ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ಬೈಕ್ ಸವಾರಿಯ ಕೌಶಲ್ಯ ಪ್ರದರ್ಶನಕ್ಕಾಗಿ ದೇಶಾದ್ಯಂತ ಹಲವಾರು ಬೈಕ್ ರ‍್ಯಾಲಿಗಳು ಮತ್ತು ಆಫ್ ರೋಡ್ ಚಾಲೆಂಜ್ ಸ್ಪರ್ಧೆಗಳು ತಮ್ಮದೆ ಆದ ಜನಪ್ರಿಯತೆಯನ್ನು ಹೊಂದಿದ್ದು, ರಾಯಲ್ ಎನ್‌ಫೀಲ್ಡ್ ಆಯೋಜಿಸುವ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್ ಕೂಡಾ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ಆಫ್ ರೋಡ್ ಕೌಶಲ್ಯ ಪ್ರದರ್ಶನಕ್ಕಾಗಿ ಕಳೆದ ಮೂರು ವರ್ಷಗಳಿಂದ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್ ಆಯೋಜಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಇದೀಗ 2020ರ ಆವೃತ್ತಿಯ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್ ಆಯೋಜಿಸಿದ್ದು, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಡಕರ್ ರ‍್ಯಾಲಿ ಬೈಕ್ ಸವಾರ ಸಿಎಸ್ ಸಂತೋಷ್ ನೇತೃತ್ವದಲ್ಲಿ ಮೂರನೇ ವರ್ಷದ ಆಫ್ ರೋಡ್ ಬೈಕ್ ಸ್ಪರ್ಧೆಯು ಯಶಸ್ವಿಯಾಗಿ ನಡೆಸಿತು.

2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್ ಸ್ಪರ್ಧೆಯನ್ನು ನಮ್ಮ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಆಫ್ ರೋಡ್ ಟ್ರ್ಯಾಕ್‌ನಲ್ಲಿ ಕೈಗೊಂಡಿದ್ದ ರಾಯಲ್ ಎನ್‌ಫೀಲ್ಡ್ ಕಂಪನಿಯು ವಿವಿಧ ವಿಭಾಗಗಳಲ್ಲಿ ಆಫ್ ರೋಡ್ ಬೈಕ್ ಸವಾರಿ ಸ್ಪರ್ಧೆಯನ್ನು ಕೈಗೊಂಡಿತ್ತು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ನವೆಂಬರ್ 28 ಮತ್ತು 29ರಂದು ಎರಡು ದಿನಗಳ ಕಾಲ ನಡೆದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್ ಸ್ಪರ್ಧೆಯನ್ನು ಎರಡು ಹಂತಗಳಲ್ಲಿ ಆಯೋಜಿಸಿದ್ದ ಆಯೋಜಕರು ಮೊದಲ ದಿನ ಟ್ರೈನಿಂಗ್ ಡೇ ಮತ್ತು ಎರಡನೇ ದಿನ ರೇಸ್ ಡೇ ನಡೆಸಿತು. ಸ್ಪರ್ಧೆಯಲ್ಲಿ 10 ಜನ ಆಫ್ ರೋಡ್ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 70 ಸ್ಪರ್ಧಿಗಳು ಆಫ್ ರೋಡ್ ಬೈಕ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ಆಫ್ ರೋಡ್ ಬೈಕ್ ಸವಾರಿಯನ್ನು ಬೈಕ್ ಮಾದರಿಗಳು ಮತ್ತು ಸ್ಪರ್ಧಿಗಳ ಆಫ್ ರೋಡ್ ಕೌಶಲ್ಯದ ಆಧಾರದ ಮೇಲೆ ಏಳು ವಿಭಾಗಗಳಾಗಿ ವಿಂಗಡಿಸಿದ್ದ ಆಯೋಜಕರು, ರೇಸ್‌ನಲ್ಲಿ ಸ್ಪರ್ಧಿಸುವವರಿಗೆ ಟ್ರಯಲ್ ಸರ್ಕ್ಯೂಟ್‌ನ 5 ಲ್ಯಾಪ್‌ಗಳನ್ನು ಪೂರ್ಣಗೊಳಿಸುವ ಅವಕಾಶ ನೀಡಿತ್ತು.

