆಲಂಗಾಣದಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಹೊಸ ಬೈಕ್ ಉತ್ಪಾದನಾ ಘಟಕವನ್ನು ತೆರೆಯುತ್ತಿದ್ದು, 300 ಸಿಸಿ ಯಿಂದ 600ಸಿಸಿ ಸಾಮಾರ್ಥ್ಯದ 12 ವಿವಿಧ ಮಾದರಿಯ ಬೈಕ್‌ಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಬೆನೆಲ್ಲಿ ಬಿಎನ್ 125

ಇದರಲ್ಲಿ ಇದೀಗ ಬಿಎನ್125 ಕೂಡಾ ಬಿಡುಗಡೆಯ ಯೋಜನೆಯಲ್ಲಿ ಸೇರ್ಪಡೆಯಾಗಿದ್ದು, ಹಲವು ವಿಶೇಷತೆಗಳೊಂದಿಗೆ ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿರುವ ಹೊಸ ಬೈಕ್ ಮುಂಬರುವ 6 ತಿಂಗಳ ಅವಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Benelli BN125 Spotted In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X