ಬಹಿರಂಗವಾಯ್ತು ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆ

ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಅನ್ನು ಶೀಘ್ರದಲ್ಲೇ ಬಿಎಸ್-6 ಎಂಜಿನ್‌ನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆಯು ಬೆಲೆಯು ಬಹಿರಂಗವಾಗಿದೆ.

ಬಹಿರಂಗವಾಯ್ತು ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.79 ಲಕ್ಷಗಳಾಗಿದೆ. ಇನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬೈಕಿನ ಬೆಲೆಯನ್ನು ರೂ.40,000 ಗಳಷ್ಟು ಹೆಚ್ಚಿಸಲಾಗಿದೆ. ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.20 ಲಕ್ಷಗಳಾಗಿದೆ. ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ದುಬಾರಿಯಾಗಿದೆ.

ಬಹಿರಂಗವಾಯ್ತು ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆ

ಹಿಂದಿನ ವರದಿಗಳ ಪ್ರಕಾರ ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಈ ತಿಂಗಳು ಶೋ ರೂಂಗಳನ್ನು ತಲುಪಬೇಕಿತ್ತು. ಆದರೆ ಕರೋನಾ ವೈರಸ್ ಭೀತಿಯಿಂದಾಗಿ ಈ ಬೈಕಿನ ಬಿಡೆಗಡೆಯನ್ನು ವಿಳಂಬಗೊಳಿಸಿರಬಹುದು.

MOST READ: 20 ಸಾವಿರ ಗಡಿ ದಾಟಿದ ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಮಾರಾಟ

ಬಹಿರಂಗವಾಯ್ತು ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆ

ಇಡೀ ದೇಶವೇ ಸಂಪೂರ್ಣ ಲಾಕ್ ಡೌನ್ ಆಗಿದೆ. ಪ್ರಸ್ತುತ ಲಾಕ್ ಡೌನ್ ಅವಧಿಯು ಮುಂದಿನ ಮೇ 3ರ ವರೆಗೆ ಇದೆ. ಲಾಕ್ ಡೌನ್ ಮುಗಿದ ಬಳಿಕ ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು.

ಬಹಿರಂಗವಾಯ್ತು ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆ

ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಕ್ಲಾಸಿಕ್ ಲುಕ್ ಆನ್ನು ಹೊಂದಿದೆ. ಈ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಮುಂಭಾಗದಿಂದ ಆಕರ್ಷಕವಾಗಿ ಕಾಣುತ್ತದೆ. ಕ್ಲಾಸಿಕ್ ಲುಕ್ ಗಾಗಿ ದುಂಡಾಗಿರುವ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಈ ಬೈಕ್‌ನಲ್ಲಿ ಟ್ವಿನ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ನೀಡಲಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಬಹಿರಂಗವಾಯ್ತು ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆ

ಸಸ್ಪೆಂಷನ್ ಗಾಗಿ, ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸರ್ವರ್ ಅಳವಡಿಸಲಾಗಿದೆ. ಸುರಕ್ಷತೆಗಾಗಿ, ಈ ಬೈಕಿನಲ್ಲಿ ಎಬಿಎಸ್ ಹೊಂದಿರುವ ಡ್ಯುಯಲ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.

ಬಹಿರಂಗವಾಯ್ತು ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆ

ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕಿನಲ್ಲಿ 373 ಸಿಸಿಯ, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 5500 ಆರ್‌ಪಿಎಂನಲ್ಲಿ 19 ಬಿಹೆಚ್‌ಪಿ ಪವರ್ ಹಾಗೂ 3500 ಆರ್‌ಪಿಎಂನಲ್ಲಿ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡಿನ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಶೀಘ್ರದಲ್ಲೇ ಬಿಡುಗಡೆಯಾಲಿದೆ ಟ್ರಯಂಫ್ ಟೈಗರ್ 900 ಬೈಕ್

ಬಹಿರಂಗವಾಯ್ತು ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆ

ಹೊಸ ಇಂಪೀರಿಯಲ್ 400 ಬೈಕ್, ಮುಂಭಾಗದಲ್ಲಿ 19 ಇಂಚಿನ ಹಾಗೂ ಹಿಂಭಾಗದಲ್ಲಿ 18 ಇಂಚಿನ ಟಯರ್‌ಗಳನ್ನು ಹೊಂದಿದೆ. ಈ ಬೈಕ್ ಅನ್ನು ಭಾರತದಲ್ಲಿಯೇ ತಯಾರಿಸಲಾಗಿದೆ.

ಬಹಿರಂಗವಾಯ್ತು ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಬೆಲೆ

ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಅನ್ನು ಶೀಘ್ರದಲ್ಲೇ ಬಿಎಸ್-6 ಎಂಜಿನ್‌ನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಹಾಗೂ ಜಾವಾ ಕಂಪನಿಯ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Friday, April 24, 2020, 19:20 [IST]
English summary
Benelli Imperiale 400 to get INR 40k price hike. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+