* ಕ್ಲಾಸ್ 1 : 250 ಸಿಸಿ ಗಿಂತ ಕಡಿಮೆ ಸಾಮಥ್ಯದ ಬೈಕ್ ಮಾದರಿಗಳು

* ಕ್ಲಾಸ್ 2 : 250 ಸಿಸಿಯಿಂದ 400 ಸಿಸಿ ಬೈಕ್ ಮಾದರಿಗಳು

*ಕ್ಲಾಸ್ 3: 401ಸಿಸಿಯಿಂದ 550 ಸಿಸಿ ಬೈಕ್ ಮಾದರಿಗಳು

*ಕ್ಲಾಸ್ 4 : 550 ಸಿಸಿ ಮೇಲ್ಪಟ್ಟ ಬೈಕ್ ಮಾದರಿಗಳು

* ಮಹಿಳಾ ರೈಡ್ ವಿಭಾಗ (ಯಾವುದೇ ಮಾದರಿಯ ಬೈಕ್)

*ಮಿಡಿಯಾ ವಿಭಾಗಕ್ಕಾಗಿ ರಾಯಲ್ ಎನ್‌ಫೀಲ್ಡ್ ಹಿಮಾಯಲನ್

*ಮಕ್ಕಳ ವಿಭಾಗ

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ಇನ್ನು ಪ್ರತಿ ವಿಭಾಗದಲ್ಲೂ ವಿಜೇತರನ್ನು ಐದು ಸುತ್ತುಗಳನ್ನು ಮುಗಿಸಲು ತೆಗೆದುಕೊಂಡ ಕಡಿಮೆ ಸಮಯದಿಂದ ನಿರ್ಧರಿಸಲಾಗುತ್ತದೆ. ಒಂದು ವೇಳೆ ಸವಾರನು ಐದು ಸುತ್ತುಗಳನ್ನು ಮುಗಿಸದೆ ಟ್ರ್ಯಾಕ್‌ನಿಂದ ನಿರ್ಗಮಿಸಿದರೆ, ಅವರನ್ನು ಸ್ಪರ್ಧೆಯಿಂದ ಸ್ವಯಂಚಾಲಿತವಾಗಿ ಅನರ್ಹಗೊಳಿಸಲಾಗುತ್ತದೆ.

ಟ್ರ್ಯಾಕ್‌ ಹಣಾಹಣಿ

ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್ ಸ್ಪರ್ಧೆಯು ಟ್ರ್ಯಾಕ್ ಜಲ್ಲಿ ಮತ್ತು ಮಣ್ಣು ಮಿಶ್ರಣವಾದ ಭೂಪ್ರದೇಶವನ್ನು ಒಳಗೊಂಡಿದ್ದು, ಪ್ರತಿ ಲ್ಯಾಪ್ಸ್‌ಗಾಗಿ 2.5 ಕಿ.ಮೀ ಸಾಗಬೇಕಾಗುತ್ತದೆ. ಆಫ್ ರೋಡ್ ಟ್ರ್ಯಾಕ್ ಒಟ್ಟು 12.5 ಕಿ.ಮೀ ಒಳಗೊಂಡಿದ್ದು, ಟ್ರ್ಯಾಕ್ ಅನ್ನು ಎಫ್ಎಂಎಸ್‌ಸಿಐ ಸಂಸ್ಥೆಯಿಂದ ಅನುಮೋದಿಸಲಾಗಿದೆ.

2.5ಕಿ.ಮೀ ಟ್ರ್ಯಾಕ್‌ನಲ್ಲಿ ತೀಕ್ಷ್ಣವಾದ ಬಾಗುವಿಕೆಗಳು, ವೇಗಗೊಳಿಸುವ ಕಾರ್ನರ್‌ಗಳು, ಬ್ಲೈಂಡ್ ಟರ್ನ್, ಫಾಸ್ಟ್ ಸ್ಟ್ರೈಟ್‌, ಎರಿಳಿತವಾದ ಜಂಪ್ಸ್‌ಗಳು ಆಫ್ ರೋಡ್ ಸವಾರಿಗೆ ಪೂರಕವಾಗಿದ್ದವು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ಮೊದಲ ದಿನದ ಟ್ರೈನಿಂಗ್ ರೇಸ್

ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್‌ನ ಮೊದಲ ದಿನ ಸ್ಪರ್ಧಿಗಳ ಫಿಟ್ನೆಸ್ ಮತ್ತು ವೈದ್ಯಕೀಯ ಸ್ಥಿತಿಯನ್ನು ಪರಿಶೀಲಿಸಿದ ನಂತರ ಆಯೋಜಕರು ಬಿಎಸ್-6 ರಾಯಲ್ ಎನ್‌ಫೀಲ್ಡ್ ಹಿಮಾಯಯನ್ ಬೈಕ್ ಮಾದರಿ ರೈಡಿಂಗ್‌ನೊಂದಿಗೆ ಟ್ರೈನಿಂಗ್ ರೇಸ್‌ಗೆ ಚಾಲನೆ ನೀಡಿದರು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ಸ್ಪರ್ಧೆ ಆರಂಭಕ್ಕೂ ಸ್ಪರ್ಧಿಗಳಿಗೆ ರೇಸ್ ಮಿತಿಗಳನ್ನು ತಿಳಿಹೇಳಿದ ವಿಜೇಂದ್ರ ನೀಲಗಿರಿ ಅಕಾ ಭೀಮಾ ಮತ್ತು ಶಾದುಲ್ ಶಾಸ್ ಶರ್ಮಾ ಅವರೊಂದಿಗೆ ಬಿಗ್‌ರಾಕ್ ಡರ್ಟ್‌ಪಾರ್ಕ್‌ನ ನಿಲೇಶ್ ಧುಮಾಲ್ ಅಕಾ ನೆಲ್ಲಿ ಅವರನ್ನು ಒಳಗೊಂಡ ತಂಡವು ರೇಸಿಂಗ್ ಮಾರ್ಗದಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ನಿಖರವಾಗಿ ಮತ್ತು ಅತಿ ಸರಳವಾಗಿ ವಿವರಿಸಿದರು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್‌ನಲ್ಲಿ ಯುವಕರು, ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ನಿಯಮಗಳನ್ನು ರೂಪಿಸಿದ್ದ ಆಯೋಜಕರು ಅಭ್ಯಾಸ ಪಂದ್ಯಗಳನ್ನು ಆಯೋಜಿಸಿ ಮುಖ್ಯ ರೇಸ್ ಅನ್ನು ಸರಳಗೊಳಿಸುವ ಮೂಲಕ ನೆರೆದಿದ್ದ ವಿಕ್ಷಕರಲ್ಲಿ ಮನರಂಜನೆ ನೀಡಿದ್ದಲ್ಲದೆ ಸ್ಪರ್ಧೆಗಳಲ್ಲಿರುವ ಹಲವಾರು ಗೊಂದಲಗಳನ್ನು ನಿವಾರಣೆ ಮಾಡಿದರು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ಮೊದಲ ದಿನದ ಟ್ರೈನಿಂಗ್ ರೇಸ್‌ನಲ್ಲಿ ಸಣ್ಣ ಗಾತ್ರದ ಹೀರೋ ಇಂಪಲ್ಸ್ ನಿಂದ ಮಧ್ಯಮ ಗಾತ್ರದ ಹಿಮಾಲಯನ್ ಮತ್ತು 390 ಅಡ್ವೆಂಚರ್ ಬೈಕ್ ಮಾದರಿಗಳನ್ನು ಒಳಗೊಂಡ ಟ್ರೈನಿಂಗ್ ರೇಸ್‌ ಮಕ್ತಾಯದ ನಂತರ ಅಂತಿಮವಾಗಿ ಎರಡನೇ ದಿನಗಳ ಸ್ಪರ್ಧೆಯಲ್ಲಿ 550 ಸಿಸಿ ಮೇಲ್ಪಟ್ಟ ವಿವಿಧ ಮಾದರಿಯ ಅಡ್ವೆಂಚರ್ ಬೈಕ್ ಮಾದರಿಗಳು ಭಾಗಿಯಾದವು. ಹಲವು ಏಳು-ಬಿಳುಗಳ ನಡುವೆಯೂ ಪಾಕ್ಟಿಸ್ ಸೆಷನ್ಸ್ ಮುಗಿಸಿದ ಸ್ಪರ್ಧಿಗಳು ಎರಡನೇ ದಿನ ಸ್ಪರ್ಧೆಯಲ್ಲೂ ಉತ್ಸಾಹದಿಂದಲೇ ಭಾಗಿಯಾದರು. ಟ್ರೈನಿಂಗ್ ರೇಸ್‌ನಲ್ಲಿ ಕೆಲವು ಸ್ಪರ್ಧಿಗಳಿಗೆ ಸಣ್ಣ-ಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ಏರ್ಪಡಿಸಲಾಗಿತ್ತು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ಎರಡನೇ ದಿನದ ರೇಸ್ ಡೇ

