20 ಸಾವಿರ ಗಡಿ ದಾಟಿದ ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಮಾರಾಟ

ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ತನ್ನ ಜನಪ್ರಿಯ ಮಾದರಿಗಳಾದ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ 650 ಬೈಕುಗಳನ್ನು ಬಿಎಸ್-6 ಆವೃತ್ತಿಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ರಾಯಲ್ ಎನ್‍‍ಫೀಲ್ಡ್ ಕಂಪನಿಯ ಈ ಟ್ವಿನ್ ಬೈಕುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ.

20 ಸಾವಿರ ಗಡಿ ದಾಟಿದ ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಮಾರಾಟ

ರಾಯಲ್ ಎನ್‍ಫೀಲ್ಡ್ ಕಂಪನಿಯು ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ 650 ಬೈಕುಗಳನ್ನು 2018ರ ನವೆಂಬರ್‌ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಈ ಎರಡೂ ಬೈಕುಗಳು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಿಸಿಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಯ ಪ್ರಮಾಣದಲ್ಲಿ ಈ ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳು ಮಾರಾಟವಾಗಿವೆ. ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಟ್ವಿನ್ ಬೈಕುಗಳ ಒಟ್ಟು 20,188 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

20 ಸಾವಿರ ಗಡಿ ದಾಟಿದ ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಮಾರಾಟ

ರಾಯಲ್ ಎನ್‍ಫೀಲ್ಡ್ ಕಂಪನಿಯು ಟ್ವಿನ್ ಬೈಕ್‍ಗಳ ಹಿಂದಿನ ಮಾದರಿಗಿಂತ ಹೊಸ ಬೈಕ್ ಮಾದರಿಗಳಿಗೆ ರೂ.10 ಸಾವಿರದವರೆಗೆ ಹೆಚ್ಚಿಸಿದೆ. ರಾಯಲ್ ಎ‍ನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.65 ಲಕ್ಷಗಳಾಗಿದೆ. ಇನ್ನೂ ಕಾಂಟಿನೆಂಟಲ್ ಜಿ‍ಟಿ 650 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.80 ಲಕ್ಷಗಳಾಗಿದೆ. ಈ ಬೈಕ್‍‍ಗಳಿಗಾಗಿ ರೂ.10 ಸಾವಿರ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬೈಕ್

20 ಸಾವಿರ ಗಡಿ ದಾಟಿದ ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಮಾರಾಟ

ಈ ಬೈಕಿನ ಇಂಜಿನ್ ಸಾಮರ್ಥ್ಯ ಮತ್ತು ಹಲವಾರು ವೈಶಿಷ್ಟ್ಯಗಳಿಂದ ಕೂಡಿರುವ ಕಾರಣ ದೇಶಿಯ ಮಾರುಕಟ್ಟೆ ಗ್ರಾಹಕರು ಈ ಬೈಕ್‍‍ಗೆ ಫಿದಾ ಆದರು. ಎರಡೂ ಬೈ‍ಕ್‍‍ಗಳು ಪ್ಯಾರೆಲೆಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿವೆ.

20 ಸಾವಿರ ಗಡಿ ದಾಟಿದ ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಮಾರಾಟ

ಇಂಟರ್‍‍ಸೆಪ್ಟೆರ್ 650 ಮತ್ತು ಕಾಂಟಿ‍ನೆಂಟಲ್ ಜಿಟಿ 650 ಎಂಬ ಎರಡು ಟ್ವಿನ್ ಬೈಕ್‍‍ಗಳು 649 ಸಿಸಿ ಏರ್/ಆಯಿಲ್ -ಕೂಲ್ಡ್ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಹೊಂದಿವೆ. ಈ ಎಂಜಿನ್ 47 ಬಿ‍ಹೆಚ್‍ಪಿ ಪವರ್ ಮತ್ತು 52 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

20 ಸಾವಿರ ಗಡಿ ದಾಟಿದ ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಮಾರಾಟ

ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ ಅಸಿಸ್ಟ್ ಕ್ಲಚ್‍‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಮೂಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿವೆ.

20 ಸಾವಿರ ಗಡಿ ದಾಟಿದ ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಮಾರಾಟ

ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿ‍ನೆಂಟಲ್ ಜಿಟಿ 650 ಬೈಕುಗಳ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಕ್ರಮವಾಗಿ ರೂ.2.51 ಲಕ್ಷ ಮತ್ತು ರೂ.2.93 ಲಕ್ಷಗಳಾಗಿವೆ. ಈ ಎರಡೂ ಬೈಕ್‍ಗಳು ಆಧುನಿಕ ಕ್ಲಾಸಿಕ್ ಲುಕ್ ಅನ್ನು ಹೊಂದಿವೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

20 ಸಾವಿರ ಗಡಿ ದಾಟಿದ ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಮಾರಾಟ

ಕಳೆದ ಬಾರಿ ರಾಯಲ್ ಎನ್‍‍ಫೀಲ್ಡ್ 650 ಸಿಸಿ ಬೈಕ್‍‍ಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿತ್ತು. ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಟಲ್ ಜಿಟಿ 650 ಬೈಕ್‍‍ಗಳ ಹೆಡ್‍‍ಲೈ‍ಟ್‍‍ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು.

20 ಸಾವಿರ ಗಡಿ ದಾಟಿದ ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳ ಮಾರಾಟ

ಕಾಂಟಿನೆಂಟಲ್ ಜಿಟಿ 650 ಕೆಫೆ ರೇಸರ್ ವಿನ್ಯಾಸವನ್ನು ಆಧರಿಸಿದರೆ ಇನ್ನು ಇಂಟರ್‍‍ಸೆಪ್ಟರ್ 650 ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಆಧರಿಸಿದೆ. ಎರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್, 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್‍‍ಗಳನ್ನು ಹೊಂದಿವೆ.

Most Read Articles

Kannada
English summary
Over 20,000 Royal Enfield Interceptor & GT 650 Sold Last Fiscal In India. Read in Kannada.
Story first published: Wednesday, April 22, 2020, 15:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X