ಟ್ರೈನಿಂಗ್ ರೇಸ್ ಅನುಭವದೊಂದಿಗೆ ಎರಡನೇ ದಿನಗಳ ರೇಸ್‌ಗೆ ಭಾಗಿಯಾದ ಸ್ಪರ್ಧಿಗಳು ಬೆಳಗ್ಗೆ 7.30ಕ್ಕೆ ಟ್ರ್ಯಾಕ್‌ನಲ್ಲಿ ಹಾಜರಿಯಾಗಿದ್ದರು. ಸ್ಥಳದಲ್ಲೇ ಸ್ಪರ್ಧಿಗಳಿಗೆ ಉಪಹಾರ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲಾಗಿತ್ತು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ಸ್ಪರ್ಧೆ ಆರಂಭಕ್ಕೂ ಮುನ್ನ ಭಾಗವಹಿಸುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸವಾರರಿಂದ ರೇಸ್‌ಗೆ ಬಳಸುವ ರಕ್ಷಣಾತ್ಮಕ ಗೇರ್ ಅನ್ನು ಪರೀಕ್ಷಿಸಲಾಯಿತು. ಬೆಳಗ್ಗೆ ಆರಂಭವಾದ ಮೊದಲ ಸುತ್ತಿನ ರೇಸ್ ಅನ್ನು 7ರಿಂದ 11 ಗಂಟೆಗೆ ಪೂರ್ಣಗೊಳಿಸಿದ ಆಯೋಜಕರು ಎಂಜಿನ್ ಸಾಮರ್ಥ್ಯದ ಮೇಲೆ ಟ್ರ್ಯಾಕ್ ಪ್ರದರ್ಶನಕ್ಕೆ ಅವಕಾಶ ನೀಡಿದರು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ಹೆಚ್ಚಿನ ಮಟ್ಟದ ಸ್ಪರ್ಧಿಗಳ ಭಾಗಿಯಾಗಿದ್ದರಿಂದ ದಟ್ಟಣೆಯಾದರೂ ವೃತ್ತಿಪರ ಕೌಶಲ್ಯ ಮತ್ತು ಹೊಸತನದ ಅನುಭವದ ಯುವ ರೈಡರ್‌ಗಳು ಟ್ರ್ಯಾಕ್‌ನಲ್ಲಿ ತಮ್ಮದೆ ಆದ ಕೌಶಲ್ಯ ಪ್ರದರ್ಶಿಸಿ 5 ಸುತ್ತುಗಳನ್ನು ಪೂರ್ಣಗೊಳಿಸುವಲ್ಲಿ ಬಹುತೇಕ ಸ್ಪರ್ಧಿಗಳು ಯಶಸ್ವಿಯಾದರು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ವೃತ್ತಿಪರ ಮೋಟಾರ್‌ಸೈಕಲ್ ಸ್ಪರ್ಧಿಗಳು ಮತ್ತು ಮಹಿಳಾ ಸ್ಪರ್ಧಿಗಳು ರೇಸ್ ನಂತರ ಮಕ್ಕಳ ವಿಭಾಗವನ್ನು ಮುನ್ನಡೆಸಿದ ಆಯೋಜಕರು ತೀವ್ರ ಹಣಾಹಣಿಯ ನಡುವೆಯೂ ಮಕ್ಕಳ ಕೌಶಲ್ಯಕ್ಕೆ ಪ್ರೋತ್ಸಾಹ ನೀಡಿದರು. ಕಠಿಣ ಮಾರ್ಗದಲ್ಲೂ ಹಲವಾರು ಸ್ಪರ್ಧಿಗಳು ತಮ್ಮ ಕೌಶಲ್ಯ ಪ್ರದರ್ಶನದ ಮೂಲಕ ನೋಡುಗರಲ್ಲಿ ರೋಮಾಂಚನ ಉಂಟು ಮಾಡಿದ್ದಲ್ಲದೆ ಯುವ ರೈಡರ್‌ಗಳಿಗೆ ಉತ್ಸಾಹ ತುಂಬಿದರು.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ಸ್ಪರ್ಧೆಯ ವಿಜೇತರು

ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ 2020 ಯಶಸ್ವಿಯಾಗಿ ಮುಕ್ತಾಯಗೊಳ್ಳುವ ಮೂಲಕ ಹೆಚ್ಚಿನ ಸ್ಪರ್ಧಿಗಳು ಪೂರ್ಣ ಪ್ರಮಾಣದ ಸ್ಪರ್ಧೆಯಲ್ಲಿ ಭಾಗಿಯಾದರೆ ಇನ್ನು ಕೆಲವು ಸ್ಪರ್ಧಿಗಳು ತಾಂತ್ರಿಕ ಕಾರಣಗಳಿಂದ ಸ್ಪರ್ಧೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದು ಕಂಡುಬಂತು. ಆದರೂ ಕೂಡಾ ಯುವ ರೈಡರ್‌ಗಳಿಗೆ ಇದೊಂದು ರೀತಿ ಹೊಸ ಅನುಭವ ಎನ್ನಬಹುದಾಗಿದ್ದು, ಉತ್ಸಾಹಿ ಆಫ್ ರೋಡ್ ಸ್ಪರ್ಧಿಗಳನ್ನು ಮತ್ತಷ್ಟು ರೋಮಾಂಚನ ಉಂಟುಮಾಡಿದ್ದು ಸುಳ್ಳಲ್ಲ.

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

*ಕ್ಲಾಸ್ 1 (250 ಸಿಸಿ ವರೆಗೆ): ಅಜಯ್ (ಹೀರೋ ಇಂಪಲ್ಸ್) (00:23:08)

*ಕ್ಲಾಸ್ 2 (250 ಸಿಸಿಗಿಂತ ಹೆಚ್ಚು ಮತ್ತು 400 ಸಿಸಿಗಿಂತ ಕಡಿಮೆ): ನಿಹಾಲ್ (ಕೆಟಿಎಂ 390 ಅಡ್ವೆಂಚರ್) (00:26:47)

*ಕ್ಲಾಸ್ 3(401 ಸಿಸಿಗಿಂತ ಹೆಚ್ಚು ಮತ್ತು 550 ಸಿಸಿ ಕಡಿಮೆ): ಜಗದೀಶ್ (ರಾಯಲ್ ಎನ್‌ಫೀಲ್ಡ್ ಹಿಮಾಲಯನ್) (00:26:34)

*ಕ್ಲಾಸ್ 4 (550 ಸಿಸಿಗಿಂತ ಮೇಲ್ಪಟ್ಟ): ಪಾಲಕ್ಷ ಷಡಕ್ಷರಪ್ಪ (ಟ್ರಯಂಫ್ ಟೈಗರ್) (00:25:39)

*ಮಹಿಳಾ ವರ್ಗ (ಮುಕ್ತ): ಪ್ರಿಯಾಂಕಾ (ಹೀರೋ ಎಕ್ಸ್‌ಪಲ್ಸ್) ( 00:37:44)

*ಮೀಡಿಯಾ ಕ್ಲಾಸ್ (ರಾಯಲ್ ಎನ್‌ಫೀಲ್ಡ್ ಹಿಮಾಲಯನ್): ಪ್ರತೀಕ್ ಕುಂದರ್ (00:26:30)

*ಮಕ್ಕಳ ವಿಭಾಗ : ಜಿನೇಂದ್ರ ಸಂಗ್ವೆ (00:05:30)

ನಮ್ಮ ಬೆಂಗಳೂರಿನಲ್ಲಿ ಸದ್ದು ಮಾಡಿದ 2020ರ ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್

ಇನ್ನು ಬಿಗ್‌ರಾಕ್ ಡರ್ಟ್‌ಪಾರ್ಕ್ ಟ್ರಯಲ್ ಅಟ್ಯಾಕ್ ಚಾಲೆಂಜ್ ಸ್ಪರ್ಧೆಯು ಆಫ್ ರೋಡ್ ಉತ್ಸಾಹಿಗಳು ತಮ್ಮ ಕೌಶಲ್ಯ ಪ್ರದರ್ಶನ ಮಾಡಲು ಅತ್ಯುತ್ತಮ ವೇದಿಕೆಯಾಗಿದೆ. ಸತತ ಮೂರು ವರ್ಷಗಳಿಂದ ಆಫ್ ರೋಡ್ ಸ್ಪರ್ಧೆ ಎರ್ಪಡಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಕೇವಲ ವೃತ್ತಿಪರರಿಗೆ ಮಾತ್ರವಲ್ಲ ಉತ್ಸಾಹಿ ಯುವ ರೈಡರ್‌ಗಳಿಗೂ ಉತ್ತಮ ವೇದಿಕೆ ಒದಗಿಸುವ ಮೂಲಕ ಆಫ್ ರೋಡ್ ಕೌಶಲ್ಯವನ್ನು ಗುರುತಿಸುವ ನಿಟ್ಟಿನಲ್ಲಿ ಉತ್ತಮ ಸ್ಪರ್ಧೆಯೊಂದನ್ನು ಆಯೋಜಿಸುತ್ತಿರುವುದು ಅತ್ಯುತ್ತಮ ಪ್ರಯತ್ನವಾಗಿದೆ.

Most Read Articles

Kannada
English summary
BigRock Dirtpark Trail Attack Challenge 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X